Connect with us

News

ಆಗಷ್ಟ್‌ 23 ರಿಂದ ಉದಯ ಟಿವಿಯಲ್ಲಿ 2 ಹೊಸ ಧಾರಾವಾಹಿಗಳು

Published

on

ಕೌತುಕಗಳೊಂದಿಗೆ ಸೃಜನಾತ್ಮಕ ಧಾರಾವಾಹಿಗಳನ್ನನೀಡುತ್ತ ಬಂದಿರೋ ಉದಯ ಟಿವಿ, ಡ್ರಾಮಾ , ಆಕ್ಷನ್‌ , ಹಾರರ್‌ ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನ ನೀಡಿ ವೀಕ್ಷಕರನ್ನು ರಂಜಿಸುತ್ತಿದೆ. ಹೊಸ ಪ್ರಯತ್ನಗಳ ಮೂಲಕ ಜನರ ಮನಗೆದ್ದಿರೋ ಈ ವಾಹಿನಿ ಇದೀಗ ಮತ್ತೆ ಹೊಸ ೨ ಧಾರಾವಾಹಿಗಳನ್ನು ನೀಡಲು ಸಜ್ಜಾಗಿದೆ.

ಕಾದಂಬರಿ: ಸೋಮವಾರದಿಂದ ಶನಿವಾರ ಮಧ್ಯಾಹ್ನ ೨ಗಂಟೆಗೆ

ಶ್ರೀ ದುರ್ಗಾ ಕ್ರೀಯೇಷನ್ಸ್‌ ವಿಭಿನ್ನ ಕಥಾಹಂದರವುಳ್ಳ “ಕಾದಂಬರಿ” ಎಂಬ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಿದ್ಧವಾಗಿದೆ.
“ಕಾದಂಬರಿ” ಒಂದು ಕೆಳಮಧ್ಯಮ ವರ್ಗದ ಹುಡುಗಿ. ಹೊರದೇಶಕ್ಕೆ ತೆರಳಿ ದುಡಿದು ಬರುವುದಾಗಿ ಎಂದು ಹೇಳಿ ಹೋದ ಅಪ್ಪನ ಸುಳಿವಿಲ್ಲ. ಇದ್ದೊಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಸರಾಯಿಯ ಸೆರೆಯಾಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನೀಯಂತ್ರಿಸಲು ಹಗಲಿರುಳು ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್‌ ಸುದರ್ಶನ್‌ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡಿಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಇವಳಿಗೊಂದೇ ಆಸೆ. ಇವಳ ಮನಸನ್ನ ಅರ್ಥ ಮಾಡಿಕೊಳ್ಳೋ ಒಬ್ಬ ಸಂಗಾತಿಯ ಕೈಹಿಡಿದು, ೨ ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ? ಎಂಬುದು ಈ ಧಾರಾವಾಹಿಯ ಸಾರಾಂಶ.
“ಎಲ್ಲಾ ಧಾರಾವಾಹಿಗಳಲ್ಲಿ ತೋರಿಸೋ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗೋ ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿಯ ಹೈಕ್ಲಾಸ್‌ ಕಥೆ ಇದಾಗಿದೆ” ಎಂದು ಎನ್ನುತ್ತಾರೆ ನಿರ್ದೇಶಕ ದರ್ಶಿತ್‌ ಭಟ್.

ಪ್ರಸಿದ್ಧ ಧಾರಾವಾಹಿಗಳನ್ನು ನೀಡಿರುವ ಗಣಪತಿ ಭಟ್‌ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್‌ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿಯವರ ಛಾಯಾಗ್ರಹಣ, ಗಿರೀಶ್‌ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್‌ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್‌ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ ಸರ್ ದೇಶಪಾಂಡೆ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತ, ಪೃಥ್ವಿ ಯುವಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡಿದೆ ಈ ಧಾರಾವಾಹಿ.
“ಕಾದಂಬರಿ”ಇದೇ ೨೩ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ ೨ಗಂಟೆಗೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

ನಿನ್ನಿಂದಲೇ : ಸೋಮವಾರದಿಂದ ಶನಿವಾರ ಮಧ್ಯಾಹ್ನ ೨.೩೦ಕ್ಕೆ :

ಪ್ರಖ್ಯಾತ ನಟ , ರಾಜೇಶ ನಟರಂಗ ನಿರ್ಮಾಣದಲ್ಲಿ ತಯಾರಾಗುತ್ತಿದೆ ನಿನ್ನಿಂದಲೇ ಧಾರಾವಾಹಿ. ಇದೊಂದು ಪ್ರೇಮ ಕಥೆ. ಸುಮಧುರ ಸ್ನೇಹಕ್ಕೆ ಪ್ರೀತಿಯ ಕರೆಯೋಲೆ ಈ ನಿನ್ನಿಂದಲೇ. ಧ್ವನಿ ಕ್ರಿಯೇ಼ಷನ್ಸ್‌ ಲಾಂಚನದಲ್ಲಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕುತಿರೋ ರಾಜೇಶ , ಈ ಪ್ರೇಮ ಕಥೆಯಲ್ಲಿ ಸಾಕಷ್ಟು ಕೌಟುಂಬಿಕ ಆಂಶಗಳನ್ನ ಸೇರಿಸಿದ್ದಾರೆ.

ರಾಜಲಕ್ಷ್ಮಿಯ ದೊಡ್ಡ ಕುಟುಂಬ , ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ , ಎರಡು ಕುಟುಂಬ ದೂರವಿರುತ್ತೆ . ಈ ಸಂಬಂದಗಳನ್ನ ಒಂದು ಮಾಡೋಕೆ ಇರೋ ದಾರಿ ತನ್ನ ಮೊಮ್ಮಕಳಾದ ಅನನ್ಯ ಮತ್ತು ವರು಼ಣ್‌ನ ಮದುವೆ. ನಾಯಕಿಯಾಗಿರೊ ಅನನ್ಯಾಳಿಗೆ ನಾಯಕ ವರುಣ್‌ ಅಂದ್ರೆ ಪಂಚಪ್ರಾಣ , ಈ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ? ಎಂಬುದು ಈ ಧಾರಾವಾಹಿಯ ಸಾರಾಂಶ.
ಶರತ್‌ ಪರ್ವತವಾಣಿಯವರ ಕಥೆಗೆ , ವಿನೋದ್‌ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನ ದಿಲೀಪ್‌ ಹೊತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರಿ ಮತ್ತು ನಾಯಕನ ಪಾತ್ರದಲ್ಲಿ ದೀಪಕ್‌ ಬಣ್ಣ ಹಚ್ಚುತ್ತಿದ್ದಾರೆ., ಇವರ ಜೊತೆಗೆ ನಟಿ ಜಯಶ್ರಿ , ಲಲಿತಾಂಜಲಿ , ನಮಿತಾ ದೇಸಾಯಿ , ಪ್ರಶಾಂತ್‌ , ನಂದೀಶ , ಶೋಭಿತಾ ಮುಖ್ಯ ಪಾತ್ರಗಳನ್ನ ವಹಿಸಿದ್ದಾರೆ.

ನಿನ್ನಿಂದಲೇ ಹಾಡಿಗೆ ಸಾಹಿತ್ಯ ಬರೆದಿರುವುದು ಸಾಹಿತಿ ಜಯಂತ್‌ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರಿವುದು ವಸಂತ್‌ ದನಿಯಾಗಿರೋದು ಮಾನಸ ಹೊಲ್ಲಾ.
“ನಿನ್ನಿಂದಲೇ”ಇದೇ ೨೩ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ ೨.೩೦ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *

Cinema News

ವಿಭಿನ್ನ ಶೀರ್ಷಿಕೆಯ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್…ಕನ್ನಡ ಸೇರಿದಂತೆ ಆರು ಭಾಷೆಯಲ್ಲಿ ಬರಲಿದೆ ಸಿನಿಮಾ

Published

on

By

ಕನ್ನಡದಲ್ಲೀಗ ವಿಭಿನ್ನ ಶೀರ್ಷಿಕೆಯ ಹೊಸ ಹೊಸ ಸಿನಿಮಾಗಳು‌ ಬಂದಿವೆ. ಬರ್ತಿವೆ. ಈಗ The endless one ಭಗವಾನ್ ಶ್ರೀನಿತ್ಯಾನಂದ ಎಂಬ ಹೆಸರಿನ ಹೊಸ ಸಿನಿಮಾವೊಂದು ಬರ್ತಿದೆ. ಇವತ್ತು ಬೆಂಗಳೂರಿನಲ್ಲಿರುವ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ವಿನಯ್ ಗುರೂಜಿ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ವಿನಯ್ ಗುರೂಜೀ ಮಾತನಾಡಿ, ಭಗವಾನ್ ಹೆಸರಿನಲ್ಲಿ ಕಿರುಚಿತ್ರಗಳಷ್ಟೇ ಬಂದಿದೆ. ಈಗ ಅವರ ವಿಚಾರಗಳನ್ನು ಒಳಗೊಂಡ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಬರ್ತಿದೆ. ಭಗವಾನ್ ನಲ್ಲಿ ಒಂದೇ ತತ್ವ. ಮನುಷ್ಯತ್ವ. ಅಲ್ಲಿ ಮತಕ್ಕೆ ಜಾಗವಿಲ್ಲ. ಮುಷನ್ಯತ್ವಕ್ಕಿಂತ ದೊಡ್ಡ ತತ್ವ ಮತ್ತೊಂದಿಲ್ಲ. ಶಿರಡಿಬಾಬಾ ಸೀರಿಯಲ್ ಬಂದಮೇಲೆ ಬಾಬಾ ಬಗ್ಗೆ ಗೊತ್ತಾಗಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾ ಆದ್ಮೇಲೆ ತಿರುಪತಿ ಬಗ್ಗೆ ಗೊತ್ತಾಯ್ತು. ಅದೇ ರೀತಿ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದಲ್ಲಿ ಹಲವು ವಿಷಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿರ್ಮಾಪಕ ಕೃಷ್ಣ ಕೆ.ಆರ್ ಮಾತನಾಡಿ, ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ನಮ್ಮ ಫ್ಯಾಮಿಲಿ ಭಗವಾನ್ ನಿತ್ಯಾನಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಸಿನಿಮಾ ಮಾಡುವ ಮೂಲಕ ಚಿಕ್ಕದೊಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.

ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ‌ ಇಡಲಾಗಿದ್ದು, ಲಕ್ಷ್ಮಸ್ ಸ ಖೋಡೇ ಅವರ ಮರಿ ಮಗ, ಪದ್ಮಾನಾಭ ಸ ಖೋಡೇ ಅವರ ಮೊಮ್ಮಗ ಶ್ರೀಕೃಷ್ಣ ಕೆ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುಲಾಬ್ ಪ್ರೊಡಕ್ಷನ್ ನಡಿಯಲ್ಲಿ ತಯಾರಾಗ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣ ನಿರ್ಮಾಪಕ ಕೃಷ್ಣ ಸಜ್ಜಾಗಿದ್ದು, ಕನ್ನಡ‌ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ಉಳಿದ ಸ್ಟಾರ್ ಕಾಸ್ಟ್, ತಂತ್ರಜ್ಞಾನರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

Spread the love
Continue Reading

Cinema News

ವಿಭಿನ್ನ ಕಥಾಹಂದರದ “ಲೈನ್ ಮ್ಯಾನ್” ಚಿತ್ರಕ್ಕೆ ಚಾಮರಾಜನಗರದಲ್ಲಿ ಚಾಲನೆ‌.

Published

on

By

ಭಿನ್ನ” ದಂತಹ ವಿಭಿನ್ನ ಚಿತ್ರ ನಿರ್ಮಾಣ ಮಾಡಿದ್ದ ಪರ್ಪಲ್ ರಾಕ್ ಸಂಸ್ಥೆಯಿಂದ ಇತ್ತೀಚೆಗೆ “ಡಿಯರ್ ಸತ್ಯ” ಚಿತ್ರ ಸಹ ನಿರ್ಮಾಣವಾಗಿತ್ತು. ಈಗ ಸಂಸ್ಥೆಯ ಮೂರನೇ ಕಾಣಿಕೆಯಾಗಿ “ಲೈನ್ ಮ್ಯಾನ್” ಚಿತ್ರ ಆರಂಭವಾಗಿದೆ. ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ರನ್ ಆಂಟೊನಿ” ಹಾಗೂ “ಟಕ್ಕರ್” ಚಿತ್ರಗಳನ್ನು ರಘು ಶಾಸ್ತ್ರಿ ನಿರ್ದೇಶಿಸಿದ್ದರು.

ತ್ರಿಗುಣ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಆರ್.ಜಿ.ವಿ ನಿರ್ದೇಶನದ “ಕೊಂಡ” ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹಳ್ಳಿ ಕಡೆ ದಿನ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ನಿಂದಾಗುವ ತೊಂದರೆ ಸರಿಪಡಿಸುವ “ಲೈನ್ ಮ್ಯಾನ್” ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ “ಲೈನ್ ಮ್ಯಾನ್” ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ ಪಿ , ಜೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ.

Spread the love
Continue Reading

Cinema News

ವಸಿಷ್ಠ ಬಂಟನೂರು ಸಾರಥ್ಯದ ‘1975’ ಸಿನಿಮಾ ಹಾಡು ರಿಲೀಸ್…’ಶುರುವಾಗಿದೆ’ ಲವ್ ಟ್ರ್ಯಾಕ್ ಕೇಳಿ!

Published

on

By

ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಸಿಷ್ಠ ಬಂಟನೂರು ಸಾರಥ್ಯದಲ್ಲಿ ತಯಾರಾಗಿರುವ 1975 ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕ್ರೈಮ್ ಥ್ರಿಲ್ಲರ್ ಕಂಥಾಹಂದರವಿರುವ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ಬಳಗವಿದೆ. ಆರಂಭದಿಂದಲೂ ನಿರೀಕ್ಷೆಯಲ್ಲಿ ಹೆಚ್ಚಿಸಿರುವ 1975 ಸಿನಿಮಾದ ಶುರುವಾಗಿದೆ ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಜರುಗಿತು.

ವಸಿಷ್ಠ ಬಂಟನೂರು ಮಾತನಾಡಿ, 1975 ಇದು ನನ್ನ ಎರಡನೇ ಕನಸು. ನನ್ನ ಕನಸು ನನಸು ಮಾಡಲು ಕೈ ಜೋಡಿಸಿದ ನನ್ನ ತಂಡದವರು, ನಿರ್ಮಾಪಕರೂ ಎಲ್ಲರಿಗೂ ಧನ್ಯವಾದ. ಇದೊಂದು ಥ್ರಿಲ್ಲರ್ ಬೇಸ್ ಸಿನಿಮಾ. ಎರಡು ಗಂಟೆ ನಿಮಗೆ ಹೇಗೆ ಹೋಗುತ್ತದೆ ಅನ್ನೋದು ಗೊತ್ತೇ ಆಗುವುದಿಲ್ಲ ಎಂದು ತಿಳಿಸಿದರು,

ಚಕ್ರವರ್ತಿ ಚಂದ್ರಚೂಡ್ ಮಾತನಾಡಿ, ಒಂದೊಳ್ಳೆ ಟೀಂ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ನಿರ್ಮಾಪಕರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೀಗ ತೂಕದ ಸಿನಿಮಾಗಳು ಬರ್ತಿವೆ. ನಿರ್ದೇಶಕರು ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರೂ ಸಿನಿಮಾಗೆ ಬೆಂಬಲ ನೀಡಿ ಎಂದರು.

ಶಿವಪ್ರಸಾದ್ ಸಾಹಿತ್ಯವಿರುವ ಶುರುವಾಗಿದೆ ಎಂಬ ಲವ್ ಟ್ರ್ಯಾಕ್ ಗೆ ಪವನ್ ಆರ್ ಕೊಟೈನ್ ಧ್ವನಿಯಾಗಿದ್ದು, ಸಂದೇಶ್ ಬಾಬಣ್ಣ, ಧನಂಜಯ್ ವರ್ಮಾ, ಶಿವಪ್ರಸಾದ್ ಸಂಗೀತದ ಇಂಪು ಹಾಡಿಗಿದೆ. ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.

Spread the love
Continue Reading

Television News

ಉದಯ ಟಿವಿಯ ಹೊಸ ಧಾರಾವಾಹಿ “ಜನನಿ” ಆಗಷ್ಟ್ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9ಕ್ಕೆ

Published

on

By

ಉದಯ ವಾಹಿನಿಯ. , ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ “ಜನನಿ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ.

“ಜನನಿ” ಕೌಟುಂಬಿಕ ಆಧಾರಿತ ಧಾರಾವಾಹಿ. ಈ ಕಥೆಯಲ್ಲಿ ಬರುವ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ . ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗುತ್ತದೆ . ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ . ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ , ಗಂಡನ ಮನೆಯಲ್ಲಿ ಹಾಗು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ , ಹೋರಾಡಿ ಸಾಧನೆ ಮಾಡುವುದರ ಜೊತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲವಾಗಿ ವಿವರಿಸಲಾಗಿದೆ.

ಈ ಧಾರವಾಹಿ ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ . ಕಥಾ ನಾಯಕಿಯಾಗಿ ವರ್ಷಿಕಾ ಹಾಗು ನಾಯಕಿಯ ತಂದೆ – ತಾಯಿಯಾಗಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಹಾಗು ಕಥಾ ನಾಯಕನಾಗಿ ಹೊಸ ಪರಿಚಯ ಮಂಗಳೂರು ಪ್ರತಿಭೆ ಕಿರಣ್ ಹಾಗು ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ಮತ್ತು ಮಾಂಗಲ್ಯ ಧಾರವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸುತ್ತಿರುವ ಹೊಚ್ಚ ಹೊಸ ಧಾರವಾಹಿ ಜನನಿ ಆಗಸ್ಟ್ 15ದ ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ .

Spread the love
Continue Reading

Cinema News

ದರ್ಶನ್ ಅಭಿನಯದ ಡಿ56 ಚಿತ್ರಕ್ಕೆ ಚಾಲನೆ

Published

on

By

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ “ಡಿ56” ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರ ಪ್ರಾರಂಭವಾಗಿದೆ. ದೇವರ ಮೇಲೆ ಸೆರೆಹಿಡಿದ ಮೊದಲ ದೃಶ್ಯಕ್ಕೆ ರಾಕ್ ಲೈನ್ ವೆಂಕಟೇಶ್ ಪತ್ನಿ ಪುಷ್ಪ ಕುಮಾರಿ ಕ್ಲಾಪ್ ಮಾಡಿದರೆ, ಶ್ರೀ ರವಿಶಂಕರ್ ಗುರೂಜಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಡಿ56 ಚಿತ್ರವನ್ನು ‘ರಾಬರ್ಟ್’ ಖ್ಯಾತಿಯ ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ. ‘ರಾಬರ್ಟ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬಹುತೇಕರು ಇಲ್ಲೂ ಮುಂದುವರೆಯುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ರಾಮು ಮತ್ತು ಮಾಲಾಶ್ರೀ ದಂಪತಿಯ ಮಗಳು ರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‘ಒಳ್ಳೆಯ ಕಥೆ ಸಿಗುವವರೆಗೂ ಯಾರಿಗೂ ಚಿತ್ರ ಮಾಡುವುದಿಲ್ಲ. ತರುಣ್ ಒಂದೊಳ್ಳೆಯ ಕಥೆ ಹೇಳಿದರು. ದರ್ಶನ್ ಅವರಿಗೆ ಇಷ್ಟು ಚಿತ್ರಗಳಲ್ಲಿ ಈ ತರಹದ ಚಿತ್ರ ಮತ್ತು ಪಾತ್ರ ಎರಡೂ ಹೊಸದು. ಆಗಸ್ಟ್ 16ರಂದು ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು. 

ವರಮಹಾಲಕ್ಷ್ಮೀಯ ಹಬ್ಬದ ಶುಭಾಶಯಗಳನ್ನು ಕೋರುತ್ತಲೇ ಮಾತು ಪ್ರಾರಂಭಿಸಿದ ದರ್ಶನ್. ‘ಇವತ್ತಿನಿಂದ ಡಿ56 ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ. ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಿಸಲಾಗುತ್ತಿದೆ. ರಾಬರ್ಟ್ ತಂಡದ ಬಹಳಷ್ಟು ಜನ ಇಲ್ಲಿ ಮುಂದುವರೆಯುತ್ತಿದ್ದಾರೆ. ಈ ಚಿತ್ರದ ಹೆಚ್ಚಿನ ವಿಷಯವನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದರು.

ಈ ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ ಎನ್ನುವ ನಿರ್ದೇಶಕ ತರುಣ್ ಸುಧೀರ್, ‘ಚಿಕ್ಕವಯಸ್ಸಿನಲ್ಲಿ ಪೋಸ್ಟರ್ ಗಳಲ್ಲಿ ರಾಕ್ ಲೈನ್ ಪ್ರೊಡಕ್ಷನ್ಸ್ ಅಂತ ನೋಡಿಯೇ ಎಷ್ಟೋ ಚಿತ್ರಗಳಿಗೆ ಹೋಗಿದ್ದೇನೆ. ಆ ಬ್ಯಾನರ್ನ ಚಿತ್ರಗಳು ಚೆನ್ನಾಗಿರುತ್ತದೆ ಎಂಬ ನಂಬಿಕೆಯ ಮೇಲೆ ಚಿತ್ರಗಳಿಗೆ ಹೋಗುತ್ತಿದ್ದೆವು. ಈಗ ಅದೇ ಸಂಸ್ಥೆಯಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ದೊಡ್ಡ ಜವಾಬ್ದಾರಿ. ಹಾಗಾಗಿ, ತುಂಬಾ ಮುತುವರ್ಜಿ ವಹಿಸಿ, ಬೇರೆ ತರಹದ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರ ಪಾತ್ರ, ಚಿತ್ರದ ಹಿನ್ನೆಲೆ ಎಲ್ಲವೂ ವಿಭಿನ್ನವಾಗಿರುತ್ತದೆ. ಚಿತ್ರ ನೋಡಿದವರಿಗೆ ಹೆಮ್ಮೆ ಆಗುವುದು ಖಂಡಿತಾ’ ಎಂದರು.

ಮೊದಲ ಚಿತ್ರದಲ್ಲೇ ದರ್ಶನ್ ರಂತಹ ಸ್ಟಾರ್ ನಟರ ಜೊತೆಗೆ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ರಾಧನಾ, ‘ನನಗೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಬಹಳ ಅನಿರೀಕ್ಷಿತವಾಗಿ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಇನ್ನೂ ಅರಗಿಸಿಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೆ ನಟಿಸುವ ಆಸೆ ಚಿಕ್ಕಂದಿನಿಂದಲೂ ಇತ್ತು. ಎರಡು ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಚಿತ್ರಕ್ಕೆ ಸಂಬಂಧಿಸಿದ ವರ್ಕ್ ಶಾಪ್ ನಲ್ಲೂ ಭಾಗವಹಿಸುತ್ತಿದ್ದೇನೆ’ ಎಂದರು.

ರಾಧಾನಾ ಎಂಟ್ರಿ ಕುರಿತು ಮಾತನಾಡುವ ಅವರ ತಾಯಿ ಮಾಲಾಶ್ರೀ, ‘ನನಗೆ ಬದುಕು ಕೊಟ್ಟ ಚಿತ್ರರಂಗಕ್ಕೆ ಈಗ ನನ್ನ ಮಗಳು ಸಹ ಕಾಲಿಡುತ್ತಿದ್ದಾಳೆ. ನನಗೆ ಎಷ್ಟು ಪ್ರೀತಿ ತೋರಿಸಿದ್ದೀರೋ, ನನ್ನ ಮಗಳಿಗೆ ಅದಕ್ಕಿಂತ ಹೆಚ್ಚು ಪ್ರೀತಿ ತೋರಿಸಿ ಎಂದು ಕೇಳಿಕೊಳ್ಳುತ್ತೇನೆ. ರಾಕ್ ಲೈನ್ ವೆಂಕಟೇಶ್ ಅವರು ನನ್ನ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ಈಗ ನನ್ನ ಮಗಳು ಅವರ ನಿರ್ಮಾಣದ ಚಿತ್ರದ ಮೂಲಕ ಚಿತ್ರರಂಗಕ್ಕೆ ಚಿತ್ರಜೀವನ ಪ್ರಾರಂಭಿಸುತ್ತಿದ್ದಾಳೆ. ಒಂದೊಳ್ಳೆಯ ತಂಡದಿಂದ ಅವಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ ಎಂಬ ಖುಷಿ ಇದೆ. ಅವಳು 14ನೇ ವಯಸ್ಸಿನಲ್ಲಿದ್ದಾಗಲೇ ಚಿತ್ರರಂಗಕ್ಕೆ ಬರಬೇಕು, ಅಭಿನಯಿಸಬೇಕು ಎಂದು ಆಸೆ ಪಟ್ಟಿದ್ದಳು. ಮುಂಬೈನಲ್ಲಿ ನಟನೆ, ಡ್ಯಾನ್ಸ್ ತರಬೇತಿ ಪಡೆದಿದ್ದಾಳೆ. ನಾಳೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಪ್ರೇಕ್ಷಕರು ನನ್ನ ಮತ್ತು ಅವಳ ನಡುವೆ ಹೋಲಿಕೆ ಮಾಡುವುದು ಸಹಜ. ಆದರೆ, ಅವಳು ತನ್ನ ಹೆಸರಿನಿಂದ ಗುರುತಿಸಿಕೊಳ್ಳಬೇಕೇ ಹೊರತು, ನನ್ನ ಹೆಸರಿನಿಂದ ಗುರುತಿಸಿಕೊಳ್ಳಬಾರದು ಎಂಬುದು ನನ್ನ ಆಸೆ’ ಎಂದರು ಮಾಲಾಶ್ರೀ.

ಡಿ56 ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ ನಲ್ಲೇ ನಡೆಯಲಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರೆಯಲಿದೆ.

Spread the love
Continue Reading
Advertisement

Follow me on Twitter

Trending News