Movie Reviews
ಅಮ್ಮನ ಮಾಸ್ ಮಗ ಈ ಸಿಂಗ – ಸಿನಿಮಾ ವಿಮರ್ಶೆ – ರೇಟಿಂಗ್ – 3/5 – PocpornKannada.com

ಚಿತ್ರ : ಸಿಂಗ
ನಿರ್ದೇಶನ : ವಿಜಯ್ ಕಿರಣ್
ನಿರ್ಮಾಣ : ಉದಯ್ ಕೆ ಮೆಹ್ತಾ
ಸಂಗೀತ : ಧರ್ಮ ವಿಶ್
ಕ್ಯಾಮೆರಾ : ಕಿರಣ್ ಹಂಪಾಪುರ
ತಾರಾಗಣ : ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್
ರೇಟಿಂಗ್ : 3/5
ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸಿಂಗ ಒಂದು ಅಪ್ಪಟ ಮಾಸ್ ಮಸಾಲೆ ಇರುವ ಕಮರ್ಷಿಯಲ್ ಚಿತ್ರ.
ಊರಲ್ಲಿ ಯಾರೇ ಅವನಿಗೆ ಎದುರಾದರೂ ಚೆಂಡಾಡುವ ಸಿಂಗ [ ಚಿರಂಜಿವಿ ಸರ್ಜಾ] ಮನೆಯಲ್ಲಿ ಅಮ್ಮನ ಮಾತನ್ನು ಮೀರದ ಮಗ. ಇಂತಹ ಮಗನಿಗೊಂದು ಮದುವೆ ಮಾಡಬೇಕು ಎಂಬುದು ಸಿಂಗನ ತಾಯಿ [ ತಾರಾ] ಯ ಆಸೆ ಆದರೆ ಮದುವೆ ಅಂದರೆ ಮಾರು ದೂರು ಓಡ್ತಾನೆ ಈ ಸಿಂಗ. ಇಂತಹ ಸಿಂಗನ ಬಾಳಲ್ಲಿ ಟಾಪಾಗಿರುವ ಹುಡುಗಿ ಬಂದು ಇಬ್ಬರಿಗೂ ಲವ್ ಆಗುತ್ತದೆ. ಆದರೆ ಈ ಲವ್‌ನಿಂದ ಸಿಂಗನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ ಅದೇನು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.
ಮೊದಲೇ ಹೇಳಿದಂತೆ ಇದೊಂದು ಮಾಸ್ ಮಸಾಲೆ ಇರುವ ಅಪ್ಪಟ ಕಮರ್ಷಿಯಲ್ ಸಿನಿಮಾ. ಡೈಲಾಗ್, ಫೈಟ್ಸ್, ಹಾಡುಗಳು ಎಲ್ಲವೂ ಅಭಿಮಾನಿಗಳಿಗೆ ಮಾಡಿದ ಪರಿಣಾಮ ಪ್ರತಿಯೊಂದರಲ್ಲಿಯೂ ರಂಜನೆ ಇದೆ, ಎಂಟರ್‌ಟೇನ್‌ಮೆಂಟ್ ಇದೆ. ಅದರಲ್ಲಿ ಡೈಲಾಗ್ ಮತ್ತು ಫೈಟ್‌ಗಳಿಗಂತೂ ಅಭಿಮಾನಿಗಳು ಶಿಳ್ಳೆ ಹಾಕುತ್ತಾರೆ. ಇನ್ನು ಸಿದ್ಧ ಸೂತ್ರವನ್ನು ನಿರ್ದೇಶಕ ವಿಜಯ್ ಕಿರಣ್ ಅಳವಡಿಸಿಕೊಂಡ ಪರಿಣಾಮ ಚಿತ್ರಕಥೆ ರಚಿಸಲು ಅಂತಹ ಕಷ್ಟವೇನು ಆಗಿಲ್ಲ. ಆದರೂ ಪ್ರತಿಯೊಂದನ್ನು ಸಮರ್ಥವಾಗಿ ತೆರೆ ಮೇಲೆ ತಂದಿದ್ದಾರವರು.
ಇನ್ನು ಚಿರಂಜೀವಿ ಸರ್ಜಾ ಫೈಟಿಂಗ್ ಮತ್ತು ನಟನೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಡಾನ್ಸ್‌ನಲ್ಲಿ ಒಂಚೂರು ವೀಕ್ ಆದಂತೆ ಕಾಣಿಸುತ್ತಾರೆ.
ಇನ್ನು ತಾಯಿಯಾಗಿ ನಟಿಸಿರುವ ತಾರಾ ಅವರದ್ದು, ಮನ ಮುಟ್ಟು ನಟನೆ. ಸಾಕಷ್ಟು ಸಿನಿಮಾಗಳಲ್ಲಿ ತಾಯಿಯಾಗಿ ನಟಿಸಿರುವ ಅವರು, ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಅರುಣಾ ಬಾಲರಾಜ್ ಕೂಡ ತಮ್ಮಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದಿತಿ ಪ್ರಭುದೇವ ನೋಡಲು ಎಷ್ಟು ಚೆಂದವಾಗಿ ಕಾಣಿಸುತ್ತಾರೋ, ಅಷ್ಟೇ ಸುಂದರವಾಗಿ ನಟಿಸಿದ್ದಾರೆ ಮತ್ತು ಡಾನ್ಸ್‌ನಲ್ಲಿಯೂ ಮಿಂಚಿದ್ದಾರೆ. ಶಿವರಾಜ್ ಕೆ ಆರ್ ಪೇಟೆ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮಾದಲ್ಲಿ ಮೈನೆಸ್ ಪಾಯಿಂಟ್‌ಗಳಿದ್ದರೂ ಮಾಸ್ ಪ್ರೇಕ್ಷಕರು ಇಷ್ಟಪಡುವ ಸಾಕಷ್ಟು ಅಂಶಗಳು ಜತೆಗೆ, ತಾಯಿ ಸೆಂಟಿಮೆಂಟ್ ಇಷ್ಟಪಡುವವರು ಈ ಚಿತ್ರವನ್ನು ನೋಡಬಹುದು. ಉಳಿದಂತೆ ಸಿಂಗನನ್ನು ಕಂಪ್ಲೀಟ್ ಎಂಟರ್‌ಟೇನ್‌ಮೆಂಟ್ ಎನ್ನಬಹುದು.
