News

ರಾಜಮೌಳಿಗಾಗಿ ತೆಲುಗು ಕಲಿಯುತ್ತಿದ್ದಾರೆ ಆಲಿಯಾಭಟ್‌

Published

on

ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ತೇಜಾ ನಟನೆಯ ಬಹು ನಿರೀಕ್ಷೆಯ ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾಭಟ್‌ ರಾಮ್‌ ಚರಣ್‌ ಅವರ ಜೋಡಿಯಾಗಿ ನಟಿಸುತ್ತಿರುವು ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾಗಾಗಿ ಆಲಿಯಾ ಭಟ್‌ ತೆಲುಗು ಕಲಿಯುತ್ತಿದ್ಧಾರಂತೆ.ಈ ಬಗ್ಗೆ ಅವರೇ ಮೀಡಿಯಾಗಳಿಗೆ ಹೇಳಿಕೆ ನೀಡಿದ್ದು,ಇದು ನನ್ನ ಕನಸಿನ ಪ್ರಾಜೆಕ್ಟ್‌ ಆಗಿದ್ದು, ಪ್ರೇಕ್ಷಕರಿಗಿಂತಲೂ ನಾನೇ ಅತಿ ಹೆಚ್ಚು ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದೇನೆ. ಈ ಸಿನಿಮಾಗಾಗಿ ನಾನು ಸದ್ಯ ತೆಲುಗು ಕಲಿಯುತ್ತಿದ್ದೇನೆ. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ದೊಡ್ಡ ಅದೃಷ್ಟ, ನಾನು ಅವರ ಮೊದಲ ಚಿತ್ರದಿಂದಲೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರ ಇಮ್ಯಾಜಿನೇಶನ್‌ ನನಗೆ ಬಹಳ ಇಷ್ಟ ಹಾಗಾಗಿ ಅವರ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ. 

Spread the love
Click to comment

Copyright © 2019 PopcornKannada.com