Movie Reviews
ರಾಮ್ ಜಾನುವಿನ ಮಧುರವಾದ ನೆನಪಿನ ಲವ್‌ಸ್ಟೋರಿ
ಚಿತ್ರ: 99.
ನಿರ್ದೇಶಕ: ಪ್ರೀತಂ ಗುಬ್ಬಿ.
ನಿರ್ಮಾಣ: ರಾಮು.
ಸಿನಿಮಾಟೋಗ್ರಫಿ: ಸಂತೋಷ್ ರೈ ಪಾತಾಜೆ.
ಸಂಗೀತ: ಅರ್ಜುನ್ ಜನ್ಯ.
ತಾರಾಗಣ: ಗಣೇಶ್, ಭಾವನಾ, ಸಮೀಕ್ಷಾ, ಪಿ ಡಿ ಸತೀಶ್ಚಂದ್ರ ಮತ್ತಿತರರು.
ರೇಟಿಂಗ್: 4/5
ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ 96 ಕನ್ನಡಕ್ಕೆ ಬಂದಿದ್ದು, ಈ ಸಿನಿಮಾಗೆ 99 ಎಂದು ಹೆಸರಿಟ್ಟಿದ್ದಾರೆ. ಶಾಲಾ ದಿನಗಳ ಸ್ನೇಹಿತರೆಲ್ಲರೂ ಒಟ್ಟಾಗಿ ಸೇರಿವ ಕಥೆ ಇದರಲ್ಲಿದ್ದು ಜತೆಯಲ್ಲಿ ಪುಟ್ಟ ಲವ್ ಸ್ಟೋರಿ ಸಹ ಇದೆ.
ರಾಮಚಂದ್ರ ಮತ್ತು ಜಾನಕಿ ಶಾಲಾದಿನಗಳಲ್ಲಿ ಪ್ರೀತಿ ಮಾಡುತ್ತಿರುತ್ತಾರೆ, ಆದರೆ ಅವರಿಬ್ಬರು ಮದುವೆ ಆಗಲು ಸಾಧ್ಯವಾಗಿರುವುದಿಲ್ಲ, ಅದು ಯಾಕೆ, ಮತ್ತು ಶಾಲಾ ರಿ ಯೂನಿಯನ್ ದಿನ ಇಬ್ಬರೂ ಭೇಟಿ ಮಾಡಿದಾಗ ತಮ್ಮ ಹಳೆಯ ನೆನೆಪುಗಳಿಗೆ ಜಾರುತ್ತಾರಾ, ಇವೆಲ್ಲವೂ ಸಿನಿಮಾದ ಜೀವಾಳವಾಗಿದೆ. ಇಡೀ ಸಿನಮಾ ನಿಂತಿರುವುದು ಭಾವನಾತ್ಮಕ ದೃಶ್ಯಗಳ ಮೇಲೆ. ಆ ವಿಚಾರದಲ್ಲಿ ಮೂಲ ಚಿತ್ರದಲ್ಲಿನ ದೃಶ್ಯಗಳ ಭಾವ ತೀವೃತೆ ಇಲ್ಲಿ ಮೂಡಿಬಂದಿಲ್ಲ. ಸಿನಿಮಾದ ಮೊದಲರ್ಧ ಗಣೇಶ್ಗೆ ಹೆಚ್ಚು ಮಾತಿಲ್ಲ, ದ್ವಿತಿಯಾರ್ಧದಲ್ಲಿ ಒಂದಷ್ಟು ಮಾತನಾಡುತ್ತಾರದರೂ ಅಭಿಮಾನಿಗಳಿಗೆ ಅಷ್ಟೋಂದು ರುಚಿಸುವುದಿಲ್ಲ.
ಸಿನಿಮಾದ ಹೈಲೈಟ್ ಆಗಿ ಸಂಗೀತ ನಿಲ್ಲುತ್ತದೆ. 99 ಚಿತ್ರದ ಮೂಲಕ ಸೆಂಚುರಿ ಭಾರಿಸಿರುವ ನಿರ್ದೇಶಕ ಅರ್ಜುನ್ ಜನ್ಯ ಉತ್ತಮವಾದ ಸಂಗೀತ ನೀಡಿದ್ದಾರೆ. ಸಿನಿಮಾಟೋಗ್ರಫರ್ ಸಂತೋಷ್ ರೈ ಪಾತಾಜೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಿಮೇಕ್ ಸಿನಿಮಾದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ಚಿತ್ರಕಥೆ ವಿಚಾರಕ್ಕೆ ಬಂದರೆ ಇದು ರಿಮೇಕ್ ಸಿನಿಮಾವಾದ್ದರಿಂದ ಮೂಲ ನಿರ್ದೇಶಕರಿಗೆ ಇದನ್ನು ತಲುಪಿಸಬೇಕು. ಅದನ್ನು ಕನ್ನಡೀಕರಿಸುವಲ್ಲಿ ನಿರ್ದೇಶಕರು ಕೊಂಚ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಗಣೇಶ್ ಮತ್ತು ಭಾವನಾ ಎಂದಿನಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ.
ಬಾಲ್ಯದ ಪಾತ್ರಧಾರಿಗಳು ಗಮನ ಸೆಳೆಯುತ್ತಾರೆ. ಉಳಿದಂತೆ 96 ಸಿನಿಮಾ ನೋಡಿದವರಿಗೆ ಈ ಸಿನಿಮಾ ಸಹ್ಯ ಎನಿಸದೇ ಇದ್ದರೂ, ಅಲ್ಲಿ ಅರ್ಥವಾಗದವರು ಈ ಚಿತ್ರ ನೋಡಿ ಎಂಜಾಯ್ ಮಾಡಬಹುದು.