News
ಖಾಕಿಗೆ ಜತೆಯಾದ ಬಸಣ್ಣಿ ತಾನ್ಯ
ಯಜಮಾನ ಸಿನಿಮಾದ ಬಸಣ್ಣಿ ಹಾಡಿನಿಂದ ಜನಪ್ರಿಯತೆ ಪಡೆದುಕೊಂಡ ತಾನ್ಯ ಹೋಪ್ ಈಗ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ. ಹೌದು ತರುಣ್ ಶಿವಪ್ಪ ನಿರ್ಮಾಣದ ಖಾಕಿ ಸಿನಿಮಾಗೆ ತಾನ್ಯ ಹೋಪ್ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಟಗರು ಸಿನಿಮಾ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ಧಾರೆ.ಚಿರಂಜೀವಿ ಸರ್ಜಾ ಈಗಾಗಲೇ ಸಿಂಗ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಖಾಕಿಯನ್ನು ಸದ್ಯದಲ್ಲೇ ತೊಡಲಿದ್ದಾರೆ. ಇದರ ಜತೆಯಲ್ಲಿ ನಾಗಾಭರಣ ಅವರ ಜುಗಾರಿ ಕ್ರಾಸ್‌ನಲ್ಲಿ ಅವರು ನಟಿಸಲಿದ್ದಾರೆ. ಒಟ್ಟಿನಲ್ಲಿ ಯಜಮಾನ ನಂತರ ತಾನ್ಯಗೆ ಸಾಕಷ್ಟು ಸಿನಿಮಾಗಳು ಬರುತ್ತಿದ್ದು, ಅದರಲ್ಲಿ ಮೊದಲ ಚಿತ್ರ ಖಾಕಿಯಾಗಿದೆ.