Cinema News
“ಲವ್ ಮಾಕ್‌ಟೇಲ್ 2” ಚಿತ್ರದಿಂದ ಹೊರಬಂದ ರಘು ದೀಕ್ಷಿತ್
ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಟನೆಯ ಮತ್ತು ನಿರ್ಮಾಣದ “ಲವ್ ಮಾಕ್‌ಟೇಲ್ 2” ಚಿತ್ರತಂಡದಿಂದ ಅಭಿಮಾನಿಗಳಿಗೆ ಒಂದು ನಿರಾಶೆಯ ಸುದ್ದಿ ಹೊರಬಂದಿದೆ. “ಲವ್ ಮಾಕ್‌ಟೇಲ್” ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಚಿತ್ರದ ಎರಡನೇ ಭಾಗದಲ್ಲಿ ಕೆಲಸ ಮಾಡುತ್ತಿಲ್ಲ.
ಕಾರಣ ಇಷ್ಟೇ, ವಿಶ್ವದಾದ್ಯಂತ ತನ್ನದೇ ಅಭಿಮಾನಿ ವೃಂದ ಹೊಂದಿರುವ ರಘು ದೀಕ್ಷಿತ್ ಅವರ ಸಂಭಾವನೆ ಹೆಚ್ಚಾಗಿರುವ ಕಾರಣ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ. ಮೊದಲ ಭಾಗ ಹಿಟ್ ಆದ ಮೇಲೆ ಸಹಜವಾಗೇ ರಘು ದೀಕ್ಷಿತ್ ಅವರು ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ. ಒಂದು ಸಿನಿಮಾ ಹಿಟ್ ಆದ ಮೇಲೆ ಚಿತ್ರನಟ-ನಟಿಯರು ಸಂಭಾವನೆ ಹೆಚ್ಚಿಸಿಕೊಳ್ಳುವುದು ಸರ್ವೇ ಸಾಮಾನ್ಯ, ಆದೆ ರೀತಿ ರಘು ದೀಕ್ಷಿತ್ ಅವರು ಸಂಭಾವನೆ ಹೆಚ್ಚಿಸಿಕೊಂಡಿರೋದ್ರಲ್ಲಿ ತಪ್ಪೇನಿಲ್ಲ. ಲವ್ ಮಾಕ್‌ಟೇಲ್ ಚಿತ್ರ ಗೆಲ್ಲೋದ್ರಲ್ಲಿ ರಘು ಸಂಗೀತ ನೀಡಿರುವ ಮನಮುಟ್ಟುವ ಹಾಡುಗಳು ಕೂಡ ಪಾತ್ರನಿರ್ವಹಿಸಿವೆ ಅನ್ನೋದನ್ನ ಚಿತ್ರದ ನಿರ್ಮಾಪಕರು ಆಗಿರುವ ನಿರ್ದೇಶಕ ಕೃಷ್ಣ ಅವರಿಗೆ ಮಾನವರಿಕೆಯಾಗಿರಬೇಕಿತ್ತು.
ಏನೇ ಆದರೂ “Love Mocktail 2” will miss Raghu Dixit Music.