Cinema News
ಕಪಿಲ್ ಅವರ “ಅತ್ಯುತ್ತಮ” ಚಿತ್ರಕ್ಕೆ ಚಾಲನೆ
ಕರೋನಾದಿಂದ ಕಳೆಗುಂದಿದ್ದ ಕನ್ನಡ ಚಿತ್ರರಂಗದಲ್ಲಿ ವಿಜಯದಶಮಿಯ ಶುಭದಿನದಂದು ಒಂದಷ್ಟು ಹೊಸ ಚಿತ್ರಗಳು ಪ್ರಾರಂಭವಾಗುವ ಮೊದಲಿನ ರಾಜಕಳೆಗೆ ಮರಳಿದೆ. ಅದರಲ್ಲಿ ಅತ್ಯುತ್ತಮ ಎನ್ನುವ ಚಿತ್ರವೂ ಒಂದು.
ಪ್ರಥಮ, ಉತ್ತಮ, ಜೀವನಧಾಮ ಎಂಬ ಟ್ಯಾಗ್‍ಲೈನ್ ಹೊಂದಿರೋ ಈ ಚಿತ್ರದ ಮುಹೂತ್ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭ ಹಾರೈಸಿದರು.
ಚಿತ್ರರಂಗದಲ್ಲಿ ಕಳೆದ 2 ದಶಕಗಳಿಂದ ನೂರಕ್ಕೂ ಹೆಚ್ಚು ಚಲನ ಚಿತ್ರಗಳಿಗೆ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡುವ ಮೂಲಕ ಗುರ್ತಿಸಿಕೊಂಡಿದ್ದ ಎಂ.ಆರ್.ಕಪಿಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐದನೇ ಚಿತ್ರ ಇದಾಗಿದೆ.
ಕಪಿಲ್ ಈ ಹಿಂದೆ ಹಳ್ಳಿಸೊಗಡು, ಹಸಿವು ಮತ್ತು ಅರಿವು ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದರು. ಬಿಎಂಎಸ್ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ಸುನಿತಾ ಎಸ್.ಜೇವರಗಿ, ಪುಷ್ಪಲತಾ ಕುಡ್ಲೂರು ಹಾಗೂ ವೀಣಾ ಶ್ರೀನಿವಾಸ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಶಿವಕುಮಾರ್ ಜೇವರ್ಗಿ ಅವರು ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ.
ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಕಪಿಲ್ ನಾನು ಲಾಕ್‍ಡೌನ್ ಟೈಂನಲ್ಲಿ ಇಪ್ಪತ್ಮೂರು ಕಥೆಗಳನ್ನು ರೆಡಿ ಮಾಡಿಕೊಂಡಿದ್ದೆ. ಅದರಲ್ಲಿ ಈ ಕಥೆಯೂ ಒಂದು. ಈಗಿನ ಡಿಜಿಟಲ್ ಯುಗದಲ್ಲಿ ಗಂಡ ಹೆಂಡತಿ ನಡುವಿನ ಸಂಬಂದ ಯಾವ ರೀತಿ ಇರುತ್ತದೆ, ಅವರ ನಡುವೆ ಭಿನ್ನಾಭಿಪ್ರಾಯ ಬಂದಾಗ ಮಕ್ಕಳು ಏನೆಲ್ಲ ಪ್ರಾಬ್ಲಂ ಎದುರಿಸಬೇಕಾಗುತ್ತದೆ, ಅದರಿಂದ ಮುಂದೆ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರಕ್ಕೆ ಶೂಟಿಂಗ್ ನಡೆಸುವ ಯೋಜನೆಯಿದೆ ಎಂದು ಹೇಳಿದರು.
ಚಿತ್ರಕಥೆ ಸಾಹಿತ್ಯ ರಚಿಸುವುದರೊಂದಿಗೆ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನೂ ಸಹ ನಿರ್ವಹಿಸಿರುವ ಶಿವಕುಮಾರ ಜೇವರಗಿ ಅವರು ಮಾತನಾಡುತ್ತ ಇದೊಂದು ಫ್ಯಾಮಿಲಿಯಲ್ಲಿ ನಡೆಯುವ ಕಥೆ. ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ, ಪತ್ನಿಯ ನಡುವೆ ಇಗೋ ಅನ್ನುವುದು ಎಂದಿಗೂ ಇರಬಾರದು, ಅದು ಬಂದಾಗ ಹೇಗೆ ಮನಸ್ತಾಪಕ್ಕೆ ಕಾರಣವಾಗುತ್ತದೆ, ಆ ಭಿನ್ನಾಭಿಪ್ರಾಯದಿಂದಾಗಿ ಸಂಸಾರ ಯಾವರೀತಿ ಛಿದ್ರವಾಗುತ್ತದೆ, ಅಂತಹ ಪರಿಸ್ಥಿತಿ ಮಕ್ಕಳ ಮನಸ್ಸನ್ನು ಯಾವರೀತಿ ಘಾಸಿಗೊಳಿಸುತ್ತದೆ.
ಅದರಿಂದುಂಟಾಗುವ ದುಷ್ಪರಿಣಾಮಗಳನ್ನು ಅತ್ಯುತ್ತಮ ಎನ್ನುವ ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ, ಈ ಚಿತ್ರದಲ್ಲಿ ನನ್ನದು ಸಂಸಾರದ ಹಿರಿಯನ ಪಾತ್ರ. ನಾನು ಮೂಲತ: ರಂಗಭೂಮಿ ಕಲಾವಿದನಾಗಿದ್ದು, ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದೆ.
ಎಸ್‍ಕೆ. ಭಗವಾನ್, ತಿಪಟೂರು ರಘು ಅಂಥವರ ಬಳಿ ನಟನೆಯ ಪಾಠ ಕಲಿತಿದ್ದೇನೆ. ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್ ಅವರು ಮಾಡಿದ ಪಾತ್ರ ನೋಡಿದ ಮೇಲೆ ನಾನೂ ಚಿತ್ರರಂಗದಲ್ಲಿ ಏಕೆ ಪ್ರಯತ್ನಿಸಬಾರದು ಎನ್ನುವ ಆಸೆ ಮೂಡಿತ್ತು. ಇದೀಗ ಕೈಗೂಡಿದೆ. ಇಡೀ ಕುಟುಂಬ ಮುಜುಗರವಿಲ್ಲದೆ ಕುಳಿತು ನೋಡಬಹುದಾದ ಚಿತ್ರವನ್ನು ನಾವೆಲ್ಲ ಸೇರಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ಶಿವಪ್ಪ ಕುಡ್ಲೂರು ನಿರ್ವಹಿಸುತ್ತಿದ್ದಾರೆ, ತಮ್ಮ ಪಾತ್ರದ ಕುರಿತಂತೆ ಮಾತನಾಡಿದ ಅವರು ಚಿತ್ರದಲ್ಲಿ ನಾನು ಲಾಯರ್ ಪಾತ್ರ ಮಾಡುತ್ತಿದ್ದೇನೆ. ಈ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ಅದನ್ನು ಹೇಗೆ ನಿಭಯಿಸುತ್ತೇನೆ ಎಂದು ನನ್ನ ಪಾತ್ರದ ಮೂಲಕ ಹೇಳಲಾಗಿದೆ ಎಂದು ತಿಳಿಸಿದರು, ಇನ್ನು ಮಕ್ಕಳ ಪಾತ್ರ ನಿರ್ವಹಿಸಿರುವ ಮನೋಜ್ಞ ಕುಡ್ಲುರು ಹಾಗೂ ವಿನಯ್ ಹಾಸನ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ಶಿವಣ್ಣ ಅವರ ಸ್ನೇಹಿತರೂ ಆದ ಬಿಜಾಪುರ ಮೂಲದ ಸಿದ್ದು ಸಾಹುಕಾರ ಅವರು ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು, ದಿನೆಶ್ ಈಶ್ವರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ, ಸಿ.ನಾರಾಯಣ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ,