Connect with us

Cinema News

ಬಿಡುಗಡೆ ಮುಂಚೆ ಸದ್ದು ಮಾಡುತ್ತಾ ಸುದ್ದಿಯಾಗುತ್ತಿದೆ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ”

Published

on

’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಇದನ್ನು ಬ್ಯಾಂಕ್‌ದಲ್ಲಿ ವ್ಯವಸ್ಥಾಪಕರು ಹೇಳುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಶೇಕಡ 90ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿದ್ದರು.

ಮೊದಲು ಮೈಕ್ ತೆಗದುಕೊಂಡ ನಿರ್ದೇಶಕ ವಿನಾಯಕ ಕೋಡ್ಸರ ಮಾತನಾಡಿ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ಛಾಯಾಗ್ರಾಹಕ ನಂದಕಿಶೋರ್ ಕತೆ ಕೇಳಿ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಪ್ರಜ್ವಲ್‌ಪೈ ಮೂರು ಚೆಂದದ ಹಾಡುಗಳನ್ನು ನೀಡಿದ್ದಾರೆ. ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ. ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಅಡಿಕೆ ಬೆಳೆಗಾರ, ಗೊಬ್ಬರದ ಅಂಗಡಿ ಮಾಲೀಕರಾಗಿ ಗಮನ ಸೆಳೆಯುತ್ತಾರೆ. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಏನೇನು ಅವಾಂತರಗಳು ಆಗುತ್ತದೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿ, ಕೊನೆಗೆ ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ಐಂದ್ರಿತಾರೈ, ರಂಜನಿರಾಘವನ್ ತಲಾ ಒಂದೊಂದು ಅಂಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್‌ಸರ್‌ದೇಶಪಾಂಡೆ, ಕಾಸರಗೂಡುಚಿನ್ನ ಹಾಗೂ ನೀನಾಸಂ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೆಚ್ಚಾಗಿ ಕಾಮಿಡಿ ಅಂಶಗಳು ಇರಲಿದೆ. ಪ್ರಾರಂಭದಲ್ಲಿ ಶೀರ್ಷಿಕೆಯನ್ನು ಬಿಡಲಾಗಿತ್ತು. ಎಲ್ಲರು ಇಷ್ಟಪಟ್ಟರು, ಈ ವರ್ಷ ಟಾಪ್ ಐದರಲ್ಲಿ ನೋಡಲೆ ಬೇಕಾದ ಚಿತ್ರವೆಂದು ಇಂಗ್ಲೀಷ್ ಪತ್ರಿಕೆಯು ಹೇಳಿರುವುದು. ಅದರಲ್ಲಿ ನಮ್ಮ ಚಿತ್ರದ ಹೆಸರು ಇರುವುದು ಹೆಮ್ಮೆ ಅನಿಸಿದೆ. ಟೈಟಲ್ ಏತಕ್ಕೆ ಇಡಲಾಗಿದೆ ಎಂದು ಚಿತ್ರ ನೋಡಿದರೆ ತಿಳಿಯುತ್ತದೆ. ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ ಎಂದರು.

ಒನ್ ಲೈನ್ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ಧೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ ನಿರ್ಮಾಪಕ ಸಿಲ್ಕ್‌ಮಂಜು ಮಾಹಿತಿ ನೀಡಿದರು.
ನಾನು ಸಹ ಮಲೆನಾಡು ಕಡೆಯವನು. ಅಂತಹ ಭಾಗದ ಕತೆಯಲ್ಲಿ ನಟಿಸಬೇಕೆಂಬ ಬಯಕೆ ಇತ್ತು. ನಿರ್ದೇಶಕರು ಹೇಳಿದ ಅಂಶಗಳು ಇಷ್ಟವಾಯಿತು. ಟಿಪಿಕಲ್ ಮಲೆನಾಡು ಹುಡುಗನಾಗಿ ಹಳೇ ಮೋಟರ್‌ಬೈಕ್, ಮಾರುತಿ ೮೦೦ ಚಲಾಯಿಸುವೆ. ಏಳು ವರ್ಷದ ನಂತರ ಐಂದ್ರಿತಾರೈ ಅವರೊಂದಿಗೆ ನಟಿಸಿದ್ದು ಸಂತಸ ತಂದುಕೊಟ್ಟಿತು. ಛಾಯಾಗ್ರಹಕರು ನಿಟ್ಟೂರನ್ನು ಚೆನ್ನಾಗಿ ತೋರಿಸಿದ್ದಾರೆ. ಥ್ಯಾಂಕ್ಸ್ ಅಂತ ನಾಯಕ ದಿಗಂತ್ ಮಾತಿಗೆ ವಿರಾಮ ಹಾಕಿದರು.

ಮದುವೆ ಆದ ಎರಡು ವರ್ಷದ ನಂತರ ಅಭಿನಯಿಸಿದ್ದೇನೆ. ಇದನ್ನು ಒಪ್ಪಿಕೊಳ್ಳಲು ಎರಡು ಕಾರಣಗಳು ಇದೆ. ಪ್ರಜ್ವಲ್‌ಪೈ ಸಂಗೀತ, ನಂತರ ಕತೆ ಎಂದು ಐಂದ್ರಿತಾರೈ ಹೇಳಿದರು.

ಸಂಪೂರ್ಣ ಚಿತ್ರಕತೆ ಕೊಡುವುದರ ಜೊತೆಗೆ ಸಂಭಾಷಣೆ ಪ್ರತಿ ನೀಡಿದ ಮೊದಲ ನಿರ್ದೇಶಕ ಎನ್ನಬಹುದು. ಅದನ್ನು ಓದುವಾಗ ಚಿತ್ರ ನೋಡಿದಂತೆ ಭಾಸವಾಗುತ್ತಿತ್ತು. ಇನ್ನು ನಟಿಸುವುದು ಬಾಕಿ ಇತ್ತು. ಸೌಮ್ಯ ಹೆಸರಿನಲ್ಲಿ ಮಲೆನಾಡ ಹುಡುಗಿಯಾಗಿ, ಅಲ್ಲಿನ ಕನ್ನಡ ಭಾಷೆ ಮಾತನಾಡಲು ಮೊದಲು ಕಷ್ಟವಾಗುತ್ತಿತ್ತು. ಮುಂದೆ ಸುಲಭವಾಯಿತು. ಎಲ್ಲರೂ ಭಾಗವಾಗಿ ಅವರವರ ಕೆಲಸವನ್ನು ಗುರುತಿಸಿಕೊಳ್ಳಲು ಅವಕಾಶ ಸಿಗುತ್ತದೆ. ಜಾಗಗಳು ಪಾತ್ರವಾಗಿ ಮೂಡಿಬರುತ್ತದೆ. ತಂಡದಲ್ಲಿ ನಾನು ಭಾಗಿಯಾಗಿರುವುದು ಖುಷಿ ತಂದಿದೆ ಎಂಬುದು ರಂಜನಿರಾಘವನ್ ನುಡಿಯಾಗಿತ್ತು.

ಇಬ್ಬರು ನಾಯಕಿಯರಿಗೊಂದು ಹಾಡು ಇರುತ್ತದೆ. ಮತ್ತೋಂದು ಮಲೆನಾಡು ಕುರಿತಂತೆ ಗೀತೆ ಇರಲಿದೆ. ರಾಗ ಸಂಯೋಜನೆ ಮುಗಿದಿದೆ. ಸದ್ಯದಲ್ಲೆ ಗಾಯಕರಿಂದ ಹಾಡಿಸುವ ಕೆಲಸ ಬಾಕಿ ಇದೆ ಎಂದು ಸಂಗೀತ ಸಂಯೋಜಕ ಮತ್ತು ಸಹ ನಿರ್ಮಾಪಕ ಪ್ರಜ್ವಲ್‌ಪೈ ಕಡಿಮೆ ಸಮಯ ತೆಗೆದುಕೊಂಡರು.

ಶೀರ್ಷಿಕೆ ಇಡಲು ತಿಂಗಳುಗಟ್ಟಲೆ ಚರ್ಚೆ ನಡೆಸಲಾಗಿತ್ತು. ಇದನ್ನು ನೋಡಿದಾಗ ತಂಡವು ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದೆ ಎಂಬುದನ್ನು ಗಮನಿಸಬಹುದು. ಎಲ್ಲರೂ ಯಾವುದೇ ಅಪೇಕ್ಷೆ ಪಡದೆ, ನಿರಾಪೇಕ್ಷೆಯಿಂದ ಶ್ರಮ ವಹಿಸಿದ್ದಾರೆ ಎನ್ನುತ್ತಾ ಚಿತ್ರ ಪ್ರಾರಂಭವಾದ ಬಗೆಯನ್ನು ನೆನಪು ಮಾಡಿಕೊಂಡು ಸಭೆಯನ್ನು ನಗೆಯಲೋಕಕ್ಕೆ ಕರೆದುಕೊಂಡು ಹೋಗಿದ್ದು ಕಾರ್ಯಕಾರಿ ನಿರ್ಮಾಪಕ ರವೀಂದ್ರಜೋಷಿ.

ಛಾಯಾಗ್ರಹಕ ನಂದಕಿಶೋರ್, ಸಂಭಾಷಣೆಗಾರ ವೇಣುಹಸ್ರಾಳಿ, ಸಂಕಲನಕಾರ ರಾಹುಲ್ ಮತ್ತು ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದ ನಿರ್ಮಾಪಕ ದೇವೇಂದ್ರರೆಡ್ಡಿ ಸುದ್ದಿಗೋಷ್ಟಿಯಲ್ಲಿ ಉಪಸ್ತಿತರಿದ್ದರು. ಉಪ್ಪಿ ಎಂಟರ್‌ಟೈನರ್ ಮೂಲಕ ಸಿದ್ದಗೊಳ್ಳುತ್ತಿರುವ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.

Spread the love

Continue Reading
Click to comment

Leave a Reply

Your email address will not be published. Required fields are marked *