Connect with us

Cinema News

ನಿಮ್ಮೂರಲ್ಲಿ ಹಾಡುಗಳ ಸಂಭ್ರಮ ಸಡಗರ

Published

on

ಕರೋನಾ ಬಂದು ಇಡೀ  ಜಗತ್ತೇ ತತ್ತರಿಸಿದೆ. ವರ್ಷವಾಗತಾ ಬಂದರೂ ಜನ ಥಿಯೇಟರಿಗೆ ಬರ್ತಿಲ್ಲ. ಆದರೆ  ಹೊಸ ಚಿತ್ರಗಳ ನಿರ್ಮಾಣ, ಆಡಿಯೋ ಬಿಡಗಡೆ ಕಾರ್ಯಕ್ರಮ ನಡೆಯುತ್ತಲೇ ಇದೆ. ಈಗ ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ನಿಮ್ಮೂರು ಎನ್ನುವ ಚಲನಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ್ರು ಹಾಗೂ ಯುವನಟಿ ರೂಪಿಕಾ, ಭಾಮ ಹರೀಶ್ ಅವರು  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹೊಸಬರೇ ಸೇರಿಕೊಂಡು ಈ ಚಿತ್ರ ಮಾಡಿದ್ದೀರಿ, ಇದೇ ಖುಷಿ ಸಿನಿಮಾ ಬಿಡುಗಡೆಯಾದ ಮೇಲೂ ಇರಲಿ ಎಂದು ಚಿನ್ನೇಗೌಡ್ರು ಹೇಳಿದರೆ, ಚಿತ್ರ ಬಿಡುಗಡೆ ಮಾಡುವಾಗ ಒಳ್ಳೇ ವಿತರಕರನ್ನು ಇಟ್ಟುಕೊಳ್ಳಿ,  ಅವರು ಯಾವರೀತಿ ಹೋಗಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ. ಸಿನಿಮಾನ ಹೇಗೋ ಮಾಡಬಹುದು, ರಿಲೀಸ್ ಮಾಡುವುದು ತುಂಬಾ ಕಷ್ಟವಾಗಿಬಿಡುತ್ತೆ ಎಂದು ಹೇಳಿದರು. 

   ಕಳೆದ ಐದಾರು ವರ್ಷಗಳಿಂದ ಚಿತ್ರರಂಗದಲ್ಲಿ  ಕೆಲಸ ಮಾಡುತ್ತಿರುವ ವಿಜಯ್ ಎಸ್. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ರಾಜಶೇಖರ ಚಂದ್ರಶೇಖರ್ ಡಾವಣಗೇರಿ(ರಾಣೆಬೆನ್ನೂರು) ಈ ಚಿತ್ರದ ನಿರ್ಮಾಪಕರು.  ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸಿನಿಮಾ ಚಿತ್ರದಲ್ಲಿ  ಲಕ್ಕಿರಾಮ್ ಹಾಗೂ ವೀಣಾಗಂಗಾಮ್ ನಾಯಕ, ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ  ನಿರ್ಮಾಪಕ ರಾಜಶೇಖರ್ ಅವರು ಒಂದು ನೆಗೆಟಿವ್ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕರ ಬ್ಯಾನರ್ ಹೆಸರು ಹಠವಾದಿ ಸಿನಿ ಕ್ರಿಯೇಶನ್ಸ್, ನಿರ್ಮಾಪಕರು ರವಿಚಂದ್ರನ್ ಅಭಿಮಾನಿ, ಜೀವನದಲ್ಲಿ ಸಾಧಿಸುವ ಹಠ ಇರಬೇಕು, ಆಗಲೇ ನಾವೇನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದು ನಿರ್ಮಾಪಕರ ಸ್ಪಷ್ಟನೆ. ನಿಮ್ಮೂರು ಎಂದಾಗ ಎಲ್ಲರಿಗೂ ಅವರವರ ಊರಿನ ನೆನಪಾಗಬೇಕು ಎನ್ನುವ ಉದ್ದೇಶದಿಂದ ಈ ಟೈಟಲ್ ಇಟ್ಟಿದಾರೆ. ನಿಮ್ಮೂರು ಎಂದಾಕ್ಷಣ ಅಲ್ಲಿ ನಡೆದ ಘಟನೆ ನೆನಪಾಗಬೇಕು, ಇಂಪ್ಯಾಕ್ಟ್ ಆಗಬೇಕು ಎನ್ನುವುದು ಇದರ ಉದ್ದೇಶ. ಚಿತ್ರವನ್ನು ನಾವೆಲ್ಲ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಒಂದು ಹಳ್ಳಿ ಎಂದಮೇಲೆ ಅಲ್ಲಿ  ಸಾಮಾನ್ಯವಾಗಿರುವ ಒಂದು ಪ್ರೀತಿ, ರಾಜಕೀಯ, ರೈತರ ಸಮಸ್ಯೆಗಳು ಇದನ್ನೆಲ್ಲ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇದರ ಜೊತೆಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ ಎಂದು ಹೇಳಿದರು. 

    ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ವಿಜಯ್ ನಿಮ್ಮೂರು ಎಂದಾಕ್ಷಣ ಚಿತ್ರ ನೋಡುತ್ತಿರುವ ಎಲ್ಲರಿಗೂ ಅವರವರ ಹುಟ್ಟೂರು ನೆನಪಾಗುತ್ತದೆ. ನಿರ್ಮಾಪಕರು ನನ್ನ ಸ್ನೇಹಿತರು. ಈ ಕಥೆ ರೆಡಿ ಮಾಡಿಕೊಂಡು ಯಾರಬಳಿ ಮಾಡಿಸುವುದೆಂದು ಯೋಚಿಸುತ್ತಿದ್ದಾಗ ಇವರು ಸಿಕ್ಕರು. ಒಳ್ಳೇ ಸ್ಟೋರಿ ಚಿತ್ರದಲ್ಲಿದೆ. 3 ಫೈಟ್, 5 ಹಾಡುಗಳು ಚಿತ್ರದಲ್ಲಿವೆ, ಕೊಳ್ಳೇಗಾಲ, ಹಾಸನ, ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗ ಸೇರಿ 76 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಒಂದು ನೈಜಘಟನೆ ಆಧರಿಸಿ ಮಾಡಿದ ಕಥೆಯಿದು, ನೇಟಿವಿಟಿಗೆ ತುಂಬಾ ಹತ್ತಿರವಾದಂಥ ಪಾತ್ರಗಳನ್ನಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇವೆ. ಎಲ್ಲಾ ಥರದ ಮನರಂಜನಾತ್ಮಕ ಅಂಶಗಳಿರುವ ಟೋಟಲ್ ಎಂಟರ್‍ಟೈನ್‍ಮೆಂಟ್ ಪ್ಯಾಕೇಜ್ ಇದು. ಲಕ್ಕಿರಾಮ್ ಚಿತ್ರದ ನಾಯಕನಾಗಿದ್ದು, ವೀಣಾ ಗಂಗಾಧರ್ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸಮಾರಂಭದಲ್ಲಿ ಅತಿಥಿಯಾಗಿದ್ದ ಆನಂದ ಪಾಟೀಲ ಹುಲಿಕಟ್ಟಿ ಮಾತನಾಡುತ್ತ ನಿಮ್ಮೂರಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು, ಚಿತ್ರದಲ್ಲಿ  ರೈತರ ಬಗ್ಗೆ ಹೇಳಿದ್ದೀರಿ, ಇನ್ಮುಂದೆಯೂ ಸಹ ಪ್ರತಿ ಚಿತ್ರದಲ್ಲಿ ರೈತರ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವಂತಾಗಲಿ ಎಂದು ಸಲಹೆ ನೀಡಿದರು. ಚಿತ್ರೀಕರಣ ಸಮಯದಲ್ಲಿ ಸಹಕಾರ ನೀಡಿದ ಗ್ರಾಮಸ್ಥರಿಗೆ ನಿರ್ಮಾಪಕರು ವೇದಿಕೆಗೆ ಕರೆದು ಸನ್ಮಾನಿಸಿದರು. ಇನ್ನು ಚಿತ್ರದ ಸಂಗೀತ ನಿರ್ದೇಶಕರಾಗಿ ಮಧುಸೂದನ್ ಡಿ. ಅಭಿನಂದನ್ ಕಷ್ಯಪ್ ಕೆಲಸ ಮಾಡಿದ್ದಾರೆ. ವಿ.ಪಳನಿವೇಲು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನವಳ್ಳಿ, ಸಿದ್ದು ಮಂಡ್ಯ, ಮಂಜುನಾಥ್ ಹಾಗೂ ಇತರರು ನಟಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *

Cinema News

“ಘೋಸ್ಟ್‌” ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ.

Published

on

By

ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ (MLC) ಅರ್ಪಿಸುವ, ಸಂದೇಶ್ ಎನ್ ನಿರ್ಮಿಸುತ್ತಿರುವ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ “ಘೋಸ್ಟ್‌” ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿರುವ ಹದಿನೈದಕ್ಕೂ ಅಧಿಕ ಸೆಟ್ ಗಳಲ್ಲಿ 28ದಿನಗಳ ಚಿತ್ರೀಕರಣ ನಡೆದಿದೆ. ಶಿವರಾಜಕುಮಾರ್, ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಮುಂತಾದ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮೋಹನ್ ಬಿ ಕೆರೆ ಈ ಚಿತ್ರದ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ದ್ವಿತೀಯ ಹಂತದ ಚಿತ್ರೀಕರಣ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ಆರಂಭವಾಗಲಿದೆ.

ನಿರ್ದೇಶಕ ಶ್ರೀನಿ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ “ಘೋಸ್ಟ್‌ ” ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ.

ಶಿವರಾಜಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Spread the love
Continue Reading

Cinema News

‘ಸದ್ದು ವಿಚಾರಣೆ ನಡೆಯುತ್ತಿದೆ’ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆ- ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ಸಿನಿಮಾ

Published

on

By

ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಭಾಸ್ಕರ್ ಆರ್ ನೀನಾಸಂ ನಿರ್ದೇಶಿಸಿರುವ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇಂಟ್ರಸ್ಟಿಂಗ್ ಟ್ರೇಲರ್, ಚೆಂದದ ಹಾಡುಗಳ ಮೂಲಕ ಚಿತ್ರ ಪ್ರೇಮಿಗಳ ಮನಗೆದ್ದಿರುವ ಚಿತ್ರ ನವೆಂಬರ್ 25ಕ್ಕೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ.

ರಂಗಭೂಮಿ ಪ್ರತಿಭೆ ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಅಶ್ವಿನಿ ಕೆ ಎನ್ ಕಥೆ ಬರೆದಿದ್ದು, ಭಾಸ್ಕರ್ ಆರ್ ನೀನಾಸಂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ಹೆಣೆದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಪಾವನ ಗೌಡ, ರಾಕೇಶ್ ಮಯ್ಯ, ಮಧುನಂದನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಾಘು ಶಿವಮೊಗ್ಗ, ಜಾಹಂಗೀರ್, ರೋಹಿಣಿ ರಘುನಂನಂದನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

ಬೆಂಗಳೂರು, ಸಕಲೇಶಪುರ, ಮಂಗಳೂರು, ಮೈಸೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದ್ದು, ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಕ್ಯಾಮೆರಾ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ, ಗಂಗಮ್ ರಾಜ್ ನೃತ್ಯ ನಿರ್ದೇಶನ, ದಕ್ಷಿಣ ಮೂರ್ತಿ ಸಂಭಾಷಣೆ ಚಿತ್ರಕ್ಕಿದೆ.

ಪ್ರಮೋದ್ ಮರವಂತೆ, ಕಿನ್ನಾಳ್ ರಾಜ್ ಸಾಹಿತ್ಯದಲ್ಲಿ ಅರಳಿದ ಹಾಡುಗಳು ಸಿನಿಮಾದಲ್ಲಿದ್ದು, ಎಲ್ಲಾ ಹಾಡುಗಳು ಕೇಳುಗರ ಮನಗೆದ್ದಿವೆ. ರಘು ದೀಕ್ಷಿತ್, ರವಿ ಬಸ್ರೂರು, ಪಂಚಮ್ ಜೀವ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ಅಂಶಗಳನ್ನು ಹೊತ್ತ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನವೆಂಬರ್ 25ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Spread the love
Continue Reading

Cinema News

ವಿಭಿನ್ನ ಕಥೆಯ ‘ರುಧೀರ ಕಣಿವೆ’ ಟೀಸರ್ ಹಾಗೂ ಹಾಡುಗಳ ಬಿಡುಗಡೆ

Published

on

By

ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪುನರ್ಜನ್ಮ ಪ್ರೇಮಕಥೆ ಒಳಗೊಂಡ ‘ರುಧೀರ ಕಣಿವೆ’ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳು ಚೆನ್ನಾಗಿದೆ. ಛಾಯಾಗ್ರಹಣ, ಮ್ಯೂಸಿಕ್ ಕೂಡ ಅದ್ಭುತವಾಗಿದೆ. ಒಳ್ಳೆ ತಂಡ ಇದಾಗಿದ್ದು, ಒಳ್ಳೆ ಸಿನಿಮಾ ಮಾಡಿರುವ ಭರವಸೆಯಿದೆ ಎಂದು ಭಾ.ಮ.ಹರೀಶ್ ಹಾರೈಸಿದರು.

ನಟ ಧರ್ಮ ಕಿರ್ತಿರಾಜ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಚಿತ್ರದ ತುಣುಕುಗಳನ್ನು ನೋಡಿದರೆ ಇದು ವಿಶೇಷವಾದ ಸಿನಿಮಾ ಎನಿಸುತ್ತದೆ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಮರ್ಥ ಎಂ. ‘ಈ ಮೊದಲು ನಾನು ‘ನವ ಇತಿಹಾಸ’ ಸಿನಿಮಾ ನಿರ್ದೇಶನ ಮಾಡಿದ್ದು ಇದು ೨ನೇ ಪ್ರಯತ್ನ. ಪ್ರಾರಂಭದಿಂದಲೂ ಚಿತ್ರಕ್ಕೆ ತುಂಬಾ ತೊಂದರೆ ಬಂದಿದ್ದರೂ ನಿರ್ಮಾಪಕರು ಹಾಗೂ ಕಲಾವಿದರು ಒಳ್ಳೆ ಸಪೋರ್ಟ್ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಫೈಟ್, ನಾಲ್ಕು ಹಾಡುಗಳಿದ್ದು, ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸದ್ಯ ೫ ಭಾಷೆಗಳಲ್ಲಿ ಸಿನಿಮಾ ಸಿದ್ದವಾಗಿದ್ದು, ಡಿಸೆಂಬರ್ ೩೦ ರಂದು ಬಿಡುಗಡೆ ಆಗಲಿದೆ’ ಎಂದರು.

ನಂತರ ಮಾತನಾಡಿದ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್, ‘ನಿರ್ದೇಶಕರು ಕಥೆ ಹೇಳಿದಾಗ ಸಿನಿಮಾ ಮಾಡುವ ಆಸೆ ಬಂತು. ಈ ಚಿತ್ರದ ನಾಯಕ ಕಾರ್ತಿಕ್ ನಮ್ಮ ಅಣ್ಣನ ಮಗ. ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ ನಲ್ಲಿ ಮೊದಲಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು, ಇದರಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಪ್ರಾರಂಭದಲ್ಲಿ ನಾವು ಕನ್ನಡ ಅಷ್ಟೇ ಪ್ಲ್ಯಾನ್ ಮಾಡಿದ್ವಿ ನಂತರ ಬೇರೆ ಭಾಷೆಗೆ ಪ್ಲ್ಯಾನ್ ಮಾಡಿದ್ವಿ. ಈಗ ಸಿನಿಮಾ ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಕಥೆಯಲ್ಲಿ ಕಾಮಿಡಿ, ಹಾರರ್, ಆ್ಯಕ್ಷನ್ ಸೇರಿದಂತೆ ಎಲ್ಲಾ ಅಂಶಗಳಿದ್ದು, ಸಿನಿಮಾ ಜನರಿಗೆ ಇಷ್ಟ ಆಗುತ್ತದೆ’ ಎಂದು ಹೇಳಿದರು. ಚಿತ್ರ ತಂಡಕ್ಕೆ ಶುಭ ಹಾರೈಸಲು ಬಂದಿದ್ದ ಪ್ರತಾಪ್ ಸಿಂಹ ‘ಈ ಟೈಟಲ್ ತುಂಬಾ ಚೆನ್ನಾಗಿ ಇದೆ. ತಂಡಕ್ಕೆ ಒಳ್ಳೆದಾಗಲಿ’ ಎಂದರು.
ಈ ಚಿತ್ರದ ನಾಯಕನಾಗಿ ಯುವ ಪ್ರತಿಭೆ ಕಾರ್ತಿಕ್ ಅಭಿನಯಿಸಿದ್ದು, ಇವರಿಗೆ ನಾಯಕಿಯರಾಗಿ ದಿಶಾ ಪೂವಯ್ಯ ಹಾಗೂ ಅಮೃತ ಬಣ್ಣ ಹಚ್ಚಿದ್ದಾರೆ.

ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಎ.ಟಿ ರವೀಶ್ ಮಾತನಾಡಿ, ‘ಇದು ಸ್ಪೆಷಲ್ ಸೌಂಡ್ ಇರುವಂತಹ ಸಿನಿಮಾ. ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಆಗುವ ನಿರೀಕ್ಷೆ ಇದೆ’ ಎಂದರು. ಉಳಿದಂತೆ ಸಿನಿಮಾಗೆ ಲಕ್ಕಿ ಗೌಡ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಚಂದ್ರು ಬಂಡೆ ಮತ್ತು ಅಶೋಕ್ ಸಾಹಸವಿದೆ.

Spread the love
Continue Reading

Cinema News

ಇದು “ಕೊರಗಜ್ಜ ದೈವ”ದ ನಿಜಜೀವನದ ಕಥೆಯ ಚಿತ್ರವೇ….?

Published

on

By

ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ , ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ “ಕರಿ ಹೈದ….ಕರಿ ಅಜ್ಜ …”.ಸಿನೆಮಾದ ಮುಹೂರ್ತ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ಥಳಿಯ ಶಾಸಕ ಶ್ರೀ ಹರೀಶ್ ಪೂಂಜ ರವರು ಕ್ಯಾಮರ ಚಾಲನೆ ಮಾಡುವುದರ ಮೂಲಕ ಅದ್ದೂರಿ ಚಾಲನೆ ನೀಡಿದರು. ಮಾತ್ರಶ್ರೀ ಕಮಲ ಕೆ ಸಪಲ್ಯ ಆರಂಭ ಫಲಕ ತೋರಿಸಿದರು.

ಇತ್ತೀಚಿನ ಹಲವಾರು ವರ್ಷಗಳಿಂದ ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂಬ ಸಹವಾಸವನ್ನು ಹಲವಾರು ನಿರ್ಮಾಪಕರು ಯತ್ನಿಸುತ್ತಿದ್ದರು. ಇದೀಗ ಸುಧೀರ್ ಅತ್ತಾವರ್ ಕೊರಗಜ್ಜ ನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಧೀರ್ ನಿರ್ದೇಶನದ ಮರಾಠಿ -ಕನ್ನಡ ಸಿನಿಮಾ ಶೂಟಿಂಗ್ ಸಂಪೂರ್ಣ ಗೊಂಡು, ಅರೇಬಿಕ್- ಇಂಗ್ಲಿಷ್ ಸಿನೆಮ ಸಿನಿಮಾ “ಗುಲೇ ಬಕಾವಲಿ” ಮತ್ತು ಮರಾಠಿ-ಕನ್ನಡ ಸಿನಿಮಾ “ಅಗೋ ಳಿ ಮಂಜಣ್ಣ” ಫ್ಲೋರ್ ನಲ್ಲಿ ಇರುವ ಮಧ್ಯೆಯೇ ಇದೀಗ ಸುಧೀರ್ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮುಹೂರ್ತ ನಡೆಸುವ ಮೊದಲು ಕೊರಗಜ್ಜನ ಸಮುದಾಯದ ಪ್ರಮುಖ ವ್ಯಕ್ತಿಗಳು ಡೊಳ್ಳು -ತಮಟೆಗಳ ಸ ವಿಶೇಷ ಪೂಜೆಯನ್ನು ಶ್ರೀ ಸುಂದರ ಬೆಳುವಾಯಿ, ಶ್ರೀ ಬಾಬು ಪಾಂಗಳ, ಶ್ರೀ ಬಲ್ ರಾಜ್, ಶ್ರೀ ರಮೇಶ್ ಮೊದಲಾದ ಮಹನೀಯರು ಮತ್ತು ಗುರಿಕಾರರು ಹಳೆಯ ಶೈಲಿಯ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸಿನೆಮಾಕ್ಕೆ ಶುಭ ಹಾರೈಸಿದರು.

ಖ್ಯಾತ ಹಾಲಿವೂಡ್-ಬಾಲಿವೂಡ್ ನಟ ಕಬೀರ್ ಬೇಡಿ ಯವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ. ಭರತ್ ಸೂರ್ಯ ಎನ್ನುವ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಎಂಟುನೂರು ವರ್ಷಗಳ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಕ್ಯಾಮರಾ, ಸುಧೀರ್- ಕ್ರಷ್ಣ ರವಿ ಸಂಗೀತ, ಸುಧೀರ್ ಅತ್ತಾವರ್ ಕಲೆ ಚಿತ್ರಕ್ಕಿದೆ. ತ್ರಿವಿಕ್ರಮ ಬೆಳ್ತಂಗಡಿ ನಿರ್ಮಾಣದ ನಾಲ್ಕನೆಯ ಸಿನೆಮಾ

Spread the love
Continue Reading

Cinema News

300 ಕೇಂದ್ರಗಳಲ್ಲಿ 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’

Published

on

By

ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿ, ರಿಷಭ್ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಸೆ. 30ರಂದು ಬಿಡುಗಡೆಯಾದ ಚಿತ್ರವು ರಾಜ್ಯದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲದೆ, ವಿದೇಶಗಳಲ್ಲೂ ಹಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಮುಗಿಸಿ, 100ನೇ ದಿನದತ್ತ ದಾಪುಗಾಲಿಟ್ಟಿದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿರುವ ‘ಕಾಂತರ’, ಅಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಸದ್ಯದಲ್ಲೇ ಅಲ್ಲೂ 50 ದಿನಗಳನ್ನು ಪೂರೈಸಲಿದೆ.

‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್. ಈಗ ಅದೇ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಕಾಂತಾರ’ ಚಿತ್ರವನ್ನು ಮನೆ ಮಂದಿಯೆಲ್ಲಾ ನೋಡಿ ಇಷ್ಟಪಟ್ಟಿದ್ದಾರೆ. ಹಿರಿಯರಿಂದ ಕಿರಿಯರವರೆಗೂ ಎಲ್ಲರೂ ಮೆಚ್ಚಿಕೊಂಡಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುವುದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್. ಹೊಂಬಾಳೆ ಫಿಲಂಸ್ ಮೊದಲಿನಿಂದಲೂ ಕಥೆಗೆ ವಿಶೇಷವಾದ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಈಗಾಗಲೇ ‘ರಾಜ್ಕುಮಾರ’, ‘ಯುವರತ್ನ’, ‘ಕೆಜಿಎಫ್’ ಮುಂತಾದ ಚಿತ್ರಗಳು ಈ ವಿಷಯವನ್ನು ನಿರೂಪಿಸಿದೆ. ಈಗ ‘ಕಾಂತಾರ’ ಸಹ ಇದೇ ನಿಟ್ಟಿನಲ್ಲಿ ಸಾಗಿರುವುದಷ್ಟೇ ಅಲ್ಲ, ‘ಕೆಜಿಎಫ್’ ಸರಣಿಯ ನಂತರ ಒಂದೇ ಸಂಸ್ಥೆಯ ಇನ್ನೊಂದು ಚಿತ್ರ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ವಿಶೇಷ.
ಬರೀ ಕನ್ನಡವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಯು ಹಲವು ಚಿತ್ರಗಳನ್ನು ನಿರ್ಮಿಸುತ್ತಿದೆ. ಒಂದೇ ಸಂಸ್ಥೆಯಿಂದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ.

ಈಗಾಗಲೇ ಕನ್ನಡದಲ್ಲಿ ಜಗ್ಗೇಶ್ ಅಭಿನಯದಲ್ಲಿ ಸಂತೋಷ್ ಆನಂದರಾಮ್ ನಿರ್ದೇಶಿಸುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶ್ರೀಮುರಳಿ ಅಭಿನಯದಲ್ಲಿ ಡಾ. ಸೂರಿ ನಿರ್ದೇಶಿಸುತ್ತಿರುವ ‘ಬಘೀರ’ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ರಕ್ಷಿತ್ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆಂಟೋನಿ’ ಮತ್ತು ಯುವ ರಾಜ್ಕುಮಾರ್ಗಾಗಿ ಸಂತೋಷ್ ಆನಂದರಾಮ್ ನಿರ್ದೇಶಿಸಲಿರುವ ಹೊಸ ಚಿತ್ರಗಳು ಸದ್ಯದಲ್ಲೇ ಶುರುವಾಗಲಿವೆ.

ಬೇರೆ ಭಾಷೆಯ ಚಿತ್ರಗಳ ವಿಷಯಕ್ಕೆ ಬಂದರೆ, ತೆಲುಗಿನಲ್ಲಿ ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2023ರ ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಎರಡು ಚಿತ್ರಗಳನ್ನು ಹೊಂಬಾಳೆ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಚಿತ್ರವನ್ನು ‘ಸೂರರೈ ಪೊಟ್ರು’ ಖ್ಯಾತಿಯ ಸುಧಾ ಕೊಂಗರಾ ನಿರ್ದೇಶನ ಮಾಡಿದರೆ, ಇನ್ನೊಂದರ ಘೋಷಣೆ ಶೀಘ್ರದಲ್ಲೇ ಆಗಲಿದೆ. ಮಲಯಾಳಂನಲ್ಲೂ ಹೊಂಬಾಳೆ ಫಿಲಂಸ್ ವತಿಯಿಂದ ಎರಡು ಚಿತ್ರ ನಿರ್ಮಾಣವಾಗುತ್ತಿವೆ. ಫಹಾದ್ ಫಾಸಿಲ್ ಅಭಿನಯದ ‘ಧೂಮಂ’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದರೆ, ಪೃಥ್ವಿರಾಜ್ ಸುಕುಮಾರನ್ ನಟಿಸಿ-ನಿರ್ದೇಶಿಸಲಿರುವ ‘ಟೈಸನ್’ ಚಿತ್ರವು ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.

Spread the love
Continue Reading

Trending News