News
ಕನ್ನಡಕ್ಕೆ ರಶ್ಮಿಕಾ ನಟನೆಯ ತೆಲುಗು,ತಮಿಳು ಸಿನಿಮಾಗಳು
ರಶ್ಮಿಕಾ ಮಂದಣ್ಣ ನಟನೆಯ ಡಿಯರ್ ಕಾಮ್ರೆಡ್ ಮತ್ತು ತಮಿಳಿನ ಕಾರ್ತಿ ಜತೆ ನಟಿಸುತ್ತಿರುವ ಚಿತ್ರ ಕನ್ನಡ ಭಾಷೆಗೆ ಡಬ್ ಆಗಿ ಬರಲಿದೆಯಂತ. ಈಗಾಗಲೇ ಡಿಯರ್ ಕಾಮ್ರೆಡ್ ಸಿನಿಮಾ ಕನ್ನಡಕ್ಕೆ ಬರುವುದು ಅಧಿಕೃತವಾಗಿದ್ದು, ಆ ಚಿತ್ರದ ಮೊದಲ ಟ್ರ್ಯಾಕ್ ಬಿಡುಗಡೆಯಾದಾಗ ಕನ್ನಡ ಹಾಡು ಸಹ ಬಿಡುಗಡೆಯಾಗಿತ್ತು. ಈಗ ತಮಿಳಿನಲ್ಲಿ ಕಾರ್ತಿ ಜತೆ ನಟಿಸುತ್ತಿದ್ದು, ಆ ಚಿತ್ರ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತದಂತೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಶ್ಮಿಕಾ ಅವರ ಎಲ್ಲ ಚಿತ್ರಗಳು ಕನ್ನಡಕ್ಕೆ ಡಬ್ ಮಾಡಲು ಆಯಾ ಚಿತ್ರ ನಿರ್ಮಾಪಕರು ಯೋಚಿಸಿದ್ದಾರೆ. ಇನ್ನೊಂದು ಸಂತೋಷದ ವಿಚಾರವೆಂದರೆ ರಶ್ಮಿಕಾ ಅವರೇ ಕನ್ನಡ ಭಾಷೆಗೆ ಡಬ್ ಆಗುವ ಸಿನಿಮಾಗಳಿಗೆ ಧ್ವನಿ ನೀಡಲಿದ್ದಾರೆ ಎಂಬ ಸುದ್ದಿ ಸಹ ಹಬ್ಬಿದೆ.