Connect with us

Cinema News

ಕನ್ನಡಕ್ಕೆ ಮತ್ತೋರ್ವ ಮಾಸ್ ಹೀರೋ ಎಂಟ್ರಿ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿತು ಮತ್ತೊಂದು ಹೈ ಬಜೆಟ್ ಸಿನಿಮಾ “ಮಾರ್”

Published

on

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ, ಜೊತೆಗೆ ಹೊಸ ಹೊಸ ಸ್ಟಾರ್ ಗಳು ಎಂಟ್ರಿ ಕೊಡುತ್ತಿದ್ದಾರೆ. ಸದ್ಯ “ಮಾರ್” ಎನ್ನುವ ಮಾಸ್ ಟೈಟಲ್ ಇಟ್ಟುಕೊಂಡು ವಿಜಯ್ ವೆಂಕಟೇಶ್ ಹೀರೊ ಆಗಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುವಂತ ವಿಜಯ್ ವೆಂಕಟೇಶ್ ತಮ್ಮ ಮೊದಲ ಸಿನಿಮಾದಲ್ಲಿಯೇ ವಿಭಿನ್ನ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.

ಸದ್ಯ ಸಿನಿಮಾತಂಡ ಹೀರೋ ಇಂಟ್ರೊಡಕ್ಷನ್ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಾಮಾನ್ಯವಾಗಿ ಸಿನಿಮಾತಂಡ ಮುಹೂರ್ತ ಮಾಡಿಕೊಂಡು ನಂತರ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತಾರೆ. ಆದರೆ ‘ಮಾರ್’ ತಂಡ ಜಬರ್ದಸ್ತ್ ಹಾಡಿನ‌ ಮೂಲಕ ಚಿತ್ರ ಪ್ರೇಮಿಗಳ ಮುಂದೆ ಬಂದಿದೆ. ಹೀರೋ ತೆರೆ ಮೇಲೆ ಹೇಗೆ ಕಾಣಿಸುತ್ತಾರೆ ಹಾಗೂ ಹೀರೋ ಕಾನ್ಫಿಡೆನ್ಸ್ ಹೇಗಿದೆ ಎಂದು ಚೆಕ್ ಮಾಡಲು ಈ ರೀತಿ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರತಂಡ.ಮಾರ್ ಸಿನಿಮಾ ಸಿನಿಮಾವನ್ನ ಅನಿಲ್ ವೆಂಕಟರಾಜು ನಿರ್ದೇಶಿಸುತ್ತಿದ್ದಾರೆ..

ಸದ್ಯ ಚಿತ್ರದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ವಿಜಯ್ ವೆಂಕಟೇಶ್ ಮೊದಲ ಪ್ರಯತ್ನಕ್ಕೆ ನಟ ಶ್ರೇಯಸ್ ಮಂಜು ಸಾಥ್ ನೀಡಿದ್ದಾರೆ. ಮೊದಲ ಹಾಡನ್ನು ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು ಶ್ರೇಯಸ್.ಇನ್ನು ಈ ಹಾಡನ್ನ ನಿರ್ದೇಶಕ ಅನಿಲ್ ವೆಂಕಟರಾಜು ಅವ್ರೇ ಬರೆದಿದ್ದು ಕೃಷ್ಣ ಸುಮೈರಾ ಸಂಗೀತಾ ನೀಡಿದ್ದಾರೆ… ಸುಹಾಸ್ ಅವ್ರ ಕ್ಯಾಮಾರ ವರ್ಕ್ ಪ್ರವೀಣ್ ಕೊರಿಯೋಗ್ರಾಫಿ ಹಾಡಿಗಿದೆ…

ನಟ ವಿಜಯ್ ವೆಂಕಟೇಶ್ ಹೀರೊ ಆಗಿ ಎಂಟ್ರಿಕೊಡುವ ಜೊತೆಗೆ ‘ಹಾರಿಕಾ’ ಪ್ರೊಡಕ್ಷನ್ ಹೌಸ್ ಕೂಡ ಲಾಂಚ್ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಪಕನಾಗಿಯೂ ವಿಜಯ್ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶಕೊಡುವ ಪ್ಲಾನ್ ಇಟ್ಟುಕೊಂಡಿದ್ದಾರೆ ವಿಜಯ್. ಮಾರ್ ಸಿನಿಮಾ ಕೂಡ ತಮ್ಮದೆ ಹಾರಿಕಾ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ.ಇನ್ನು ಮಾರ್ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು ಸದ್ಯ ಹಾಡು ಕೂಡ ಎರಡು ಭಾಷೆಯಲ್ಲಿ ಬಿಡುಗಡೆ ಆಗಿದೆ…

ಬಿಡುಗಡೆ ಆಗಿರುವ ಮಾರ್ ಚಿತ್ರದ ಹಾಡನ್ನ ನೋಡಿರೋ ಪ್ರೇಕ್ಷಕರು ಕ್ವಾಲಿಟಿ ಮೇಕಿಂಗ್ ಹಾಗೂ ಕಂಟೆಂಟ್ ನೋಡಿ ಮೆಚ್ಚಿಕೊಂಡಿದ್ದಾರೆ…ಸಿನಿಮಾ ಕೂಡ ಇದೇ ಕ್ವಾಲಿಟಿಯಲ್ಲಿ ನಿರ್ಮಾಣವಾದರೇ ಸಿನಿಮಾ ಬೇರೆ ಲೆವೆಲ್ ರೀಚ್ ಆಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ…

Spread the love

Continue Reading
Click to comment

Leave a Reply

Your email address will not be published. Required fields are marked *