ನವೆಂಬರ್ 15 ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕನ್ಯಾದಾನ” – PopcornKannada
Connect with us

News

ನವೆಂಬರ್ 15 ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕನ್ಯಾದಾನ”

Published

on

ಕಳೆದ ೨೭ ವರ್ಶಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯಕ್ರಮಗಳಿಂದ ಅತ್ಯಂತ ಜನಪ್ರಿಯ ವಾಹಿನಿ ಉದಯ ಟವಿ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಕನ್ನಡಿಗರ ದೈನಂದಿನ ಮನರಂಜನೆಯ ಭಾಗವಾಗಿ ಯಶಸ್ವಿಯಾಗಿವೆ.

ಸದಾ ಹೊಸ ರೂಪದ ಕಥೆಗಳನ್ನು ಕೊಡುತ್ತಿರುವ ಉದಯ ಟಿವಿ ಹೊಸತನದ ಮೆರುಗನ್ನು ನೀಡಲು ಈಗ ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ “ಕನ್ಯಾದಾನ”ವನ್ನು ರ‍್ಪಿಸುತ್ತಿದೆ
ಬೆಂಗಳೂರು ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ನಿಗೆ ೫ ಜನ ಹೆಣ್ಣು ಮಕ್ಕಳು. ಅಶ್ವತ್ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ.. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಇಲ್ಲದ ಹಾಗೆ ಅಕ್ಕರೆಯಿಂದ ಸಂಸ್ಕಾರವಂತರಾಗಿ ಬೆಳೆಸಿರುತ್ತಾನೆ. ತನ್ನ ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನ ಕೊಡುವ ಭರದಲ್ಲಿದ್ದಾನೆ. ಅವನ ಇಚ್ಚೆಯಂತೆ ತನ್ನಿಬ್ಬರ ಮಕ್ಕಳಿಗೆ ಮದುವೆ ಮಾಡುತ್ತಾನೆ ಆದರೆ ಮದುವೆ ಮಾಡಿ ಕಳುಹಿಸಿದ ತಕ್ಷಣ ಒಬ್ಬ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂಬುದರ ಅರಿವಿದೆ. ಹೇಗೆ ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಕೊನೆ ಉಸಿರಿನವರೆಗು ಇರುತ್ತದೆ ಎನ್ನುವ ಕಥೆ “ಕನ್ಯಾದಾನ”.

ಹಿರಿಯ ನಟ ಮೈಕೊ ಮಂಜು ತಂದೆಯ ಪಾತ್ರ ವಹಿಸಿದ್ದಾರೆ. ೫ ಜನ ಮುದ್ದು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸ ನಾರಾಯಣ್, ಕರ‍್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರರ‍್ಥನ ಕಿರಣ್ ನರ‍್ವಹಿಸಿದ್ದಾರೆ. ಇನ್ನುಳಿದಂತೆ ಅರುಣ್ ಹರಿಹರನ್ ನರ‍್ದೇಶನ, ಅಂಜಲಿ ವೆಂರ‍್ಸ್ ನರ‍್ಮಾಣದಲ್ಲಿ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.

“ಈ ಧಾರಾವಾಹಿಯ ವಿಷಯ ಬೇರೆ ಕಥೆಗಳಿಗಿಂತ ಭಿನ್ನವಾಗಿದ್ದು, ಅಪರೂಪವಾದ ಜೋಡಿಗಳು ನಮ್ಮ ಧಾರಾವಾಹಿಯಲ್ಲಿದ್ದು ಒಂದು ಜೋಡಿ ಅಪ್ಪ ಹಾಗು ಅವರ ೫ ಜನ ಹೆಣ್ಣುಮಕ್ಕಳಾದರೆ ಮತ್ತೊಂದು ಜೋಡಿ ಕಥೆ ಮತ್ತು ಚಿತ್ರಕಥೆ. ಈ ಕಥೆ ಕನ್ನಡ ವೀಕ್ಷಕರಿಗೆ ತುಂಬಾ ಇಷ್ಟವಾಗಲಿದೆ” ಎಂದು ಧಾರಾವಾಹಿಯ ನರ‍್ದೇಶಕ ಅರುಣ್ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ʻಕನ್ಯಾದಾನʼ ಇದೇ ನವೆಂಬರ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮:೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *

Cinema News

ಒಟಿಟಿಯಲ್ಲಿ ದಾಖಲೆ ಬರೆದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ

Published

on

By

ಒಟಿಟಿಯಲ್ಲಿ ದಾಖಲೆ ಬರೆದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ

2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ ವಾಹನ ಚಿತ್ರ ಕೂಡ ಪ್ರಮುಖವಾಗಿದೆ. ರಾಜ್​ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್​ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯದ್ದೇ ಫೀಲ್​ ಕೊಟ್ಟಿತ್ತು. ಈ ಹಿಂದೆ ನೋಡಿರದ ರೀತಿಯಲ್ಲಿ ಈ ಸಿನಿಮಾ ಮಜಾ ಕೊಟ್ಟಿತ್ತು. ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್​ ಕಿಕ್​ ಕೊಟ್ಟಿತ್ತು.

ಕಳೆದ ನ.19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ವಿಭಿನ್ನ ಕಥಾಹಂದರ ಹೊಂದಿದ್ದ ‘ಗರುಡ ಗಮನ ವೃಷಭ ವಾಹನ’ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

‘ಹರಿ’ ಪಾತ್ರದಲ್ಲಿ ನಟ ರಿಷಬ್‌ ಶೆಟ್ಟಿ, ‘ಶಿವ’ ಎಂಬ ಪಾತ್ರದಲ್ಲಿ ರಾಜ್‌ ಪ್ರೇಕ್ಷಕರನ್ನು ಕರಾವಳಿಯ ರೌಡಿಸಂ ಲೋಕಕ್ಕೆ ಕರೆದೊಯ್ದಿದ್ದ ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಜೀ5ನಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ.

ಕ್ರೇಜಿಸ್ಟಾರ್‌ ರವಿಚಂದ್ರ ವಿ. ನಟನೆಯ ‘ಕನ್ನಡಿಗ’, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ–2’ ಸಿನಿಮಾ, ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫ್ ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದ್ದು, ಈ ಲಿಸ್ಟ್ ಗೆ ಈಗ ‘ಗರುಡ ಗಮನ ವೃಷಭ ವಾಹನ’ ಸೇರ್ಪಡೆಯಾಗಿದೆ.

Spread the love
Continue Reading

Cinema News

ನಿರ್ಭಯ 2″ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ.

Published

on

By

ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ “ನಿರ್ಭಯ 2” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ.

ಡಾ|ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಆಕಾಶಪರ್ವ ಸಂಗೀತ ನೀಡಿದ್ದಾರೆ. ರಂಗ್ ಮಂಜು ಸಂಭಾಷಣೆ ಬರೆದಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ “ನಿರ್ಭಯ 2” ಚಿತ್ರಕ್ಕಿದೆ.

“ಪಾರು” ಖ್ಯಾತಿಯ ಮೋಕ್ಷಿತ ಪೈ, ಅರ್ಜುನ್ ಕೃಷ್ಣ, ಹರೀಶ್ ಹೆಚ್ ಆರ್, ಕುಸುಮ, ರಾಧಾ ರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇ ಗೌಡ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Spread the love
Continue Reading

Cinema News

” ಸೀತಮ್ಮನ ಮಗ” ನಿಗಾಗಿ ಹಾಡಿದರು “ಸರಿಗಮಪ” ದ ಮೆಹಬೂಬ್ ಸಾಬ್.

Published

on

By

“ಸರಿಗಮಪ” ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಮೆಹಬೂಬ್ ಸಾಬ್ ಅವರು “ಸೀತಮಮ್ಮನ ಮಗ” ಚಿತ್ರಕ್ಕಾಗಿ ಯತಿರಾಜ್ ಬರೆದಿರುವ ” ಸೀತೆಯೆಂಬ ಹೆಸರಲ್ಲೇನೋ ದೋಷವುಂಟು..ಯುಗಗಳೇ ಕಳೆದರೂನು ಲೋಪವುಂಟು” ಎಂಬ ಅಮ್ಮನ ಕುರಿತಾದ ಭಾವುಕ ಗೀತೆಯನ್ನು ಹಾಡಿದ್ದಾರೆ. ವಿನುಮನಸು ಸಂಗೀತ ನೀಡಿರುವ ಈ ಹಾಡಿನ ಧ್ವನಿಮುದ್ರಣ ರೇಣು ಸ್ಟುಡಿಯೋದಲ್ಲಿ ನಡೆಯಿತು.

ಈ ಹಿಂದೆ ನಾನು ಹಾಡಿದ್ದ ಬಿಟ್ಟೋಗ್ ಬೇಡ ನನ್ನ..” ಗೀತೆಯಂತೆ ಈ ಹಾಡು ಕೂಡ ಜನಪ್ರಿಯತೆ ಪಡೆಯಲಿದೆ. ಇದುವರೆಗೂ ಅಮ್ಮನ ಕುರಿತಾಗಿ ಬಂದಿರುವ ಎಲ್ಲಾ ಹಾಡುಗಳಂತೆ ಈ ಹಾಡು ಕೂಡ ಜನಪ್ರಿಯವಾಲಿ’ ಎಂದು ಮೆಹಬೂಬ್ ಸಾಬ್ ಚಿತ್ರತಂಡಕ್ಕೆ ಶುಭಕೋರಿದರು.

ಸೋನು ಫಿಲಂಸ್ ಲಾಂಛನದಲ್ಲಿ ಕೆ‌.ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಚಿತ್ರವನ್ನು ಯತಿರಾಜ್ ನಿರ್ದೇಶಿಸುತ್ತಿದ್ದಾರೆ.

ಯತಿರಾಜ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌ ಮತ್ತು ಪ್ರಮುಖಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್, ಸಿಂಚನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಜೀವನ್ ರಾಜ್ ಛಾಯಾಗ್ರಹಣ ಹಾಗೂ ಶಶಿಕುಮಾರ್ ಇಜ್ಜಲಘಟ್ಟ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

Spread the love
Continue Reading

Cinema News

ಸೆನ್ಸಾರ್ ಮುಂದೆ ಕಸ್ತೂರಿ ಮಹಲ್

Published

on

By

ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ಹಾಗೂ ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಸ್ತೂರಿ ಮಹಲ್ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.
ಪ್ರಸ್ತುತ ಚಿತ್ರಮಂದಿರಗಳಿಗೆ ಐವತ್ತರಷ್ಟು ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಸರ್ಕಾರದ ಮುಂದಿನ ನಿಲುವನ್ನು ನೋಡಿಕೊಂಡು ಬಿಡುಗಡೆಯ ದಿನಾಂಕ ತಿಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ “ಕಸ್ತೂರಿ ಮಹಲ್” ನ ಟೀಸರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಆ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರಿದ್ದಾರೆ.

ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ದಿನೇಶ್ ಬಾಬು ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಶ್ರೀಭವಾನಿ‌ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್ ಆರ್ ಸಿ* ಹಾಗೂ
ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ . ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಹರೀಶ್ ಕೃಷ್ಣ ಅವರ ಸಂಕಲನ “ಕಸ್ತೂರಿ ಮಹಲ್” ಗಿದೆ.

Spread the love
Continue Reading

Cinema News

ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ ಡಿ.ಎನ್.ಎ . ಹಾಡುಗಳನ್ನು ಬಿಡುಗಡೆ ‌ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ.

Published

on

By

ದೇವನೂರು ಮಹಾದೇವ ಅವರು ಹೇಳಿರುವ “ಸಂಬಂಜ ಅನ್ನೋದು ದೊಡ್ದು ಕನಾ” ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ “ಡಿ.ಎನ್.ಎ”.

ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ಲೋಕಾರ್ಪಣೆ ಮಾಡಿದರು.

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. “ಜನುಮದ ಜೋಡಿ” ಚಿತ್ರಕ್ಕೆ ನಾಗಾಭರಣ ಅವರೊಡನೆ ಕೆಲಸ‌ ಮಾಡಿದ್ದೀನಿ. ಸಂಭಾಷಣೆಯನ್ನು ಬರೆದಿದ್ದೀನಿ. ಆದರೂ ಇದು ಕೆಲವರಿಗೆ ಬಿಟ್ಟು ಹೆಚ್ಚಿನ ಜನರಿಗೆ ತಿಳಿದಲ್ಲ. ಈಗ ಬಹಳ ವರ್ಷಗಳ ನಂತರ ಚಿತ್ರವೊಂದನ್ನು ನಿರ್ದೇಶಿಸಿದ್ದೇನೆ. ದೇವನೂರು ಮಹದೇವ ಅವರ “ಸಂಬಂಜ ಅನ್ನೋದು ದೊಡ್ದು ಕಾನ” ಎಂಬ ಮಾತೇ ಈ ಚಿತ್ರಕ್ಕೆ ಸ್ಪೂರ್ತಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಪ್ರಕಾಶ್ ರಾಜ್ ಮೇಹು.

ನಾನು ಚಿಕ್ಕಂದಿನಿಂದಲೂ ಅಣ್ಣವ್ರ ಅಭಿಮಾನಿ. ಕುಟುಂಬ ಸಮೇತ ಕುಳಿತು ನೋಡಬಹುದಾದ ‌ಸಿನಿಮಾ‌‌ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣ ಮಾಡಿದ್ದೀನಿ. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ಮೈಲಾರಿ.

ನಾನು ಹಾಗೂ ನಿರ್ದೇಶಕರು ಬಹುಕಾಲದ ಗೆಳೆಯರು. ಪ್ರಕಾಶ್ ಅವರು ಈ‌ ರೀತಿಯ ಕಥೆಯಿದೆ ಎಂದು ಹೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಕೊರೋನದಿಂದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ. ನೀವೆಲ್ಲಾ ನೋಡಿ ಹರಿಸಿ ಎಂದರು ಅಚ್ಯುತ‌ ಕುಮಾರ್.

ಕೆಲವು ಸಿನಿಮಾಗಳು ಹೃದಯಕ್ಕೆ ಹತ್ತಿರವಾಗುತ್ತದೆ.‌ ಅಂತಹ ಒಂದು ಸಿನಿಮಾ “ಡಿ.ಎನ್.ಎ”. ಇಂತಹ ಚಿತ್ರದಲ್ಲಿ ಅಭಿನಯಿಸಿದ ಖುಷಿಯಿದೆ ಎಂದರು ನಟಿ ಎಸ್ತರ್ ನರೋನ.‌

ಸಂಬಂಧಗಳ ಸುತ್ತ ಹೆಣೆದಿರುವ ಈ ಕಥೆ ತುಂಬಾ ಚೆನ್ನಾಗಿದೆ. ಉತ್ತಮ ಪಾತ್ರಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ಅನಿತಾಭಟ್.

ನನ್ನ ಮಗ ಕೃಷ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಡಿ.ಎನ್.ಎ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದು. ಇದು ತಂದೆ , ತಾಯಿ ಹಾಗೂ ಮಗನ ಹೆಸರು ಎಂಬ ವಿಷಯವನ್ನು ತಿಳಿಸಿದ ಮಾಸ್ಟರ್ ಆನಂದ್ ಚಿತ್ರತಂಡಕ್ಕೆ ಶುಭ ಕೋರಿದರು.
.
ಚೇತನ್ ರಾಜ್ ಸಂಗೀತದ ಬಗ್ಗೆ ಮಾತನಾಡಿದರು. ನಟಿ ಭವಾನಿ ಪ್ರಕಾಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕೊರೋನ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೇಂಡ್ ಕರ್ಫ್ಯು ಮುಂತಾದ ನಿಯಮಗಳನ್ನು ಜಾರಿ‌ ಮಾಡಿದೆ. ಹಾಗಾಗಿ ಜನವರಿ 7 ರಂದು ಆಗಬೇಕಿದ್ದ ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.

ರೋಜರ್ ನಾರಾಯಣ್, ಎಸ್ತರ್ ನರೋನ, ಅಚ್ಯುತ ಕುಮಾರ್, ಯಮುನ, ಅನಿತಾಭಟ್, ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟತ ಧ್ರುವ ಮೇಹು, ನಿಹಾರಿಕ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌‌.

Spread the love
Continue Reading

Trending News