Cinema News
ಸೈರಾ ನರಸಿಂಹ ರೆಡ್ಡಿ ಜತೆ ಶಿವಣ್ಣ

ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ಇದೇ ಗಾಂಧಿಜಯಂತಿಯಂದು ಬಿಡುಗಡೆಯಾಗುತ್ತಿದ್ದು, ಅದರ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಪಾಲ್ಗೊಂಡಿದ್ದರು.
ಚಿರಂಜೀವಿ, ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನಾ ತಾರ, ಸೇರಿದಂತೆ ಬಹು ತಾರಾಗಣವೇ ಇರುವ ಈ ಚಿತ್ರದಲ್ಲಿ ಸ್ವಾತಂತ್ರ ಹೋರಾಟ ಮಾಡಿದ ಉಯ್ಯಲಾವಾಡ ನರಸಿಂಹ ರೆಡ್ಡಿ ಕಥೆಯಿದೆ. ಇದನ್ನು ಕನ್ನಡ, ಹಿಂದಿ, ತೆಲುಗು, ತಮಿಳು,ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಮಾಡಲಾಗಿದೆ.
ಈ ಸಿನಿಮಾದ ಪ್ರಚಾರ ಮಾಡಲು ನಟ ಚಿರಂಜೀವಿ, ರಾಮ್‌ಚರಣ್ ಬೆಂಗಳೂರಿಗೆ ಬಂದಿದ್ದಾರೆ. ‘ಸೈರಾ ನರಸಿಂಹ ರೆಡ್ಡಿ ಚಿತ್ರ ಸ್ವಾತಂತ್ರ್ಯ ಹೋರಾಟಗಾರನ ಚಿತ್ರ . ಜತೆಗೆ ಇದು ನಮ್ಮ ಮೆಗಾ ಸ್ಟಾರ್ ನಟನೆಯ ಚಿತ್ರವಾಗಿದೆ. ಹಾಗಾಗಿ ಇದು ನಮ್ಮ ಮನೆಯ ಸಿನಿಮಾ ಎಲ್ಲರೂ ಚಿತ್ರವನ್ನು ನೋಡಿ. ಅದರಲ್ಲೂ ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಆ ಭಾಷೆಯಲ್ಲಿಯೇ ನೋಡಿ ಎಂದು ಶಿವರಾಜ್‌ಕುಮಾರ್ ಹೇಳಿದರು. ಈ ಸಿನಿಮಾದಲ್ಲಿ ನಟಿಸಿರುವ ಸುದೀಪ್ ಶೂಟಿಂಗ್ ನಿಮಿತ್ತ ಪೊಲೆಂಡ್‌ಗೆ ತೆರೆಳಿದ್ದು, ಕಾರ್ಯಕ್ರಮಕ್ಕೆ ಬರಲಾಗಿಲ್ಲ ಬದಲಿಗೆ ಈ ಸಿನಿಮಾಗೆ ಸಾಥ್ ನೀಡಿದ ಶಿವಣ್ಣಗೆ ವಿಡಿಯೋ ಕಾಲ್ ಮಾಡಿ ಧನ್ಯವಾದ ಹೇಳಿದ್ದಾರೆ.
ಸೈರಾ ನರಸಿಂಹ ರೆಡ್ಡಿ ದೇಶಾದ್ಯಂತೆ ಸಾವಿರಾರು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಸಹ ಆರಂಭವಾಗಿದೆ.
