News
ಆಗಸ್ಟ್‌ನಲ್ಲಿ ಸ್ಟಾರ್ ಸಿನಿಮಾಗಳ ಹಬ್ಬ
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಚುನಾವಣೆ ಪ್ರಯುಕ್ತ ಸ್ಟಾರ್‌ಗಳ ಸಿನಿಮಾಗಳಾವ್ಯಾವು ಬಿಡುಗಡೆಯಾಗಿಲ್ಲ. ಆದರೆ ಆಗಸ್ಟ್‌ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ನಡೆಯಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ಅನೌನ್ಸ್ ಮಾಡಿರುವ ಪ್ರಕಾರ ಪೈಲ್ವಾನ್ ಆಗಸ್ಟ್‌ನಲ್ಲಿಯೇ ಬರಲಿದೆ. ಇದರ ಜತೆಗೆ ಅವನೇ ಶ್ರೀಮನ್ನಾರಾಯಣ ಸಹ ಅದೇ ತಿಂಗಳಲ್ಲಿ ಬರಲಿದೆಯಂತೆ. ಇವರಿಬ್ಬರ ಜತೆಯಲ್ಲಿ ದರ್ಶನ್ – ನಿಖಿಲ್ ನಟನೆಯ “ಮುನಿರತ್ನ ಕುರುಕ್ಷೇತ್ರ” ಸಹ ಆಗಸ್ಟ್‌ಗೆ ತೆರೆ ಕಾಣಲಿದೆ. ಈ ಮೂರು ಚಿತ್ರಗಳು ಹೈ ಬಜೆಟ್‌ನ್ನು ಹೊಂದಿದ್ದು ಬಹುಭಾಷಾ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಹಾಗಾಗಿ ಮೂರು ಚಿತ್ರತಂಡಗಳಿಗೆ ಗೆಲ್ಲುವ ಭರವಸೆ ಕೊಂಚ ಜಾಸ್ತಿಯೇ ಇದೆ. ಇನ್ನೊಂದು ಮಾಹಿತಿಯ ಪ್ರಕಾರ ದರ್ಶನ್ ನಟನೆಯ ಒಡೆಯ ಸಹ ಅದೇ ಸಮಯದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಆಗಸ್ಟ್ ಒಂದು ರೀತಿಯಲ್ಲಿ ಸ್ಟಾರ್ ವಾರ್ ತಿಂಗಳು ಎಂದರೆ ತಪ್ಪಾಗಲಾರದು.