Cinema News

ಇಂಟೆಲಿಜೆನ್ಸ್‌ ಆಫಿಸರ್‌ ಆಗಿ ರಘು ದೀಕ್ಷೀತ್‌

Published

on

ಸ್ಯಾಂಡಲ್ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷೀತ್‌ ಈಗ ನಟನೆಯನ್ನು ಆರಂಭಿಸಿದ್ದು, ಸಿದ್ಧಾರ್ಥ್‌ ಮಹೇಶ್‌ ನಟನೆಯ ಗರುಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ಇಂಟೆಲಿಜೆನ್ಸ್‌ ಆಫೀಸರ್‌ ಆಗಿ ನಟಿಸುತ್ತಿದ್ದಾರೆ.

ಹೌದು, ನಿನ್ನ ಪೂಜೆಗೆ ಬಂದೆ ಮಾದೇಶ್ವರ ಎಂದು ಹಾಡುತ್ತ ಸ್ಯಾಂಡಲ್‌ವುಡ್‌ಗೆ ಬಂದ ರಘುದೀಕ್ಷಿತ್‌ ಈಗ ಗರುಡ ಸಿನಿಮಾ ಮೂಲಕ ನಟನೆಗೂ ಎಂಟ್ರಿ ಕೊಡುತ್ತಿದ್ದಾರೆ.

 

ಐಂದ್ರಿತಾ ರೇ, ಆಶಿಕಾ ರಂಗನಾಥ್‌ ನಾಯಕಿಯರಾಗಿರುವ ಈ ಸಿನಿಮಾದಲ್ಲಿ ರಘು ಇಂಟಲೆಜೆನ್ಸ್‌ ಆಫೀಸರ್ ಆಗಿದ್ದಾರೆ. ಸದ್ಯಕ್ಕೆ ಇದಷ್ಟೆ ಮಾಹಿತಿಯನ್ನು ಬಿಟ್ಟುಕೊಟ್ಟಿರುವ ಚಿತ್ರತಂಡ ಸಿನಿಮಾದಲ್ಲಿ ಅವರ ಪಾತ್ರದ ವಿವರಣೆಯನ್ನು ನೋಡಬಹುದು ಎಂದಿದೆ.  

Spread the love
Click to comment

Copyright © 2019 PopcornKannada.com