Movie Reviews
ಇವ್ನು ಪಕ್ಕಾ ‘ಜಂಟಲ್‌ಮನ್’ – ಚಿತ್ರ ವಿಮರ್ಶೆ – PopcornKannada ರೇಟಿಂಗ್ : 4/5
ಚಿತ್ರ: ಜಂಟಲ್‌ಮನ್
ನಿರ್ದೇಶಕ: ಜಡೇಶ್‌ಕುಮಾರ್ ಹಂಪಿ
ಸಂಗೀತ: ಅಜನೀಶ್ ಲೋಕನಾಥ್
ನಿರ್ಮಾಪಕ: ಗುರುದೇಶಪಾಂಡೆ
ತಾರಾಗಣ: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್ ಮತ್ತಿತರರು.
ರೇಟಿಂಗ್: 4/5.
ಸಾಮಾನ್ಯ ಮನುಷ್ಯ 8 ರಿಂದ 10 ಗಂಟೆಗಳ ಕಾಲ ನಿದ್ರಿಸುತ್ತಾನೆ. ಆದರೆ ಈ ವಾರ ರಿಲೀಸ್ ಆಗಿರುವ ಜಂಟಲ್‌ಮನ್ ಸಿನಿಮಾದ ನಾಯಕ ಬರೋಬ್ಬರಿ 18 ಗಂಟೆ ನಿದ್ರಿಸುತ್ತಾನೆ. ಎದ್ದಿರುವುದು ಬರೀ 6 ಗಂಟೆ. ಈ ಸ್ಟೋರಿ ಲೈನ್ ಕೇಳುವುದಕ್ಕೆ ಥ್ರಿಲ್ ಆಗಿದೆ, ಅಂತಹದ್ರಲ್ಲಿ ಇಂತಹ ಸ್ಟೋರಿ ಲೈನ್‌ಗೆ ಕಲಾವಿದರ ಅದ್ಭುತ ನಟನೆ, ಓಹೋ ಎನಿಸುವ ಮೇಕಿಂಗ್, ಉತ್ತಮ ಹಾಡುಗಳು, ಎಲ್ಲವೂ ಸೇರಿಕೊಂಡರೆ ಅದು ಜಂಟಲ್‌ಮನ್ ಸಿನಿಮಾವಾಗುತ್ತದೆ. ಬರೀ ನಾಯಕನ ನಿದ್ರೆಯಷ್ಟೇ ಸ್ಟೋರಿ ಲೈನ್ ಅಲ್ಲ, ಅದರ ಜತೆಗೆ ಇನ್ನೊಂದು ವಿಶೇಷವಾದ ಅಂಶ ಸಿನಿಮಾದಲ್ಲಿದೆ ಅದೇನು ಎಂಬುದನ್ನು ಚಿತ್ರಮಂದಿರದಲ್ಲಿಯೇ ನೊಡಬೇಕು.
ಸಿನಿಮಾವೊಂದರಲ್ಲಿ ಒಳ್ಳೆ ಕಥೆ ಇದ್ದರೆ ಅಷ್ಟೇ ಸಾಲದು, ಆ ಕಥೆಯನ್ನು ತೆರೆ ಮೇಲೆ ಅದ್ಭುತವಾಗಿ ತಂದರೆ ಮಾತ್ರ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಹಾಗಾಗಿ ಜಂಟಲ್ ಮನ್ ಚಿತ್ರದಲ್ಲಿ ಅದ್ಭುತ ಕಥೆಯ ಜತೆಗೆ, ಚಿತ್ರಕಥೆಯೂ ಪ್ರೇಕ್ಷಕನನ್ನು ಸೆಳೆಯುತ್ತದೆ. ಈ ಅದ್ಭುತವಾದ ಚಿತ್ರಕಥೆಗೆ ಎಲ್ಲ ಕಲಾವಿದರು ತಮ್ಮ ಶಕ್ತಿ ಮೀರಿ ನಟಿಸಿ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ.
ಬಹಳ ದಿನಗಳ ನಂತರ ಪ್ರಜ್ವಲ್ ದೇವರಾಜ್ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಸಹ ಗಮನ ಸೆಳೆಯುತ್ತಾರೆ. ಇನ್ನು ಸಂಚಾರಿ ವಿಜಯ್ ಸಹ ನಿರ್ದೇಶಕರ ಪರಿಕಲ್ಪನೆಯನ್ನು ತೆರೆ ಮೇಲೆ ಅದ್ಭುತವಾಗಿ ತಂದಿದ್ದಾರೆ. ಹೊಸ ನಿರ್ದೇಶಕರ ಕನಸನ್ನು ಗುರುದೇಶಪಾಂಡೆ ಸಂಪೂರ್ಣವಾಗಿ ಈಡೇರಿಸಲು ಪ್ರಯತ್ನ ಪಟ್ಟಿದ್ದಾರೆ. ಈ ವಾರಾಂತ್ಯದಲ್ಲಿ ಜಂಟಲ್‌ಮನ್‌ನನ್ನು ಒಮ್ಮೆ ಕಣ್ತುಂಬಿಕೊಳ್ಳಲೇಬೇಕು.