Cinema News
ದಾಸ ದರ್ಶನ್ ಅವರ ‘ರಾಬರ್ಟ್’ ಚಿತ್ರ ಮುಂದಕ್ಕೆ
ಕೆಲ ದಿನಗಳ ಹಿಂದೆಯಷ್ಟೇ;ಮಂಡ್ಯದ ಎಲೆಕ್ಷನ್‌ನಲ್ಲಿ ಮಿಂಚಿನಂತೆ ಪ್ರಚಾರ ಚ್ಯಾಲೆಂಜಿಂಗ್ ಸ್ಟಾರ್ ಮಾಡಿದ್ದ ದರ್ಶನ್, ಈಗ ಕೈ ನೋವಿನಿಂದ ಬಳಲುತ್ತಿದ್ದಾರೆ.ಈ ಕಾರಣಕ್ಕಾಗಿ ಆರಂಭವಾಗಬೇಕಿದ್ದ ‘ರಾಬರ್ಟ್’ ಸಿನಿಮಾ ಚಿತ್ರೀಕರ ಶುರುವಾಗೋದು ತಡವಾಗಲಿದೆ. ಅಂದುಕೊಂಡಂತೆ ಆಗಿದ್ದಾರೆ ಚಿತ್ರ ಈ ತಿಂಗಳು ಚಿತ್ರೀಕರಣ ಶುರುವಾಗಬೇಕಿತ್ತು. ಪ್ರಚಾರದಸಮಯದಲ್ಲಿ ಲಕ್ಷಾಂತರ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದ ಪರಿಣಾಮ ಅಪಘಾತವಾದ ಕೈನಲ್ಲಿ ಈಗ ನೋವು ಕಾಣಿಸಿದೆ. ಜತೆಗೆ ಉರಿ ಬಿಸಿಲಿನಲ್ಲಿ ಓಡಾಡಿದ್ದರಿಂದ ದರ್ಶನ್ ಟ್ಯಾನ್ ಆಗಿದ್ದು ಅದನ್ನೆಲ್ಲ ನಿವಾರಿಸಿಕೊಳ್ಳಬೇಕಾಗಿದೆ.ಜತೆಗೆ ಸತತ ಪ್ರಚಾರದ ಕಾರಣದಿಂದ ವಿಶ್ರಾಂತಿಯ ಅಗತ್ಯ ಇದೆ ಡಾಕ್ಟರ್ ಹೇಳಿರುವುದರಿಂದ ರಾಬರ್ಟ್ ಚಿತ್ರೀಕರಣಒಂದೆರೆಡು ವಾರ ಮುಂದಕ್ಕೆ ಹೋಗಲಿದೆಯಂತೆ.ಉಮಾಪತಿ ಶ್ರೀನಿವಾಸಗೌಡ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ.