Cinema News
ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ ‘ಇಬ್ಬರ ನಡುವಿನ ಮುದ್ದಿನ ರಾಣಿ’

ಕೊರೋನ ಆರ್ಭಟದಿಂದ ಮಂಕಾಗಿದ್ದ ಕನ್ನಡ ಚಲನಚಿತ್ರರಂಗ ಈಗ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಸಾಕಷ್ಟು ನೂತನ ಚಿತ್ರಗಳು ಕೆಲವು ದಿನಗಳಿಂದ ಆರಂಭವಾಗುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಂದು ನೂತನ ಚಿತ್ರ ‘ಇಬ್ಬರ ನಡುವಿನ ಮುದ್ದಿನ ರಾಣಿ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ದೊಡ್ಡಬಳ್ಳಾಪುರ ಬಳಿಯಿರುವ ಅಂಗಾಸನ ರೆಸಾರ್ಟ್ ನಲ್ಲಿ ನೆರವೇರಿತು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ysrcp state joint Secretary ಕರ್ಮೂರು ವೆಂಕಟ ರೆಡ್ಡಿ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೌರಭ್ ಕಿಶೋರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಪಿ.ಎಂ.ಆರ್ ಕೋಣ್ಣಾರೆಡ್ಡಿ ಈ ಚಿತ್ರದ ಸಹ ನಿರ್ಮಾಪಕರು. ವಿಜಯ್ ಕುಮಾರ್ ಹಾಗೂ ಮಧುಬಾಬು ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಎಂ.ಎಸ್.ಎನ್ ರಾಜಾ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಬೆಂಗಳೂರು, ದೊಡ್ಡಬಳ್ಳಾಪುರ, ಮಡಿಕೇರಿ ಮುಂತಾದ ಕಡೆ ೧೫ ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎಂ.ಎಂ.ಮೋಹನ್ ಸಂಗೀತ ನೀಡುತ್ತಿದ್ದಾರೆ. ಬಾಲು ಸುರೇಶ್ ಛಾಯಾಗ್ರಹಣ, ಸತ್ಯಬಾಬು ಸಂಕಲನ ಹಾಗೂ ಭೂಪತಿ ಯಾದಗಿರಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ನಿರ್ಮಾಪಕ ಸೌರಭ್ ಕಿಶೋರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಆಕಾಶ್ ಆರಾಧ್ಯ, ದಿವ್ಯ ರಾವ್, ರೂಪ ರಾಯಪ್ಪ, ಸಂಜನ ನಾಯ್ಡು, ಮಹೇಂದರ್, ವಿಕ್ಚರಿ ವಾಸು, ಶೇಷಗಿರಿ, ಅಂಜಲಿ, ಲೋರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Cinema News
ಪತಿಯ ನಿಧನದ ನೋವಿನಲ್ಲೂ ನಟಿ ಮೀನಾ ಮಾಡಿಕೊಂಡ ಮನವಿ ಏನು ಗೊತ್ತಾ?

Cinema News
ಜೋರಾಗಿದೆ “ಬಡ್ಡೀಸ್” ಗೆಲುವಿನ ಓಟ.

Cinema News
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಜೂ.ಎನ್ ಟಿ ಆರ್ ನಂಬರ್ ಗೆ ಕರೆ ಮಾಡಿ ಬೆಸ್ತು ಬಿದ್ದ ಅಭಿಮಾನಿಗಳು

Cinema News
ಮೀನಾ ಪತಿ ಸಾವಿಗೆ ಕಾರಣ ತಿಳಿಸಿದ ನಟಿ ಖುಷ್ಬೂ, ಅಷ್ಟಕ್ಕೂ ವಿದ್ಯಾಸಾಗರ್ ಗೆ ಆಗಿದ್ದೇನು ಗೊತ್ತಾ?

Cinema News
ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಬಾಲಿವುಡ್ ನಟಿ ಶೆನಾಜ್ ಟ್ರೆಜರಿ

-
Movie Reviews3 years ago
ವಿಕೇಂಡ್ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
-
Movie Reviews3 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Box Office3 years ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews3 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Cinema News3 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office3 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News3 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews3 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News3 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
News3 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ