News
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ

ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿಯು ಅಮೋಘ 25 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆ ಅಲ್ಲಾ, ಹೀರೋಗೊಸ್ಕರ ಅಳೊ ಹೀರೋಯಿನ್ ಕಥೆ ಅಲ್ಲಾ, ಹೀರೋಯಿನ್‍ಗೆ ಕಷ್ಟ ಕೊಡೋ ಕಥೆ ಖಂಡಿತಾ ಅಲ್ಲಾ, ಇದು ಒಬ್ಬ ದಿಟ್ಟ ಹುಡುಗಿಯ ಕಥೆ “ನಾಯಕಿ” ಇದೇ ಜೂನ್ 17ರಿಂದ ಸೋನವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಈ ನಾಯಕಿ ಕಷ್ಟಗಳನ್ನು ಕೇವಲ ಎದರಿಸುವುದಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯ ಎಂಬ ಬಡ ಹುಡುಗಿ ತನ್ನ ಕುಡುಕ ಅಪ್ಪನನ್ನ ಸಾಕಲು ಮತ್ತು ತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತ ಹೆಣೆದ ಕಥೆ. ಆದರೆ ನಾಯಕಿ ಮೂಲತಃ ಶ್ರೀಮಂತ ಕುಟುಂಬದವಳಾಗಿರುತ್ತಾಳೆ. ಸೂರ್ಯವರ್ಧನ್ ಎಂಬುವನು ಹಣಕ್ಕಾಗಿ ಆಕೆಯ ಹೆತ್ತವರನ್ನ ಕೊಂದು ಅವರ ಸ್ವತ್ತನ್ನು ತನ್ನದಾಗಿಸಿಕೊಂಡಿರುತ್ತಾನೆ. ಆದರೆ ಈ ವಿಷಯ ನಾಯಕಿ ಸೌಂದರ್ಯಳಿಗೆ ತಿಳಿದಿರುವುದಿಲ್ಲ. ವಿಚಿತ್ರವೆಂದರೆ ಸೌಂದರ್ಯ ಆತನ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿರುತ್ತಾಳೆ. ಸೂರ್ಯವರ್ಧನನಿಗೆ ತಾನು ಆಳುತ್ತಿರುವ ಆಸ್ತಿಯ ಒಡತಿ ಜೀವಂತವಾಗಿರುವ ವಿಷಯ ತಿಳಿದು, ಅವಳನ್ನು ಹುಡುಕಿ ಸಾಯಿಸಲು ಹೊಂಚು ಹಾಕಿರುತ್ತಾನೆ. ಇತ್ತ ಅದೇ ಸಮಯಕ್ಕೆ ಸೌಂದರ್ಯಳಿಗೆ ಸೂರ್ಯವರ್ಧನ್ ಮಗ ಸಿದ್ಧಾರ್ಥ್ ನ ಮೇಲೆ ಪ್ರೀತಿ ಚಿಗುರಿರುತ್ತದೆ. ಸೂರ್ಯವರ್ಧನನಿಗೆ ತಾನು ಹುಡುಕುತ್ತಿರುವುದು ಸೌಂದರ್ಯ ಎಂದು ತಿಳಿಯುತ್ತಾ? ಸಿದ್ಧಾರ್ಥನಿಗೆ ತನ್ನ ಅಪ್ಪನ ನಿಜ ಮುಖ ಗೊತ್ತಾಗುತ್ತಾ? ಸೌಂದರ್ಯಾಳಿಗೆ ತನ್ನ ಹುಟ್ಟು ರಹಸ್ಯ ತಿಳಿಯುತ್ತಾ? ಎಂಬ ಕುತೂಹಲವನ್ನು ಇಟ್ಟುಕೊಂಡು ಬರುತ್ತಿರುವ ಧಾರಾವಾಹಿ “ನಾಯಕಿ”.
ಕನ್ನಡ ಚಿತ್ರರಂಗದ ಹೆಸರಾಂತ ನಟಿ, ಕಿರುತೆರೆಯ ಪಾಪ್ಯುಲರ್ ಅತ್ತೆ ಹೇಮಾ ಚೌಧರಿ “ನಾಯಕಿ” ಧಾರಾವಾಹಿಯ ಮೂಲಕ ಕಿರುತೆರೆಗೆ ಮತ್ತೆ ಮರಳಿ ಬರುತ್ತಿದ್ದಾರೆ.
ಇನ್ನು ಉದಯ ಟಿವಿಯ “ಅವಳು” ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದ ಕಾವ್ಯ ನಾಯಕಿಯಲ್ಲಿ ಸೌಂದರ್ಯಳಾಗಿ ನಟಿಸುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಮತ್ತು ಮಾನವೀಯತೆಯ ಮೇಲೆ ಅತಿಯಾದ ನಂಬಿಕೆ ಇಟ್ಟು ಸಾಮಾಜಿಕ ಸೇವೆ ಮಾಡುತ್ತಿರುವ ಯುವಕ ಸಿದ್ಧಾರ್ಥ. ಹುಟ್ಟಲ್ಲಿ ಶ್ರೀಮಂತಿಕೆ ಇದ್ರು, ಎಲ್ಲರೂ ಸಮಾನರು ಎಂದು ಭಾವಿಸಿ ಅನ್ಯಾಯಕ್ಕೆ ಧ್ವನಿ ಏರಿಸಿ ಅದಕ್ಕೆ ಪರಿಹಾರ ಹುಡುಕುವ ಪಾತ್ರ ಈತನದು. ಇಂಥಹ ಸಿದ್ಧಾರ್ಥನ ಪಾತ್ರದಲ್ಲಿ ಕಿರುತರೆಯ ಖ್ಯಾತ ನಟ ದೀಪಕ್ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಚಿತ್ರರಂಗದ ಹೆಸರುವಾಸಿಯಾದ ನಟಿ ಹರಿಪ್ರೀಯ ಬ್ಯೂಸಿ ಶೆಡ್ಯೂಲ್‍ನಲ್ಲೂ “ನಾಯಕಿ” ಕಥೆಯನ್ನು ಕೇಳಿ ಸಂತಸದಿಂದ ಮೊದಲಬಾರಿಗೆ ಈ ಧಾರಾವಾಹಿಯ ಪ್ರಚಾರಕ್ಕೆ ಬಂದಿದ್ದಾರೆ. ಇವರು ಈ ಧಾರಾವಾಹಿಯ ಕೆಲವು ಪ್ರೋಮೋಗಲಲ್ಲಿ ಅಭಿನಯಿಸಿ ಮತ್ತು “ನಾಯಕಿ” ಧಾರಾವಾಹಿಯ ಪ್ರಚಾರಕ್ಕಾಗಿ ಉದಯ ಟಿವಿಯ ಜೊತೆ ಕೈ ಜೋಡಿಸಿದ್ದಾರೆ.
“ನಾಯಕಿ” ಧಾರಾವಾಹಿಯ ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ತಯಾರಾಗುತ್ತಿದ್ದು, ಶಶಿಧರ್ ಕೆ. ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸಚಿನ್ ಕ್ಯಾಮರಾ ಹಿಡಿಯುತ್ತಿದ್ದರೆ, ಕಲಾ ನಿರ್ದೇಶಕರಾಗಿ ಸತೀಶ್ ನಿರ್ವಹಿಸುತ್ತಿದ್ದಾರೆ. ವಿಶ್ವನಾಥ ಈ ಧಾರಾವಾಹಿಗೆ ಸಂಕಲನಕಾರರಾಗಿದ್ದಾರೆ.
ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳು, ಪಂಚ್ ಕೊಡೋ ಸಂಭಾಷಣೆ, ಸಸ್ಪೆನ್ಸ್ ತುಂಬಿದ ಕಥೆ “ನಾಯಕಿ”, ಜೂನ್ 17 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
Cinema News
ಮಧ್ವನವಮಿ ಶುಭಸಂದರ್ಭದಲ್ಲಿ “ಹನುಮ ಭೀಮ ಮಧ್ವ” ಚಿತ್ರದ ಬಗ್ಗೆ ಅಧಿಕೃತ ಘೋಷಣೆ .

Cinema News
ಎಸ್.ಎಲ್.ವಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ

Cinema News
ಸುಖಾಂತ್ಯ ಚಿತ್ರೀಕರಣ ಮುಕ್ತಾಯ

Cinema News
ದಳಪತಿ 67 ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ..

Cinema News
‘ದಸರಾ’ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಎಸ್. ಎಸ್ ರಾಜಮೌಳಿ – ಮಾಸ್ ಟೀಸರ್ ಗೆ ಸಿನಿ ಪ್ರೇಕ್ಷಕರು ಫಿದಾ

-
Movie Reviews4 years ago
ವಿಕೇಂಡ್ಗೊಂದು ಮನ ಮುಟ್ಟುವ ಚಿತ್ರ – ವಿಮರ್ಶೆ – ರೇಟಿಂಗ್ – 3.25/5
-
Movie Reviews4 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Movie Reviews4 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Box Office3 years ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Cinema News3 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office4 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News4 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
Reviews4 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News4 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
Gallery4 years ago
“BELL BOTTOM”(Film 50Days Success Meet) 09-04-2019 ksm