News
ಬ್ರಹ್ಮಚಾರಿಗೆ ಮೂಹರ್ತದ ಸಂಭ್ರಮ
ನೀನಾಸಂ ಸತೀಶ್ ಮತ್ತು ಆದಿತಿ ಪ್ರಭುದೇವ ನಟನೆಯ ಬ್ರಹ್ಮಚಾರಿ ಸಿನಿಮಾಗೆ ಭಾನುವಾರ ಅದ್ಧೂರಿ ಮುಹೂರ್ತ ನಡೆದಿದೆ. ಮೊದಲ ದೃಶ್ಯಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ದೊರೆತಿದೆ. ಉದಯ್ ಕೆ ಮೆಹ್ತಾ ಮತ್ತು ಸತೀಶ್ ಲವ್ ಇನ್ ಮಂಡ್ಯ ಸಿನಿಮಾದ ನಂತರ ಒಂದಾಗಿದ್ದು, ಚಂದ್ರಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಟೈಟಲ್ ಸೋಷಿಯಲ್ ಮೀಡಿಯಾದಲ್ಲಿ ಲಾಂಚ್ ಆಗಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಈಗ ಸಿನಿಮಾ ಸೆಟ್ಟೇರಿದ್ದು, ಭರ್ಜರಿ ಮಜನರಂಜನೆ ಚಿತ್ರದಲ್ಲಿರಲಿದೆಯಂತೆ. ಇನ್ನೂ ವಿಶೇಷ ಎಂದರೆ ಈ ಸಿನಿಮಾದಲ್ಲಿ ಶಿವರಾಜ್ ಕೆ ಆರ್ ಪೇಟೆ ಸಹ ನಟಿಸಲಿದ್ದಾರೆ. ಮುಹೂರ್ತಕ್ಕೆ ನಿರ್ದೇಶಕರಾದ ಮಹೇಶ್‌ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಬಂದು ಸತೀಶ್ ಅವರಿಗೆ ಶುಭಾಶಯ ಕೋರಿದ್ದಾರೆ.