News
ಕವಲು ದಾರಿ ಈಗ ಸಕ್ಸಸ್ ದಾರಿ
ಪುನೀತ್‌ರಾಜ್‌ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಕವಲುದಾರಿ ಈಗ ಸಕ್ಸಸ್ ದಾರಿಯಲ್ಲಿದೆ, ಶುಕ್ರವಾರ ಬಿಡುಗಡೆಯಾಗಿ ವಿಮರ್ಷಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿರುವ ಈ ಸಿನಿಮಾದಲ್ಲಿ ಅನಂತ್‌ನಾಗ್ ಮತ್ತು ರಿಷಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಈ ಸಿನಿಮಾ ತನ್ನ ಬಿಗಿ ನಿರೂಪಣೆಯಿಂದ ಪ್ರೇಕ್ಷಕರನ್ನು ಅತಿ ಹೆಚ್ಚು ಸೆಳೆಯುತ್ತಿದೆ. ಚರಣ್ ರಾಜ್ ಸಂಗೀತ ನೀಡಿರುವ ಹಾಡುಗಳು ಸಹ ಪ್ರೇಕ್ಷಕರಿಗೆ ಇಷ್ಟವಾಗುತ್ತಿವೆ. ಅನಂತ್‌ನಾಗ್, ಅಚ್ಯುತ್‌ಕುಮಾರ್, ರಿಷಿ ಅವರ ನಟನೆ ಅತಿ ಹೆಚ್ಚು ಜನರನ್ನು ಸೆಳೆಯುತ್ತಿದ್ದು, ಜನ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿದ್ದಾರೆ. ಗೋದಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾವನ್ನು ನಿರ್ದೇಶನ ಮಾಡಿದ್ದ ಹೇಮಂತ್‌ರಾವ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.