ಸ್ವಾತಂತ್ರ್ಯ ದಿನಾಚರಣೆಗೆ “ರಾಂಧವ” – PopcornKannada
Connect with us

Cinema News

ಸ್ವಾತಂತ್ರ್ಯ ದಿನಾಚರಣೆಗೆ “ರಾಂಧವ”

Published

on

ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ನಾಯಕರಾಗಿರುವ ರಾಂಧವ ಸಿನಿಮಾ ಇದೇ ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆಯಾಗುತ್ತಿದೆ.

 

ಇತ್ತೀಚೆಗೆ ರೈತರಿಂದ ಆಡಿಯೋ ಬಿಡುಗಡೆ ಮಾಡಿಸಿದ ಚಿತ್ರತಂಡ ಸಿನಿಮಾವನ್ನು ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಯುವ ನಿರ್ದೇಶಕ ಸುನೀಲ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಐತಿಹಾಸಿಕ ಕಥೆಯೂ ಇದ್ದು, ನಾಯಕ ಭುವನ್‌ ರಾಜನ ಪಾತ್ರವನ್ನು ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಮೂರು ಡಿಫ‌ರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಶ್ರೀನಿವಾಸ್‌ ನಾಯಕಿಯಾಗಿದ್ದಾರೆ.

 

 

 

ಆಗಸ್ಟ್‌ನಲ್ಲಿ ಸಾಕಷ್ಟು ಸಿನಿಮಾಗಳಿದ್ದೂ, ರಾಂಧವಕ್ಕೆ 200 ಚಿತ್ರಮಂದಿರಗಳು ಸಿಕ್ಕಿವೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್‌ಗೆ ಆಡಿಯನ್ಸ್‌ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ ನಟ ಭುವನ್‌.

 

 

ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ರಾಂಧವ ಚಿತ್ರಮಂದಿರದಲ್ಲಿ ಕತ್ತಿ ಹಿಡಿದು ಆರ್ಭಟಿಸುವುದು ಪಕ್ಕಾ ಆಗಿದೆ.

Spread the love

ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಪೊನ್ನಣ್ಣ ನಾಯಕರಾಗಿರುವ ರಾಂಧವ ಸಿನಿಮಾ ಇದೇ ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆಯಾಗುತ್ತಿದೆ.

 

ಇತ್ತೀಚೆಗೆ ರೈತರಿಂದ ಆಡಿಯೋ ಬಿಡುಗಡೆ ಮಾಡಿಸಿದ ಚಿತ್ರತಂಡ ಸಿನಿಮಾವನ್ನು ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಯುವ ನಿರ್ದೇಶಕ ಸುನೀಲ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಐತಿಹಾಸಿಕ ಕಥೆಯೂ ಇದ್ದು, ನಾಯಕ ಭುವನ್‌ ರಾಜನ ಪಾತ್ರವನ್ನು ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಮೂರು ಡಿಫ‌ರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಶ್ರೀನಿವಾಸ್‌ ನಾಯಕಿಯಾಗಿದ್ದಾರೆ.

 

 

 

ಆಗಸ್ಟ್‌ನಲ್ಲಿ ಸಾಕಷ್ಟು ಸಿನಿಮಾಗಳಿದ್ದೂ, ರಾಂಧವಕ್ಕೆ 200 ಚಿತ್ರಮಂದಿರಗಳು ಸಿಕ್ಕಿವೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್‌ಗೆ ಆಡಿಯನ್ಸ್‌ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ ನಟ ಭುವನ್‌.

 

 

ಒಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ರಾಂಧವ ಚಿತ್ರಮಂದಿರದಲ್ಲಿ ಕತ್ತಿ ಹಿಡಿದು ಆರ್ಭಟಿಸುವುದು ಪಕ್ಕಾ ಆಗಿದೆ.

Spread the love

Cinema News

ಉಪ್ಪಿ ಕಬ್ಜಗೆ ಎಂಟಿಬಿ ನಾಗರಾಜ್‌ ನಿರ್ಮಾಪಕ

Published

on

By

ಆರ್‌ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನ ಕಬ್ಜ ಸಿನಿಮಾಗೆ ಹೊಸಕೋಟೆಯ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.

 

ಜೆಡಿಎಸ್‌ ಮತ್ತು ಕಾಂಗ್ರೇಸ್‌ ಸರ್ಕಾರದಲ್ಲಿ ರೆಬಲ್‌ ಶಾಸಕರೇಂದೆ ಗುರುತಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಬೀಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂಟಿಬಿ ನಾಗರಾಜ್‌ ಉಪಚುನಾವಣೆಯಲ್ಲಿ ಸೋತಿದ್ದರು. ಆದರೆ ಈಗ ಚಂದ್ರ ಮೂಲಕ  ಚಿತ್ರ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆದರೆ ಇವರು ಈ ಸಿನಿಮಾಗೆ ಪೂರ್ಣ ಪ್ರಮಾಣದ ಬಂಡವಾಳವನ್ನು ಹೂಡುತ್ತಿಲ್ಲ ಚಂದ್ರು ಜತೆ ಸಹ ನಿರ್ಮಾಪಕರಾಗಿ ಇರಲಿದ್ದಾರೆ.

 

ಉಪೇಂದ್ರ ನಟನೆಯ ಈ ಸಿನಿಮಾ ಒಂಭತ್ತು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದಕ್ಕಾಗಿ ಭರ್ಜರಿ ಸೆಟ್‌ ಹಾಕಲಾಗುತ್ತಿದೆ. ತೆರೆಯ ಮೇಲೆ ಒಂದಷ್ಟು ಪ್ರಯೋಗಗಳನ್ನು ಮಾಡುವ ಚಂದ್ರು ಈಗ ಎಂಟಿಬಿಯಂತಹ ಕಲರ್‌ಫುಲ್‌ ರಾಜಕಾರಣಿಯನ್ನು ಸಿನಿಮಾ ರಂಗಕ್ಕೆ ತರುತ್ತಿರುವುದು ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ. 

 

Spread the love
Continue Reading

Cinema News

‘ಜಂಟಲ್‌ಮನ್‌’ ಟ್ರೇಲರ್‌ ಸೂಪರ್‌ ಹಿಟ್‌

Published

on

By

ಪ್ರಜ್ವಲ್‌ ದೇವರಾಜ್  ನಟನೆಯ ಜಂಟಲ್‌ಮನ್‌ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಅದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಟ್ರೇಲರ್ ಅನ್ನು ಚಿತ್ರರಂಗದ ಗಣ್ಯರು ಮೆಚ್ಚಿ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದರು.

 

ಈ ಬಗ್ಗೆ ಮಾತನಾಡಿರುವ ನಟ ಪ್ರಜ್ವಲ್‌ ಜಂಟಲ್‌ಮನ್‌ ನನ್ನ ಸಿನಿಮಾ ಕರಿಯರ್‌ನಲ್ಲಿ ಒಂದು ಅದ್ಭುತ ಸ್ಕ್ರಿಪ್ಟ್‌ ಆಗಿದೆ. ಟ್ರೇಲರ್‌ಗೆ ಜನ ನೀಡುತ್ತಿರುವ ರೆಸ್ಪಾನ್ಸ್‌ ಕಂಡು ನನಗೆ ಖುಷಿಯಾಗಿದೆ. ನಿರ್ದೇಶಕ ಜಡೇಶ್‌ಕುಮಾರ್‌ ಉತ್ತಮ ಸ್ಕ್ರಿಪ್ಟ್‌ ಮಾಡಿದ್ದಾರೆ. ಇಡೀ ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

 

ಇದೇ ಮೊದಲ ಬಾರಿಗೆ ಗುರುದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯಮನುಷ್ಯ ನಿದ್ರೆ ಮಾಡುವ ಸಮಯಕ್ಕಿಂತ ಹೆಚ್ಚಿನ ಸಮಯ ಈ ಚಿತ್ರದ ನಾಯಕ ನಿದ್ದೆ ಮಾಡುತ್ತಾನೆ. ಅದೇ ಈ ಚಿತ್ರದ ತಿರುಳು ಟಗರು ಮತ್ತು ಸಲಗ ಖ್ಯಾತಿಯ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯದಲ್ಲೆ ಚಿತ್ರ ರಿಲೀಸ್‌ ಆಗಲಿದೆ. 

 

ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದರು.

 

Spread the love
Continue Reading

Cinema News

ಆನಂದ್‌ಗೆ ಮುಹೂರ್ತ ಆಗಿದ್ದ ದಿನವೇ ‘RDX’ಗೂ ಮುಹೂರ್ತ

Published

on

By

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ನಟನೆಯ ಹೊಚ್ಚ ಹೊಸ ಚಲನಚಿತ್ರ “ಆರ್‌ಡಿಎಕ್ಸ್‌” ಮುಹೂರ್ತ ಫೆ.19ಕ್ಕೆ ನಡೆಯಲಿದೆ. ವಿಶೇಷ ಎಂದರೆ ಅದೇ ದಿನ ಶಿವರಾಜ್‌ಕುಮಾರ್‌ ನಟನೆಯ ಮೊಟ್ಟ ಮೊದಲ ಚಿತ್ರ ‘ಆನಂದ್‌’ಗೂ ಮುಹೂರ್ತವಾಗಿತ್ತು.

 

ಆರ್‌ಡಿಎಕ್ಸ್‌ ಸಿನಿಮಾವನ್ನು ರವಿ ಅರಸು ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದಾರೆ. ತಮಿಳುನಾಡಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಂಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇವರು ಈ ಹಿಂದೆ ತಮಿಳಿನಲ್ಲಿ ವಿವೇಗಂ, ವಿಶ್ವಾಸಂ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ತುಂಬಾ ವರ್ಷಗಳ ನಂತರ ಸತ್ಯಜ್ಯೋತಿ ಫಿಲಂಸ್ ಅವರು ಕನ್ನಡಕ್ಕೆ ಮತ್ತೆ ಮರಳಿದ್ದಾರೆ.

 

‘ಆರ್‌ಡಿಎಕ್ಸ್‌’ನಲ್ಲಿ ಶಿವರಾಜ್‌ಕುಮಾರ್‌ ಸೂಪರ್‌ ಕಾಪ್‌ ಅವತಾರವನ್ನು ತಾಳಲಿದ್ದಾರೆ. ಟಗರು ಖ್ಯಾತಿಯ ಚರಣ್‌ ರಾಜ್‌ ಮ್ಯೂಸಿಕ್‌ ಮಾಡಲಿದ್ದಾರೆ. 

 

Spread the love
Continue Reading

Cinema News

ಕ್ಷಮೆ ಕೇಳಿದ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌

Published

on

By

ರಾಕಿಂಗ್‌ ಸ್ಟಾರ್‌ ಯಶ್‌ ಇದೇ 8ಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದು ಅಭಿಮಾನಿಗಳು ದೊಡ್ಡ ಸಂಭ್ರಮವನ್ನು ಆಚರಿಸುತ್ತಿದ್ದು, ಅದಕ್ಕೆ ಈಗಾಗಲೇ ತಯಾರಿ ಆರಂಭವಾಗಿದೆ. ಜತೆಗೆ ಅಭಿಮಾನಿಗಳಿಗೆ ಬೇಸರದ ಸಂಗತಿಯೂ ಇದೆ, ಅದೇನೆಂದರೆ ಬಹು ದಿನಗಳಿಂದ ಕಾಯುತ್ತಿದ್ದ ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಟೀಸರ್‌ ಬಿಡುಗಡೆಯಾಗುತ್ತಿಲ್ಲ.

 

ಹೌದು, ಬಹಳ ದಿನಗಳಿಂದ ಶೂಟಿಂಗ್‌ ಮಾಡುತ್ತಿರುವ ಈ ಸಿನಿಮಾದ ಟೀಸರ್‌ ಹುಟ್ಟುಹಬ್ಬಕ್ಕೆ ಬರುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಯಾವುದೇ ಟೀಸರ್‌ ಬರುತ್ತಿಲ್ಲ ಎಂದು ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

 

 

ಅಭಿಮಾನಿಗಳಲ್ಲಿ ಅವರು ಕ್ಷಮೆ ಕೇಳುತ್ತಾ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದು, ಇಡೀ ತಂಡ ಜನವರಿ 6 ರ ಸಂಜೆಯವರೆಗೂ ಶೂಟಿಂಗ್‌ನಲ್ಲಿರುತ್ತದೆ. 7 ರಂದು ಎಲ್ಲರೂ ವಾಪಾಸ್‌ ಬರಲಿದ್ದಾರೆ , ಹಾಗಾಗಿ ಟೀಸರ್‌ ಕೆಲಸಗಳು ಆಗಿಲ್ಲ ಅವಸರ ಅವಸರವಾಗಿ ಟೀಸರ್‌ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಆ ವಿಚಾರದಲ್ಲಿ ನಾವು ಕಾಂಪ್ರಮೈಸ್‌ ಆಗುವುದಿಲ್ಲ ಹಾಗಾಗಿ ಟೀಸರ್‌ ರಿಲೀಸ್‌ ಮಾಡುತ್ತಿಲ್ಲ. ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ ಎಂದು ಬರೆದಿದ್ದಾರೆ. ಇನ್ನು ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಸೆಕೆಂಡ್‌ ಲುಕ್‌ನ್ನು ರಿಲೀಸ್‌ ಮಾಡಲಿದ್ದೇವೆ ಎಂದು ಸಹ ಹೇಳಿದ್ದಾರೆ.

 

ಈ ಟ್ವೀಟ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ನಮಗೆ ನಿಜಕ್ಕೂ ನಿರಾಸೆಯಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. 

Spread the love
Continue Reading

Cinema News

ರಾಕಿ ಭಾಯ್ ಬರ್ತ್‌ಡೇಗೆ 5000 ಕೆಜಿ ಕೇಕ್

Published

on

By

ರಾಕಿಂಗ್‌ ಸ್ಟಾರ್‌ ಯಶ್‌ ಜ.8ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಅದಕ್ಕಾಗಿ ಅಭಿಮಾನಿಯೊಬ್ಬರು 5000 ಕೆಜಿ ತೂಕದ ಕೇಕ್‌ ತಯಾರಿಸಲಾಗುತ್ತಿದೆ.

ಕೆಜಿಎಫ್‌ ನಂತರ ನ್ಯಾಷನಲ್‌ ಲೆವೆಲ್‌ ಸ್ಟಾರ್‌ ಆಗಿದ್ದಾರೆ. ಅವರನ್ನು ಹುಡುಕಿಕೊಂಡು ತಮಿಳು ನಾಡು, ಆಂಧ್ರ, ಮುಂಬೈನಿಂದೆಲ್ಲ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಅವರ ಹುಟ್ಟು ಹಬ್ಬ ಅದ್ಧೂರಿಯಾಗಿ ನಡೆಯಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಆರಂಭವಾಗಿದೆ.

ವೇಣು ಎನ್ನುವ ಅಭಿಮಾನಿ ರಾಕಿಂಗ್‌ ಸ್ಟಾರ್‌ ಬರ್ತ್‌ಡೆಗಾಗಿ ಇಷ್ಟು ದೊಡ್ಡ ಗಾತ್ರದ ಕೇಕ್‌ನ್ನು ತಯಾರಿಸಲಿದ್ದು, ಅವರ ಹುಟ್ಟು ಹಬ್ಬದ ದಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್‌ ಗ್ರೌಂಡ್‌ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅದನ್ನು ಯಶ್‌ ಕತ್ತರಿಸಲಿದ್ದಾರೆ.

Spread the love
Continue Reading

Trending News