Movie Reviews
ಪ್ರಿಮಿಯರ್ ಪದ್ಮಿನಿಯಲ್ಲಿ ಸಂಬಂಧಗಳ ಹೂರಣ
ಚಿತ್ರ: ಪ್ರೀಮಿಯರ್ ಪದ್ಮಿನಿ
ನಿರ್ದೇಶಕರು: ರಮೇಶ್ ಇಂದಿರಾ
ನಿರ್ಮಾಣ: ಶ್ರುತಿ ನಾಯ್ಡು
ಕಲಾವಿದರು: ಜಗ್ಗೇಶ್, ಮಧು, ಸುಧಾರಾಣಿ, ಪ್ರಮೋದ್, ಹಿತಾ, ವಿವೇಕ್ ಸಿಂಹ
ರೇಟಿಂಗ್ – 4/5
–
ಮನುಷ್ಯ ಬದುಕಿನಲ್ಲಿ ಜಂಜಾಟಗಳೇ ಹೆಚ್ಚು, ಅವುಗಳ ನಡುವೆ ನೀವು ಅಂದುಕೊಂಡಂತೆ ಬದುಕಿದರೆ ಅದೇ ನಿಮ್ಮ ಸಾಧನೆ ಮತ್ತು ಜೀವನ ತೃಪ್ತಿ ಇದು ಪ್ರೀಮಿಯರ್ ಪದ್ಮಿನಿ ಸಿನಿಮಾದ ಒಟ್ಟು ಸಾರಾಂಶ.
ಸೀರಿಯಲ್‌ಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ರಮೇಶ್ ಇಂದಿರಾ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದರೂ, ಹೇಳಬೇಕಾದದ್ದನ್ನು ಚಿಕ್ಕದಾಗಿ ಚೊಕ್ಕವಾಗಿಹೇಳಿದ್ದಾರೆ. ಜತೆಗೆ ಒಂದಷ್ಟು ಮನರಂಜನೆಯನ್ನು ನೀಡಿದ್ದಾರೆ.
.
ಗಂಡ ಹೆಂಡತಿ ಸಂಬಂಧಗಳ ಬಗ್ಗೆ ಸಾಕಷ್ಟು ಸಿನಿಮಾಗಳು ಮೂಡಿ ಬಂದಿದ್ದರೂ, ಪ್ರೀಮಿಯರ್ ಪದ್ಮಿನಿ ಸಿನಿಮಾ ಅವುಗಳಲ್ಲಿ ಬಹಳ ವಿಶೇಷವಾಗಿ ನಿಲ್ಲುತ್ತದೆ, ಕಾರಣ ಸಿನಿಮಾದ ಪಾತ್ರಗಳು. ಮತ್ತು ಕಥೆ ಹೇಳಿರುವ ಶೈಲಿ.
ಗಂಡ ಹೆಂಡತಿ ದೂರವಾದಾಗ ಆಗುವ ನೋವುಗಳೇನು, ಒಂಟಿ ಬದುಕಿನ ಕಷ್ಟಗಳೇನು ಎಂಬುದನ್ನು ಒಂದಷ್ಟು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಅದೇನು ಎಂಬುದನ್ನು ಸಿನಿಮಾ ಮಂದಿರದಲ್ಲಿಯೇ ನೋಡಬೇಕು.
ವಿಶೇಷ ಎಂದರೆ ನಿರ್ದೇಶಕರು ಗೆದ್ದಿರುವುದು ಪಾತ್ರಗಳ ಆಯ್ಕೆಯಲ್ಲಿ. ಜಗ್ಗೇಶ್, ಮಧು, ಸುಧಾರಾಣಿ, ಹಿತಾ, ಪ್ರಮೋದ್, ವಿವೇಕ್ ಸಿಂಹ ಹೀಗೆ ಎಲ್ಲರೂ ಸಿನಿಮಾದ ಕಥೆಯೊಳಗೆ ಜೀವಿಸಿದ್ದಾರೆ.
.
ಪ್ರತಿಯೊಂದು ಪಾತ್ರವೂ ನಮ್ಮ ಸುತ್ತವೇ ಸುತ್ತತ್ತಿದೆ ಎಂಬ ಭಾವನೆ ಬರುವಷ್ಟರ ಮಟ್ಟಿಗೆ ನಟಿಸಿದ್ದಾರೆ. ಭಾವನಾತ್ಮಕ ಸಿನಿಮಾಗಳಲ್ಲಿ ಬರೀ ಎಮೋಷನ್ಸ್ ಮಾತ್ರ ಇರುತ್ತದೆ ಎಂಬ ಭಾವನೆ ಇದೆ. ಆದರೆ ಇಲ್ಲಿ ಮನರಂಜನೆ, ಮಾಸ್ ಮಸಾಲೆ ಎಲಿಮೆಂಟ್ಸ್‌ಗಳು ಸೇರಿಕೊಂಡು ಒಂದು ಪಕ್ಕಾ ಎಂಟರ್‌ಟೇನರ್ ಸಿನಿಮಾವಾಗಿ ಇದು ಕಾಣುತ್ತದೆ.
ಹಾಗಾಗಿ ಈ ವಿಕೇಂಡ್‌ಗೆ ಪ್ರೀಮಿಯರ್ ಪದ್ಮಿನಿ ಪಕ್ಕಾ ನೋಡಲೇಬೇಕಾದ ಸಿನಿಮಾ ಅನಿಸುತ್ತದೆ.