News
ಗಾಂಧಿಗಿರಿಯಲ್ಲಿ ಜೆಡಿ ಚಕ್ರವರ್
ಸತ್ಯ, ಶಿವ ಸಿನಿಮಾ ಮೂಲಕ ದೊಡ್ಡ ಹೆಸರು ಮಾಡಿದ್ದ ಖ್ಯಾತ ನಟ ಜೆ ಡಿ ಚಕ್ರವರ್ತಿ ಕನ್ನಡಕ್ಕೆ ಬಂದಿದ್ದು, ರಘು ಹಾಸನ್ ನಿರ್ದೇಶನದ ಗಾಂಧಿಗಿರಿಯಲ್ಲಿ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್,ಈ ಚಿತ್ರದಲ್ಲಿ ನಾಯಕರಾಗಿರ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಜೋಗಿ ಚಿತ್ರದಲ್ಲಿ ತಾಯಿಯ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಆರುಂಧತಿ ನಾಗ್ ಇಲ್ಲಿ ಪ್ರೇಮ್‌ಗೆ ತಾಯಿಯಾಗಿದ್ದಾರೆ. ಜೆ ಡಿ ಚಕ್ರವರ್ತಿ ಇಂಧನ ಸಚಿವರ ಪಾತ್ರದಲ್ಲಿ ನಟಿಸಿದ್ದು, ತಮ್ಮ ಅದ್ಭುತ ಪರ್ಫಾಮೆನ್ಸ್ ಮೂಲಕ ಈಗಾಗಲೇ ಚಿತ್ರತಂಡವನ್ನು ಮೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಪ್ರೇಮ್ ಮತ್ತು ಜೆಡಿ ತೊಡೆ ತಟ್ಟಿರುವ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.