Cinema News
ಬಾಲ್ಯ ನೆನಪಿಸುವ ಆಡೋಕೆ ಸಾವಿರ ಆಟ…ಇದು ಸಂಭ್ರಮ ಸಿನಿಮಾದ ಮೊದಲ ಹಾಡಿನ ನೋಟ

ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ಸಂಭ್ರಮ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಆಡೋಕೆ ಸಾವಿರ ಆಟ ಎಂಬ ಸಾಹಿತ್ಯವಿರುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣವನ್ನು ಹಾಗೂ ಒಂದಷ್ಟು ಫಿಲಾಸಪಿ ಮತ್ತು ಹೆಚ್ಚು ನೆನಪುಗಳನು ನೆನಪಿಸುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, ಅಪ್ರಮಿ, ಶ್ರೇಯ ಶ್ರೀರಂಗ, ಶಶಿಕಲಾ ಸುನಿಲ್, ಪೂರ್ಣಿಮಾ ಮಂಜುನಾಥ್, ದಿವ್ಯಾ ರಾಮಚಂದ್ರ ಧ್ವನಿಯಾಗಿದ್ದು, ಮನೋಮೂರ್ತಿ ಅದ್ಭುತ ಮ್ಯೂಸಿಕ್ ಹಾಡಿಗಿದೆ.
ರಂಗಭೂಮಿಯಲ್ಲಿ ಪಳಗಿರುವ ಪ್ರತಿಭೆ ಶ್ರೀ ಸಂಭ್ರಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಸಿನಿಮಾ ಮೂಲಕ ಶ್ರೀ ಸಂಭ್ರಮ ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಡಿಇಡ್ತಿದ್ದಾರೆ. ಯುವ ಪ್ರತಿಭೆಗಳಾದ ಅಭಯ್ ವೀರ್, ವೀರೆಂದ್ರ ಶೆಟ್ಟಿ,ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಶ್ರಾವಣಿ ಚಿತ್ರದಲ್ಲಿ ನಟಿಸಿದ್ದಾರೆ.
ಸಂಭ್ರಮ ಒಂದು ರೋಮ್ಯಾಂಟಿಕ್ ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸೋನು ನಿಗಂ, ಮನೋಮೂರ್ತಿ ಮತ್ತು ಜಯಂತ್ ಕಾಯ್ಕಿಣಿಯವರ ಹಿಟ್ ಕಾಂಬಿನೇಷನ್ ಈ ಸಿನಿಮಾದಲ್ಲಿ ಮತ್ತೆ ಒಂದಾಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸಂಭ್ರಮ ಸಿನಿಮಾವನ್ನು ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ ಹೊತ್ತಿಗೆ ಸಿನಿಮಾ ತೆರೆಗೆ ತರೋದಿಕ್ಕೆ ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
Cinema News
ಮಧ್ವನವಮಿ ಶುಭಸಂದರ್ಭದಲ್ಲಿ “ಹನುಮ ಭೀಮ ಮಧ್ವ” ಚಿತ್ರದ ಬಗ್ಗೆ ಅಧಿಕೃತ ಘೋಷಣೆ .

Cinema News
ಎಸ್.ಎಲ್.ವಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ

Cinema News
ಸುಖಾಂತ್ಯ ಚಿತ್ರೀಕರಣ ಮುಕ್ತಾಯ

Cinema News
ದಳಪತಿ 67 ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ..

Cinema News
‘ದಸರಾ’ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಎಸ್. ಎಸ್ ರಾಜಮೌಳಿ – ಮಾಸ್ ಟೀಸರ್ ಗೆ ಸಿನಿ ಪ್ರೇಕ್ಷಕರು ಫಿದಾ

-
Movie Reviews4 years ago
ವಿಕೇಂಡ್ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
-
Movie Reviews4 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Movie Reviews4 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Box Office3 years ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Cinema News3 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office4 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News4 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews4 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News4 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
News4 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ