Connect with us

Television News

ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ಮೊದಲ ಧಾರಾವಾಹಿ ನಿರ್ಮಾಣ.

Published

on

ಅಚ್ಚ ಕನ್ನಡಿಗರ ಸಿರಿಕನ್ನಡ ವಾಹಿನಿಯಲ್ಲಿ ವಿಜಯ ದಶಮಿ – ಅಮ್ಮನ ಮದುವೆ ಎಂಬ ಹೊಚ್ಚಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಆರಂಭವಾಗುತ್ತಿದೆ . ಆ ಪೈಕಿ “ವಿಜಯ ದಶಮಿ” ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ದೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ಹತ್ತೊಂಭತ್ತಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ ಎಪ್ಪತ್ತಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ.

ಮೊಟ್ಟಮೊದಲ ಬಾರಿಗೆ ರಾಘವೇಂದ್ರ ರಾಜಕುಮಾರ್ ಅವರು ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಅದ್ದೂರಿ ದೃಶ್ಯ ಕಾವ್ಯ “ವಿಜಯ ದಶಮಿ”ಯ ಚಿತ್ರೀಕರಣ ಭಾರತದಾದ್ಯಂತ ಅದ್ಭುತ ಸ್ಥಳಗಳಲ್ಲಿ ನಡೆಯಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದರೆ, ಕಮರ್ಷಿಯಲ್ ಚಿತ್ರವೊಂದರ ಟ್ರೇಲರ್ ನೋಡಿದ ಅನುಭವವಾಗುತ್ತದೆ. ಅಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಪ್ರೋಮೊ..ಧಾರಾವಾಹಿ ಕೂಡ ಎಲ್ಲರ ಮೆಚ್ಚುಗೆ ಪಡೆಯಲಿದೆ ‌ಎಂಬ ಭರವಸೆ ತಂಡದ್ದು. ಶಶಿ ಈ ಧಾರಾವಾಹಿಯ ನಿರ್ದೇಶಕರು.

ಅಮ್ಮ – ಮಗಳ ವಾತ್ಸಾಲ್ಯದ ” ಅಮ್ಮನ ಮದುವೆ ” ಧಾರಾವಾಹಿ ಸಹ ಇದೇ ಆಗಸ್ಟ್ 1ರ ಸೋಮವಾರದಿಂದ ರಾತ್ರಿ 8 ಕ್ಕೆ ಆರಂಭವಾಗಲಿದೆ. ನ್ಯೂ D2 ಮಿಡಿಯಾ ನಿರ್ಮಾಣ ಮಾಡುತ್ತಿದೆ. ಮದುವೆಯಾಗಿ ಜೀವನರೂಪಿಸಿಕೊಳ್ಳಲು ಹೊರಟ ಮಗಳು ,‌ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ನಡೆಸುವ ಹೋರಾಟದ ಭಾವುಕ ಕಥೆ ಇದಾಗಿದೆ.

ಈ ಎರಡು ಧಾರಾವಾಹಿಗಳ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಿರಿಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ, ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಅಪಾರ ಸಂಖ್ಯೆಯ ಕಲಾವಿದರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಚೇತನ್ ಕುಮಾರ್, ಸೇತುರಾಮ್, ಕಿಶೋರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು

Spread the love

Continue Reading
Click to comment

Leave a Reply

Your email address will not be published. Required fields are marked *

Television News

ಉದಯ ಟಿವಿಯ ಹೊಸ ಧಾರಾವಾಹಿ “ಜನನಿ” ಆಗಷ್ಟ್ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9ಕ್ಕೆ

Published

on

By

ಉದಯ ವಾಹಿನಿಯ. , ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ “ಜನನಿ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ.

“ಜನನಿ” ಕೌಟುಂಬಿಕ ಆಧಾರಿತ ಧಾರಾವಾಹಿ. ಈ ಕಥೆಯಲ್ಲಿ ಬರುವ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ . ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗುತ್ತದೆ . ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ . ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ , ಗಂಡನ ಮನೆಯಲ್ಲಿ ಹಾಗು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ , ಹೋರಾಡಿ ಸಾಧನೆ ಮಾಡುವುದರ ಜೊತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲವಾಗಿ ವಿವರಿಸಲಾಗಿದೆ.

ಈ ಧಾರವಾಹಿ ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ . ಕಥಾ ನಾಯಕಿಯಾಗಿ ವರ್ಷಿಕಾ ಹಾಗು ನಾಯಕಿಯ ತಂದೆ – ತಾಯಿಯಾಗಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಹಾಗು ಕಥಾ ನಾಯಕನಾಗಿ ಹೊಸ ಪರಿಚಯ ಮಂಗಳೂರು ಪ್ರತಿಭೆ ಕಿರಣ್ ಹಾಗು ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ಮತ್ತು ಮಾಂಗಲ್ಯ ಧಾರವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸುತ್ತಿರುವ ಹೊಚ್ಚ ಹೊಸ ಧಾರವಾಹಿ ಜನನಿ ಆಗಸ್ಟ್ 15ದ ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ .

Spread the love
Continue Reading

Television News

ಮೊದಲ ರಾತ್ರಿಯ ಬಗ್ಗೆ ಮಾತನಾಡಿದ ಆಲಿಯಾ ಭಟ್: ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?

Published

on

By

ಕರಣ್ ಜೋಹರ್ ನಡೆಸಿಕೊಡುವ ಖ್ಯಾತ ರಿಯಾಲಿಟಿ ಶೋ ಕಾಫಿ ವಿತ್ ಕರಣ್ ಸೀಸನ್ 7 ಆರಂಭವಾಗಲು ಇನ್ನು ಒಂದು ದಿನ ಮಾತ್ರವೇ ಭಾಕಿ ಇದೆ. ಈ ಬಾರಿ ನೇರವಾಗಿ ಕಾರ್ಯಕ್ರಮ ಒಟಿಟಿ ಮೂಲಕ ಪ್ರಸಾರವಾಗುತ್ತಿದೆ. ಮೊದಲ ಎಪಿಸೋಡ್ಗೆ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಆಗಮಿಸಲಿದ್ದಾರೆ.

ಇದರ ಪ್ರೋಮೋವನ್ನು ಕರಣ್ ಜೋಹರ್ ಹಂಚಿಕೊಂಡಿದ್ದಾರೆ. ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಜುಲೈ 7ರಂದು 7 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ‘ಗಲ್ಲಿ ಬಾಯ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಈಗ ಇಬ್ಬರೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಕರಣ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕಾರಣದಿಂದ ಮೊದಲ ಅತಿಥಿಯಾಗಿ ರಣವೀರ್ ಹಾಗೂ ಆಲಿಯಾ ಭಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಆಲಿಯಾ ಭಟ್ಗೆ ಕೆಲ ನೇರ ಪ್ರಶ್ನೆಗಳನ್ನು ಕೇಳಲಾಗಿದೆ.

‘ಮದುವೆ ನಂತರ ಅರ್ಥವಾದ ಒಂದು ವಿಚಾರ ಯಾವುದು ಹೇಳಿ’ ಎಂದು ಆಲಿಯಾಗೆ ಕರಣ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಆಲಿಯಾ ‘ಮೊದಲ ರಾತ್ರಿ ಎಂಬುದು ಇರುವುದಿಲ್ಲ. ನೀವು ಸುಸ್ತಾಗಿರುತ್ತೀರಿ’ ಎಂದಿದ್ದಾರೆ. ಆಲಿಯಾ ಭಟ್ ಉತ್ತರ ಕೇಳಿ ರಣವೀರ್ ಸಿಂಗ್ ಬಿದ್ದುಬಿದ್ದು ನಕ್ಕಿದ್ದಾರೆ.
ಕರಣ್ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಸಾಕಷ್ಟು ನೇರ ಪ್ರಶ್ನೆಗಳು ಎದುರಾಗುತ್ತವೆ. ಇದರಿಂದ ಹಲವು ವಿವಾದಗಳು ಹುಟ್ಟಿಕೊಂಡಿದ್ದೂ ಇದೆ.

Spread the love
Continue Reading

Cinema News

ಕಾಳಿ ಕೈಯಲ್ಲಿ ಸಿಗರೇಟು: ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಪ್ರಮೋದ್ ಮುತಾಲಿಕ್ ಕಿಡಿ

Published

on

By

ಧಾರವಾಡ: ಸಾಕ್ಷ್ಯಾಚಿತ್ರವೊಂದರಲ್ಲಿ ತಮಿಳುನಾಡಿನ ಕಾಳಿ ದೇವತೆಯ ಕೈಯಲ್ಲಿ ಸಿಗರೇಟು ಇರಿಸಿದ ಪೋಸ್ಟರ್ ಬಿಡುಗಡೆ ಮಾಡಿರುವ ಕಾರಣಕ್ಕೆ ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ಹಿಂದೂಗಳ ದೌರ್ಬಲ್ಯ. ಹಿಂದೂ ಸಮಾಜ ಒಗ್ಗಟ್ಟಾಗಿ ಪ್ರತಿಕ್ರಿಯೆ ಮಾಡದೇ ಇರುವುದೇ ಇದಕ್ಕೆ ಕಾರಣ. ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಅವಮಾನಕರ ಚಿತ್ರೀಕರಣ ಮಾಡಿದ್ದಾರೆ. ಚಪ್ಪಲಿ, ಬನಿಯನ್, ಶೌಚಾಲಯಗಳಲ್ಲಿ ಅಶ್ಲೀಲವಾಗಿ ಚಿತ್ರೀಕರಿಸಿ ಅವಮಾನ ಮಾಡಿದ್ದಾರೆ. ಮುಂದೆಯೂ ಈ ರೀತಿ ಆಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನು ದುರ್ಬಲವಾಗಿವೆ. ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಮುಸ್ಲಿಮರಾದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ. ಒಬ್ಬ ನ್ಯಾಯಮೂರ್ತಿ ಇಡೀ ದೇಶದಲ್ಲಿ ನೂಪುರ್ ಶರ್ಮಾ ಅವರಿಂದ ಗಲಭೆ ಆಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಕಾಳಿಕಾ ಮಾತೆಯ ಕೈಯಲ್ಲಿ ಸಿಗರೇಟ್ ಇಟ್ಟು ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರಿಂದಲೂ ಗಲಾಟೆ ಆಗುತ್ತದೆ ಎಂದು ಹೇಳಿ, ಒದ್ದು ಒಳಗೆ ಹಾಕೋಕಾಗಲ್ವಾ? ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಎಂದು ಪ್ರಶ್ನಿಸಿದರು.
ಈ ಬೆಳವಣಿಯಿಂದ ನ್ಯಾಯಾಂಗ ವ್ಯವಸ್ಥೆಯೂ ಕಡೆಗಣನೆಯಾಗುತ್ತಿದೆ. ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ವಿರೂಪಗೊಳಿಸಿದ ಚಿತ್ರೀಕರಣ ಮಾಡಿದ್ದರು. ಆ ಸಂದರ್ಭದಲ್ಲಿಯೂ ಹಿಂದೂ ಸಮಾಜ ನ್ಯಾಯ ಸಮ್ಮತವಾಗಿಯೇ ಹೋರಾಟ ಮಾಡಿತ್ತು. 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದರಿಂದ ಎಂ.ಎಫ್.ಹುಸೇನ್ ಓಡಿಯೇ ಹೋದ. ಇವತ್ತು ಸ್ವಯಂಪ್ರೇರಿತವಾಗಿ ದಾಖಲಿಸಬೇಕಿತ್ತು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ದುರ್ಬಲವಾಗಿರುವುದರಿಂದಲೇ ಇದೆಲ್ಲವೂ ಆಗುತ್ತಿದೆ ಎಂದು ಎಚ್ಚರಿಸಿದ್ದಾರೆ.

Spread the love
Continue Reading

Television News

ಒಂದೇ ರೂಮ್ ನಲ್ಲಿ ಪವಿತ್ರ ಲೋಕೇಶ್, ನರೇಶ್: ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದ ರಮ್ಯಾ ರಘುಪತಿ

Published

on

By

ಮೈಸೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ. ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇದ್ದ ಹೋಟೆಲ್ ಮುಂದೆ ರಮ್ಯಾ ರಘುಪತಿ ದೊಡ್ಡ ಹೈಡ್ರಾಮಾ ಮಾಡಿದ್ದಾರೆ.
ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಂದೇ ರೂಮ್ನಲ್ಲಿದ್ದರು. ವಿಷಯ ತಿಳಿದ ನರೇಶ್ ಮೂರನೇ ಪತ್ನಿ ರಮ್ಯ ರಘುಪತಿ ದೊಡ್ಡ ಹೈಡ್ರಾಮ ಸೃಷ್ಟಿಸಿದ್ದಾರೆ.
ರಮ್ಯಾ ಎಷ್ಟೇ ಬಾಗಿಲು ಬಡಿದರು ನರೇಶ್ ಹಾಗೂ ಪವಿತ್ರಾ ರೂಂ ಬಾಗಿಲು ತೆರೆಯಲಿಲ್ಲ. ಈ ವೇಳೆ ಪೊಲೀಸ್ ಭದ್ರತೆಯಲ್ಲಿ ಪವಿತ್ರಾ ಹಾಗೂ ನರೇಶ್ ರೂಂನಿಂದ ಹೊರ ಹೋಗಿದ್ದಾರೆ. ಈ ವೇಳೆ ರಮ್ಯಾ ರಘುಪತಿ ಪತಿ ನರೇಶ್, ಪವಿತ್ರಾ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೂಡಲೇ ಪೊಲೀಸರು ರಮ್ಯಾ ರಘುಪತಿಯನ್ನು ತಡೆದಿದ್ದಾರೆ.
ನಂತರ ಪವಿತ್ರಾ ಲೋಕೇಶ್ ಹಾಗೂ ನರೇಶ್ಗೆ ಅವಾಚ್ಯ ಶಬ್ದಗಳಿಂದ ರಮ್ಯಾ ರಘುಪತಿ ನಿಂದಿಸಿದ್ದಾರೆ. ಈ ವೇಳೆ ನರೇಶ್ ಅವರು ನೀನೊಬ್ಬಳು ವಂಚಕಿ, ಮೋಸಗಾತಿ ಎಂದು ಜೋರಾಗಿ ಕಿರುಚಾಡುತ್ತಾ, ವಿಜಲ್ ಹೊಡೆಯುತ್ತಾ ಲಿಫ್ಟ್ ಮೂಲಕ ತೆರಳಿದರು.

Spread the love
Continue Reading

Television News

ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರ ಲೋಕೇಶ್

Published

on

By

ಕಳೆದ ಕೆಲವು ದಿನಗಳಿಂದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಮದುವೆ, ಸಂಸಾರದ ಕುರಿತು ಒಂದಲ್ಲ ಒಂದು ಸುದ್ದಿಗಳು ಹರಿದಾಡ್ತಿದ್ದು ಇದೀಗ ಮತ್ತೆ ಪವಿತ್ರ ಲೋಕೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಹಿಂದೆ ತಮ್ಮ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಸುಳ್ಳು ಸುದ್ದಿ ಹಾಕಲಾಗುತ್ತಿದೆ ಎಂದು ದೂರು ನೀಡಿದ್ದ ನಟಿ ಪವಿತ್ರ ಲೋಕೇಶ್ ಇದೀಗ ಮತ್ತೆ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಇಂದು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಅವರನ್ನ ಕೆಲವರು ಹಿಂಬಾಲಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಮೈಸೂರಿಗೆ ಆಗಮಿಸಿದ ತಕ್ಷಣವೇ ಅವರು ನಗರದ ವಿವಿ ಪುರಂ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.
ಜೂನ್ 19ರಂದು ತಮ್ಮ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸುಳ್ಳು ಸುದ್ದಿಗಳು ಹಾಗೂ ಮಾನಹಾನಿ ಅಂತಹ ಫೋಟೋಗಳನ್ನ ಹಾಕಲಾಗುತ್ತಿದೆ. ಅಲ್ಲದೇ, ಅಶ್ಲೀಲ ಸಂದೇಶಗಳನ್ನೂ ಕಳುಹಿಸಲಾಗುತ್ತಿದೆ. ಆದ್ದರಿಂದ ಈ ರೀತಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಸೈಬರ್ ಠಾಣೆಗೆ ದೂರು ನೀಡಿದ್ದರು. ಇದೀಗ ಮತ್ತೆ ಪವಿತ್ರ ಲೋಕೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Spread the love
Continue Reading
Advertisement

Follow me on Twitter

Trending News