Box Office
ಬಾಕ್ಸ್ ಆಫೀಸ್ನಲ್ಲಿ ನಿಲ್ಲದ ಭಾರತ್ ಓಟ
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ಭಾರತ್ ಸಿನಿಮಾದ ಕಲೆಕ್ಷನ್ ಬಿಡುಗಡೆಯಾಗಿ ಒಂದು ವಾರದ ನಂತರವೂ ಜೋರಾಗಿಯೇ ಆಗುತ್ತಿದೆ.
1947ರಿಂದ ಆರಂಭವಾಗುವ ಈ ಸಿನಿಮಾ 1990ರವರೆಗೂ ನಡೆಯುತ್ತದೆ. ಇದು ಕೋರಿಯನ್ ಚಿತ್ರದ ರಿಮೇಕ್ ಆಗಿದೆ.
ಇನ್ನು ಬಿಡುಗಡೆಯಾದ ಮೊದಲ ವಾರವೇ 175 ಕೋಟಿಗೂ ಅಧಿಕ ಹಣವನ್ನು ಭಾರತ್ ಗಳಿಸಿತ್ತು. ಈ ಸಿನಿಮಾ ಸಕ್ಸಸ್ ಆಗಿರುವುದಕ್ಕೆ ಸಂತಸಗೊಂಡಿರುವ ಸಲ್ಮಾನ್ ಖಾನ್ ಮತ್ತು ನಟಿ ಕತ್ರಿನಾ ಕೈಫ್, ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಪ್ರತ್ಯಕ್ಷ ದರ್ಶಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಹೀಗೆ ಭೇಟಿ ಮಾಡಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ
Continue Reading