Box Office
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
ರಕ್ಷಿತ್ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ” ಚಿತ್ರ ಬಿಡುಗಡೆಗೊಂಡು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 3 ದಿನಕ್ಕೆ 22 ಕೋಟಿ ಕಲೆಕ್ಷನ್ ಮಾಡಿದೆ. ಗುರುವಾರ ರಾತ್ರಿಯೇ 30ಕ್ಕೂ ಹೆಚ್ಚು ಪ್ರಿಮಿಯರ್ ಶೋಗಳನ್ನು ಮಾಡಿದ್ದ ಚಿತ್ರತಂಡಕ್ಕೆ, ಎಲ್ಲಿಂದ ಇವತ್ತಿನವರೆಗೂ ಎಲ್ಲೆಲ್ಲೂ ಹೌಸ್ಫುಲ್ ಪ್ರದರ್ಶನದೊಂದಿಗೆ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.
3 ದಿನದಲ್ಲಿ 1070ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಶೋಗಳು ಫುಲ್ ಆಗಿದ್ದು, ಮಾಸ್ ಸೆಂಟರ್ಸ್ ಎನಿಸಿಕೊಳ್ಳುವ ಮಂಡ್ಯ, ಹಾಸನ, ದಾವಣಗೆರೆ, ಹುಬ್ಬಳ್ಳಿಯಲ್ಲೂ ಕೂಡ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ.ಗಾಂಧಿನಗರದ ಪಂಡಿತರ ಪ್ರಕಾರ ಸಿನಿಮಾ ಏನಿಲ್ಲ ಅಂದ್ರು 3 ದಿನಗಳಲ್ಲಿ 20 ರಿಂದ 22 ಕೋಟಿ ಕಲೆಕ್ಷನ್ಸ್ ಮಾಡಿದ್ದು, ಇದು ಇಲ್ಲಿಗೆ ನಿಲ್ಲುವ ಲಕ್ಷಣಗಳಿಲ್ಲ ಎನ್ನುತ್ತಾರೆ.
ಚಿತ್ರತಂಡದ 3 ವರ್ಷದ ಪರಿಶ್ರಮಕ್ಕೆ ತಕ್ಕ ಪ್ರತಿಕ್ರಿಯೆ ಸಿಕ್ಕಿದ್ದು, ತಂಡದ ಸಂತಸಕ್ಕೆ ಕಾರಣವಾಗಿದೆ.
Continue Reading