Movie Reviews
‘ಬಬ್ರೂ’ವಿನ ಜರ್ನಿಯಲ್ಲಿ ಟ್ವಿಸ್ಟ್, ಟರ್ನಿಂಗ್‌ಗಳದ್ದೇ ಕಾರುಬಾರು – ಚಿತ್ರ ವಿಮರ್ಶೆ – ರೇಟಿಂಗ್ – 3.5/5
ಚಿತ್ರ: ಬಬ್ರೂ
ನಿರ್ದೇಶನ: ಸುಜಯ್ ರಾಮಯ್ಯ
ನಿರ್ಮಾಣ: ಸುಮನ್ ನಗರ್‌ಕರ್
ಸಂಗೀತ: ಪೂರ್ಣಚಂದ್ರ ತೇಜಸ್ವಿ
ಕಲಾವಿದರು: ಸುಮನ್ ನಗರ್‌ಕರ್ , ಮಹಿ ಹಿರೇಮಠ್
ರೇಟಿಂಗ್ : 3.5/5.
ಇಬ್ಬರು ಬೇರೆ ಬೇರೆ ಕೆಲಸಗಳಿಗೆ ಹೊರಡುವ ವ್ಯಕ್ತಿಗಳು ಒಂದೇ ಕಾರ್‌ನಲ್ಲಿ ದೂರದ ಪ್ರಯಾಣ ಬೆಳೆಸಬೇಕಾಗುತ್ತದೆ. ಈ ಪ್ರಯಾಣ ಆರಂಭದಲ್ಲಿ ಸಿಹಿಯಾಗಿದ್ದರೆ, ಹೋಗ್ತಾ ಹೋಗ್ತಾ ಟ್ವಿಸ್ಟ್ ಮತ್ತು ಟರ್ನಿಂಗ್‌ಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತದೆ. ಆ ಟ್ವಿಸ್ಟ್ ಗಳೇ ಈ ಬಬ್ರೂವಿನ ಕಥಾ ಸಾರಾಂಶ.
ಸನಾ [ಸುಮನ್ ನಗರ್‌ಕರ್] ಕೌಟುಂಬಿಕ ತಾಪತ್ರಯಗಳಿದ್ದರೂ, ದೂರ ಪ್ರಯಾಣಕ್ಕೆ ಹೊರಟು ನಿಂತಿರುತ್ತಾರೆ. ಇಂತಹ ಸನಾಗೆ ಜತೆಯಾಗುವುದು ತನ್ನ ಪ್ರೇಮವನ್ನು ಹೇಳಿಕೊಳ್ಳಬೇಕು ಎಂಬ ತವಕ ಇವರಿಬ್ಬರು ಕೆನಡಾಗೆ ಹೊರಟಿರುತ್ತಾರೆ. ಈ ಪ್ರಯಾಣದಲ್ಲಿ ಇಬ್ಬರಿಗೂ ಒಂದಷ್ಟು ಅನುಭವಗಳಾಗುತ್ತವೆ. ಆದರೆ ಕೆನಡಾದ ಜರ್ನಿ ಮಾತ್ರ ಅದ್ಭುತವಾಗಿದೆ. ಸಾಮಾನ್ಯವಾಗಿ ಪ್ರೇಕ್ಷಕ ಜರ್ನಿ ಎಂದರೆ ಬೇಗ ಕನೆಕ್ಟ್ ಆಗುತ್ತಾನೆ. ಇಲ್ಲಿ ಕೂಡಾ ಅದೇ ಆಗುತ್ತದೆ. ಒಂದು ರೋಚಕವಾದ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಲೇ, ಅಮೇರಿಕಾದ ಸುಂದರ ತಾಣಗಳನ್ನು ತೋರಿಸುವ ಪ್ರಯತ್ನ ಮಾಡಿದೆ ಚಿತ್ರತಂಡ.
ಪರಿಚಯವೇ ಇರದ ಸನಾ ಮತ್ತು ಅರ್ಜುನ್ ಪ್ರಯಾಣದಲ್ಲಿ ಆತ್ಮೀಯರಾಗುತ್ತಾರೆ. ಇವರ ಈ ಇಬ್ಬರ ಪ್ರಯಾಣಕ್ಕೆ ಮತ್ತೊಬ್ಬ ಮಧ್ಯದಲ್ಲಿ ಬಂದು ಸೇರಿಕೊಂಡು ಸಿನಿಮಾ ಮತ್ತೊಂದು ಮಗ್ಗಲಿಗೆ ಹೊರಳುತ್ತದೆ. ಇದೆಲ್ಲದರ ನಡುವೆ ಪರಿಚಯವೇ ಇಲ್ಲದ ಈ ಮೂವರಿಗೊಬ್ಬ ವೈರಿ ಇರುತ್ತಾನೆ, ಅವನಾರು ಎಂಬುದೇ ಸಿನಿಮಾದ ಟ್ವಿಸ್ಟು. ಆ ಟ್ವಿಸ್ಟನ್ನು ಸಿನಿಮಾದಲ್ಲಿಯೇ ನೋಡಿ.
ನಿರ್ದೇಶಕ ಸುಜಯ್ ರಾಮಯ್ಯ ಬಹಳ ವಿಶೇಷ ಕಥೆಯನ್ನು ಬಹಳ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾರೆ. ಅದಕ್ಕೆ ಸಾಥ್ ನೀಡಿರುವುದು ಹೂಮಳೆ ಬೆಡಗಿ ಸುಮನ್ ನಗರ್‌ಕರ್ ,ಮಹಿ ಹಿರೇಮಠ್ , ಮತ್ತು ಹಾಲಿವುಡ್ ನಟ ರೇ ಟೊಸ್ಟಾಡೋ. ಗಾನ ಭಟ್ ಚಿಕ್ಕ ಪಾತ್ರವಾದರೂ ಚೊಕ್ಕದಾಗಿ ನಟಿಸಿದ್ದಾರೆ. ಇನ್ನು ಸಂಗೀತ, ಸಿನಿಮಾಟೋಗ್ರಫಿ ಎಲ್ಲವೂ ಸಿನಿಮಾಗೆ ಪೂರಕವಾಗಿದೆ.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಬೆಳ್ಳಿತೆರೆಗೆ ಬಂದಿರುವ ಬೆಳದಿಂಗಳ ಬೆಡಗಿ ನಿಮ್ಮನ್ನು ನಿರಾಸೆ ಮೂಡುವುದಿಲ್ಲ.