ಡಿಸೆಂಬರ್‌ ಮೂರನೇ ವಾರದಿಂದ ರುದ್ರಪ್ರಯಾಗ ಆರಂಭ – PopcornKannada
Connect with us

Cinema News

ಡಿಸೆಂಬರ್‌ ಮೂರನೇ ವಾರದಿಂದ ರುದ್ರಪ್ರಯಾಗ ಆರಂಭ

Published

on

ರಿಷಭ್‌ ಶೆಟ್ಟಿ ನಿರ್ದೇಶನ ಮಾಡುತ್ತಿರುವ ರುದ್ರಪ್ರಯಾಗ ಸಿನಿಮಾ ಡಿಸೆಂಬರ್‌ ಮೂರನೇ ವಾರದಿಂದ ಆರಂಭವಾಗಲಿದ್ದು, ರಿಷಭ್‌ ಅ್ಯಂಡ್‌ ಗ್ಯಾಂಗ್ ಅದರ ತಯಾರಿಯಲ್ಲಿದೆ.

 

ಇನ್ನು ಈ ಚಿತ್ರದಲ್ಲಿ ಬಾಲಿವುಡ್‌ ಗುಲ್ಷನ್‌ ದೇವಯ್ಯ ಮತ್ತು ಅನಂತ್‌ನಾಗ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಂಪ್ಲೀಟ್‌ ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್‌ ನಟಿಸುತ್ತಿದ್ದಾರೆ. ಉತ್ತರ ಪ್ರದೇಶದ ರುದ್ರಪ್ರಯಾಗದಲ್ಲಿ ನಾಲ್ಕೖದು ದಿನ ಚಿತ್ರೀಕರಣವನ್ನು ರಿಷಭ್‌ ಶೆಟ್ಟಿ ಮಾಡಲಿದ್ದಾರೆ. ಇದಾದ ಮೇಲೆ ದಾಂಡೇಲಿ, ಖಾನಾಪುರ, ಬೆಳಗಾವಿ ಕಾಡುಗಳಲ್ಲಿ ಶೂಟಿಂಗ್‌ ಮಾಡಲಿದ್ದಾರಂತೆ.

 

 

 

 

ಇದು ನನ್ನ ಕರಿಯರ್‌ನಲ್ಲಿ ಬೇರೆ ಥರಹದ ಸ್ಕ್ರಿಪ್ಟ್‌ ಆಗಿದೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದು ಮಲೆನಾಡಿನ ಕಡೆಯಲ್ಲೆಲ್ಲ ಲೋಕೆಶನ್‌ ನೋಡಿಕೊಂಡು ಬಂದಿದ್ದೇವೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಸಿನಿಮಾ ಇದಾಗಲಿದೆ ಎನ್ನುತ್ತಾರೆ ರಿಷಭ್‌ ಶೆಟ್ಟಿ.

 

ಇನ್ನು ರಿಷಭ್‌ ಶೆಟ್ಟಿ ಸಾರಥ್ಯದಲ್ಲಿ ತಯಾರಾಗಿರುವ ಕಥಾ ಸಂಗಮ ಇದೇ ಡಿಸೆಂಬರ್‌ 6 ಕ್ಕೆ ಬಿಡುಗಡೆಯಾಗಲಿದೆ. ಅದರ ಪ್ರಚಾರದ ಕೆಲಸದಲ್ಲಿ ಅವರು ಬಿಝಿ ಇದ್ದು, ಇದು ರಿಲೀಸ್‌ ಆದ ಕೂಡಲೇ ಅವರು ಕಾಡಿನೊಳಗೆ ಎಂಟ್ರಿ ಕೊಡಲಿದ್ದಾರೆ.

Spread the love

ರಿಷಭ್‌ ಶೆಟ್ಟಿ ನಿರ್ದೇಶನ ಮಾಡುತ್ತಿರುವ ರುದ್ರಪ್ರಯಾಗ ಸಿನಿಮಾ ಡಿಸೆಂಬರ್‌ ಮೂರನೇ ವಾರದಿಂದ ಆರಂಭವಾಗಲಿದ್ದು, ರಿಷಭ್‌ ಅ್ಯಂಡ್‌ ಗ್ಯಾಂಗ್ ಅದರ ತಯಾರಿಯಲ್ಲಿದೆ.

 

ಇನ್ನು ಈ ಚಿತ್ರದಲ್ಲಿ ಬಾಲಿವುಡ್‌ ಗುಲ್ಷನ್‌ ದೇವಯ್ಯ ಮತ್ತು ಅನಂತ್‌ನಾಗ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಂಪ್ಲೀಟ್‌ ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್‌ ನಟಿಸುತ್ತಿದ್ದಾರೆ. ಉತ್ತರ ಪ್ರದೇಶದ ರುದ್ರಪ್ರಯಾಗದಲ್ಲಿ ನಾಲ್ಕೖದು ದಿನ ಚಿತ್ರೀಕರಣವನ್ನು ರಿಷಭ್‌ ಶೆಟ್ಟಿ ಮಾಡಲಿದ್ದಾರೆ. ಇದಾದ ಮೇಲೆ ದಾಂಡೇಲಿ, ಖಾನಾಪುರ, ಬೆಳಗಾವಿ ಕಾಡುಗಳಲ್ಲಿ ಶೂಟಿಂಗ್‌ ಮಾಡಲಿದ್ದಾರಂತೆ.

 

 

 

 

ಇದು ನನ್ನ ಕರಿಯರ್‌ನಲ್ಲಿ ಬೇರೆ ಥರಹದ ಸ್ಕ್ರಿಪ್ಟ್‌ ಆಗಿದೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದು ಮಲೆನಾಡಿನ ಕಡೆಯಲ್ಲೆಲ್ಲ ಲೋಕೆಶನ್‌ ನೋಡಿಕೊಂಡು ಬಂದಿದ್ದೇವೆ. ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಸಿನಿಮಾ ಇದಾಗಲಿದೆ ಎನ್ನುತ್ತಾರೆ ರಿಷಭ್‌ ಶೆಟ್ಟಿ.

 

ಇನ್ನು ರಿಷಭ್‌ ಶೆಟ್ಟಿ ಸಾರಥ್ಯದಲ್ಲಿ ತಯಾರಾಗಿರುವ ಕಥಾ ಸಂಗಮ ಇದೇ ಡಿಸೆಂಬರ್‌ 6 ಕ್ಕೆ ಬಿಡುಗಡೆಯಾಗಲಿದೆ. ಅದರ ಪ್ರಚಾರದ ಕೆಲಸದಲ್ಲಿ ಅವರು ಬಿಝಿ ಇದ್ದು, ಇದು ರಿಲೀಸ್‌ ಆದ ಕೂಡಲೇ ಅವರು ಕಾಡಿನೊಳಗೆ ಎಂಟ್ರಿ ಕೊಡಲಿದ್ದಾರೆ.

Spread the love

Cinema News

ಫೆ. 26ಕ್ಕೆ ಹಾರರ್ ಥ್ರಿಲ್ಲರ್ “ಸ್ಕೇರಿ ಫಾರೆಸ್ಟ್” ಬಿಡುಗಡೆ*

Published

on

By

ಜೆಪಿ ಎಂಟರ್ಟೈನ್ಮೆಂಟ್ ವರ್ಲ್ಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸ್ಕ್ರೇರಿ ಫಾರೆಸ್ಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಫೆ. 26ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದ ತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ನಿರ್ಮಾಪಕ ಜಯಪ್ರಭು ಆರ್ ಲಿಂಗಾಯತ್ ಮಾಥನಾಡಿ, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ಬಾಲಿವುಡ್ನ ಒಂದಷ್ಟು ಜನರ ಪರಿಚಯ ಇದ್ದಿದ್ದರಿಂದ ಅವರನ್ನೂ ಈ ಪ್ರಾಜೆಕ್ಟ್ನಲ್ಲಿ ಸೇರಿಸಿಕೊಂಡಿದ್ದೇನೆ. ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ನಾನು ಜೈ ಎಂಬ ಕಾಲೇಜು ಸ್ಟುಡೆಂಟ್ ಪಾತ್ರ ಮಾಡಿದ್ದೇನೆ. ರಿಸರ್ಚ್ ಮಾಡಲು ಕಾಡಿಗೆ ಹೋಗುವ ಯುವಕರು ಏನೆಲ್ಲ ವಿಚಿತ್ರಗಳನ್ನು ಅನುಭವಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ, ಹಾರರ್ ಅಂಶದ ಜತೆಗೆ ಟ್ರಯಾಂಗಲ್ ಲವ್ಸ್ಟೋರಿಯೂ ಸಿನಿಮಾದಲ್ಲಿದೆ’ ಎಂದರು.
ಇನ್ನು ಚಿತ್ರದ ನಾಯಕಿ ಟೀನಾ ಪೊನ್ನಪ್ಪ ಮಾತನಾಡಿ, ಈ ಸಿನಿಮಾದಲ್ಲಿ ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಇರುವ ಪಾತ್ರ ಸಿಕ್ಕಿದೆ. ಇದು ಲವ್ ಜತೆಗೆ ಹಾರರ್ ಸಿನಿಮಾ. ಹಿಂದಿ ಜತೆಗೆ ಕನ್ನಡದಲ್ಲಿ ಬರುತ್ತೆ ಅಂದಾಗ ಖುಷಿ ಆಯಿತು. ಚಿತ್ರದ ಶೇ.90 ಭಾಗದ ಶೂಟಿಂಗ್ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದಿದೆ ಎಂದರು.

 

ಇನ್ನು ಈ ಚಿತ್ರಕ್ಕೆ ಸಂಜಯ್ ಅಭೀರ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬಾಲಿವುಡ್ ನಲ್ಲಿ‌ ಅನುಭವ ಹೊಂದಿರುವ ಸಂಜಯ್ ನಿರ್ದೇಶನದ ಜತೆಗೆ‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಇದು ಪಕ್ಕಾ ಮನರಂಜಾನಾತ್ಮಕ ಸಿನಿಮಾ, ಹಾರರ್ , ಕಾಮಿಡಿ, ಲವ್, ಸೆಂಟಿಮೆಂಟ್ ಎಲ್ಲವನ್ನೂ ಮಿಶ್ರಣ ಮಾಡಿ ಸಿನಿಮಾ ಮಾಡಿದ್ದೇವೆ ಎಂದರು.
ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಪಾತ್ರದ ಬಗ್ಗೆ ಮಾತನಾಡಿ, ಒಬ್ಬ ನಟನಾಗಿ ಭಾಷೆಯ ಗಡಿ ಇರಬಾರದು. ಅದೇ ರೀತಿ ಇದೀಗ ಪ್ರೇಮಬರಹ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದೇನೆ. ಇದರಲ್ಲಿ ನಾನು ಸೆಕೆಂಡ್ ಲೀಡ್ ಮಾಡುತ್ತಿದ್ದೇನೆ. ಹಾಡುಗಳ ಸಾಹಿತ್ಯ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ, ಸಂಗೀತ ಗುನುಗುವಂತಿದೆ ಎಂದರು.

 

ನಟಿ ಕಲ್ಪನಾ ಎರಡನೇ ನಾಯಕಿಯಾಗಿ ನಟಿಸಿದ್ದು, ಕನ್ನಡದ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಅವರು, ಮಹಾಕಾಳಿ, ಚಂದನದಗೊಂಬೆ, ಸೇರಿ ಒಟ್ಟು 9 ಧಾರಾವಾಹಿ ಮಾಡಿದ್ದೇನೆ. ಸೀರಿಯಲ್ ಜತೆಗೆ ಸಿನಿಮಾ ಮಾಡುವ ಮನಸ್ಸಿತ್ತು. ಅದರಂತೆ ಸ್ಕೇರಿ ಫಾರೆಸ್ಟ್ ಸಿನಿಮಾ ಮಾಡಿದ್ದೇನೆ. ಅಷ್ಟೇ ವಿಶೇಷವಾಗಿದೆ ಎಂದರು.
ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ‌ ಟೀನಾ ಪೊನ್ನಪ್ಪ, ಆಮ್‌ ರೀನ್, ಕಲ್ಪನ‌ ಈ ಚಿತ್ರದ ನಾಯಕಿಯರು. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ‌ ಚಿತ್ರದ ಪ್ರಮುಖಪಾತ್ರದಲ್ಲಿ‌ ಅಭಿನಯಿಸಿದ್ದಾರೆ.

 

ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ. ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‌ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ಅವರದು. ಹಾಲಿವುಡ್ ನ ಜಂಗಲ್ ಬುಕ್ 1994, ಹಿಂದಿಯ ರಾಗಿಣಿ ಎಂ.ಎಂ.ಎಸ್ ೨ ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Spread the love
Continue Reading

Cinema News

ಟೀನೇಜರ್ಸ್ ಒಡನಾಟ , ತೊಳಲಾಟ, ನರಳಾಟವೇ “MBA”

Published

on

By

ಪ್ರಸಕ್ತ ಯುವಜನಾಂಗಕ್ಕೆ ಅಂತಲೇ ಸಿದ್ದಪಡಿಸಿರುವ ಹೊಸಬರ ‘MBA’ ಚಿತ್ರದ ಕತೆಯು ಕಾಲೇಜಿನಲ್ಲಿ ನಡೆಯುವ ಸೆಸ್ಪನ್ಸ್, ಥ್ರಿಲ್ಲರ್,ಮರ್ಡರ್ ಮಿಸ್ಟರಿ ಮತ್ತು ಭಾವನೆಗಳನ್ನು ಹೊಂದಿದೆ. ಖ್ಯಾತ ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಎರಡು ವಿನೂತನ ಟ್ರೈಲರ್‌ಗಳನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಎಂಬಿಎ ವ್ಯಾಸಾಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರುಒಮ್ಮೆ ನೋಡಿದರೆ ಮನ ಮುಟ್ಟುತ್ತದೆ.  ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕಂತೆ.

 

ಎಸ್.ನಾರಾಯಣ್ ಬಳಿ ಅನುಭವ ಪಡೆದುಕೊಂಡಿರುವ ಹೆಚ್‌ಪಿ ರಚನೆ,ಚಿತ್ರಕತೆ,ಸಂಭಾಷಣೆ, ನಿರ್ದೇಶನ ಹಾಗೂ ಪಬ್ಲಿಕ್ ಪ್ರೊಡಕ್ಷನ್ ಐಎನ್‌ಸಿ ಮೂಲಕ ನಿರ್ಮಾಣ ಮಾಡಿದ್ದಾರೆ.  ಪಿಯುಸಿ ಓದುವಾಗಲೇ ಒಂದು ಎಳೆಯನ್ನ ಬರೆದುಕೊಂಡಿದ್ದು ಈಗ ಅದು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.

 

 

ಶೀರ್ಷಿಕೆಗೆ ಬೇರೆ ಏನಾದರೂ ಅರ್ಥ ನೀಡಬೇಕೆಂದು,ಅದಕ್ಕಾಗಿ 5000 ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ‘ಮೆಂಬರ್‌ಆಫ್ ಬ್ಯಾಡ್‌ಆಕ್ಟಿವಿಟೀಸ್’, ‘ಮೈಸೂರು ಬಾಯ್ಸ್ ಅಸೋಸಿಯೇಶನ್’ ‘ಮಂಡ್ಯಾ ಬಾಯ್ಸ್ ಅಸೋಸಿಯೇಶನ್’  ಹೀಗೆ ತರೆಹವಾರಿ ಹೆಸರುಗಳನ್ನು ತಿಳಿಸಿದ್ದಾರೆ. ಅಂತಿಮವಾಗಿ ಇದಕ್ಕೆ ತಕ್ಕ ಉತ್ತರವನ್ನು ಚಿತ್ರದಲ್ಲಿ ಹೇಳಲಾಗಿದೆ. ದೃಡ ಮನೋವೃತ್ತಿ ಹುಡುಗನಾಗಿ  ಪುನೀತ್‌ಗೌಡ ಪಾತ್ರದ ಸಲುವಾಗಿ ವಿಶೇಷ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಿದ್ದತೆ ಮಾಡಿಕೊಂಡು ನಟಿಸಿರುವುದು ಗೂಳಿಸೋಮ .ಒಮ್ಮೆಯಾದರೂ ಇವರಂತೆ ಇರಬೇಕುಎಂದು ಹಂಬಲಿಸುವ ಪಾತ್ರವಾಗಿರುತ್ತದೆ. ಜೋಡಿಯಾಗಿ ಕಾವ್ಯಗೌಡ, ಸೌಮ್ಯ ಶಾನ್‌ಭೋಗ್ ಮುಂತಾದವರ ನಟನೆ ಇದೆ.

ಹರ್ಷಕಾಗೋಡು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದರ್ಶನ್‌ದೇವ್, ಸಂಕಲನ ಮರಿಸ್ವಾಮಿ. ಪಿ, ವಿಎಫ್‌ಎಕ್ಸ್‌ ದಯಾ ಅವರದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯಾ, ಚಿಕ್ಕಮಗಳೂರು ಮತ್ತುಹಾಸನ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್ ಮೊದಲವಾರದಂದು ಏಕಕಾಲಕ್ಕೆ ಟಾಕೀಸ್ ಹಾಗೂ ಓಟಿಟಿದಲ್ಲಿ ಬಿಡುಗಡೆಯಾಗಲಿದೆ.

Spread the love
Continue Reading

Cinema News

ಸಿಂಬು ನಟನೆಯ ‘ರಿವೈಂಡ್’ ಶೀರ್ಷಿಕೆ ಬದಲಾವಣೆ

Published

on

By

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದ ’ರಿವೈಂಡ್’ ಶೀರ್ಷಿಕೆ ಮತ್ತು ಟೀಸರ್‌ನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದರು. ಆದರೆ ಚಂದನವನದಲ್ಲಿ ಇದೇ ಹೆಸರಿನಲ್ಲಿ ಬೇರೊಂದು ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ವಿಷಯವನ್ನು ತಿಳಿದ ತಂಡವು ಈಗ ಬೇರೆ ಟೈಟಲ್ ಇಡಲು ನಿರ್ಧರಿಸಿದೆ. ಎಲ್ಲಾ ಭಾಷೆಗೂ ಅನ್ವಯವಾಗುವಂತ ಹೆಸರನ್ನು ಇಡಲು, ಅದನ್ನು ಸದ್ಯದಲ್ಲೆ ತಿಳಿಸುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ.

ರಚನೆ-ನಿರ್ದೇಶನ ವೆಂಕಟ್‌ಪ್ರಭು, ಸಂಗೀತ ಯುವನ್‌ಶಂಕರ್‌ರಾಜ, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ. ಸುರೇಶ್‌ಕಮತ್‌ಚಿ ಅವರು ’ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ತಾರಗಣದಲ್ಲಿ ಕಲ್ಯಾಣಿ, ಪ್ರಿಯದರ್ಶನ್, ಎಸ್.ಎ.ಚಂದ್ರಶೇಖರ್, ಎಸ್.ಜೆ.ಸೂರ್ಯ, ಪ್ರೇಮ್‌ಗಿಅಮರೆನ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.

 

Spread the love
Continue Reading

Cinema News

ನಿಮ್ಮೂರಲ್ಲಿ ಹಾಡುಗಳ ಸಂಭ್ರಮ ಸಡಗರ

Published

on

By

ಕರೋನಾ ಬಂದು ಇಡೀ  ಜಗತ್ತೇ ತತ್ತರಿಸಿದೆ. ವರ್ಷವಾಗತಾ ಬಂದರೂ ಜನ ಥಿಯೇಟರಿಗೆ ಬರ್ತಿಲ್ಲ. ಆದರೆ  ಹೊಸ ಚಿತ್ರಗಳ ನಿರ್ಮಾಣ, ಆಡಿಯೋ ಬಿಡಗಡೆ ಕಾರ್ಯಕ್ರಮ ನಡೆಯುತ್ತಲೇ ಇದೆ. ಈಗ ಉತ್ತರ ಕರ್ನಾಟಕದ ಬಹುತೇಕ ಮಂದಿ ಸೇರಿ ನಿರ್ಮಾಣ ಮಾಡಿರುವ ನಿಮ್ಮೂರು ಎನ್ನುವ ಚಲನಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ್ರು ಹಾಗೂ ಯುವನಟಿ ರೂಪಿಕಾ, ಭಾಮ ಹರೀಶ್ ಅವರು  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹೊಸಬರೇ ಸೇರಿಕೊಂಡು ಈ ಚಿತ್ರ ಮಾಡಿದ್ದೀರಿ, ಇದೇ ಖುಷಿ ಸಿನಿಮಾ ಬಿಡುಗಡೆಯಾದ ಮೇಲೂ ಇರಲಿ ಎಂದು ಚಿನ್ನೇಗೌಡ್ರು ಹೇಳಿದರೆ, ಚಿತ್ರ ಬಿಡುಗಡೆ ಮಾಡುವಾಗ ಒಳ್ಳೇ ವಿತರಕರನ್ನು ಇಟ್ಟುಕೊಳ್ಳಿ,  ಅವರು ಯಾವರೀತಿ ಹೋಗಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ. ಸಿನಿಮಾನ ಹೇಗೋ ಮಾಡಬಹುದು, ರಿಲೀಸ್ ಮಾಡುವುದು ತುಂಬಾ ಕಷ್ಟವಾಗಿಬಿಡುತ್ತೆ ಎಂದು ಹೇಳಿದರು. 

 

   ಕಳೆದ ಐದಾರು ವರ್ಷಗಳಿಂದ ಚಿತ್ರರಂಗದಲ್ಲಿ  ಕೆಲಸ ಮಾಡುತ್ತಿರುವ ವಿಜಯ್ ಎಸ್. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ರಾಜಶೇಖರ ಚಂದ್ರಶೇಖರ್ ಡಾವಣಗೇರಿ(ರಾಣೆಬೆನ್ನೂರು) ಈ ಚಿತ್ರದ ನಿರ್ಮಾಪಕರು.  ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸಿನಿಮಾ ಚಿತ್ರದಲ್ಲಿ  ಲಕ್ಕಿರಾಮ್ ಹಾಗೂ ವೀಣಾಗಂಗಾಮ್ ನಾಯಕ, ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ  ನಿರ್ಮಾಪಕ ರಾಜಶೇಖರ್ ಅವರು ಒಂದು ನೆಗೆಟಿವ್ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕರ ಬ್ಯಾನರ್ ಹೆಸರು ಹಠವಾದಿ ಸಿನಿ ಕ್ರಿಯೇಶನ್ಸ್, ನಿರ್ಮಾಪಕರು ರವಿಚಂದ್ರನ್ ಅಭಿಮಾನಿ, ಜೀವನದಲ್ಲಿ ಸಾಧಿಸುವ ಹಠ ಇರಬೇಕು, ಆಗಲೇ ನಾವೇನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದು ನಿರ್ಮಾಪಕರ ಸ್ಪಷ್ಟನೆ. ನಿಮ್ಮೂರು ಎಂದಾಗ ಎಲ್ಲರಿಗೂ ಅವರವರ ಊರಿನ ನೆನಪಾಗಬೇಕು ಎನ್ನುವ ಉದ್ದೇಶದಿಂದ ಈ ಟೈಟಲ್ ಇಟ್ಟಿದಾರೆ. ನಿಮ್ಮೂರು ಎಂದಾಕ್ಷಣ ಅಲ್ಲಿ ನಡೆದ ಘಟನೆ ನೆನಪಾಗಬೇಕು, ಇಂಪ್ಯಾಕ್ಟ್ ಆಗಬೇಕು ಎನ್ನುವುದು ಇದರ ಉದ್ದೇಶ. ಚಿತ್ರವನ್ನು ನಾವೆಲ್ಲ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಒಂದು ಹಳ್ಳಿ ಎಂದಮೇಲೆ ಅಲ್ಲಿ  ಸಾಮಾನ್ಯವಾಗಿರುವ ಒಂದು ಪ್ರೀತಿ, ರಾಜಕೀಯ, ರೈತರ ಸಮಸ್ಯೆಗಳು ಇದನ್ನೆಲ್ಲ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಇದರ ಜೊತೆಗೆ ಒಂದೊಳ್ಳೆ ಸಂದೇಶ ಚಿತ್ರದಲ್ಲಿದೆ ಎಂದು ಹೇಳಿದರು. 

 

  
    ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ವಿಜಯ್ ನಿಮ್ಮೂರು ಎಂದಾಕ್ಷಣ ಚಿತ್ರ ನೋಡುತ್ತಿರುವ ಎಲ್ಲರಿಗೂ ಅವರವರ ಹುಟ್ಟೂರು ನೆನಪಾಗುತ್ತದೆ. ನಿರ್ಮಾಪಕರು ನನ್ನ ಸ್ನೇಹಿತರು. ಈ ಕಥೆ ರೆಡಿ ಮಾಡಿಕೊಂಡು ಯಾರಬಳಿ ಮಾಡಿಸುವುದೆಂದು ಯೋಚಿಸುತ್ತಿದ್ದಾಗ ಇವರು ಸಿಕ್ಕರು. ಒಳ್ಳೇ ಸ್ಟೋರಿ ಚಿತ್ರದಲ್ಲಿದೆ. 3 ಫೈಟ್, 5 ಹಾಡುಗಳು ಚಿತ್ರದಲ್ಲಿವೆ, ಕೊಳ್ಳೇಗಾಲ, ಹಾಸನ, ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತ ಹಾಡು ಹಾಗೂ ಮಾತಿನ ಭಾಗ ಸೇರಿ 76 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಒಂದು ನೈಜಘಟನೆ ಆಧರಿಸಿ ಮಾಡಿದ ಕಥೆಯಿದು, ನೇಟಿವಿಟಿಗೆ ತುಂಬಾ ಹತ್ತಿರವಾದಂಥ ಪಾತ್ರಗಳನ್ನಿಟ್ಟುಕೊಂಡು ಚಿತ್ರಕಥೆ ಮಾಡಿದ್ದೇವೆ. ಎಲ್ಲಾ ಥರದ ಮನರಂಜನಾತ್ಮಕ ಅಂಶಗಳಿರುವ ಟೋಟಲ್ ಎಂಟರ್‍ಟೈನ್‍ಮೆಂಟ್ ಪ್ಯಾಕೇಜ್ ಇದು. ಲಕ್ಕಿರಾಮ್ ಚಿತ್ರದ ನಾಯಕನಾಗಿದ್ದು, ವೀಣಾ ಗಂಗಾಧರ್ ನಾಯಕಿಪಾತ್ರ ನಿರ್ವಹಿಸಿದ್ದಾರೆ. ಸಮಾರಂಭದಲ್ಲಿ ಅತಿಥಿಯಾಗಿದ್ದ ಆನಂದ ಪಾಟೀಲ ಹುಲಿಕಟ್ಟಿ ಮಾತನಾಡುತ್ತ ನಿಮ್ಮೂರಿನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು, ಚಿತ್ರದಲ್ಲಿ  ರೈತರ ಬಗ್ಗೆ ಹೇಳಿದ್ದೀರಿ, ಇನ್ಮುಂದೆಯೂ ಸಹ ಪ್ರತಿ ಚಿತ್ರದಲ್ಲಿ ರೈತರ ಬಗ್ಗೆ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವಂತಾಗಲಿ ಎಂದು ಸಲಹೆ ನೀಡಿದರು. ಚಿತ್ರೀಕರಣ ಸಮಯದಲ್ಲಿ ಸಹಕಾರ ನೀಡಿದ ಗ್ರಾಮಸ್ಥರಿಗೆ ನಿರ್ಮಾಪಕರು ವೇದಿಕೆಗೆ ಕರೆದು ಸನ್ಮಾನಿಸಿದರು. ಇನ್ನು ಚಿತ್ರದ ಸಂಗೀತ ನಿರ್ದೇಶಕರಾಗಿ ಮಧುಸೂದನ್ ಡಿ. ಅಭಿನಂದನ್ ಕಷ್ಯಪ್ ಕೆಲಸ ಮಾಡಿದ್ದಾರೆ. ವಿ.ಪಳನಿವೇಲು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಚಿತ್ರದ ಉಳಿದ ಪಾತ್ರಗಳಲ್ಲಿ ತ್ರಿವಿಕ್ರಮ್, ಮೀಸೆ ಅಂಜಿನಪ್ಪ, ಶ್ರೀಕಾಂತ್ ಹೊನ್ನವಳ್ಳಿ, ಸಿದ್ದು ಮಂಡ್ಯ, ಮಂಜುನಾಥ್ ಹಾಗೂ ಇತರರು ನಟಿಸಿದ್ದಾರೆ.

Spread the love
Continue Reading

Cinema News

ಅಂಜು ಚಿತ್ರಕ್ಕೆ ಮೊದಲ ಹಂತ ಚಿತ್ರೀಕರಣ ಮುಕ್ತಾಯ

Published

on

By

ಟೆನ್‍ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಅಂಜು” ಚಲನಚಿತ್ರಕ್ಕೆ ಇತ್ತೀಚೆಗೆ ಚಿಂತಾಮಣಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ಸಮಾರಂಭ  ನೆರವೇರಿತು ಖೇಲ್ ಚಲನಚಿತ್ರದ ನಿರ್ಮಾಪಕರಾದ ಮಾರ್ಕೆಟ್ ಸತೀಶ್ ಅವರು “ಅಂಜು” ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಅಲ್ಲದೆ ಲೆಕ್ಕಾಚಾರ ಚಲನಚಿತ್ರದ ನಿರ್ಮಾಪಕ ಆರ್.ಚಂದ್ರು, ಕ್ಯಾಮೆರಾ ಸ್ವಿಚ್‍ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.

 

 

 

 

ಬೆಂಗಳೂರಿನಿಂದ ಹೈದರಾಬಾದ್‍ಗೆ ಸಿನಿಮಾ ಆಡಿಷನ್‍ಗಾಗಿ ಪ್ರಯಾಣ ಬೆಳೆಸುವ ಮೂರು ಜನ ನಾಯಕನಟರು ಹಾಗು ಮೂವರು ನಾಯಕಿಯರು, ಈ ನಡುವೆ ಐದು ಮಂದಿ ಸೈಕೋಗಳ ಪ್ರವೇಶವಾಗಿ ಅವರಿಂದ ನಾಯಕ ಹಾಗು ನಾಯಕಿಗೆ ಆಗುವ ತೊಂದರೆಗಳೇನು ? ಅವುಗಳಿಂದ ಪಾರಾಗಲು ಅವರು ಮುಂದೆ ಪಡುವ ಕಷ್ಟಗಳೇನು ? ಎಂಬ ಕುತೂಹಲಕರ ಕಥಾಂಶವುಳ್ಳ ಈ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್ ಹಾಗು ಜೂನಿಯರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಇನ್ನುಳಿದಂತೆ ನಾಯಕಿಯರಾಗಿ ಬಿಗ್‍ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ, ನಾಯಕ ನಟರಾಗಿ ಊಲಿಬೆಲೆ ರಾಜೇಶ್‍ರೆಡ್ಡಿ, ರಾಜ್‍ಪ್ರತೀಕ್ ಹಾಗು ಸಿದ್ಧಾರ್ಥ ನಟಿಸುತ್ತಿದ್ದಾರೆ. ಖಳನಾಯಕನಾಗಿ ಬಾಂಬೆಯ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜï ನಟಿಸುತ್ತಿದ್ದು ಉಳಿದ ತಾರಾಗಣದಲ್ಲಿ ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ ಜೀವನ್ ಶಿವು ಅಬ್ದುಲ್ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.

 

 

 

   ಅಂಜು ಚಲನಚಿತ್ರಕ್ಕೆ ರಾಜೀವ್ ಕೃಷ್ಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು. ವಿನು ಮನಸು ಅವರ ಸಂಗೀತ, ರಮೇಶ್ ಕೊಯಿರಾ  ಅವರ ಛಾಯಾಗ್ರಹಣ, ಮಲ್ಲಿ ಅವರ ಸಂಕಲನ, ಸುರೇಶ್ ಕಂಬಳಿ ಅವರ ಸಾಹಿತ್ಯ, ಶಿವು ಅವರ ಸಾಹಸ, ನಾಗಸುಮಂತ್ ಅವರ  ಸ್ಥಿರಚಿತ್ರಣ. ಭಕ್ತರಹಳ್ಳಿ ರವಿ ಅವರ ನಿರ್ಮಾಣ ನಿರ್ವಹಣೆಯಿದೆ ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ, ನಂದಿ ಗಿರಿದಾಮ ಮೊದಲಾದ ಸುಂದರ ತಾಣಗಳಲ್ಲಿ ಮೂದಲ ಹಂತದ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ, ಗಜೇಂದ್ರಗಡಕ್ಕೆ ಪ್ರಯಾಣ ಬೆಳಸಲಿದೆ.

Spread the love
Continue Reading

Trending News