Cinema News
ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ ಡಿ.ಎನ್.ಎ . ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ.

ದೇವನೂರು ಮಹಾದೇವ ಅವರು ಹೇಳಿರುವ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ “ಡಿ.ಎನ್.ಎ”.
ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ಲೋಕಾರ್ಪಣೆ ಮಾಡಿದರು.
ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. “ಜನುಮದ ಜೋಡಿ” ಚಿತ್ರಕ್ಕೆ ನಾಗಾಭರಣ ಅವರೊಡನೆ ಕೆಲಸ ಮಾಡಿದ್ದೀನಿ. ಸಂಭಾಷಣೆಯನ್ನು ಬರೆದಿದ್ದೀನಿ. ಆದರೂ ಇದು ಕೆಲವರಿಗೆ ಬಿಟ್ಟು ಹೆಚ್ಚಿನ ಜನರಿಗೆ ತಿಳಿದಲ್ಲ. ಈಗ ಬಹಳ ವರ್ಷಗಳ ನಂತರ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ “ಸಂಬಂಜ ಅನ್ನೋದು ದೊಡ್ದು ಕಾನ” ಎಂಬ ಮಾತೇ ಈ ಚಿತ್ರಕ್ಕೆ ಸ್ಪೂರ್ತಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಪ್ರಕಾಶ್ ರಾಜ್ ಮೇಹು.
ನಾನು ಚಿಕ್ಕಂದಿನಿಂದಲೂ ಅಣ್ಣವ್ರ ಅಭಿಮಾನಿ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣ ಮಾಡಿದ್ದೀನಿ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ಮೈಲಾರಿ.
ನಾನು ಹಾಗೂ ನಿರ್ದೇಶಕರು ಬಹುಕಾಲದ ಗೆಳೆಯರು. ಪ್ರಕಾಶ್ ಅವರು ಈ ರೀತಿಯ ಕಥೆಯಿದೆ ಎಂದು ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ನೀವೆಲ್ಲಾ ನೋಡಿ ಹರಿಸಿ ಎಂದರು ಅಚ್ಯುತ ಕುಮಾರ್.
ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ. ಅಂತಹ ಒಂದು ಸಿನಿಮಾ “ಡಿ.ಎನ್.ಎ”. ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ ಎಂದರು ನಟಿ ಎಸ್ತರ್ ನರೋನ.
ಸಂಬಂಧಗಳ ಸುತ್ತ ಹೆಣೆದಿರುವ ಈ ಕಥೆ ತುಂಬಾ ಚೆನ್ನಾಗಿದೆ. ಉತ್ತಮ ಪಾತ್ರಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ಅನಿತಾಭಟ್.
ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು ಎಂಬ ವಿಷಯವನ್ನು ತಿಳಿಸಿದ ಮಾಸ್ಟರ್ ಆನಂದ್ ಚಿತ್ರತಂಡಕ್ಕೆ ಶುಭ ಕೋರಿದರು.
.
ಚೇತನ್ ರಾಜ್ ಸಂಗೀತದ ಬಗ್ಗೆ ಮಾತನಾಡಿದರು. ನಟಿ ಭವಾನಿ ಪ್ರಕಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಕೊರೋನ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೇಂಡ್ ಕರ್ಫ್ಯು ಮುಂತಾದ ನಿಯಮಗಳನ್ನು ಜಾರಿ ಮಾಡಿದೆ. ಹಾಗಾಗಿ ಜನವರಿ 7 ರಂದು ಆಗಬೇಕಿದ್ದ ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.
ರೋಜರ್ ನಾರಾಯಣ್, ಎಸ್ತರ್ ನರೋನ, ಅಚ್ಯುತ ಕುಮಾರ್, ಯಮುನ, ಅನಿತಾಭಟ್, ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟತ ಧ್ರುವ ಮೇಹು, ನಿಹಾರಿಕ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Cinema News
ಸದ್ಯದಲ್ಲೇ ಬರಲಿದೆ “ಪ್ರೀತಿಯ ರಾಯಭಾರಿ” ಹುಡಗ ನಕುಲ್ ಅಭಿನಯದ ಹೊಸಚಿತ್ರ

Cinema News
ವಿಜಯ್ ರಾಘವೇಂದ್ರ ನಟನೆಯ ರಾಘು ಸಿನಿಮಾದ ಮುಹೂರ್ತ…ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರಳಿ ಕ್ಲ್ಯಾಪ್

Cinema News
ಅಬ್ಬಾ ಲಾಟ್ರಿ….ಬೆಂಕಿ ಸಿನಿಮಾದ ಓಕೆನಾ ಸಾಂಗ್ ಗೆ ಹೆಜ್ಜೆ ಹಾಕಿ Iphone 13 ಗೆಲ್ಲಿ?

Cinema News
ಓಂಪ್ರಕಾಶ್ ರಾವ್ ಹಾಗೂ ಆದಿತ್ಯ ಕಾಂಬಿನೇಶನಲ್ಲಿ “ಇಲಾಖೆ”.

Cinema News
ಜೂನ್ ನಲ್ಲಿ “ರಾಜಮಾರ್ತಾಂಡ”ನ ಆಗಮನ. ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ ಸರ್ಜಾ.

-
Movie Reviews3 years ago
ವಿಕೇಂಡ್ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
-
Movie Reviews3 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Box Office2 years ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews3 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Cinema News3 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office3 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News3 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews3 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News3 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
News3 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ