ರಿಷಿಗೆ ರಚಿತಾ ರಾಮ್‌ ಜೋಡಿ – PopcornKannada
Connect with us

Cinema News

ರಿಷಿಗೆ ರಚಿತಾ ರಾಮ್‌ ಜೋಡಿ

Published

on

ಯೋಗರಾಜ್‌ ಭಟ್‌ ಮತ್ತು ಶಶಾಂಕ್‌ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ರಿಷಿ ನಾಯಕ ಎಂದು ಈಗಾಗಲೇ ಸುದ್ದಿಯಾಗಿದೆ. ಈ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ರಚಿತಾ ರಾಮ್‌ ನಟಿಸುತ್ತಿದ್ದಾರೆ.

 

ಆಪರೇಶನ್‌ ಅಲಮೇಲಮ್ಮ ಚಿತ್ರದ ನಂತರ ರಿಷಿ ಸಿಕ್ಕಾಪಟ್ಟೆ ಬಿಝಿಯಾಗಿದ್ದರು. ಅದರಲ್ಲೂ ಕವಲುದಾರಿ ನಂತರ ರಿಷಿಗೆ ಸಿಗುತ್ತಿರುವ ಪಾತ್ರಗಳು ಡಿಫ್ರೆಂಟ್‌ ಆಗಿವೆ. ಅದರಂತೆ ಈ ಹೊಸ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಕಥೆಯನ್ನು ಯೋಗರಾಜ್‌ ಭಟ್ಟರು ಬರೆದಿದ್ದಾರೆ. ರಚಿತಾ ರಾಮ್‌ ಕೂಡಾ ಇತ್ತೀಚೆಗೆ ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಅವರು ಎನ್‌ಆರ್‌ಐ ಆಗಿರುತ್ತಾರಂತೆ.

 

 

ಭಟ್ಟರ ಶಿಷ್ಯ ಮೋಹನ್‌ ಸಿಂಗ್‌ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟಗರು, ಸಲಗ, ಮದಗಜ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಈ ಹೊಸ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ರಿಷಿ ಸದ್ಯ ಮದುವೆ ಬಿಝಿಯಲ್ಲಿದ್ದು, ಅದು ಮುಗಿದ ನಂತರ ಈ ಚಿತ್ರ ಆರಂಭವಾಗಲಿದೆ.

Spread the love

ಯೋಗರಾಜ್‌ ಭಟ್‌ ಮತ್ತು ಶಶಾಂಕ್‌ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ರಿಷಿ ನಾಯಕ ಎಂದು ಈಗಾಗಲೇ ಸುದ್ದಿಯಾಗಿದೆ. ಈ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ರಚಿತಾ ರಾಮ್‌ ನಟಿಸುತ್ತಿದ್ದಾರೆ.

 

ಆಪರೇಶನ್‌ ಅಲಮೇಲಮ್ಮ ಚಿತ್ರದ ನಂತರ ರಿಷಿ ಸಿಕ್ಕಾಪಟ್ಟೆ ಬಿಝಿಯಾಗಿದ್ದರು. ಅದರಲ್ಲೂ ಕವಲುದಾರಿ ನಂತರ ರಿಷಿಗೆ ಸಿಗುತ್ತಿರುವ ಪಾತ್ರಗಳು ಡಿಫ್ರೆಂಟ್‌ ಆಗಿವೆ. ಅದರಂತೆ ಈ ಹೊಸ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಕಥೆಯನ್ನು ಯೋಗರಾಜ್‌ ಭಟ್ಟರು ಬರೆದಿದ್ದಾರೆ. ರಚಿತಾ ರಾಮ್‌ ಕೂಡಾ ಇತ್ತೀಚೆಗೆ ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಅವರು ಎನ್‌ಆರ್‌ಐ ಆಗಿರುತ್ತಾರಂತೆ.

 

 

ಭಟ್ಟರ ಶಿಷ್ಯ ಮೋಹನ್‌ ಸಿಂಗ್‌ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟಗರು, ಸಲಗ, ಮದಗಜ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಈ ಹೊಸ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. ರಿಷಿ ಸದ್ಯ ಮದುವೆ ಬಿಝಿಯಲ್ಲಿದ್ದು, ಅದು ಮುಗಿದ ನಂತರ ಈ ಚಿತ್ರ ಆರಂಭವಾಗಲಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *

Cinema News

“ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ” ಹಾಡಿಗೆ ಸಿಕ್ತು ಬಹುಪರಾಕ್

Published

on

By

ಕರ್ನಾಟಕದಲ್ಲಿ ಈಗ ಕೋರೋನಾ 19 ವೈರಸ್ 41 ದಿವಸದ ಲಾಕ್ ಡೌನ್ ಸಡಿಲ ಆದ ಮೇಲೆ ಮಧ್ಯ ಮಾರಾಟಕ್ಕೆ ನೂಕು ನುಗ್ಗಲು ಶುರು ಆಗಿ ಬಿಟ್ಟಿದೆ. ಆದರೆ ಈ ಮಧ್ಯ ಸಂಬಂದಿ ಒಂದು ಹಾಡು ಸಹ `ತನಿಖೆ’ ಚಿತ್ರದ್ದು ಯು ಟ್ಯೂಬ್ ಅಲ್ಲಿ ಬಹಳ ಪ್ರಸಿದ್ದಿ ಆಗಿದೆ. ಅದೇ `ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ….ಗೀತೆ ನವೀನ್ ಸಜ್ಜು ಅವರು ಹಾಡಿರುವುದು ಸಕ್ಕತ್ ವೈರಲ್ ಆಗಿ ಲಕ್ಷಾಂತರ ಕೇಳುಗರನ್ನು ಹಾಗೂ ನೋಡುಗರನ್ನು ಸಂಪಾದಿಸಿಕೊಂಡಿದೆ. ಇದೆ ಹಾಡು ಟಿಕ್ ಟಾಕ್ ಅಲ್ಲೂ ಸಹ ರಂಜನೆಗೆ ಬಳಸಲಾಗುತ್ತಿದೆ. ಜೀ ಮ್ಯೂಜಿಕ್ ಅಡಿಯಲ್ಲಿ ಈ `ತನಿಖೆ’ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ.

 

`ತನಿಖೆ’ ಕನ್ನಡ ಸಿನಿಮಾ ಸೆನ್ಸಾರ್ ಇಂದ ಮನ್ನಣೆ ಸಹ ಪಡೆದುಕೊಂಡು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೋರೋನಾ 19 ವೈರಸ್ ಲಾಕ್ ಡೌನ್ ಇಂದ ಬಿಡುಗಡೆಯನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಗೆ ಎಂದು ನಿರ್ಮಾಪಕ ಕಲಿ ಗೌಡ ಅವರು ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.

 

`ತನಿಖೆ’ ಪಕ್ಕ ಕಮರ್ಷಿಯಲ್ ಸಿನಿಮಾ ನಾಲ್ಕು ಸಾಹಸ ಸನ್ನಿವೇಶ ಅಲ್ಟಿಮೇಟ್ ಶಿವು ನಿರ್ವಹಿಸಿದ್ದಾರೆ, ಕ್ರಿಸ್ಟೋಫರ್ ಲೀ ಸಂಗೀತ ನಿರ್ದೇಶನದಲ್ಲಿ ಸಂತೋಷ್ ವೆಂಕಿ `ಒಟ್ಟಾರೆ….ಹಾಡನ್ನು, ಯಾರೋ ಇವಳು ಗೆಳೆಯ…ಚಿಂತನ್ ವಿಕಾಸ್, ಎಣ್ಣೆ ಹೊಡೆಯೋದ…ನವೀನ್ ಸಜ್ಜು ಹಾಗೂ ಯಾರೋ ನೀನು….ವಾಣಿ ಹರಿಕೃಷ್ಣ ಹಾಡಿದ್ದಾರೆ.

 

 

`ತನಿಖೆ’ ಹಳ್ಳಿಯಲ್ಲಿ ನಡೆಯುವ ಆರು ಯುವ ಸ್ನೇಹಿತರ ಜೀವನ ಪಯಣ. ಆರರಲ್ಲಿ ಒಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ಹುಡುಗಿ ಮಿಕ್ಕ ಐವರಲ್ಲಿ ಒಬ್ಬನನ್ನು ಪ್ರೀತಿ ಮಾಡುತ್ತಾ ಇರುತ್ತಾಳೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರರಲ್ಲಿ ಮನಸ್ತಾಪ ಹರಡುತ್ತದೆ. ಆಕಸ್ಮಿಕವಾಗಿ ಆರು ಸ್ನೇತರಲ್ಲಿ ಒಬ್ಬನ ಹತ್ಯೆ ಸಹ ಆಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಹಳ್ಳಿಯನ್ನು ಬಿಡುವಂತೆ ಆಗುತ್ತದೆ. ಆನಂತರ `ತನಿಖೆ’ ಆಗಿ ಐವರನ್ನು ಸಹ ಅರ್ರೆಸ್ಟ್ ಮಾಡಲಾಗುವುದು. `ತನಿಖೆ’ ಮಾಡುವಾಗ ಅನೇಕ ತಿರುವುಗಳು ಚಿತ್ರಕತೆಯಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. `ತನಿಖೆ’ ಚಿತ್ರದ ಕಥೆ, ಚಿತ್ರಕಥೆ, ಗೀತರಚನೆ ಹಾಗೂ ನಿರ್ದೇಶನ ಕಲಿ ಗೌಡ ಅವರೇ ಮಾಡಿದ್ದಾರೆ. ಶ್ಯಾಮ್ ಸಿಂದನೂರ್ ಛಾಯಾಗ್ರಹಣ, ಸಂಕಲನ ಹಾಗೂ ಡಿ ಐ ಕೆಲಸವನ್ನು ವೇದ್ ನಿರ್ವಹಿಸಿದ್ದಾರೆ.

 

ತಾರಾಗಣದಲ್ಲಿ ಅನಿಲ್ ಕುಮಾರ್, ಗುಲ್ಶನ್, ಚಂದನ, ಮುನಿರಾಜು, ಸಂತೋಷ್ ಜಯಕುಮಾರ್, ಪ್ರಭಿಕ್ ಮೊಗವೀರ್, ನಿಖಿಲ್, ಕಾಲ್ಕೆರೆ ಗಂಗಾಧರ್, ಅಪ್ಪು ಬಡಿಗರ್, ಗೋಪಿ ಹಾಗೂ ಇತರರು ಇದ್ದಾರೆ.

 

 

Spread the love
Continue Reading

Cinema News

ಮೈ ಕೊಡವಿಕೊಂಡು “ವಿರಾಟ ಪರ್ವ”ನಾಗಿ ಬರುತ್ತಿದ್ದಾನೆ ಅರು ಗೌಡ.

Published

on

By

ವಿರಾಟ ಪರ್ವ ಆಂದೊಡನೆ ಜ್ಞಾಪಕಕ್ಕೆ ಬರುವುದು ಮಹಾಭಾರತ. 18 ಅಧ್ಯಾಯಗಳಲ್ಲಿ ನಾಲ್ಕನೇ ಪರ್ವ ವಿರಾಟ ಪರ್ವ ಕೌರವರ ಸಂಚು ಪಾಂಡವರನ್ನು ಅರಗಿನ ಮನೆಯಲ್ಲಿ ಮುಗಿಸಿಬಿಡಬೇಕು ಎಂಬ ವಿಚಾರ ಕೇಳಿದಿದ್ದೇವೆ ಹಾಗೂ ಓದಿದ್ದೇವೆ. ಆದರೆ ಈ ಕನ್ನಡ ಸಿನಿಮಾ ವಿರಾಟ ಪರ್ವ ಸಹ ನಾಲ್ಕು ಬಗೆಯಲ್ಲಿ, ಮೂರು ಕಾಲ ಘಟ್ಟದಲ್ಲಿ ಸಿದ್ದವಾಗಿ ಈ ಚಿತ್ರದ ಮೊದಲ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. `ವಿರಾಟ ಪರ್ವ’ ಎರಡನೇ ಪೋಸ್ಟರ್ ಹೇಮ ಚಂದ್ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮನಾದ ಹೆತ್ತವರಿಂದ ಬಿಡುಗಡೆ ಮಾಡಿಸಿಕೊಂಡಿದೆ.

 

ಎಸ್ ಆರ್ ಮೀಡಿಯಾ ಅಡಿಯಲ್ಲಿ ಈ ಚಿತ್ರವನ್ನ ಸುನಿಲ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಅನೇಕ ವಿಶೇಷಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಒಂದು ಗೀತೆಯ ಎಂಟು ಸಾಲುಗಳನ್ನು ಬಳಸಲಾಗಿದೆ. `ತೇನಾ ವಿನ ತೃಣ ಮಾಪಿ ಆ ಚಾಲತಿ ಮಮತೆಯ ಬಿಡು ನೀ ಮೂಡ ಮನ’….ಎಂದು ಪ್ರಾರಂಭ ಆಗುವುದನ್ನು 2000 ಇಸವಿ ಕಾಲಘಟ್ಟಕ್ಕೆ ಹೊಂದಿಸಿ ದೇಶಕದ ಸೈನಿಕ ತನ್ನ ಅಂಗವಿಕಲ 8 ವರ್ಷದ ಮಗಳಿಗೆ ಅರ್ಥವನ್ನು ತಿಳಿಸಿ ಕಣ್ಮರೆಯಾಗಿರುತ್ತಾನೆ. ಇದನ್ನು ಆ ಬಾಲಕಿ ಸದಾ ಕೇಳುತ್ತಾ ಆ ಹಾಡಿನಿಂದ ಹಲವಾರು ವ್ಯಕ್ತಿಗಳಿಗೆ ಸ್ಪೂರ್ತಿ ಹಾಗೂ ಧೈರ್ಯ ತುಂಬುವ ಸನ್ನಿವೇಶ ಸಹ ಈ ಚಿತ್ರದಲ್ಲಿ ಅಳವಡಿಸಲಾಗಿದೆ.

 

 

ಈ ಚಿತ್ರದ ಪೋಸ್ಟರ್ ಅನ್ನು ಕಲಾವಿದ ರವಿ ಎಲ್ ಪೂಜಾರಿ ತಮ್ಮ ಪೆಯಿಂಟಿಂಗ್ ಇಂದ ತಯಾರಿಸಿದ್ದಾರೆ. ಒಟ್ಟು ನಾಲ್ಕು ಪೆಯಿಂಟಿಂಗ್ ಅನ್ನು ತಯಾರು ಮಾಡಲಾಗಿದ್ದು ಈಗಾಗಲೆ ಎರಡು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಎ 2 ಮ್ಯೂಜಿಕ್ ಯು ಟ್ಯೂಬ್ ಅಡಿಯಲ್ಲಿ ಚಿತ್ರದ ಟ್ರೈಲರ್ ಸಹ ಬಿಡುಗಡೆ ಮಾಡಲಾಗಿದ್ದು ಒಳ್ಳೆಯ ಪ್ರಶಂಸೆ ಬರುತ್ತಿದೆ.

 

ಸುಮಾರು ಎರಡು ವರ್ಷಗಳ ಕಾಲ ಈ ಚಿತ್ರಕ್ಕೆ ಶ್ರಮ ವಹಿಸಿರುವ ಅನಂತ್ ಶೈನ್ ಈ ಹಿಂದೆ ಮುದ್ದು ಮನಸೇ ಸಿನಿಮಾ ನಿರ್ದೇಶನ ಮಾಡಿದವರು. ಈ ಚಿತ್ರದ ಚಿತ್ರೀಕರಣಕ್ಕಾಗಿಯೇ ಮಳೆ ಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲಕ್ಕಾಗಿ ಕಾದು ಚಿತ್ರೀಕರಣವನ್ನು ಮಾಡಿದ್ದಾರೆ. ಹೀಗಾಗಿ ಎರಡು ವರ್ಷಗಳ ಕಾಲ ಸಮಯ ಹಿಡಿಯಿತು ಎನ್ನುವ ಅನಂತ್ ಶೈನ್ 55 ದಿವಸಗಳಲ್ಲಿ ಚಿತ್ರೀಕರಣವನ್ನು ಭಟ್ಕಳ, ಮೈಸೂರು, ಕೋಲಾರ ಹಾಗೂ ಬೆಂಗಳೂರಿನಲ್ಲಿ ನಡೆಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಅನಂತ್ ಶೈನ್ ನಿರ್ವಹಿಸಿದ್ದಾರೆ.

 

 

ಈ ಚಿತ್ರ ಮೂರು ವ್ಯಕ್ತಿಗಳ ಮನಸ್ಥಿತಿ ಬಗ್ಗೆ ಬಿಚ್ಚಿಕೊಳ್ಳುತ್ತದೆ. ಮಂಸೋರೆ, ಯಶ್ ಶೆಟ್ಟಿ ಹಾಗೂ ಹೇಮಂತ್ ಸುಶೀಲ್ ಈ ಪಾತ್ರಗಳನ್ನು ಮಾಡಿದ್ದಾರೆ. ಅಜ್ಞಾತವಾಸ, ಹುಡುಕಾಟ ಹಾಗೂ ಥ್ರಿಲ್ಲಿಂಗ್ ಅಂಶಗಳಿರುವ ಈ ಚಿತ್ರದಲ್ಲಿ ಮನುಷ್ಯ ಸಂಬಂದಕ್ಕೆ ಪೆಟ್ಟು ಬಿದ್ದಾಗ ಅದರ ಉಳಿವಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬುದು ಚಿತ್ರದ ಹೂರಣ.

 

`ವಿರಾಟ ಪರ್ವ’ ಚಿತ್ರದಲ್ಲಿ ಒಟ್ಟು 80 ಕಲಾವಿದರು ಅಭಿನಯ ಮಾಡಿದ್ದಾರೆ. ಆರು ಗೌಡ, ಅಭಿನಯ (ಕನ್ನಡದಲ್ಲಿ ಹುಡುಗರು ಚಿತ್ರದಲ್ಲಿ ಅಭಿನಯಿಸಿದ ತಮಿಳು ನಟಿ -ಮಾತು ಬಾರದ ಹುಡುಗಿ ಇನ್ಸ್ಪೆಕ್ಟರ್ ಪಾತ್ರ ಮಾತನಾಡುತ್ತದೆ), ಯಶ್ ಹೆಟ್ಟಿ, ಅನಿಲ್ ಸಿದ್ದು, ಅನ್ವಿತ ಸಾಗರ್, ಹರಿಣಿ, ಪ್ರಕಾಶ್ ಹೆಗ್ಗೋಡು, ಉಮೇಶ್ ಪುಂಗ, ಹೇಮತ್ ಸುಶೀಲ್, ಮನಸೋರೆ, ಸ್ಪಂದನ ಪ್ರಸಾದ್, ಪ್ರನ್ಯ ಪಿ ರಾವ್, ಚೈತ್ರ ಕೊಟೂರು ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.

 

ವಿರಾಟ ಪರ್ವ ಚಿತ್ರಕ್ಕೆ ಶಿವ ಬಿ ಕೆ ಕುಮಾರ್ ಹಾಗೂ ಶಿವ ಸೀನ ಕ್ಯಾಮರಾ ಹಿಡಿದಿದ್ದಾರೆ. ವಿನಿಟ್ ರಾಜ್ ಮೆನನ್ ಸಂಗೀತ ಹಾಗೂ ಹಿನ್ನಲೆ ಸಂಗೀತವನ್ನು ಋತ್ವಿಕ್ ಮುರಳೀಧರ್ ಹಾಗೂ ವಿಜಯ್ ರಾಜ್ ಜೊತೆ ನಿರ್ವಹಿಸಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತರಚನೆ ಈ ಚಿತ್ರಕ್ಕಿದೆ.

 

ವಿಕ್ರಮ್ ಮೋರ್ ಹಾಗೂ ಮಾಸ್ ಮಾದ ಸಾಹಸ, ವೆಂಕಿ ಯು ಡಿ ವಿ ಸಂಕಲನ, ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿರಾಟ ಪರ್ವ ಈಗ ಬಿಡುಗಡೆ ಆಗಲು ಸಹ ಸಿದ್ದವಾಗಿದೆ.

Spread the love
Continue Reading

Cinema News

ಕ್ರೈಂ-ಕಾಮಿಡಿ-ಥ್ರಿಲ್ಲರ್ ‘ಮಾರಿ ಗೋಲ್ಡ್’ ಚಿತ್ರದಲ್ಲಿ ದಿಗಂತ್, ಸಂಗೀತಾ

Published

on

By

ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಮಾರಿಗೋಲ್ಡ್ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳುತ್ತಿದ್ದಾರೆ.

 

ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕಳೆದ ಮಾರ್ಚ್ 5 ರಿಂದ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸುತ್ತಮುತ್ತ 35 ರಿಂದ 40 ದಿನಗಳ ಕಾಲ ಒಂದಷ್ಟು ವಿಶೇಷ ಲೊಕೇಶನ್‍ಗಳಲ್ಲಿ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರದ ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ. ರಘುವರ್ಧನ್ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ ಈ ಕಥೆ ಕೇಳಿ ಇಷ್ಟಪಟ್ಟು ಬೇರೊಬ್ಬ ನಿರ್ದೇಶಕರಿಗೆ ಅವಕಾಶ ನೀಡಿದ್ದಾರೆ.

 

ಚಿತ್ರಕ್ಕೆ ಸಂಗೀತ ಶೃಂಗೇರಿ ಚಿತ್ರದ ನಾಯಕಿಯಾಗಿದ್ದು, ಈಗಾಗಲೇ 777ಚಾರ್ಲಿ ಚಿತ್ರದಲ್ಲಿ ಇವರು ನಟಿಸಿದ್ದಾರೆ. ರಘು ನೀಡುವಳ್ಳಿ ಸಂಭಾಷಣೆಗಳನ್ನು ರಚಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮರಾ ವರ್ಕ್ ನಿಭಾಯಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಈ ಚಿತ್ರದ 2 ಹಾಡುಗಳಿಗೆ ವೀರ್ ಸಮರ್ಥ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಅಥರ್ವ ಖ್ಯಾತಿಯ ಯಶ್ ಶೆಟ್ಟಿ ಕೂಡ ಈ ಚಿತ್ರದಲ್ಲಿದ್ದಾರೆ.

 

ಕ್ರೈಂ, ಕಾಮಿಡಿ ಹಾಗೂ ಎಮೋಷನಲ್ ಕಥಾನಕ ಚಿತ್ರದಲ್ಲಿದ್ದು, ಕೆ.ಜಿ.ಎಫ್ ಖ್ಯಾತಿಯ ಸಂಪತ್ ಕುಮಾರ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಗಾಳಿಪಟ-2, ಹುಟ್ಟುಹಬ್ಬದ ಶುಭಾಷಯಗಳು ಚಿತ್ರಗಳ ನಂತರ ದಿಗಂತ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

 

Spread the love
Continue Reading

Cinema News

ಡಾರ್ಲಿಂಗ್ ಕೃಷ್ಣ ಅಭಿನಯದ `ಲೋಕಲ್ ಟ್ರೈನ್’ ಮಾಸಾಂತ್ಯಕ್ಕೆ ತೆರೆಗೆ

Published

on

By

ಸಂಜನಾ ಸಿನಿ ಆರ್ಟ್ಸ್ ಲಾಂಛನದಲ್ಲಿ ಎಸ್.ಹೆಚ್.ವಾಳ್ಕೆ ಅವರು ನಿರ್ಮಿಸಿರುವ `ಲೋಕಲ್ ಟ್ರೈನ್` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಈ ತಿಂಗಳ ಕೊನೆಗೆ ತೆರೆಗೆ ಬರಲಿದೆ. ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ 70ದಿನಗಳ ಚಿತ್ರೀಕರಣ ನಡೆದಿದೆ.

 

ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಕೃಷ್ಣ ಅವರ `ಲವ್ ಮಾಕ್ಟೇಲ್` ಚಿತ್ರ ಕೂಡ ಯಶಸ್ಸು ಕಂಡಿದ್ದು, `ಲೋಕಲ್ ಟ್ರೈನ್` ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೀನಾಕ್ಷಿ ದೀಕ್ಷಿತ್, ಎಸ್ಟರ್ ನರೋನ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿ.ಗುರುದತ್, ಮೈಸೂರು ಗೋಪಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

5 ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಿರ್ಮಾಪಕ ಎಸ್.ಹೆಚ್.ವಾಳ್ಕೆ ಅವರು ಕಥೆ ಬರೆದಿದ್ದು, ರುದ್ರಮುನಿ ನಿರ್ದೇಶನ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಪಿ.ಆರ್.ಸೌಂದರ್‍ರಾಜ್ ಸಂಕಲನ, ರಾಜುಸುಂದರಂ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಪಳನಿರಾಜ್, ಚೆನ್ನೈ ರಮೇಶ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಕೇಶವಾದಿತ್ಯ, ಮಾರುತಿ.ಟಿ ಸಂಭಾಷಣೆ ಬರೆದಿದ್ದಾರೆ.

 

Spread the love
Continue Reading

Cinema News

ಚಿರು ಸರ್ಜಾ ಅಭಿನಯದ `ಶಿವಾರ್ಜುನ’ ಪಕ್ಕಾ ಕಮರ್ಷಿಯಲ್ ಎಂಟರ್‌ಟೇನರ್

Published

on

By

ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಪಕ್ಕಾ ಕಮರ್ಷಿಯಲ್ ಎಂಟರ್‌ಟೇನರ್ `ಶಿವಾರ್ಜುನ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 

ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹೆಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಸುರಾಗ್ ಸಂಗೀತ ನಿರ್ದೇಶನ, ಸಾಧುಕೋಕಿಲ ಹಿನ್ನೆಲೆ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್, ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಕವಿರಾಜ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

 

ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗಾರ್, ಅಕ್ಷತ ಶ್ರೀನಿವಾಸ್, ಕಿಶೋರ್, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

 

Spread the love
Continue Reading

Trending News