Connect with us

Cinema News

300 ಕೇಂದ್ರಗಳಲ್ಲಿ 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’

Published

on

ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಅಲ್ಲೂ 50 ದಿನಗಳನ್ನು ಪೂರೈಸಲಿದೆ.

‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಕಾಂತಾರ’ ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಹೊಂಬಾಳೆ ಫಿಲಂಸ್ ಮೊದಲಿನಿಂದಲೂ ಕಥೆಗೆ ವಿಶೇಷವಾದ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಈಗಾಗಲೇ ‘ರಾಜ್ಕುಮಾರ’, ‘ಯುವರತ್ನ’, ‘ಕೆಜಿಎಫ್’ ಮುಂತಾದ ಚಿತ್ರಗಳು ಈ ವಿಷಯವನ್ನು ನಿರೂಪಿಸಿದೆ. ಈಗ ‘ಕಾಂತಾರ’ ಸಹ ಇದೇ ನಿಟ್ಟಿನಲ್ಲಿ ಸಾಗಿರುವುದಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ನಂತರ ಒಂದೇ ಸಂಸ್ಥೆಯ ಇನ್ನೊಂದು ಚಿತ್ರ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.
ಬರೀ ಕನ್ನಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಯು ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ.

ಈಗಾಗಲೇ ಕನ್ನಡದಲ್ಲಿ ಜಗ್ಗೇಶ್ ಅಭಿನಯದಲ್ಲಿ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜ್ಕುಮಾರ್ಗಾಗಿ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.

ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2023ರ ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲಂಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *

Cinema News

ಮಧ್ವನವಮಿ ಶುಭಸಂದರ್ಭದಲ್ಲಿ “ಹನುಮ ಭೀಮ ಮಧ್ವ” ಚಿತ್ರದ ಬಗ್ಗೆ ಅಧಿಕೃತ ಘೋಷಣೆ .

Published

on

By

ವಾಯುದೇವರು ಮೊದಲು ಹನುಮನಾಗಿ ಅವತರಿಸಿ‌ ಶ್ರೀರಾಮದೇವರನ್ನು ಸೇವೆ ಮಾಡುತ್ತಾರೆ. ನಂತರ ದ್ವಾಪರದಲ್ಲಿ ಭೀಮಸೇನನಾಗಿ ಶ್ರೀ ಕೃಷ್ಣನನ್ನು, ಆನಂತರ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತರಿಸಿ ಶ್ರೀವೇದವ್ಯಾಸ ದೇವರನ್ನು ಭಜಿಸುತ್ತಾರೆ. ಇಂತಹ ಅಪರೂಪದ ಮೂರು ಅವರತಾರಗಳ ಕುರಿತಾದ ಭಕ್ತಿಪ್ರಧಾನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ.

ಶ್ರೀಗಂಧ ಪಿಕ್ಚರ್ಸ್ ಲಾಂಛನದಲ್ಲಿ ಡಾ||ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಡಾ|ಮಧುಸೂದನ್ ಹವಾಲ್ದಾರ್ ನಿರ್ದೇಶಿಸುತ್ತಿದ್ದಾರೆ. ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಮಹಾಮಹಿಮರ ಮಹಿಮೆ ಸಾರುವ ಎಂಟು ಹಾಡುಗಳಿರುತ್ತದೆ.‌ ವಿಜಯ್ ಕೃಷ್ಣ ಡಿ ಸಂಗೀತ ನೀಡಲಿದ್ದಾರೆ. ನಾರಾಯಣ್ ಸಿ ಛಾಯಾಗ್ರಹಣ ಹಾಗೂ ದೊರೈರಾಜ್(ಆರ್ ಡಿ ರವಿ)ಅವರ ಸಂಕಲನವಿರುತ್ತದೆ.

ಶ್ರೀಜಗನ್ನಾಥದಾಸರು, ಶ್ರೀವಿಜಯದಾಸರು, ಶ್ರೀಪ್ರಸನ್ನವೆಂಕಟದಾಸರು ಹೀಗೆ ಸಾಲುಸಾಲು ದಾಸವರೇಣ್ಯರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸದ್ಯದಲ್ಲೇ ಆನೆಗೊಂದಿ, ಕನಕಗಿರಿ ಬೀಳಗಿ, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನೂತನ ಪ್ರತಿಭೆಗಳೆ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

Spread the love
Continue Reading

Cinema News

ಎಸ್.ಎಲ್.ವಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ

Published

on

By

ಕಿರುತೆರೆ ನಿರೂಪಕ ಸಂಜೀವ ಕುಲಕರ್ಣಿ ಪುತ್ರ ಸೌರಭ ಕುಲಕರ್ಣಿ ನಿರ್ದೇಶನದ “ಎಸ್.ಎಲ್.ವಿ” ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವೂ ಶೀರ್ಷಿಕೆಯಷ್ಟೇ ವಿಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ. ನಟನಾಗಿ, ನಿರೂಪಕನಾಗಿ ಗುರುತಿಸಿಕೊಂಡಿದ್ದ ಸೌರಭ ಕುಲಕರ್ಣಿಯ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ರಂಗಭೂಮಿ-ಕಿರುತೆರೆ ನಟ ಅಂಜನ್‌ ಎ ಭಾರದ್ವಾಜ್‌ ಮತ್ತು ಖ್ಯಾತ ನಟ ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಈ ಚಿತ್ರದ ನಾಯಕ ಹಾಗೂ ನಾಯಕಿ. ಖ್ಯಾತ ನಟ-ನಿರ್ದೇಶಕ ಡಾ|| ರಮೇಶ್‌ ಅರವಿಂದ್‌ ಅವರನ್ನೇ ತಮ್ಮ ಟೀಸರ್‌ನಲ್ಲಿ ತೋರಿಸಿ, ವಿಭಿನ್ನ ರೀತಿಯ ಟೀಸರ್‌ವೊಂದನ್ನು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿ ಚಿತ್ರತಂಡ ಸದ್ದು ಮಾಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಚಿತ್ರ ದುಬೈ, ಅಬುಧಾಬಿ, ಮಸ್ಕತ್‌ ಹಾಗೂ ಸೋಹಾರ್‌ ದೇಶಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಕಂಡು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಪೂರ್ಣ ಪ್ರಮಾಣದ ಕೌಟುಂಬಿಕ ಚಿತ್ರ ಇದಾಗಿದ್ದು, ಮಕ್ಕಳನ್ನೂ ಸೇರಿದಂತೆ ಎಲ್ಲ ವಯೋಮಾನದವರೂ ಈ ಚಿತ್ರವನ್ನು ನೋಡಬಹುದು ಎಂಬ ಮಾತು ಹರಿದಾಡಿತ್ತು.

ಎಸ್.ಎಲ್.ವಿ ಎಂದರೆ ಸಿರಿ ಲಂಬೋದರ ವಿವಾಹ. ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ವೆಡ್ಡಿಂಗ್‌ ಪ್ಲಾನರ್ಸ್‌ಗಳಾಗಿದ್ದು, ಇದೊಂದು ಹೊಸ ಬಗೆಯ ಕಥಾ ಹಂದರವನ್ನು ಹೊಂದಿದೆ. ಸಿರಿ ಹಾಗೂ ಲಂಬೋದರ ಎನ್ನುವವರ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯಮಯ, ಭಾವನಾತ್ಮಕ ಹಾಗೂ ರೋಚಕ ಸನ್ನಿವೇಶಗಳ ಮಿಶ್ರಣವೇ “ಎಸ್.ಎಲ್.ವಿ – ಸಿರಿ ಲಂಬೋದರ ವಿವಾಹ” ಎನ್ನುತ್ತಾರೆ ನಿರ್ದೇಶಕರು. ಹಾಸ್ಯ-ಸಾಹಸ ಮತ್ತು ಕುತೂಹಲಕಾರಿ ಅಂಶಗಳನ್ನೊಳಗೊಂಡ ಈ ಚಿತ್ರದ ತಾರಾಂಗಣದಲ್ಲಿ ರಾಜೇಶ್‌ ನಟರಂಗ, ಸುಂದರ್‌ ವೀಣಾ, ಬಲ ರಾಜವಾಡಿ, ರೋಹಿತ್‌ ನಾಗೇಶ್‌, ಪಿ ಡಿ ಸತೀಶ್‌ಚಂದ್ರ, ಕಾಮಿಡಿ ಕಿಲಾಡಿ ಸದಾನಂದ ಕಾಳೆ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು – ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ಯುವ-ನವ ರಂಗಭೂಮಿ ನಟರೂ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವರ್ಸ್ಯಾಟೋ ವೆಂಚ್ಯೂರ್ಸ್‌, ಪವಮಾನ ಕ್ರಿಯೇಷನ್ಸ್‌, ಫೋರೆಸ್‌ ನೆಟ್‌ವರ್ಕ್‌ ಸಲ್ಯೂಷನ್ಸ್‌ ಹಾಗೂ ಧೂಪದ ದೃಶ್ಯ ಬ್ಯಾನರ್‌ಗಳ ಅಡಿಯಲ್ಲಿ ತಯಾರಾದ ಈ ಚಿತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಸಹ ನಿರ್ಮಾಪಕರ ಬಂಡವಾಳ ಇರುವುದು ಮತ್ತೂ ವಿಶೇಷ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಸುಮಾರು 39 ದಿನಗಳ ಕಾಲ ಚಿತ್ರೀಕರಣ ಮಾಡಿ, ಇದೇ ತಿಂಗಳಲ್ಲಿ ತೆರೆಗೆ ಚಿತ್ರವನ್ನು ತರಲು ಹುರುಪಿನಿಂದ ಕಾದಿದೆ ಎಸ್.ಎಲ್.ವಿ ತಂಡ.

ಕಿಟ್ಟಿ ಕೌಶಿಕ್‌ ಅವರ ಛಾಯಾಗ್ರಹಣ, ಸಂಘರ್ಷ್‌ ಕುಮಾರ್‌ ಅವರ ಸಂಗೀತ ನಿರ್ದೇಶನ, ವಿನೋದ್‌ ಅವರ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ಸಂಯೋಜನೆ, ನಮ್ಮನೆ ಪ್ರೊಡಕ್ಷನ್ಸ್‌ ತಂಡದ ಕ್ರಿಯಾಶೀಲತೆ ಸೇರಿದಂತೆ ಅನೇಕ ನುರಿತ ತಂತ್ರಜ್ಞರ ಹಾಗೂ ನವ ಯುವಕರ ಕೈ ಚಳಕ ಎಸ್‌.ಎಲ್‌.ವಿಯಲ್ಲಿದೆ. ಪ್ರಾಮಾಣಿಕ ತಂಡವೊಂದು ಅನೇಕ ಕನಸುಗಳನ್ನು ಹೊತ್ತು ಗಾಂಧಿನಗರಕ್ಕೆ ಕಾಲಿಡುತ್ತಿದೆ. ಕನ್ನಡಿಗರು ಈ ತಂಡದ ಪ್ರಯತ್ನವನ್ನು ಒಪ್ಪಿ, ಪ್ರೀತಿಸಿ, ಪೋಷಿಸಲಿ ಎನ್ನುವುದು ತಂಡದ ಹೆಬ್ಬಯಕೆ

Spread the love
Continue Reading

Cinema News

ಸುಖಾಂತ್ಯ ಚಿತ್ರೀಕರಣ ಮುಕ್ತಾಯ

Published

on

By

ಈ ಹಿಂದೆ ಮೊಂಭತ್ತಿ ಎಂಬ ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ರಾಜ್ ಪ್ರಭು ಈಗ ಉದಯ ಆರ್ಟ್ಸ್ ಮತ್ತು ಮ್ಯಾಂಡ್ ರೋಶ್ ಲಿ. ಸಂಸ್ಥೆಯ ಮೂಲಕ ಸುಖಾಂತ್ಯ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇವರಜೊತೆ ಚಂದ್ರಶೇಖರ್ ‌ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಈ ಹಿಂದೆ ಭಾಗ್ಯ ರಾಜ್ ಚಿತ್ರದಲ್ಲಿ ನಟಿಸಿದ್ದ ಮಹೇಶ್(ಲೂಸ್ ಮಾದ ಯೋಗಿ ಅಣ್ಣ) ಈ ಚಿತ್ರದಲ್ಲಿ ನಾಯಕನಾಗಿದ್ದು, ಮೊಂಬತ್ತಿ, ಛಾಯಾ ಚಿತ್ರಗಳ ನಟ ರಾಜ್ ಪ್ರಭು ಮತ್ತೊಬ್ಬ ನಾಯಕನಾಗಿದ್ದಾರೆ.

ನಾಯಕ ಒಬ್ಬ ಕುರುಡ, ನಾಯಕಿ ಸತ್ತನಂತರ ಆತನಿಗೆ ತನ್ನ ಕಣ್ಣುಗಳನ್ನು ದಾನ ಮಾಡುತ್ತಾಳೆ.ಆತ ಹೇಗೆ ನಾಯಕಿಯ ಸಾವಿಗೆ ಕಾರಣನಾದ, ಮತ್ತೊಬ್ಬ ಹೆಣ್ಣು ಹೇಗೆ ಆತನಿಗೆ ಶಾಪವಾಗಿ ಅನುಭೌವಿಸುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ.

ಸ್ವಾತಿ ಅಂಬರೀಶ್ ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಆರ್ಯನ್, ಸತೀಶ್ ಬಾಬು ಸಂಗೀತ ಸಂಯೋಜಿಸಿದ್ದಾರೆ. ಪವನ್, ರವಿ ಅವರ ಕ್ಯಾಮೆರಾ ವರ್ಕ್, ಕವಿತಾ ಬಂಡಾರಿ ಅವರ ಸಂಕಲನ, ಜಗ್ಗು ಮಾಸ್ಟರ್ ನೃತ್ಯ, ಕೌರವ್ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಮಹೇಶ್, ರಾಜ್ ಪ್ರಭು, ಅಮೃತ ಗೌಡ, ಅಂಜಲಿದೇವ್, ಕೆಂಪೇಗೌಡ, ಕಾವ್ಯಗೌಡ, ಅಂಬುಜಾಕಾಶಿ, ತೇಜು, ಅಯ್ಯಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ.

Spread the love
Continue Reading

Cinema News

ದಳಪತಿ 67 ಚಿತ್ರಕ್ಕೆ ಲೋಕೇಶ್‌ ಕನಗರಾಜ್‌ ನಿರ್ದೇಶನ..

Published

on

By

ಮಾಸ್ಟರ್‌ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್‌ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್‌ ಕನಗರಾಜ್‌ ನಿರ್ದೇಶನ ಮಾಡಲಿದ್ದಾರೆ.

ಈ ಹಿಂದೆ ವಿಜಯ್‌ಗೆ ಮಾಸ್ಟರ್‌ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್‌ಗೆ ಇದು ವಿಜಯ್‌ ಜತೆ ಎರಡನೇ ಪ್ರಾಜೆಕ್ಟ್‌. ಈ ಮೂಲಕ ಮಾಸ್ಟರ್‌ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಈಗಾಗಲೇ ಜ 2ರಿಂದ ಶೂಟಿಂಗ್‌ ಶುರುವಾಗಿದೆ.

ಕೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್‌ಸ್ಟಾರ್‌ ಅನಿರುದ್ಧ ರವಿಚಂದ್ರನ್‌ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್‌ ಜತೆ ಕೈ ಜೋಡಿಸಿದ್ದಾರೆ.

ಇನ್ನುಳಿದಂತೆ ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್‌ ಕನಗರಾಜ್‌, ರತ್ನ ಕುಮಾರ್‌, ಧೀರಜ್‌ ವೈದ್ಯ, ರಾಮಕುಮಾರ್‌ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

Spread the love
Continue Reading

Cinema News

‘ದಸರಾ’ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಎಸ್. ಎಸ್ ರಾಜಮೌಳಿ – ಮಾಸ್ ಟೀಸರ್ ಗೆ ಸಿನಿ ಪ್ರೇಕ್ಷಕರು ಫಿದಾ

Published

on

By

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಮಾಸ್ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಸ್. ಎಸ್ ರಾಜಮೌಳಿ ತೆಲುಗು ಟೀಸರ್ ಬಿಡುಗಡೆ ಮಾಡಿದ್ದು, ಶಾಹಿದ್ ಕಪೂರ್, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್, ಧನುಷ್ ಹಿಂದಿ, ಕನ್ನಡ, ಮಲಯಾಳಂ, ತಮಿಳು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಹೆಚ್ಚು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.

ಚಿತ್ರಕ್ಕಾಗಿ ನ್ಯಾಚುರಲ್ ಸ್ಟಾರ್ ನಾನಿ ಮೇಕೋವರ್, ರಗಡ್ ಲುಕ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿದೆ. ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ಝಲಕ್ ನಲ್ಲಿ ಅನಾವರಣ ಮಾಡಲಾಗಿದ್ದು ಪ್ರೇಕ್ಷಕರಲ್ಲಿ ಟೀಸರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.

ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ನ್ಯಾಚುರಲ್ ಸ್ಟಾರ್ ನಾನಿ ಕಳೆದ ವರ್ಷ ತೆಲುಗಿನಲ್ಲಿ ಆರ್ ಆರ್ ಆರ್ ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳ ಸೂಪರ್ ಹಿಟ್ ಆಗಿವೆ ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಗೆ ಸೇರಲಿದೆ ಎಂದು ಗರ್ವದಿಂದ ಹೇಳುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.

ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೆಗಾ ಪ್ರಾಜೆಕ್ಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ ಟೀಸರ್ ಮೂಲಕ ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಆಮಂತ್ರಣ ನೀಡಿದೆ.

ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

Spread the love
Continue Reading

Trending News