Connect with us

Movie Reviews

ಸಾರ್ವಜನಿಕರಿಗೆ ಇದು ನಿಜಕ್ಕೂ ಸುವರ್ಣಾವಕಾಶ -ಚಿತ್ರ ವಿಮರ್ಷೆ – ರೇಟಿಂಗ್ – 3.5/5

Published

on

ಸಿನಿಮಾ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಿರ್ದೇಶನ: ಅನೂಪ್‌ ರಾಮಸ್ವಾಮಿ ಕಶ್ಯಪ್‌
ನಿರ್ಮಾಣ: ದೇವರಾಜ್‌.ಆರ್‌, ಪ್ರಶಾಂತ್‌ ರೆಡ್ಡಿ, ಜನಾರ್ಧನ್‌ ಚಿಕ್ಕಣ್ಣ
ಕ್ಯಾಮೆರಾ: ವಿಘ್ನೇಶ್‌ ರಾಜ್‌
ಸಂಗೀತ: ಮಿಥುನ್‌ ಮುಕುಂದನ್‌
ತಾರಾಗಣ: ರಿಷಿ, ಧನ್ಯಾ ಬಾಲಕೃಷ್ಣ, ಸಿದ್ದು ಮೂಲಿಮನೆ, ದತ್ತಣ್ಣ, ರಂಗಾಯಣ ರಘು, ಮಿತ್ರ, ಶಾಲಿನಿ.

ರೇಟಿಂಗ್‌: 3.5/5.

 

ಸಾಮಾನ್ಯರ ಬದುಕಿನಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಅದು ಜನರಿಗೆ ಹತ್ತಿರವಾಗುತ್ತದೆ. ಅಂತಹ ಹಲವು ದೃಶ್ಯಗಳನ್ನು ಪೋಣಿಸಿ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾವಾಗಿಸಿದ್ದಾರೆ ನಿರ್ದೇಶಕರು.

ಕಥಾನಾಯಕ ವೇದಾ [ರಿಷಿ] ಮತ್ತು ನಾಯಕಿ ಜಾನು[ಧನ್ಯ] ಇಬ್ಬರಿಗೂ ಸಾಮಾನ್ಯರ ಮನೆಯಲ್ಲಿ ಇರುವಂತಹ ಸಮಸ್ಯೆಗಳು ಎದುರಾಗುತ್ತವೆ. ಅವನ್ನು ಅವರಿಬ್ಬರೂ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ಕಥೆ. ಈ ನಡುವೆ ನಡೆಯುವ ಅಷ್ಟು ದೃಶ್ಯಗಳು ಪ್ರೇಕ್ಷಕನನ್ನು ಎಂಟರ್ ಟೇನ್‌ ಮಾಡುತ್ತವೆ. ಸಮಸ್ಯೆಗಳ ನಡುವೆ ಅವರಿಬ್ಬರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಬಗೆ, ಪಾಲಕರ ಪ್ರೀತಿ, ಹೀಗೆ ಸಾಕಷ್ಟು ವಿಚಾರಗಳು ಸಿನಿಮಾದಲ್ಲಿ ಬಂದು ಹೋಗುತ್ತವೆ. ಇದೇ ಸಾರ್ವಜನಿಕರಿಗೆ ಸುವರ್ಣಾವಕಾಶವಾಗಿದೆ. ಇದರಲ್ಲಿ ಯಾವುದೇ ಅಬ್ಬರ ಇಲ್ಲ, ಮಾಸ್‌ ಫೈಟ್‌ ಇಲ್ಲ ಆದರೂ ಚಿತ್ರದಲ್ಲಿ ಏನೋ ಇದೆ.

ನಾಯಕ ನಟ ರಿಷಿ ಫೈಟ್‌ , ಡಾನ್ಸ್‌ ಮಾಡುತ್ತಾರೆ, ಲವ್‌ ಮಾಡುತ್ತಾರೆ, ಜತಗೆ ಭಾವನಾತ್ಮಕವಾಗಿಯೂ ನಟಿಸಿದ್ದಾರೆ. ಈ ಎಲ್ಲ ಅಂಶಗಳ ಮೂಲಕ ಅವರ ಪ್ರೇಕ್ಷಕರ ಗಮನವನ್ನು ತನ್ನತ್ತ ಹಿಡಿದಿಡುತ್ತಾರೆ. ಧನ್ಯಾ ಬಾಲಕೃಷ್ಣಗೆ ಇದು ಕನ್ನಡದ ಮೊದಲ ಸಿನಿಮಾ ಆಗಿದ್ದರೂ, ಪರ್‌ಫೆಕ್ಟ್‌ ಆಗಿ ನಟಿಸಿದ್ದಾರೆ.

 

ದತ್ತಣ್ಣ, ಶಾಲಿನಿ, ರಂಗಾಯಣ ರಘು, ಮಿತ್ರ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.

ಸಿನಿಮಾದ ಫಸ್ಟ್‌ ಹಾಫ್‌ನಲ್ಲಿ ಅಂತಹ ಹೇಳಿಕೊಳ್ಳುವಂತಹ ಕಥೆ ಇಲ್ಲದೇ ಹೋದರೂ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಇನ್ನೊಂದಿಷ್ಟ ಎಫೆಕ್ಟೀವ್‌ ಆಗಿ ಮೂಡಿ ಬರಬೇಕಿತ್ತು ಎನಿಸುವಂತಹ ದೃಶ್ಯಗಳು ಸಹ ಇವೆ. ಆದರೂ ಒಮ್ಮೆ ಈ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.

Spread the love

ಸಿನಿಮಾ: ಸಾರ್ವಜನಿಕರಿಗೆ ಸುವರ್ಣಾವಕಾಶ
ನಿರ್ದೇಶನ: ಅನೂಪ್‌ ರಾಮಸ್ವಾಮಿ ಕಶ್ಯಪ್‌
ನಿರ್ಮಾಣ: ದೇವರಾಜ್‌.ಆರ್‌, ಪ್ರಶಾಂತ್‌ ರೆಡ್ಡಿ, ಜನಾರ್ಧನ್‌ ಚಿಕ್ಕಣ್ಣ
ಕ್ಯಾಮೆರಾ: ವಿಘ್ನೇಶ್‌ ರಾಜ್‌
ಸಂಗೀತ: ಮಿಥುನ್‌ ಮುಕುಂದನ್‌
ತಾರಾಗಣ: ರಿಷಿ, ಧನ್ಯಾ ಬಾಲಕೃಷ್ಣ, ಸಿದ್ದು ಮೂಲಿಮನೆ, ದತ್ತಣ್ಣ, ರಂಗಾಯಣ ರಘು, ಮಿತ್ರ, ಶಾಲಿನಿ.

ರೇಟಿಂಗ್‌: 3.5/5.

 

ಸಾಮಾನ್ಯರ ಬದುಕಿನಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಅದು ಜನರಿಗೆ ಹತ್ತಿರವಾಗುತ್ತದೆ. ಅಂತಹ ಹಲವು ದೃಶ್ಯಗಳನ್ನು ಪೋಣಿಸಿ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾವಾಗಿಸಿದ್ದಾರೆ ನಿರ್ದೇಶಕರು.

ಕಥಾನಾಯಕ ವೇದಾ [ರಿಷಿ] ಮತ್ತು ನಾಯಕಿ ಜಾನು[ಧನ್ಯ] ಇಬ್ಬರಿಗೂ ಸಾಮಾನ್ಯರ ಮನೆಯಲ್ಲಿ ಇರುವಂತಹ ಸಮಸ್ಯೆಗಳು ಎದುರಾಗುತ್ತವೆ. ಅವನ್ನು ಅವರಿಬ್ಬರೂ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ಕಥೆ. ಈ ನಡುವೆ ನಡೆಯುವ ಅಷ್ಟು ದೃಶ್ಯಗಳು ಪ್ರೇಕ್ಷಕನನ್ನು ಎಂಟರ್ ಟೇನ್‌ ಮಾಡುತ್ತವೆ. ಸಮಸ್ಯೆಗಳ ನಡುವೆ ಅವರಿಬ್ಬರೂ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಬಗೆ, ಪಾಲಕರ ಪ್ರೀತಿ, ಹೀಗೆ ಸಾಕಷ್ಟು ವಿಚಾರಗಳು ಸಿನಿಮಾದಲ್ಲಿ ಬಂದು ಹೋಗುತ್ತವೆ. ಇದೇ ಸಾರ್ವಜನಿಕರಿಗೆ ಸುವರ್ಣಾವಕಾಶವಾಗಿದೆ. ಇದರಲ್ಲಿ ಯಾವುದೇ ಅಬ್ಬರ ಇಲ್ಲ, ಮಾಸ್‌ ಫೈಟ್‌ ಇಲ್ಲ ಆದರೂ ಚಿತ್ರದಲ್ಲಿ ಏನೋ ಇದೆ.

ನಾಯಕ ನಟ ರಿಷಿ ಫೈಟ್‌ , ಡಾನ್ಸ್‌ ಮಾಡುತ್ತಾರೆ, ಲವ್‌ ಮಾಡುತ್ತಾರೆ, ಜತಗೆ ಭಾವನಾತ್ಮಕವಾಗಿಯೂ ನಟಿಸಿದ್ದಾರೆ. ಈ ಎಲ್ಲ ಅಂಶಗಳ ಮೂಲಕ ಅವರ ಪ್ರೇಕ್ಷಕರ ಗಮನವನ್ನು ತನ್ನತ್ತ ಹಿಡಿದಿಡುತ್ತಾರೆ. ಧನ್ಯಾ ಬಾಲಕೃಷ್ಣಗೆ ಇದು ಕನ್ನಡದ ಮೊದಲ ಸಿನಿಮಾ ಆಗಿದ್ದರೂ, ಪರ್‌ಫೆಕ್ಟ್‌ ಆಗಿ ನಟಿಸಿದ್ದಾರೆ.

 

ದತ್ತಣ್ಣ, ಶಾಲಿನಿ, ರಂಗಾಯಣ ರಘು, ಮಿತ್ರ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.

ಸಿನಿಮಾದ ಫಸ್ಟ್‌ ಹಾಫ್‌ನಲ್ಲಿ ಅಂತಹ ಹೇಳಿಕೊಳ್ಳುವಂತಹ ಕಥೆ ಇಲ್ಲದೇ ಹೋದರೂ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಇನ್ನೊಂದಿಷ್ಟ ಎಫೆಕ್ಟೀವ್‌ ಆಗಿ ಮೂಡಿ ಬರಬೇಕಿತ್ತು ಎನಿಸುವಂತಹ ದೃಶ್ಯಗಳು ಸಹ ಇವೆ. ಆದರೂ ಒಮ್ಮೆ ಈ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.

Spread the love
Continue Reading
Click to comment

Leave a Reply

Your email address will not be published. Required fields are marked *

Movie Reviews

ಸದ್ದು ವಿಚಾರಣೆ ನಡೆಯುತ್ತಿದೆ ಕನ್ನಡ ಚಿತ್ರ ವಿಮರ್ಶೆ

Published

on

By

ಕನ್ನಡ ಚಿತ್ರ: ಸದ್ದು ವಿಚಾರಣೆ ನಡೆಯುತ್ತಿದೆ
ನಿರ್ದೇಶನ: ಭಾಸ್ಕರ್‌ ನೀನಾಸಂ
ನಿರ್ಮಾಣ: ಸುರಭಿ ಲಕ್ಷ್ಮಣ್‌
ಸಂಗೀತ: ಸಚಿನ್‌ ಬಸ್ರೂರು
ಸಿನಿಮಾಟೋಗ್ರಫಿ: ರಾಜ್‌ಕಾಂತ್‌ ಎಸ್‌ ಕೆ
ಕಲಾವಿದರು: ರಾಕೇಶ್‌ ಮಯ್ಯ, ಪಾವನ, ಮಧುನಂದನ್‌, ರಾಘು ಶಿವಮೊಗ್ಗ, ಜಹಾಂಗೀರ್‌, ಅಚ್ಯುತ್‌ ಕುಮಾರ್‌ ಮತ್ತಿತರರು.
ರೇಟಿಂಗ್‌:***1/2

 

ಹೊಸ ನಿರ್ದೇಶಕರ ಸಿನಿಮಾಗಳು ಇತ್ತೂಚೆ ಹೆಚ್ಚು ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಈಗ ‘ ಸದ್ದು ವಿಚಾರಣೆ’ ನಡೆಯುತ್ತದೆ ಸಹ ಸೇರಿಕೊಂಡಿದೆ.
ಕಾಣೆಯಾದ ಯುವ ಜೋಡಿಗಳನ್ನು ಹುಡುಕುವ ಥ್ರಿಲ್ಲಿಂಗ್ ಪ್ರಕ್ರಿಯೆಯೇ ಈ ಸಿನಿಮಾದ ಕಥೆ. ಆ ಯುವ ಜೋಡಿ ಯಾಕೆ ಕಳೆದು ಹೋಗಿರುತ್ತಾರೆ. ಅದರ ಹಿಂದೆ ಯಾರಿದ್ದಾರೆ ಎಂಬೆಲ್ಲವೂ ಚಿತ್ರಕಥೆಯಲ್ಲಿದೆ. ಇದು ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿದೆ. 

ನಿರ್ದೇಶಕರು ಇಲ್ಲಿ ತನಿಖೆಯ ಕಥೆಯ ಜತೆಗೆ ಜಾತಿ ಜಗಳ, ಗಂಡ ಹೆಂಡತಿ ಜಗಳ, ಹೀಗೆ ಹಲವು ವಿಷಯಗಳನ್ನು ತೋರಿಸಿದ್ದಾರೆ. ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪ್ರೇಕ್ಷಕನಿಗೆ ಎಲ್ಲಿಯೂ ಗೊಂದಲ ಮೂಡಿಸುವುದಿಲ್ಲ. ಥ್ರಿಲ್ಲರ್ ಜಾನರ್ ನಲ್ಲಿ ಯಾವಾಗ್ಲೂ ಚಿತ್ರಕಥೆ ಬಹಳ ಮುಖ್ಯವಾಗುತ್ತದೆ. ಅದು ಇಲ್ಲಿ ಬಹಳ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ.

ಇಬ್ಬರು ಕಳೆದು ಹೋಗಿರುವವರ ಹುಡುಕಾಟವೇ ಸಿನಿಮಾದ ಜೀವಾಳ, ಹುಡುಕಾಟದ ಪ್ರತಿ ದೃಶ್ಯವೂ ಕುತೂಹಲ ಕಾರಿಯಾಗಿ ಮೂಡಿ ಬಂದಿದೆ.ಇದೆಲ್ಲವೂ ಸೇರಿ ಸಿನಿಮಾ ಸದ್ದು ಒಂದು ಹೊಸ ರೀತಿಯ ನಿರೂಪಣೆ ಇರುವ ಸಿನಿಮಾ ಎನಿಸಿಕೊಳ್ಳುತ್ತದೆ.

ತನಿಖಾಧಿಕಾರಿಯ ಪಾತ್ರಧಾರಿ ಮಧುನಂದನ್‌ ಮತ್ತು ಖಳ ನಟ ರಾಘು ಶಿವಮೊಗ್ಗ ಇಡೀ ಸಿನಿಮಾಗೆ ಬೇರೆಯದ್ದೆ ಕಳೆ ಕೊಟ್ಟಿದ್ದಾರೆ. ಇಬ್ಬರೂ ಇರುವ ಪ್ರತಿ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಮಧುನಂದನ್ ಮೊದಲ ಬಾರಿಗೆ ನಟಿಸಿದ್ದರೂ, ಹಾಗೆ ಅನ್ನಿಸುವುದಿಲ್ಲ. ರಾಘು ಸಹ ತಮ್ಮ ಪಾತ್ರದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ರಾಕೇಶ್ ಮಯ್ಯ, ಪಾವನ ಗೌಡ ಸಹ ಉತ್ತಮ‌ವಾಗಿ ನಟಿಸಿದ್ದಾರೆ. ನಟ ಅಚ್ಯುತ್‌ ಕುಮಾರ್‌ . ಜಹಾಂಗೀರ್‌ ಮತ್ತು ಕಾನ್‌ಸ್ಟೇಬಲ್‌ ರಾಮಚಂದ್ರಪ್ಪ ಪಾತ್ರಧಾರಿ ಹೀಗೆ ಎಲ್ಲಾಕಲಾವಿದರು ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಂಗೀತ, ಸಿನಿಮಾಟೋಗ್ರಫಿ ಎಲ್ಲವೂ ಚಿತ್ರದ ಕಥೆಗೆ ಪೂರಕವಾಗಿದೆ. ಸಾಮಾನ್ಯವಾಗಿ ಥ್ರಿಲ್ಲರ್ ಮತ್ತು ಇನ್ವೆಸ್ಟಿಗೇಶನ್ ಥ್ರಿಲ್ಲರ್ ಗಳಲ್ಲಿ ಕೊಂಚ ರಾ ರೀತಿಯ ದೃಶ್ಯಗಳಿರುತ್ತವೆ. ಇಲ್ಲಿ ಅದಾವುದು ಇಲ್ಲ ಮುಜುಗರವಿಲ್ಲದೆ ಕುಟುಂಬ ಸಮೇತ ಕೂತು ಈ ಸಿನಿಮಾವನ್ನು ನೋಡಬಹುದು.

Spread the love
Continue Reading

Movie Reviews

ಇವ್ನು ಪಕ್ಕಾ ‘ಜಂಟಲ್‌ಮನ್‌’ – ಚಿತ್ರ ವಿಮರ್ಶೆ – PopcornKannada ರೇಟಿಂಗ್ : 4/5

Published

on

By

ಚಿತ್ರ: ಜಂಟಲ್‌ಮನ್‌

ನಿರ್ದೇಶಕ: ಜಡೇಶ್‌ಕುಮಾರ್ ಹಂಪಿ

ಸಂಗೀತ: ಅಜನೀಶ್‌ ಲೋಕನಾಥ್‌

ನಿರ್ಮಾಪಕ: ಗುರುದೇಶಪಾಂಡೆ

ತಾರಾಗಣ: ಪ್ರಜ್ವಲ್‌ ದೇವರಾಜ್‌, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್‌ ಮತ್ತಿತರರು.

ರೇಟಿಂಗ್‌: 4/5.

 

ಸಾಮಾನ್ಯ ಮನುಷ್ಯ 8 ರಿಂದ 10 ಗಂಟೆಗಳ ಕಾಲ ನಿದ್ರಿಸುತ್ತಾನೆ. ಆದರೆ ಈ ವಾರ ರಿಲೀಸ್‌ ಆಗಿರುವ ಜಂಟಲ್‌ಮನ್‌ ಸಿನಿಮಾದ ನಾಯಕ ಬರೋಬ್ಬರಿ 18 ಗಂಟೆ ನಿದ್ರಿಸುತ್ತಾನೆ. ಎದ್ದಿರುವುದು ಬರೀ 6 ಗಂಟೆ. ಈ ಸ್ಟೋರಿ ಲೈನ್‌ ಕೇಳುವುದಕ್ಕೆ ಥ್ರಿಲ್‌ ಆಗಿದೆ, ಅಂತಹದ್ರಲ್ಲಿ ಇಂತಹ ಸ್ಟೋರಿ ಲೈನ್‌ಗೆ ಕಲಾವಿದರ ಅದ್ಭುತ ನಟನೆ, ಓಹೋ ಎನಿಸುವ ಮೇಕಿಂಗ್‌, ಉತ್ತಮ ಹಾಡುಗಳು, ಎಲ್ಲವೂ ಸೇರಿಕೊಂಡರೆ ಅದು ಜಂಟಲ್‌ಮನ್‌ ಸಿನಿಮಾವಾಗುತ್ತದೆ. ಬರೀ ನಾಯಕನ ನಿದ್ರೆಯಷ್ಟೇ ಸ್ಟೋರಿ ಲೈನ್‌ ಅಲ್ಲ, ಅದರ ಜತೆಗೆ ಇನ್ನೊಂದು ವಿಶೇಷವಾದ ಅಂಶ ಸಿನಿಮಾದಲ್ಲಿದೆ ಅದೇನು ಎಂಬುದನ್ನು ಚಿತ್ರಮಂದಿರದಲ್ಲಿಯೇ ನೊಡಬೇಕು.

 

ಸಿನಿಮಾವೊಂದರಲ್ಲಿ ಒಳ್ಳೆ ಕಥೆ ಇದ್ದರೆ ಅಷ್ಟೇ ಸಾಲದು, ಆ ಕಥೆಯನ್ನು ತೆರೆ ಮೇಲೆ ಅದ್ಭುತವಾಗಿ ತಂದರೆ ಮಾತ್ರ ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಹಾಗಾಗಿ ಜಂಟಲ್‌ ಮನ್‌ ಚಿತ್ರದಲ್ಲಿ ಅದ್ಭುತ ಕಥೆಯ ಜತೆಗೆ, ಚಿತ್ರಕಥೆಯೂ ಪ್ರೇಕ್ಷಕನನ್ನು ಸೆಳೆಯುತ್ತದೆ. ಈ ಅದ್ಭುತವಾದ ಚಿತ್ರಕಥೆಗೆ ಎಲ್ಲ ಕಲಾವಿದರು ತಮ್ಮ ಶಕ್ತಿ ಮೀರಿ ನಟಿಸಿ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ.

 

ಬಹಳ ದಿನಗಳ ನಂತರ ಪ್ರಜ್ವಲ್‌ ದೇವರಾಜ್‌ ಉತ್ತಮ ಪರ್ಫಾಮೆನ್ಸ್‌ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಸಹ ಗಮನ ಸೆಳೆಯುತ್ತಾರೆ. ಇನ್ನು ಸಂಚಾರಿ ವಿಜಯ್‌ ಸಹ ನಿರ್ದೇಶಕರ ಪರಿಕಲ್ಪನೆಯನ್ನು ತೆರೆ ಮೇಲೆ ಅದ್ಭುತವಾಗಿ ತಂದಿದ್ದಾರೆ. ಹೊಸ ನಿರ್ದೇಶಕರ ಕನಸನ್ನು ಗುರುದೇಶಪಾಂಡೆ ಸಂಪೂರ್ಣವಾಗಿ ಈಡೇರಿಸಲು ಪ್ರಯತ್ನ ಪಟ್ಟಿದ್ದಾರೆ. ಈ ವಾರಾಂತ್ಯದಲ್ಲಿ ಜಂಟಲ್‌ಮನ್‌ನನ್ನು ಒಮ್ಮೆ ಕಣ್ತುಂಬಿಕೊಳ್ಳಲೇಬೇಕು. 

 

 

Spread the love
Continue Reading

Movie Reviews

ಪಾಂಡೆ ಜತೆ ಖಡಕ್‌ ಬಾಲಿಸಿಂಗ್ – ದಬಾಂಗ್ ಚಿತ್ರ ವಿಮರ್ಶೆ – 3.5/5

Published

on

By

ಕನ್ನಡ ಚಿತ್ರ: ದಬಾಂಗ್‌-3
ನಿರ್ದೇಶನ: ಪ್ರಭುದೇವ
ನಿರ್ಮಾಣ: ಸಲ್ಮಾನ್‌ ಖಾನ್‌, ಅರ್ಬಾಜ್‌ ಖಾನ್‌
ಸಂಗೀತ: ಸಾಜಿದ್‌-ವಾಜಿದ್‌
ಸಿನಿಮಾಟೋಗ್ರಫಿ
ತಾರಾಗಣ: ಸಲ್ಮಾನ್‌ಖಾನ್‌, ಸುದೀಪ್‌, ಸಾಯಿ ಮಂಜ್ರೇಕರ್‌, ಸೋನಾಕ್ಷಿ ಸಿನ್ಹಾ, ಮತ್ತಿತರರು
ರೇಟಿಂಗ್‌ : 3.5/5.

 

 

ಸಲ್ಮಾನ್‌ಖಾನ್‌ ರ ಹಿಂದಿನ ಎರಡು ದಬಾಂಗ್‌ ಗಳು ಸೂಪರ್ ಹಿಟ್‌ ಹಾಗಾಗಿ ಅವರು ಮೂರನೇ ದಬಾಂಗ್‌ನ್ನು ತೆರೆ ಮೇಲೆ ತಂದಿದ್ದು, ತಾವೇ ಸ್ವತಃ ಕಥೆಯನ್ನು ಬರೆದಿದ್ದಾರೆ. ಇದರ ಜತೆಗೆ ಸುದೀಪ್‌ ನಟಿಸಿದ್ದರು ಈ ಎಲ್ಲಾ ಕಾರಣಗಳಿಂದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿತ್ತು. ಅದರಂತೆ ತೆರೆ ಮೇಲೂ ಸಹ ದಬಾಂಗ್‌ ದರ್ಬಾರ್‌ ಜೋರಾಗಿದೆ.
ಸಿನಿಮಾ ಶುರುವಿನಿಂದ ಆರಂಭವಾಗುವ ಎಂಟರ್‌ಟೇನ್‌ಮೆಂಟ್‌ ಕೊನೆಯವರೆಗೂ ಭರ್ಜರಿಯಾಗಿ ಸಿಗುತ್ತದೆ. ಯಾವುದೇ ಲಾಜಿಕ್‌ಗಳಿಲ್ಲದೇ, ಪ್ರೇಕ್ಷಕರನ್ನು ರಂಜಿಸಲೇಂದೆ ಸಲ್ಲು ಈ ಕಥೆಯನ್ನು ಬರೆದಿದ್ದಾರೆ.

 

 

ಈ ಸಿನಿಮಾದಲ್ಲಿ ಮಾಮೂಲಿ ಸಿನಿಮಾಗಳಲ್ಲಿರುವಂತೆ ದ್ವೇಷ, ಫ್ಯಾಮಿಲಿ ಸೆಂಟಿಮೆಂಟ್‌, ಒಂದು ಲವ್‌ ಖಡಕ್‌ ವಿಲನ್‌ ಸೇರಿದಂತೆ ಎಲ್ಲವೂ ಇದೆ ಅದರ ಜತೆಗೆ ಹೇರಳವಾದಿ ಮನರಂಜನೆ ಇದೆ, ಜತೆಗೆ ಸ್ಟೈಲಿಷ್‌ ಆಗಿ ಮತ್ತು ಖಡಕ್‌ ಆಗಿ ನಟಿಸಿರುವ ಕಿಚ್ಚ ಸುದೀಪ್‌ ಇದ್ದಾರೆ. ಅವರಿಗೆ ಟಕ್ಕರ್‌ ಕೊಡಲು ಸಲ್ಮಾನ್ ಖಾನ್‌ ಇದ್ದಾರೆ ಜತೆಗೆ ಈ ಚಿತ್ರ ಉತ್ತಮ ಡಬ್ಬಿಂಗ್‌ ಕ್ವಾಲಿಟಿಯೊಂದಿಗೆ ಕನ್ನಡ ಭಾಷೆಯಲ್ಲಿ ರಿಲೀಸ್‌ ಆಗಿದೆ ಈ ಎಲ್ಲ ಕಾರಣಗಳಿಂದ ದಬಾಂಗ್‌3ಯನ್ನು ಕನ್ನಡಿಗರು ನೋಡಬೇಕು.

 

 

ಚುಲ್‌ಬುಲ್‌ ಪಾಂಡೆ, ಪೊಲೀಸ್‌ ಅಧಿಕಾರಿಯಾಗಿದ್ದೇಗೆ, ಅವನ ಫ್ಲ್ಯಾಶ್‌ ಬ್ಯಾಕ್‌ ಏನು ಎಂಬುದು ಈ ಬಾರಿ ಅನಾವರಣಗೊಂಡಿದೆ. ಸಲ್ಮಾನ್‌ಖಾನ್‌ ಯುವಕನಾಗಿಯೂ ಇಷ್ಟವಾಗುತ್ತಾರೆ, ಜವಬ್ದಾರಿಯುತ ಪೊಲೀಸ್‌ ಅಧಿಕಾರಿಯಾಗಿಯೂ ಇಷ್ಟವಾಗುತ್ತಾರೆ. ಇನ್ನು ಸಿನಿಮಾದ ಎಲ್ಲ ಕಲಾವಿದರಿಗೆ ಕನ್ನಡ ಸಿನಿಮಾ ನಟರು ಡಬ್ಬಿಂಗ್‌ ಮಾಡಿರುವುದರಿಂದ ಸಿನಿಮಾ ನಮಗಿನ್ನೂ ಹತ್ತಿರವಾಗುತ್ತದೆ.

 

 

ಗುರುದತ್‌ ಗಾಣಿಗ ಕನ್ನಡ ಸಂಭಾಷಣೆಯನ್ನು , ಅನೂಪ್‌ ಭಂಡಾರಿ ಕನ್ನಡ ಹಾಡನ್ನು ಅದ್ಭುತವಾಗಿ ಬರೆದಿದ್ದಾರೆ. ಇವರಿಬ್ಬರೇ ಈ ಸಿನಿಮಾವನ್ನು ಕನ್ನಡವಾಗಿಸಿರುವುದು. ಸೋನಾಕ್ಷಿ ಸಿನ್ಹಾಗಿಂತಲೂ ಸಾಯಿ ಮಂಜ್ರೇಕರ್‌ ಗಮನ ಸೆಳೆಯುತ್ತಾರೆ. ಸಾಜಿದ್‌ ವಾಜಿದ್‌ರ ಸಂಗೀತವೂ ಎಲ್ಲರಿಗೆ ಇಷ್ಟವಾಗುತ್ತದೆ. ಪ್ರಭುದೇವ ನಿರ್ದೇಶನವನ್ನು ಸಮರ್ಥವಾಗಿ ಮಾಡಿದ್ದಾರೆ, ಆದರೆ ಸಿನಿಮಾದ ಫಸ್ಟ್‌ ಹಾಫ್‌ನ್ನು ಇನ್ನಷ್ಟು ಕಡಿಮೆ ಮಾಡಿದ್ದರೆ ಖದರ್‌ ಕೊಂಚ ಹೆಚ್ಚಾಗುತ್ತಿತ್ತು. ಒಂದಷ್ಟು ಮೈನೆಸ್‌ ಪಾಯಿಂಟ್‌ಗಳಿದ್ದರೂ ಸಿನಿಮಾವನ್ನು ಒಮ್ಮೆ ನೋಡಬಹುದು.

Spread the love
Continue Reading

Movie Reviews

‘ಬಬ್ರೂ’ವಿನ ಜರ್ನಿಯಲ್ಲಿ ಟ್ವಿಸ್ಟ್‌, ಟರ್ನಿಂಗ್‌ಗಳದ್ದೇ ಕಾರುಬಾರು – ಚಿತ್ರ ವಿಮರ್ಶೆ – ರೇಟಿಂಗ್ – 3.5/5

Published

on

By

ಚಿತ್ರ: ಬಬ್ರೂ

ನಿರ್ದೇಶನ: ಸುಜಯ್‌ ರಾಮಯ್ಯ

ನಿರ್ಮಾಣ: ಸುಮನ್‌ ನಗರ್‌ಕರ್‌

ಸಂಗೀತ:  ಪೂರ್ಣಚಂದ್ರ ತೇಜಸ್ವಿ

ಕಲಾವಿದರು: ಸುಮನ್‌ ನಗರ್‌ಕರ್‌ , ಮಹಿ ಹಿರೇಮಠ್‌

ರೇಟಿಂಗ್ : 3.5/5.

 

 

ಇಬ್ಬರು ಬೇರೆ ಬೇರೆ ಕೆಲಸಗಳಿಗೆ ಹೊರಡುವ ವ್ಯಕ್ತಿಗಳು ಒಂದೇ ಕಾರ್‌ನಲ್ಲಿ ದೂರದ ಪ್ರಯಾಣ ಬೆಳೆಸಬೇಕಾಗುತ್ತದೆ. ಈ ಪ್ರಯಾಣ ಆರಂಭದಲ್ಲಿ ಸಿಹಿಯಾಗಿದ್ದರೆ, ಹೋಗ್ತಾ ಹೋಗ್ತಾ ಟ್ವಿಸ್ಟ್‌ ಮತ್ತು ಟರ್ನಿಂಗ್‌ಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತದೆ. ಆ ಟ್ವಿಸ್ಟ್‌ ಗಳೇ ಈ  ಬಬ್ರೂವಿನ ಕಥಾ ಸಾರಾಂಶ.

 

ಸನಾ [ಸುಮನ್‌ ನಗರ್‌ಕರ್‌] ಕೌಟುಂಬಿಕ ತಾಪತ್ರಯಗಳಿದ್ದರೂ, ದೂರ ಪ್ರಯಾಣಕ್ಕೆ ಹೊರಟು ನಿಂತಿರುತ್ತಾರೆ. ಇಂತಹ ಸನಾಗೆ ಜತೆಯಾಗುವುದು ತನ್ನ ಪ್ರೇಮವನ್ನು ಹೇಳಿಕೊಳ್ಳಬೇಕು ಎಂಬ ತವಕ ಇವರಿಬ್ಬರು ಕೆನಡಾಗೆ ಹೊರಟಿರುತ್ತಾರೆ. ಈ ಪ್ರಯಾಣದಲ್ಲಿ ಇಬ್ಬರಿಗೂ ಒಂದಷ್ಟು ಅನುಭವಗಳಾಗುತ್ತವೆ. ಆದರೆ ಕೆನಡಾದ ಜರ್ನಿ ಮಾತ್ರ ಅದ್ಭುತವಾಗಿದೆ. ಸಾಮಾನ್ಯವಾಗಿ ಪ್ರೇಕ್ಷಕ ಜರ್ನಿ ಎಂದರೆ ಬೇಗ ಕನೆಕ್ಟ್‌ ಆಗುತ್ತಾನೆ. ಇಲ್ಲಿ ಕೂಡಾ ಅದೇ ಆಗುತ್ತದೆ. ಒಂದು ರೋಚಕವಾದ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಲೇ, ಅಮೇರಿಕಾದ ಸುಂದರ ತಾಣಗಳನ್ನು ತೋರಿಸುವ ಪ್ರಯತ್ನ ಮಾಡಿದೆ ಚಿತ್ರತಂಡ.

 

 

 

ಪರಿಚಯವೇ ಇರದ ಸನಾ ಮತ್ತು ಅರ್ಜುನ್‌ ಪ್ರಯಾಣದಲ್ಲಿ ಆತ್ಮೀಯರಾಗುತ್ತಾರೆ. ಇವರ ಈ ಇಬ್ಬರ ಪ್ರಯಾಣಕ್ಕೆ ಮತ್ತೊಬ್ಬ ಮಧ್ಯದಲ್ಲಿ ಬಂದು ಸೇರಿಕೊಂಡು ಸಿನಿಮಾ ಮತ್ತೊಂದು ಮಗ್ಗಲಿಗೆ ಹೊರಳುತ್ತದೆ. ಇದೆಲ್ಲದರ ನಡುವೆ ಪರಿಚಯವೇ ಇಲ್ಲದ ಈ ಮೂವರಿಗೊಬ್ಬ ವೈರಿ ಇರುತ್ತಾನೆ, ಅವನಾರು ಎಂಬುದೇ ಸಿನಿಮಾದ ಟ್ವಿಸ್ಟು. ಆ ಟ್ವಿಸ್ಟನ್ನು ಸಿನಿಮಾದಲ್ಲಿಯೇ ನೋಡಿ.

 

ನಿರ್ದೇಶಕ ಸುಜಯ್‌ ರಾಮಯ್ಯ ಬಹಳ ವಿಶೇಷ ಕಥೆಯನ್ನು ಬಹಳ ಸೂಕ್ಷ್ಮವಾಗಿ ಹ್ಯಾಂಡಲ್‌ ಮಾಡಿದ್ದಾರೆ. ಅದಕ್ಕೆ ಸಾಥ್‌ ನೀಡಿರುವುದು ಹೂಮಳೆ ಬೆಡಗಿ ಸುಮನ್‌ ನಗರ್‌ಕರ್‌ ,ಮಹಿ ಹಿರೇಮಠ್‌ , ಮತ್ತು ಹಾಲಿವುಡ್ ನಟ ರೇ ಟೊಸ್ಟಾಡೋ. ಗಾನ ಭಟ್‌  ಚಿಕ್ಕ ಪಾತ್ರವಾದರೂ ಚೊಕ್ಕದಾಗಿ ನಟಿಸಿದ್ದಾರೆ. ಇನ್ನು ಸಂಗೀತ, ಸಿನಿಮಾಟೋಗ್ರಫಿ ಎಲ್ಲವೂ ಸಿನಿಮಾಗೆ ಪೂರಕವಾಗಿದೆ.

ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಬೆಳ್ಳಿತೆರೆಗೆ ಬಂದಿರುವ ಬೆಳದಿಂಗಳ ಬೆಡಗಿ ನಿಮ್ಮನ್ನು ನಿರಾಸೆ ಮೂಡುವುದಿಲ್ಲ.

 

Spread the love
Continue Reading

Movie Reviews

ದೆವ್ವದ ಜತೆ ‘ಗಿಮಿಕ್‌’ ಮಾಡ್ತಾರೆ ಗಣೇಶ್‌ – ಸಿನಿಮಾ ವಿಮರ್ಶೆ – ರೇಟಿಂಗ್ – 2.5/5 !

Published

on

By

ಚಿತ್ರ: ಗಿಮಿಕ್‌

ನಿರ್ಮಾಣ: ದೀಪಕ್‌

ನಿರ್ದೇಶನ: ನಾಗಣ್ಣ

ಸಂಗೀತ: ಅರ್ಜುನ್‌ ಜನ್ಯ

ತಾರಾಗಣ : ಗಣೇಶ್‌, ರೋನಿಕಾ ಸಿಂಗ್‌, ಸುಂದರರಾಜ್‌, ಶೋಭರಾಜ್‌, ಮಂಡ್ಯರಮೇಶ್‌, ಚಿ. ಗುರುದತ್‌, ರವಿಶಂಕರ್‌ಗೌಡ, ಸಂಗೀತಾ

ರೇಟಿಂಗ್‌: 2.5/5.

 

 

ಕೆಲ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾರರ್‌ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬರೀ ಹೊಸಬರೇ ಹಾರರ್‌ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ಹೆದರಿಸುತ್ತಿದ್ದರು ಆ ಸಾಲಿಗೆ ಹೊಸ ಸೇರ್ಪಡೆ ಗೋಲ್ಡನ್‌ ಸ್ಟಾರ್‌ ಗಣೇಶ್‌. ಆದರೆ ಗಣೇಶ್‌ ಬರಿ ಹೆದರಿಸುವುದಿಲ್ಲ, ಕೊಂಚ ನಗಿಸಲು ಪ್ರಯತ್ನ ಪಟ್ಟಿದ್ದಾರೆ. ಹೊಸಬರ ಸಿನಿಮಾಗಳಿಗಿಂತಲೂ ಈ ಚಿತ್ರದ ಕಥೆ ಕೊಂಚ ಜಾಸ್ತಿ ಭಯ ಹುಟ್ಟಿಸುತ್ತದೆ.

 

ಗಣೇಶ್‌ ಇಲ್ಲಿ ಗಣೇಶ್‌ ಎಂಬ ಪಾತ್ರದ ಮೂಲಕ ತನ್ನ ಪ್ರೇಯಸಿಗಾಗಿ ಮನುಷ್ಯರು ಮತ್ತು ದೆವ್ವಗಳ ಜತೆ ಹೋರಾಟ ಮಾಡುತ್ತಾರೆ. ಹೋರಾಟ ಮಾಡುತ್ತಲೇ ಕೊಂಚ ಗಿಮಿಕ್‌ ಮಾಡಿ ತನ್ನ ಪ್ರೇಯಸಿಯನ್ನು ಪಡೆಯುವ ಪ್ರಯತ್ನ ಮಾಡುತ್ತಾರೆ. ಈ ಪ್ರಯತ್ನವನ್ನು ನೋಡಲು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಹೋಗಬೇಕು.

 

ಯಾವುದೋ ಘಟನೆಯಲ್ಲಿ ಭೇಟಿ ಮಾಡುವ ಹುಡುಗಿಗಾಗಿ ಗಣೇಶ್‌ ಮಾಡುವ ಗಿಮಿಕ್‌ಗಳಲ್ಲಿ ಯಾವುದೇ ಲಾಜಿಕ್‌ ಇಲ್ಲ ಆದರೆ,ಎಂಟರ್‌ಟೇನ್‌ಮೆಂಟ್‌ ಇದೆ. ಸಿನಿಮಾದ ಫಸ್ಟ್‌ ಹಾಫ್‌ ಫುಲ್‌ ಕಾಮಿಡಿ, ಸೆಕೆಂಡ್‌ ಹಾಫ್‌ ಫುಲ್‌ ಹಾರರ್‌ ಎರಡು ಮಿಕ್ಸ್‌ ಆಗಿ ಗಿಮಿಕ್‌ ನೋಡುಗರಿಗೆ ಒಂದು ಕಂಪ್ಲೀಟ್‌ ಎಂಟರ್‌ಟೇನರ್‌ ಆಗಿದೆ.

 

 

ಈ ಸಿನಿಮಾವನ್ನು ಯಾರು ಬೇಕಾದರೂ ಮಾಡಬಹುದಿತ್ತು, ಆದರೆ ಗಣೇಶ್‌ ಮಾಡಿರುವುದರಿಂದ ಚಿತ್ರಕ್ಕೊಂದು ಸ್ಟಾರ್‌ ವ್ಯಾಲ್ಯೂ ಬಂದಿದೆ. ಗಣೇಶ್‌ ಸಹ ಎಂದಿಗಿಂತಲೂ ಕೊಂಚ ಲವಲವಿಕೆಯಿಂದ ಮತ್ತು ವಿಶೇಷವಾಗಿ ನಟಿಸಿ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ನಾಯಕಿ ಪಾತ್ರ ಎಂದಿನಂತೆ ಕಲರ್‌ಫುಲ್‌ ಆಗಿದೆ.

 

ಗಣೇಶ್‌ ಮತ್ತು ದೆವ್ವಗಳ ಜತೆ ಸುಂದರ್‌ರಾಜ್‌, ರವಿಶಂಕರ್‌ಗೌಡ, ಮಂಡ್ಯ ರಮೇಶ್‌ ನಗಿಸುತ್ತಾರೆ. ಸಂಭಾಷಣೆ ಗಮನ ಸೆಳೆಯುತ್ತದೆ. ಇನ್ನು ಸಂಗೀತ ಹಾರರ್‌ ಸಬ್ಜೆಕ್ಟ್‌ಗೆ ಸಪೋರ್ಟ್‌ ಮಾಡಿಲ್ಲ ಎನ್ನಿಸುತ್ತದೆ. ಒಟ್ಟಿನಲ್ಲಿ ಇದು ಸಹ ಒಂದು ಮಾಮೂಲಿ ಹಾರರ್‌ ಸಿನಿಮಾನೇ ಆದರೆ ಇದರಲ್ಲಿ ಗಣೇಶ್‌ ನಟಿಸಿದ್ದಾರೆ ಅಷ್ಟೇ.  ಈ ಚಿತ್ರವು ತಮಿಳಿನ “ದಿಲ್ಲಿಕು ದುಡ್ಧು” ಚಿತ್ರದ ಅಧಿಕೃತ ರೀಮೇಕ್. 

Spread the love
Continue Reading

Trending News