ಮತ್ತೆ ಮರಳಿ ಬಂದಿದೆ ಶಂಕರ್‌ನಾಗ್ ಅವರ ಹೆಮ್ಮೆಯ ‘ಮಾಲ್ಗುಡಿ ಡೇಸ್’ – PopcornKannada
Connect with us

News

ಮತ್ತೆ ಮರಳಿ ಬಂದಿದೆ ಶಂಕರ್‌ನಾಗ್ ಅವರ ಹೆಮ್ಮೆಯ ‘ಮಾಲ್ಗುಡಿ ಡೇಸ್’

Published

on

ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ.  ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ.  ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. 

ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ. ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್  ಕೇವಲ ೧೯ ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ. ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು.

ರಾಷ್ಟ್ರೀಯ ಚಾನೆಲ್ ನಲ್ಲಿ ಕನ್ನಡಿಗರು ರೂಪಿಸಿದ ಯಶಸ್ವಿ ಧಾರಾವಾಹಿ, ದಿ.ಶಂಕರ್ ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್’ಜೀ಼ ಕನ್ನಡ ವಾಹಿನಿಯಲ್ಲಿ ಮೇ  11ರಿಂದ ಕನ್ನಡ ಭಾಷೆಯಲ್ಲಿ ಪ್ರಸಾರವಾಗಲಿದೆ. 

ಮೇ 11ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದ್ದು ಇದು ಕನ್ನಡ ಕಿರುತೆರೆಯಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ. ವಿಶ್ವವಿಖ್ಯಾತ ಲೇಖಕ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಅವರ ಜನಪ್ರಿಯ ಕಥಾಗುಚ್ಛವಾಗಿದೆ. ಮಾಲ್ಗುಡಿ ಎಂಬ ಕಲ್ಪಿತ ಊರಿನಲ್ಲಿ ನಡೆಯುವ ಈ ಕಥೆಯನ್ನು ಅವರ ಕಲ್ಪನೆಯಂತೆಯೇ ರೂಪಿಸಿದ್ದಕ್ಕೆ ಶಂಕರ್ ನಾಗ್ ಲೇಖಕರಿಂದ ಅಪಾರ ಪ್ರಶಂಸೆ ಪಡೆದಿದ್ದರು. ವಿಷ್ಣುವರ್ಧನ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ಮಾಸ್ಟರ್ ಮಂಜುನಾಥ್, ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ, ಶಂಕರ್ ನಾಗ್, ಅರುಂಧತಿ ನಾಗ್ ಮುಂತಾದವರು ನಟಿಸಿದ್ದಾರೆ. 

ಮಾಲ್ಗುಡಿ ಡೇಸ್ 39 ಕಂತುಗಳಲ್ಲಿ 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯ ಮಾಲ್ಗುಡಿಯನ್ನು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ರೂಪಿಸಿದ್ದರು. ಎಲ್.ವೈದ್ಯನಾಥನ್ ಸಂಗೀತ, ಆರ್.ಕೆ.ನಾರಾಯಣ್ ಅವರ ಸೋದರ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳು ಈ ಧಾರಾವಾಹಿಯ ಮಹತ್ವ ಹೆಚ್ಚಿಸಿವೆ. ಈ ಸರಣಿಯನ್ನು ಟಿ.ಎಸ್.ನರಸಿಂಹನ್ ನಿರ್ಮಾಣ ಮಾಡಿದ್ದರು. 

ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.

ಮಾಲ್ಗುಡಿಯ ಕರ್ತೃ ಆರ್.ಕೆ.ನಾರಾಯಣ್ ಚೆನ್ನೈನಲ್ಲಿ ಜನಿಸಿದರೂ ತಮ್ಮ ಬಹುತೇಕ ಜೀವನವನ್ನು ಮೈಸೂರಿನಲ್ಲಿ ಕಳೆದರು. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ ಪುರಸ್ಕಾರಗಳನ್ನು ಪಡೆದಿದ್ದರು. ರಾಯಲ್ ಸೊಸೈಟಿ ಆಫ್ ಲಿಟರೇಚರ್ ನೀಡುವ ಎಸಿ ಬೆನ್ಸನ್ ಮೆಡಲ್ ಗೌರವಕ್ಕೂ ಭಾಜನರಾಗಿದ್ದರು. ವಿಶ್ವ ಸಾಹಿತ್ಯದಲ್ಲಿ ಪ್ರಮುಖ ಭಾರತೀಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ. ಅವರ ಮಾಲ್ಗುಡಿ ಸಾಹಿತ್ಯಾಸಕ್ತರಿಗೆ ಕುತೂಹಲ ಕೆರಳಿಸುವ ತಾಣವಾಗಿದೆ. ಅವರು ಬರೆದಿದ್ದು ಶ್ರೀಸಾಮಾನ್ಯರ ಕಥೆಗಳಾಗಿದ್ದು ಅವು ಓದುಗರನ್ನು ಅಪಾರವಾಗಿ ಸೆಳೆದಿವೆ. 

ಮೇ  11, 2020 ರಂದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ‘ಮಾಲ್ಗುಡಿ ಡೇಸ್’ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.

Spread the love

Continue Reading
Click to comment

Leave a Reply

Your email address will not be published. Required fields are marked *

News

ಜೂನ್ 28ರಂದು “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

Published

on

By

ವೀಕ್ಷಕರಿಗೆ ಇಷ್ಟವಾಗುವ ಧಾರಾವಾಹಿ, ರಿಯಾಲಿಟಿ ಶೋಗಳನ್ನು ರೂಪಿಸುವ ಜೀ಼ ಕನ್ನಡ ಇದೀಗ ಕನ್ನಡದ ಸೂಪರ್ ಹಿಟ್ ಚಲನಚಿತ್ರ “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಕಾಣಲಿದೆ. ಜೂನ್ 28,2020ರಂದು ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡ ವಾಹಿನಿಯ ವೀಕ್ಷಕರಿಗೆ ವಿಶ್ವದಾದ್ಯಂತ ಈ ಚಲನಚಿತ್ರ ಲಭ್ಯವಿದ್ದು ಕನ್ನಡದ ಜನಪ್ರಿಯ ಚಿತ್ರಗಳ ಪ್ರಸಾರ ಸರಣಿಯಲ್ಲಿ ಇದೂ ಒಂದಾಗಿದೆ.

ಕೆ.ಎಸ್.ಅಶೋಕ ನಿರ್ದೇಶನದ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿತ್ತು.

ದಿಯಾ ಒಬ್ಬ ಯುವತಿಯ ಕಥೆಯಾಗಿದ್ದು ಆಕೆ ಸ್ವಭಾತಃ ಅಂತರ್ಮುಖಿಯಾಗಿದ್ದರೂ ಒಬ್ಬ ಯುವಕನ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾಳೆ. ಆತ ದಿಢೀರ್ ಎಂದು ಕಣ್ಮರೆಯಾಗುತ್ತಾನೆ. ಸಂಕಷ್ಟದಲ್ಲಿರುವ ಯುವತಿಗೆ ಮತ್ತೊಬ್ಬ ಬದುಕಲ್ಲಿ ವಿಶ್ವಾಸ ತುಂಬಿ ಆಕೆಯಲ್ಲಿ ಬದುಕುವ ಉತ್ಸಾಹ ಹೆಚ್ಚಿಸುತ್ತಾನೆ.

ಈ ಮಧ್ಯದಲ್ಲಿ ಆಕೆಗೆ ಮತ್ತೊಂದು ಆಘಾತ ಕಾದಿರುತ್ತದೆ. ಪ್ರೀತಿ ನಷ್ಟವಾದ ನಂತರವೂ ಬದುಕನ್ನು ಹೇಗೆ ನೋಡಬೇಕೆನ್ನುವ ಬದುಕಿನ ಪಾಠಗಳನ್ನು ದಿಯಾ ಚಿತ್ರ ಹೇಳುತ್ತದೆ.

ಕನ್ನಡದ ಸೂಪರ್ ಹಿಟ್ ಚಲನಚಿತ್ರಗಳ ಸಂಗ್ರಹ ಹೊಂದಿರುವ ಜೀ಼ ಕನ್ನಡ ಇದೀಗ ದಿಯಾ ಚಿತ್ರದ ಮೂಲಕ ಎಲ್ಲರನ್ನೂ ರಂಜಿಸಲು ಸಜ್ಜಾಗಿದೆ. ಪವಿತ್ರಾ ಲೋಕೇಶ್, ಅರವಿಂದ ರಾವ್, ರಾಜೇಶ್ ರಾವ್, ಜ್ಯೋತಿ ರೈ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಡಿ.ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.

Spread the love
Continue Reading

Cinema News

ನಟ ಸುಶಾಂತ್ ಜೊತೆಗಿನ ಒಪ್ಪಂದ ಪ್ರತಿಗಳನ್ನು ಪೊಲೀಸರಿಗೆ ತಲುಪಿಸಿದ ಯಶ್ ರಾಜ್ ಫಿಲ್ಮ್ಸ್

Published

on

By

ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜೂ.20 ರಂದು, ಮೃತ ನಟ ಸುಶಾಂತ್ ಸಿಂಗ್ ಜೊತೆಗಿನ ಮುಂದಿನ ಚಿತ್ರಗಳಿಗಾಗಿ ನಡೆದಿದ್ದ ತನ್ನ ಒಪ್ಪಂದದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ತಲುಪಿಸಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಪತ್ರ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಳಿಕ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಸಿನಿಮಾ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಯಶ್ ರಾಜ್ ಫಿಲ್ಮ್ಸ್ ಗೆ ಜೂ.18 ರಂದು ಸೂಚನೆ ನೀಡಿದ್ದರು.

ತನಿಖಾಧಿಕಾರಿಗೆ ಸುಶಾಂತ್ ಸಿಂಗ್ ರಜಪೂತ್ ಸಹಿ ಮಾಡಿರುವ ಒಪ್ಪಂದದ ಪತ್ರ YRF (Yash Raj Films) ನಿಂದ ಲಭ್ಯವಾಗಿದೆ ಎಂದು ಅಭಿಷೇಕ್ ತ್ರಿಮುಖೆ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ತಿಳಿಸಿದ್ದಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸುಶಾಂತ್ ಕುಟುಂಬ ಸದಸ್ಯರು, ಸುಶಾಂತ್ ನ ಆಪ್ತ ಗೆಳತಿ ರೆಹಾ ಚಕ್ರವರ್ತಿ, ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಬ್ರಾ ಸೇರಿದಂತೆ ಈ ವರೆಗೂ 15 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಅವರು ನೀಡಿರುವ ಮಾಹಿತಿಯ ಆಧಾರದಲ್ಲಿ ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಹೇಳಿದ್ದಾರೆ.

ರೆಹಾ ಚಕ್ರವರ್ತಿ ನೀಡಿರುವ ಮಾಹಿತಿಯ ಪ್ರಕಾರ, ಯಶ್ ರಾಜ್ ಫಿಲ್ಮ್ಸ್ ಜೊತೆಗೆ ನಟ ಸುಶಾಂತ್ ಒಪ್ಪಂದಗಳನ್ನು ರದ್ದುಪಡಿಸಿ ಆಕೆಗೂ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ಕೆಲಸ ಮಾಡದಂತೆ ಹೇಳಿದ್ದರು ಎಂದು ತಿಳಿದುಬಂದಿದೆ.

34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಬಾಂದ್ರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು.

Source : New Indian Express

Spread the love
Continue Reading

Cinema News

“ಫ್ಯಾಮಿಲಿ ಪ್ಯಾಕ್” ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ.

Published

on

By

ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕರು.

ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ‌ ಅರ್ಜುನ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂಕಷ್ಟಕರ ಗಣಪತಿ ಚಿತ್ರದ ನಾಯಕ‌ ಲಿಖಿತ್ ಶೆಟ್ಟಿ ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಲಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಅಚ್ಯುತಕುಮಾರ್, ದತ್ತಣ್ಣ, ತಿಲಕ್, ನಾಗಭೂಷಣ್ ಮುಂತಾದವರಿದ್ದಾರೆ. ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಉದಯಲೀಲ ಅವರ ಛಾಯಾಗ್ರಹಣವಿದೆ.

ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಸಂಭಾಷಣೆ ಬರೆಯುತ್ತಿದ್ದಾರೆ.

Spread the love
Continue Reading

Cinema News

ಇಷ್ಟಪಟ್ಟಹುಡುಗನ ಜೊತೆ ನಡೆಯಲಿದೆ ಶುಭ ಪೂಂಜಾ ಲೈಫ್ ಲಾಕ್‌ಡೌನ್

Published

on

By

ಮೊಗ್ಗಿನ ಮನಸು ಚಿತ್ರದ ಮೂಲಕ ಚಂದನವನದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಮಾದಕ ಬೆಡಗಿ ಶುಭ ಪೂಂಜಾ ಅವರು ಮದುವೆ ಆಗಲು ತಯಾರಿ ನಡೆಸಿದ್ದಾರೆ.

ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿರುವ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ನಟಿ ಶುಭ ಪೂಂಜಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ಸುಮಾರು ಒಂದು ವರ್ಷದಿಂದ ಪರಸ್ಪರ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ, ಈ ವರ್ಷಾಂತ್ಯಕ್ಕೆ ಸಪ್ತಪದಿ ತುಳಿಯಲಿದ್ದಾರೆ.

ಇತ್ತೀಚಿಗೆ “ತ್ರಿದೇವಿ” ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿದ್ದ ನಟಿ ಶುಭ ಪುಂಜ, ಚಂದ,ಮೊಗ್ಗಿನ ಮನಸು, ಕಂಠೀರವ ಮುಂತಾದ ಸಿನಿಮಾಗಳ ಮೂಲಕ ಒಳ್ಳೆ ಹೆಸರು ಗಳಿಸಿದ್ದಾರೆ.

Spread the love
Continue Reading

Cinema News

ಡಾರ್ಲಿಂಗ್ ಕೃಷ್ಣ ಜೊತೆ ರೋಮ್ಯಾನ್ಸ್ ಮಾಡಲಿದ್ದಾರಾ ರಾಧಿಕಾ ಕುಮಾರಸ್ವಾಮಿ??

Published

on

By

ನಾಗಶೇಖರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ದಮಯಂತಿ ನಂತರ ರಾಧಿಕಾ ಕುಮಾರಸ್ವಾಮಿ ಅವರು ಬೈರಾದೇವಿ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದು, ಈಗ ನಾಗಶೇಖರ್ ಅವರ ಆಫ಼ರ್ ಬಂದಿದೆ ಎನ್ನಲಾಗುತ್ತಿದೆ.

ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರಾ ಎನ್ನುವುದು ಇನ್ನು ಅಧಿಕೃತವಾಗಿ ಚಿತ್ರತಂಡ ಹೇಳಿಲ್ಲ. ಆದರೆ ಅವರಿಗೆ ಚಿತ್ರದ ಒನ್ ಲೈನ್ ಸ್ಟೋರಿ ಅನ್ನು ಕೇಳಿ ಇಷ್ಟ ಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಅನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರು ಈಗ ಡಾರ್ಲಿಂಗ್ ಕೃಷ್ಣ ಅವರನ್ನು ನಿರ್ದೇಶಿಸಲಿದ್ದಾರೆ. “ಲವ್ ಮೊಕ್ಟ್ರೈಲ್” ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಭರ್ಜರಿ ಗೆಲವು ಕಂಡಿರುವ ಡಾರ್ಲಿಂಗ್ ಕೃಷ್ಣ ಈ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾರೆ. ಈ ಸಿನೆಮಾವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, “ಕೃಷ್ಣ@ಜಿಮೈಲ್.ಕಂ” ಎಂದು ಹೆಸರಿಟ್ಟಿದ್ದಾರೆ.

Spread the love
Continue Reading

Trending News