ಕಾವ್ಯಾಂಜಲಿ “ಲವ್‌ ಇನ್‌ ಗೋವಾ” – PopcornKannada
Connect with us

News

ಕಾವ್ಯಾಂಜಲಿ “ಲವ್‌ ಇನ್‌ ಗೋವಾ”

Published

on

ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ ವೀಕ್ಷಕರ ಹೃದಯ ಮಿಡಿವ ಭಾವಗಳ ಸರಿಮಿಶ್ರಣದ ರಸದೌತಣ ನೀಡುತ್ತಿರೊ ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಕಾವ್ಯಾಂಜಲಿ ಕೂಡ ಒಂದು. ಇದೀಗ ಕಾವ್ಯಾಂಜಲಿ ಧಾರಾವಾಹಿಯು ೧೫೦ ಸಂಚಿಕೆಗಳನ್ನು ಪೂರೈಸಿದೆ.

 

ಫೆಬ್ರವರಿ ಅಂದ್ರೆ ಪ್ರಪಂಚದಾದ್ಯಂತ ಪ್ರೇಮಿಗಳ ಸಂಬ್ರಮ ಶುರುವಾಗುತ್ತೆ. ಕಾವ್ಯಾಂಜಲಿ ಧಾರಾವಾಹಿ ಅಂದ್ರೆ ಕಾವ್ಯ-ಸಿದ್ಧಾರ್ಥ್‌, ಅಂಜಲಿ-ಸುಶಾಂತ್ ಮುದ್ದಾದ ಜೋಡಿ ಕಣ್ಮುಂದೆ ಬರುತ್ತೆ. ಏನಿದು ಫೆಬ್ರವರಿ ಕಾವ್ಯಾಂಜಲಿ ಕನೆಕ್ಷನ್‌ ಅಂತೀರಾ? ವಿಷಯ ಇದೆ. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಕಾವ್ಯಾಂಜಲಿ ತಂಡವು ತಮ್ಮ ಪ್ರೀತಿಯ ವೀಕ್ಷಕರಿಗೆ ಸ್ಪೆಷಲ್‌ ಗಿಫ್ಟ್‌ ಕೊಡೋಕೆ ಸಜ್ಜಾಗಿದೆ. ಪ್ರೇಮಿಗಳ ನೆಚ್ಚಿನ ತಾಣವಾದ ಗೋವಾದಲ್ಲಿ ಕಾವ್ಯಾಂಜಲಿ “ಲವ್‌ ಇನ್‌ ಗೋವಾ” ಅನ್ನೋ ೨ ವಾರಗಳ ವಿಶೇಷ ಸಂಚಿಕೆಗಳನ್ನ ಹೊತ್ತು ತರ್ತಿದೆ.

ಇನ್ನು ಈ ವಿಶೇಷ ಸಂಚಿಕೆಯಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಯನ್ನು ಕೈಗೊಳ್ಳಲಾಗಿದೆ. ಬೀಚ್‌ ಹತ್ತಿರ ನೂರಾರು ಆಕಾಶ ದೀಪಗಳನ್ನು ಬಳಸಿಕೊಂಡು ರೋಮ್ಯಾಂಟಿಕ್‌ ನೃತ್ಯಗಳನ್ನು ಈ ದಂಪತಿಗಳಿಂದ ಹಮ್ಮಿಕೊಳ್ಳಲಾಗಿದೆ. ಇನ್ನು ಇಬ್ಬರು ಜೋಡಿಗಳ ಪ್ರೀತಿಯ ತಪೊಪ್ಪಿಗೆ ಈ ವಿಶೇಷ ಕಂತುಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ ಚರ್ಚ್‌,ದೇವಾಲಯಗಳ ಭೇಟಿ ಹಾಗೆ ಪಣಜಿ ಸೇತುವೆ ಬಳಿ ವಿಶೇಷ ವಿಹಾರ ನೌಕೆಯಲ್ಲಿ ಹೊಸ ನಾಯಕಿಯ ಪರಿಚಯ ನಡೆಯಲಿದೆ.

 

ಅಂಜಲಿ-ಸುಶಂತ್‌ನ ಒಂದು ಮಾಡೋಕೆ ಕಾವ್ಯ-ಸಿದ್ಧಾರ್ಥ್ ಪರದಾಟ, ಕಾವ್ಯ-ಸಿದ್ಧಾರ್ಥ್ನ ಒಂದು ಮಾಡೋಕೆ ಅಂಜಲಿ-ಸುಶಾಂತ್‌ ಒದ್ದಾಟದ ಮಜಲುಗಳ ಜೊತೆ ಬೆಳ್ಳಿತೆರೆಯ ಹಿರಿಯ ಹಾಸ್ಯ ಕಲಾವಿದರಾದ ಟೆನ್ನೀಸ್‌ ಕೃಷ್ಣ ಹಾಗೂ ರೇಖಾದಾಸ್‌ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಪ್ರಸಿದ್ಧ ತಾಣಗಳಲ್ಲದೆ ಗೋವಾದ ಸಂಸ್ಕೃತಿಯನ್ನು ಕೂಡ ೨ ವಾರದ ಕಥೆಯಲ್ಲಿ ಕಾಣಬಹುದು.. ಝಳಪಿಸುವ ಬಿಸಿಲ ಬೇಗೆಯಲ್ಲೂ ಸಹ ಕಲಾವಿದರು ಹಾಗೂ ತಂತ್ರಜ್ಞರು ಗೋವಾ ಬೀಚ್‌ಗಳಲ್ಲಿ ಉತ್ಸಾಹದಿಂದ ಶೂಟಿಂಗ್‌ ನಡೆಸಿದ್ದು ಈ ವಿಶೇಷ ಸಂಚಿಕೆಗಳು ಇದೇ ಫೆಬ್ರವರಿ ೧೫ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಇದರ ಜೊತೆಯಲ್ಲೆ ಉದಯ ಟಿವಿಯ “ಬ್ರಹ್ಮಾಸ್ತ್ರ” ಖ್ಯಾತಿಯ ದೀಪಾ ಹಿರೇಮಠ್‌ ಅಂಜಲಿಯಾಗಿ ಇದೇ ವಿಶೇಷ ಸಂಚಿಕೆಗಳಿಂದ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ವೀಕ್ಷಕರು ಆ ಪಾತ್ರವನ್ನ ಆತ್ಮೀಯವಾಗಿ ಮೆಚ್ಚಿದ್ದಾರೆ. ಈ ಬದಲಾವಣೆಯಲ್ಲಿ ವೀಕ್ಷಕರು ನಮ್ಮ ಜೊತೆ ಇದ್ದೇ ಇರುತ್ತಾರೆ ಅನ್ನೋ ಭರವಸೆ ಉದಯ ಟಿವಿ ಹಾಗೂ ಕಾವ್ಯಾಂಜಲಿ ಧಾರಾವಾಹಿ ತಂಡದ್ದಾಗಿದೆ.

ಕಾವ್ಯಾಂಜಲಿ ಲವ್‌ ಇನ್‌ ಗೋವಾ ಇದೇ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೮.೩೦ ಕ್ಕೆ ಪ್ರಸಾರವಾಗಲಿದೆ.

Spread the love

ಉದಯ ಟಿವಿ ಅಂದ್ರೆ ಜನಮಾನಸದಲ್ಲಿ ಮನರಂಜನೆಗೆ ಇನ್ನೊಂದು ಹೆಸರು. ಸುಮಾರು ಎರಡೂವರೆ ದಶಕಗಳಿಂದ ತನ್ನ ವಿಭಿನ್ನ ಕಥೆಗಳೊಂದಿಗೆ ಕರುನಾಡ ಕಲಾರಸಿಕರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಥಾವಸ್ತುವಿನ ಜೊತೆಜೊತೆ ವೀಕ್ಷಕರ ಹೃದಯ ಮಿಡಿವ ಭಾವಗಳ ಸರಿಮಿಶ್ರಣದ ರಸದೌತಣ ನೀಡುತ್ತಿರೊ ಉದಯ ಟಿವಿಯ ಯಶಸ್ವಿ ಧಾರಾವಾಹಿಗಳಲ್ಲಿ ಕಾವ್ಯಾಂಜಲಿ ಕೂಡ ಒಂದು. ಇದೀಗ ಕಾವ್ಯಾಂಜಲಿ ಧಾರಾವಾಹಿಯು ೧೫೦ ಸಂಚಿಕೆಗಳನ್ನು ಪೂರೈಸಿದೆ.

 

ಫೆಬ್ರವರಿ ಅಂದ್ರೆ ಪ್ರಪಂಚದಾದ್ಯಂತ ಪ್ರೇಮಿಗಳ ಸಂಬ್ರಮ ಶುರುವಾಗುತ್ತೆ. ಕಾವ್ಯಾಂಜಲಿ ಧಾರಾವಾಹಿ ಅಂದ್ರೆ ಕಾವ್ಯ-ಸಿದ್ಧಾರ್ಥ್‌, ಅಂಜಲಿ-ಸುಶಾಂತ್ ಮುದ್ದಾದ ಜೋಡಿ ಕಣ್ಮುಂದೆ ಬರುತ್ತೆ. ಏನಿದು ಫೆಬ್ರವರಿ ಕಾವ್ಯಾಂಜಲಿ ಕನೆಕ್ಷನ್‌ ಅಂತೀರಾ? ವಿಷಯ ಇದೆ. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಕಾವ್ಯಾಂಜಲಿ ತಂಡವು ತಮ್ಮ ಪ್ರೀತಿಯ ವೀಕ್ಷಕರಿಗೆ ಸ್ಪೆಷಲ್‌ ಗಿಫ್ಟ್‌ ಕೊಡೋಕೆ ಸಜ್ಜಾಗಿದೆ. ಪ್ರೇಮಿಗಳ ನೆಚ್ಚಿನ ತಾಣವಾದ ಗೋವಾದಲ್ಲಿ ಕಾವ್ಯಾಂಜಲಿ “ಲವ್‌ ಇನ್‌ ಗೋವಾ” ಅನ್ನೋ ೨ ವಾರಗಳ ವಿಶೇಷ ಸಂಚಿಕೆಗಳನ್ನ ಹೊತ್ತು ತರ್ತಿದೆ.

ಇನ್ನು ಈ ವಿಶೇಷ ಸಂಚಿಕೆಯಲ್ಲಿ ಪ್ರೇಮಿಗಳ ದಿನದ ಸಂಭ್ರಮಾಚರಣೆಯನ್ನು ಕೈಗೊಳ್ಳಲಾಗಿದೆ. ಬೀಚ್‌ ಹತ್ತಿರ ನೂರಾರು ಆಕಾಶ ದೀಪಗಳನ್ನು ಬಳಸಿಕೊಂಡು ರೋಮ್ಯಾಂಟಿಕ್‌ ನೃತ್ಯಗಳನ್ನು ಈ ದಂಪತಿಗಳಿಂದ ಹಮ್ಮಿಕೊಳ್ಳಲಾಗಿದೆ. ಇನ್ನು ಇಬ್ಬರು ಜೋಡಿಗಳ ಪ್ರೀತಿಯ ತಪೊಪ್ಪಿಗೆ ಈ ವಿಶೇಷ ಕಂತುಗಳಲ್ಲಿ ಪ್ರಮುಖವಾಗಿದೆ. ಅಲ್ಲದೇ ಚರ್ಚ್‌,ದೇವಾಲಯಗಳ ಭೇಟಿ ಹಾಗೆ ಪಣಜಿ ಸೇತುವೆ ಬಳಿ ವಿಶೇಷ ವಿಹಾರ ನೌಕೆಯಲ್ಲಿ ಹೊಸ ನಾಯಕಿಯ ಪರಿಚಯ ನಡೆಯಲಿದೆ.

 

ಅಂಜಲಿ-ಸುಶಂತ್‌ನ ಒಂದು ಮಾಡೋಕೆ ಕಾವ್ಯ-ಸಿದ್ಧಾರ್ಥ್ ಪರದಾಟ, ಕಾವ್ಯ-ಸಿದ್ಧಾರ್ಥ್ನ ಒಂದು ಮಾಡೋಕೆ ಅಂಜಲಿ-ಸುಶಾಂತ್‌ ಒದ್ದಾಟದ ಮಜಲುಗಳ ಜೊತೆ ಬೆಳ್ಳಿತೆರೆಯ ಹಿರಿಯ ಹಾಸ್ಯ ಕಲಾವಿದರಾದ ಟೆನ್ನೀಸ್‌ ಕೃಷ್ಣ ಹಾಗೂ ರೇಖಾದಾಸ್‌ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಪ್ರಸಿದ್ಧ ತಾಣಗಳಲ್ಲದೆ ಗೋವಾದ ಸಂಸ್ಕೃತಿಯನ್ನು ಕೂಡ ೨ ವಾರದ ಕಥೆಯಲ್ಲಿ ಕಾಣಬಹುದು.. ಝಳಪಿಸುವ ಬಿಸಿಲ ಬೇಗೆಯಲ್ಲೂ ಸಹ ಕಲಾವಿದರು ಹಾಗೂ ತಂತ್ರಜ್ಞರು ಗೋವಾ ಬೀಚ್‌ಗಳಲ್ಲಿ ಉತ್ಸಾಹದಿಂದ ಶೂಟಿಂಗ್‌ ನಡೆಸಿದ್ದು ಈ ವಿಶೇಷ ಸಂಚಿಕೆಗಳು ಇದೇ ಫೆಬ್ರವರಿ ೧೫ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಇದರ ಜೊತೆಯಲ್ಲೆ ಉದಯ ಟಿವಿಯ “ಬ್ರಹ್ಮಾಸ್ತ್ರ” ಖ್ಯಾತಿಯ ದೀಪಾ ಹಿರೇಮಠ್‌ ಅಂಜಲಿಯಾಗಿ ಇದೇ ವಿಶೇಷ ಸಂಚಿಕೆಗಳಿಂದ ಪ್ರೇಕ್ಷಕರನ್ನ ರಂಜಿಸಲಿದ್ದಾರೆ. ವೀಕ್ಷಕರು ಆ ಪಾತ್ರವನ್ನ ಆತ್ಮೀಯವಾಗಿ ಮೆಚ್ಚಿದ್ದಾರೆ. ಈ ಬದಲಾವಣೆಯಲ್ಲಿ ವೀಕ್ಷಕರು ನಮ್ಮ ಜೊತೆ ಇದ್ದೇ ಇರುತ್ತಾರೆ ಅನ್ನೋ ಭರವಸೆ ಉದಯ ಟಿವಿ ಹಾಗೂ ಕಾವ್ಯಾಂಜಲಿ ಧಾರಾವಾಹಿ ತಂಡದ್ದಾಗಿದೆ.

ಕಾವ್ಯಾಂಜಲಿ ಲವ್‌ ಇನ್‌ ಗೋವಾ ಇದೇ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೮.೩೦ ಕ್ಕೆ ಪ್ರಸಾರವಾಗಲಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *

News

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಅಣ್ಣ-ತಂಗಿ”

Published

on

By

ಉದಯ ವಾಹಿನಿಯ ೨೭ ವರ್ಷಗಳ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು ಒಡಹುಟ್ಟಿದವರ ಕತೆಯನ್ನು ಹೇಳಲು “ಅಣ್ಣ-ತಂಗಿ” ಎಂಬ ಹೆಸರಿನ ಹೊಚ್ಚ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ʼಅಣ್ಣ-ತಂಗಿʼ ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಕಥೆ ಒಳಗೊಂಡಿದೆ.

ತುಳಸಿ ಮತ್ತು ಶಿವರಾಜು ಆದರ್ಶ ಅಣ್ಣ ತಂಗಿ, ಅಪ್ಪ ಅಮ್ಮ ಇಲ್ಲದಿರುವ ಇವರಿಬ್ಬರಿಗೂ ಇವರಿಬ್ಬರೆ ಆಸರೆ. ತುಳಸಿಗೆ ಹೆತ್ತವರ ಸ್ಥಾನದಲ್ಲಿರುವ ಶಿವಣ್ಣ ಕೂಡು ಕುಟುಂಬದ ಪ್ರೀತಿ ಸಿಗದೆ ಬೆಳೆದ ತಂಗಿಯನ್ನು ಎಲ್ಲ ಬಂಧುಗಳು ತುಂಬಿ ತುಳುಕುತ್ತಿರುವ ಒಂದು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಆದರೆ ತಂಗಿಯ ಜಾತಕದ ಪ್ರಕಾರ ಭವಿಷ್ಯದಲ್ಲಿ ಅವಳಿಗೆ ಮದುವೆಯಾದರೆ ತನ್ನ ಊಸಿರಿನಂತಿರುವ ಅಣ್ಣನ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಸತ್ಯ ಗೊತ್ತಾಗುತ್ತದೆ. ಅಣ್ಣನನ್ನು ಒಂಟಿ ಮಾಡಿ ಬಿಟ್ಟು ಹೋಗಲು ತಂಗಿಗೆ ಮನಸಿಲ್ಲ. ಚಿಕ್ಕ ವಯಸ್ಸಿನಿಂದ ಒಗ್ಗಟ್ಟಿನಿಂದ ಬೆಳೆದು ಬಂದ ಇವರಿಬ್ಬರ ಬಂಧನ ತುಳಸಿಗೆ ಬರುವ ಗಂಡಿನ ಕಡೆಯವರಿಂದ ಅಥವಾ ಅತ್ತಿಗೆಯ ಕುಟುಂಬದಿಂದ ಮುರಿದು ಬೀಳುತ್ತಾ ಅನ್ನೋದೆ “ಅಣ್ಣ ತಂಗಿ”ಯ ಮೂಲ ಕಥೆ.

ಧಾರವಾಹಿಯ ನಿರ್ಮಾಣದ ಹೊಣೆಯನ್ನು ಚೈತನ್ಯ ಹರಿದಾಸ್ ಸಿನಿಮಾಸ್ ಹೊತ್ತಿದೆ. “ಆಕೃತಿ” ಯಂತಹ ಥ್ರಿಲ್ಲರ ಧಾರಾವಾಹಿಯನ್ನು ಕೊಟ್ಟ ಕನ್ನಡದ ಖ್ಯಾತ ನಿರ್ದೇಶಕರಾದ ಕೆ.ಎಮ್. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್ ರವರು ನಿರ್ಮಿಸುತ್ತಿದ್ದಾರೆ. ನಿರ್ದೇಶನ ಮತ್ತು ಛಾಯಗ್ರಾಹÀಣ ಎಮ್. ಕುಮಾರ್. ರಾಘವ ದ್ವಾರ್ಕಿಯವರ ಚಿತ್ರಕತೆ, ತುರುವೆಕರೆ ಪ್ರಸಾದ್ – ಸಂಭಾಷಣೆ, ಸಂಕಲನ ಗುರುರಾಜ್ ಬಿ.ಕೆ ಅವರು ಕಾರ್ಯ ನೀರ್ವಹಿಸುತ್ತಿದ್ದಾರೆ.

 

ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಹಾಗು ಅಣ್ಣನ ಪಾತ್ರವನ್ನು ಮಧು ಸಾಗರ್, ನಿರ್ವಹಿಸುತ್ತಿದ್ದಾರೆ. ಮಾನಸ ಜೋಷಿ, ರಾಜೇಶ್ ದೃವ, ಸ್ವರಾಜ್, ರೋಹಿತ್ನಾಗೇಶ್, ಶರ್ಮಿತಾ, ಹಿರಿಯ ಕಲಾವಿದರಾದ ರಾಧಾ ರಾಮಚಂದ್ರ, ಗಿರಿಶ್ ಜತ್ತಿ, ತನುಜಾ ರಂತ ಹಲವಾರು ತಾರೆಯರ ಗುಂಪು ಒಳಗೊಂಡ ಈ ಧಾರವಾಹಿ ನವೆಂಬರ್ ೨೨ ರಿಂದ ಸೋಮವಾರದಿಂದ ಶನಿವಾರದ ವೆರಗೆ ಸಂಜೆ ೭ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Spread the love
Continue Reading

News

ನವೆಂಬರ್ 15 ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕನ್ಯಾದಾನ”

Published

on

By

ಕಳೆದ ೨೭ ವರ್ಶಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯಕ್ರಮಗಳಿಂದ ಅತ್ಯಂತ ಜನಪ್ರಿಯ ವಾಹಿನಿ ಉದಯ ಟವಿ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಕನ್ನಡಿಗರ ದೈನಂದಿನ ಮನರಂಜನೆಯ ಭಾಗವಾಗಿ ಯಶಸ್ವಿಯಾಗಿವೆ.

 

ಸದಾ ಹೊಸ ರೂಪದ ಕಥೆಗಳನ್ನು ಕೊಡುತ್ತಿರುವ ಉದಯ ಟಿವಿ ಹೊಸತನದ ಮೆರುಗನ್ನು ನೀಡಲು ಈಗ ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ “ಕನ್ಯಾದಾನ”ವನ್ನು ರ‍್ಪಿಸುತ್ತಿದೆ
ಬೆಂಗಳೂರು ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ನಿಗೆ ೫ ಜನ ಹೆಣ್ಣು ಮಕ್ಕಳು. ಅಶ್ವತ್ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ.. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಇಲ್ಲದ ಹಾಗೆ ಅಕ್ಕರೆಯಿಂದ ಸಂಸ್ಕಾರವಂತರಾಗಿ ಬೆಳೆಸಿರುತ್ತಾನೆ. ತನ್ನ ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನ ಕೊಡುವ ಭರದಲ್ಲಿದ್ದಾನೆ. ಅವನ ಇಚ್ಚೆಯಂತೆ ತನ್ನಿಬ್ಬರ ಮಕ್ಕಳಿಗೆ ಮದುವೆ ಮಾಡುತ್ತಾನೆ ಆದರೆ ಮದುವೆ ಮಾಡಿ ಕಳುಹಿಸಿದ ತಕ್ಷಣ ಒಬ್ಬ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂಬುದರ ಅರಿವಿದೆ. ಹೇಗೆ ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಕೊನೆ ಉಸಿರಿನವರೆಗು ಇರುತ್ತದೆ ಎನ್ನುವ ಕಥೆ “ಕನ್ಯಾದಾನ”.

 

ಹಿರಿಯ ನಟ ಮೈಕೊ ಮಂಜು ತಂದೆಯ ಪಾತ್ರ ವಹಿಸಿದ್ದಾರೆ. ೫ ಜನ ಮುದ್ದು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸ ನಾರಾಯಣ್, ಕರ‍್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರರ‍್ಥನ ಕಿರಣ್ ನರ‍್ವಹಿಸಿದ್ದಾರೆ. ಇನ್ನುಳಿದಂತೆ ಅರುಣ್ ಹರಿಹರನ್ ನರ‍್ದೇಶನ, ಅಂಜಲಿ ವೆಂರ‍್ಸ್ ನರ‍್ಮಾಣದಲ್ಲಿ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.

“ಈ ಧಾರಾವಾಹಿಯ ವಿಷಯ ಬೇರೆ ಕಥೆಗಳಿಗಿಂತ ಭಿನ್ನವಾಗಿದ್ದು, ಅಪರೂಪವಾದ ಜೋಡಿಗಳು ನಮ್ಮ ಧಾರಾವಾಹಿಯಲ್ಲಿದ್ದು ಒಂದು ಜೋಡಿ ಅಪ್ಪ ಹಾಗು ಅವರ ೫ ಜನ ಹೆಣ್ಣುಮಕ್ಕಳಾದರೆ ಮತ್ತೊಂದು ಜೋಡಿ ಕಥೆ ಮತ್ತು ಚಿತ್ರಕಥೆ. ಈ ಕಥೆ ಕನ್ನಡ ವೀಕ್ಷಕರಿಗೆ ತುಂಬಾ ಇಷ್ಟವಾಗಲಿದೆ” ಎಂದು ಧಾರಾವಾಹಿಯ ನರ‍್ದೇಶಕ ಅರುಣ್ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.

ʻಕನ್ಯಾದಾನʼ ಇದೇ ನವೆಂಬರ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮:೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Spread the love
Continue Reading

Cinema News

ಲೋಕಲ್ ಹುಡುಗರ ಕಥೆ ಕಾಗೆಮೊಟ್ಟೆ

Published

on

By

ಇತ್ತೀಚೆಗೆ ನಡೆದ ಕಾಗೆಮೊಟ್ಟೆ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಾಕಷ್ಟು ವಿವರ ಹಂಚಿಕೊಂಡಿತು. ನಟ ಜಗ್ಗೇಶ್, ಪರಿಮಳಾ ಜಗ್ಗೇಶ್, ಪುತ್ರ ಹಾಗೂ ಚಿತ್ರದ ನಾಯಕ ಗುರುರಾಜ್ ನಿರ್ಮಾಪಕ, ನಿರ್ದೇಶಕ ಚಂದ್ರಹಾಸ್ ಸಿನಿಮಾ ಕುರಿತಂತೆ ಮಾತನಾಡಿದರು. ಈಗ ಥೇಟರ್‌ಗಳಲ್ಲಿ ೧೦೦% ಎಂಟ್ರಿಗೆ ಸರ್ಕಾರ ಅವಕಾಶ ನೀಡಿದೆ, ಹಾಗಾಗಿ ದೊಡ್ಡದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ, ಅದರಲ್ಲಿ ನನ್ನ ಮಗ ಅಭಿನಯಿಸಿದ ಕಾಗೆಮೊಟ್ಟೆ ಕೂಡ ಇದೆ, ಇದೊಂದು ಕಂಟೆಂಟ್ ಸಿನಿಮಾ ಗ್ಲಾಮರ್‌ಗೆ ಅವಕಾಶವಿಲ್ಲ, ನಾನು ಚಿಕ್ಕವನಿದ್ದಾಗ ಶ್ರೀರಾಂಪುರದಲ್ಲಿ ತುಂಬಾ ರೌಡಿಗಳನ್ನು ನೋಡಿದ್ದೇನೆ, ಅವರಿಗೂ ಎಲ್ಲೋ ಒಂದು ಲವ್ ಇರುತ್ತಿತ್ತು, ಅಂಥದೇ ಕಂಟೆಂಟ್ ಈ ಸಿನಿಮಾದಲ್ಲಿದೆ. ನನಗೆ ಬಹಳ ಇಷ್ಟವಾಯಿತು. ಮಿರ್ಜಾಪುರ್ ಅಂಥ ಸಿನಿಮಾ ನೀವು ನೋಡಿರುತ್ತೀರಿ. ಆದೇ ಮಾದರಿಯ ಚಿತ್ರವಿದು. ನಿರ್ದೇಶಕರು ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನನ್ನ ಜೀವನದಲ್ಲಿ ತುಂಬಾ ಸೋಮಾರಿ ನಿರ್ದೇಶಕರೊಟ್ಟಿಗೂ ಕೆಲಸ ಮಾಡಿದ್ದೇನೆ. ಆದರೆ ಈ ಹುಡುಗ ಬಹಳ ಚೆನ್ನಾಗಿ, ತಮ್ಮ ಬೆವರಹನಿ ಬಸಿದು ಕೆಲಸ ಮಾಡಿದ್ದಾನೆ, ಸ್ಲಂನಲ್ಲಿ ಶೂಟ್ ಮಾಡುವುದು ತುಂಬಾ ಕಷ್ಟ, ಚಂದ್ರಹಾಸ ಇಂಥ ಎಲ್ಲ ರಿಸ್ಕ್ಗಳನ್ನು ತೆಗೆದುಕೊಂಡು ಈ ಚಿತ್ರ ಮಾಡಿದ್ದಾರೆ. ನನ್ನ ಮಗ ಗುರುರಾಜ್ ನನಗಾಗಿ ಒಂದೊಳ್ಳೇ ಕಥೆ ಮಾಡಿದ್ದಾನೆ. ಅದನ್ನು ಆತನೇ ನಿರ್ದೇಶಿಸುತ್ತಿದ್ದಾನೆ ಎದು ಪುತ್ರನ ಕುರಿತು ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಚಿತ್ರಕ್ಕೆ ಡೈಲಾಗ್ ಬರೆದ ನಾಗೇಂದ್ರ ಪ್ರಸಾದ್ ಮಾತನಾಡಿ ತುಂಬಾ ದಿನಗಳ ನಂತರ ಡೈಲಾಗ್ ಬರೆದಂಥ ಚಿತ್ರವಿದು. ಸೊಳ್ಳೆ ಕೆಚ್ಚಲಿನ ಮೇಲಿದ್ದರೂ ಅದು ಕುಡಿಯೋದು ರಕ್ತಾನೇ, ಹಾಲನ್ನಲ್ಲ, ಈ ಥರದ ಒಳ್ಳೊಳ್ಳೇ ಮಾತುಗಳು ಈ ಚಿತ್ರದಲ್ಲಿವೆ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ಯಾವುದೇ ಹಂಗಿಲ್ಲದೆ ಬೆಳೆದ ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಚಂದ್ರಹಾಸ ಕಾಗೆಮೊಟ್ಟೆ ಸಿನಿಮಾ ಮಾಡಿದ್ದಾರೆ. ಈ ಹಿಂದೆ ಕುಂಭರಾಶಿ ನಿರ್ದೇಶಿಸಿದ್ದ ಚಂದ್ರಹಾಸ ಅವರಿಗಿದು ಎರಡನೇ ಚಿತ್ರ, ನೂರರಿಂದ ನೂರಿಪ್ಪತ್ತು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾ ಅಂದಮೇಲೆ ಕಷ್ಟಪಡಲೇಬೇಕು, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ, ನೋಡಿ ಹರಸಿ ಎಂದು ತಮ್ಮ ಚಿತ್ರದ ಕುರಿತಂತೆ ಮಾತನಾಡಿದರು.

 

 

ಕಾಗೆಮೊಟ್ಟೆ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾದ ಚಿತ್ರ. ಈ ಸಿನಿಮಾದಲ್ಲಿ ಜಗ್ಗೇಶ್ ಹಿರಿಯಪುತ್ರ ಗುರುರಾಜ್ ಮೂವರು ಹುಡುಗರಲ್ಲಿ ಒಬ್ಬನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕೆ.ಮಾದೇಶ್ ಹಾಗೂ ಹೇಮಂತ್ ಚಿತ್ರದಲ್ಲಿದ್ದಾರೆ. ಚಿತ್ರದ ನಾಯಕಿಯ ಪಾತ್ರದಲ್ಲಿ ತನುಜಾ ನಟಿಸಿದ್ದಾರೆ, ಚಿತ್ರಕ್ಕೆ ಬಿ.ಕೆ.ಚಂದ್ರಹಾಸ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ಸಹ ನಿರ್ಮಾಪಕರಾಗಿ ಸುಬ್ಬರಾಯುಡು ಕೈಜೋಡಿಸಿದ್ದಾರೆ. ಪಿಳ್ಳಾ, ಗೋವಿ ಕೃಷ್ಣನ ಕಥೆ ಎನ್ನುವ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ. ನಾಯಕ ಗುರುರಾಜ್ ಮಾತನಾಡಿ ನನ್ನ ತಂದೆ, ತಾಯಿ ನೋಡಿಕೊಂಡು ಬೆಳೆದವನು ನಾನು, ಪ್ರತಿಯೊಬ್ಬರಿಗೂ ಒಂದೊಂದು ಲೈಫ್ ಅಂತ ಇರುತ್ತದೆ, ಸ್ನೇಹದ ಬೆಲೆ ಏನೆಂಬುದೇ ಸಿನಿಮಾದ ಥೀಮ್, ಸ್ನೇಹಸಂಬಂಧದ ಕಥೆಯಿರೋ ಚಿತ್ರಗಳು ಯಾವತ್ತೂ ಹೊಸದಾಗಿರುತ್ತವೆ ಎಂದು ಹೇಳಿದರು.

 

 

ಹಳ್ಳಿಯಲ್ಲಿ ಯಾರ ಹಂಗೂ ಇಲ್ದೆ ಬೆಳೆದ ಮೂವರು ಹುಡುಗರು ಒಂದು ಕಾರ್ಯಸಾಧನೆಗೆ ಬೆಂಗಳೂರಿಗೆ ಆಗಮಿಸುತ್ತಾರೆ, ಯಾವ ಹಿನ್ನೆಲೆ ಇಲ್ಲದೆ ಸಿಟಿಗೆಬಂದ ಇವರು ತಾವಂದುಕೊಂಡಿದ್ದನ್ನು ಮಾಡಿದರೇ, ಇಲ್ಲವೇ ಎನ್ನುವುದೇ ಚಿತ್ರದ ಕಥಾಹಂದರ. ಈ ಹುಡುಗರಿಗೆ ಸಪೋರ್ಟಿವ್ ಆಗಿರುವಂಥ ವೇಶ್ಯೆಯೊಬ್ಬಳ ಪಾತ್ರವನ್ನು ಸೌಜನ್ಯ ನಿರ್ವಹಿಸಿದ್ದಾರೆ. ಶ್ರೀವತ್ಸ ಚಿತ್ರದ ೨ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯನಟ ಶರತ್ ಲೋಹಿತಾಶ್ವ ಖಳನಾಯಕನಾಗಿದ್ದು, ಸತ್ಯಜಿತ್, ಪೊನ್ನಂಬಲಂ ಅಲ್ಲದೆ ರಜನೀಕಾಂತ್ ಆಪ್ತ ರಾಜ್‌ಬಹದೂರ್ ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

Spread the love
Continue Reading

Cinema News

‘ಕೋಟಿಗೊಬ್ಬ’ನಿಗೆ ಸವಾಲು ಹಾಕುತ್ತಿದೆ ‘ಸಲಗ’

Published

on

By

ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕ ಸರ್ಕಾರವು ಅಧಿಕೃತವಾಗಿ ಕರ್ನಾಟಕದಲ್ಲಿನ ಸಿನೆಮಾ ಹಾಲ್‌ಗಳಲ್ಲಿ 100 % ಭರ್ತಿಗೆ ಅನುಮೋದನೆ ನೀಡಿತು. ಈಗ, ಕನ್ನಡ ಚಲನಚಿತ್ರ ಅಭಿಮಾನಿಗಳಿಗಾಗಿ ಅಕ್ಟೋಬರ್ ತಿಂಗಳಿಡೀ ಆಸಕ್ತಿದಾಯಕ ಚಿತ್ರಗಳನ್ನು ಹೊಂದಿದೆ. ಅದರಲ್ಲೂ ಕುತೂಹಲದಿಂದಿರುವ ದಿನಾಂಕವು ಎರಡನೇ ವಾರಾಂತ್ಯವಾಗಿದೆ, ಏಕೆಂದರೆ ಇದು ದೀರ್ಘ ದಸರಾ ವಾರಾಂತ್ಯವಾಗಿದೆ.

ದಸರಾ ವಾರಾಂತ್ಯದ ಉತ್ಸಾಹವು ಒಂದಲ್ಲ ಎರಡು ದೊಡ್ಡ ಸ್ಟಾರ್ ಬಿಡುಗಡೆಗಳೊಂದಿಗೆ ದ್ವಿಗುಣಗೊಂಡಿದೆ. ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಎರಡೂ ಸಿನಿಮಾಗಳು ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿವೆ.

 

 

2021 ಕನ್ನಡ ಚಲನಚಿತ್ರ ಪ್ರೇಕ್ಷಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಏಕೆಂದರೆ ಅವರು ಈ ವರ್ಷದ ಆರಂಭದಲ್ಲಿ ಮೂರು ದೊಡ್ಡ ಬಿಡುಗಡೆಗಳನ್ನು ಹೊಂದಿದ್ದಾರೆ – ಪೊಗರು, ರಾಬರ್ಟ್ ಮತ್ತು ಯುವರತ್ನ. ಈಗ, ಕೋಟಿಗೊಬ್ಬ 3, ಸಲಗ ಮತ್ತು ನಂತರ ಭಜರಂಗಿ 2, ನಂತರ ಮಾದಗಜ ಮತ್ತು 777 ಚಾರ್ಲಿ ಕೂಡ ಡಿಸೆಂಬರ್ ಬಿಡುಗಡೆಗೆ ತಯಾರಾಗುತ್ತಿದ್ದಾರೆ, 2021 ಖಂಡಿತವಾಗಿಯೂ ಕರ್ನಾಟಕದಲ್ಲಿ ಚಲನಚಿತ್ರೋದ್ಯಮವನ್ನು ಸಾಂಕ್ರಾಮಿಕ ರೋಗ ಕೊರೋನ ನಂತರ ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತಿದೆ.

Spread the love
Continue Reading

Cinema News

“ರಾಣ” ಟೀಸರ್ ಬಿಡುಗಡೆ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

Published

on

By

ರಿಯಲ್ ಸ್ಟಾರ್ ಉಪೇಂದ್ರ ಅವರು ಶ್ರೇಯಸ್ಸ್ ಕೆ ಮಂಜು ಅಭಿನಯದ “ರಾಣ” ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದರು.

ಶ್ರೇಯಸ್ಸ್ ಹೆಸರಿನಲ್ಲೇ ಶ್ರೇಯಸ್ಸು ಇದೆ. ಅವನ ಮಾತು ಕೇಳಿ ಸಂತೋಷವಾಯಿತು. ತಂದೆಯನ್ನು ಮೀರಿಸಿದ ಮಗ ಶ್ರೇಯಸ್ಸ್. ಅವನಿಗೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಉಪೇಂದ್ರ ಹರಸಿದರು. ಕಂಪ್ಲಿ ಶಾಸಕರಾದ J.N ಗಣೇಶ್ ಅವರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

 

ಚಿತ್ರೀಕರಣ ಬಹುತೇಕ ಮುಗಿದಿದೆ. ಕೋವಿಡ್ ನಿಯಮಾವಳಿಗಳು ಜಾರಿಯಿರುವುದರಿಂದ ಕೆಲವು ಜಾಗಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಸಿಕ್ಕಿದ್ದು ತಡವಾಯಿತು. ಇಲ್ಲದಿದ್ದರೆ, ನಮ್ಮ ಚಿತ್ರ ಈ ವೇಳೆಗೆ ಸಿದ್ದವಿರುತ್ತಿತ್ತು. ಚಿತ್ರ ಉತ್ತಮವಾಗಿ ಬರಲು ಸಹಕರಿಸುತ್ತಿರುವ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ ಎಂದರು ನಿರ್ದೇಶಕ ನಂದಕಿಶೋರ್‌ .

 

ಚಿತ್ರದ ಹಾಡುಗಳು ಚೆನ್ನಾಗಿದೆ. ಹಾಡುಗಳ ವಿಡಿಯೋ ಯಾವಾಗ ಬರುವುದೋ ಎಂದು ಕಾತುರದಿಂದ ಕಾಯುತ್ತಿದ್ದೇನೆ.. ಚಿತ್ರತಂಡಕ್ಕೆ ಹಾಗೂ ಆಡಿಯೋ ಹಕ್ಕು ಪಡೆದಿರುವ ಆನಂದ್ ಆಡಿಯೋ ಸಂಸ್ಥೆಗೆ ಧನ್ಯವಾದ ತಿಳಿಸಿದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ.

 

 

ನಾನು ಚಿಕ್ಕ ವಯಸ್ಸಿನಿಂದಲೂ ಉಪೇಂದ್ರ ಅವರ ಹುಚ್ಚು ಅಭಿಮಾನಿ. ನಾನು ಅವರಿಂದ ಕಲತಿರುವುದು ಸಾಕಷ್ಟು. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವ ನೂತನ ಪ್ರತಿಭೆಗಳಿಗೆ ಅವರು ನೀಡುವ ಪ್ರೋತ್ಸಾಹಕ್ಕೆ ಚಿರ ಋಣಿ. ಶಿವರಾಜಕುಮಾರ್ ಅವರು ಸಹ ನನಗೆ ಈ ಚಿತ್ರದಲ್ಲಿ ಲಾಂಗ್ ಹಿಡಿಯುವುದನ್ನು ಹೇಳಿಕೊಟ್ಟಿದ್ದಾರೆ. ನಾನು ಏನಾದರೂ ಉತ್ತಮವಾಗಿ ನಟಿಸಿದ್ದೇನೆಂದರೆ ಅದಕ್ಕೆ ಕಾರಣ ನಿರ್ದೇಶಕ ನಂದಕಿಶೋರ್ ಹಾಗೂ ಛಾಯಾಗ್ರಹಕ ಛಾಯಾಗ್ರಹಕ ಶೇಖರ್ ಚಂದ್ರ. ಹಿರಿಯ ಕಲಾವಿದರಿಗೆ, ನಿರ್ಮಾಪಕರಿಗೆ, ನನ್ನ ಅಪ್ಪ ಕೆ.ಮಂಜು ಅವರಿಗೆ ಹಾಗೂ ಇಡೀ ತಂಡಕ್ಕೆ ನಾಯಕ ಶ್ರೇಯಸ್ಸ್ ವಿಶೇಷ ಧನ್ಯವಾದ ತಿಳಿಸಿದರು.

 

ನಾನು ಚಿತ್ರ ನಿರ್ಮಾಣ ಮಾಡಲು ಪ್ರಮುಖ ಕಾರಣ ಕೆ.ಮಂಜು. ಅವರಿಗೆ ನಾನು ಆಭಾರಿ. ಚಿತ್ರ ಉತ್ತಮವಾಗಿ ಮೂಡಿ ಬರಲು ಇಡೀ ತಂಡ ಸಾಕಷ್ಟು ಶ್ರಮಿಸುತ್ತಿದೆ. ನಿಮ್ನೆಲ್ಲರ ಹಾರೈಕೆ ನಮಗಿರಲಿ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.

 

ನಿರ್ಮಾಪಕ ಪುರುಷೋತ್ತಮ್ ನನಗೆ ಒಳ್ಳೆಯ ಸ್ನೇಹಿತರು. ಈ ಚಿತ್ರವನ್ನು ನನ್ನದೇ ನಿರ್ಮಾಣದ ಚಿತ್ರದ ತರಹ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇನೆ. ಉಪೇಂದ್ರ‌ ಅವರು ಮುಹೂರ್ತ ದಿನದಂದು ಬಂದು ಶುಭ ಹಾರೈಸಿದ್ದರು. ಟೀಸರ್ ಸಹ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎನ್ನುವ ಆಸೆಯಿತ್ತು. ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಉಪೇಂದ್ರ ಅವರಿಗೆ ತುಂಬು ಹೃದಯದ ಧನ್ಯವಾದ. ನನ್ನ ಮಗ ಶ್ರೇಯಸ್ಸ್, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ಚಿತ್ರತಂಡದ ಸದಸ್ಯರಿಗೆ ಒಳ್ಳೆಯದಾಗಲಿ ಎಂದರು ನಿರ್ಮಾಪಕ ಕೆ.ಮಂಜು.

 

ನಾಯಕಿಯರಾದ ರೀಷ್ಮಾ ನಾಣಯ್ಯ, ರಜನಿ ಭಾರದ್ವಾಜ್, ಛಾಯಾಗ್ರಹಕ ಶೇಖರ್ ಚಂದ್ರ, ಆನಂದ್ ಆಡಿಯೋ ಶ್ಯಾಮ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದರು. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಸೇರಿದಂತೆ ಅನೇಕ ಗಣ್ಯರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

ಕೆ ಮಂಜು ಅರ್ಪಿಸುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ರಾಣ” ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Spread the love
Continue Reading

Trending News