ಫೆ.7ಕ್ಕೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ರಿಲೀಸ್ – PopcornKannada
Connect with us

News

ಫೆ.7ಕ್ಕೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ರಿಲೀಸ್

Published

on

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್‌ ಆಗಲಿದೆ.

 

ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್‌ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಎಸಿಪಿ ಉಮೇಶ್‌ ಅವರ ಪುತ್ರ ಸಪ್ತಮಿ ಉಮೇಶ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್‌ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್‌ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ. 

Spread the love

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್‌ ಆಗಲಿದೆ.

 

ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್‌ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಎಸಿಪಿ ಉಮೇಶ್‌ ಅವರ ಪುತ್ರ ಸಪ್ತಮಿ ಉಮೇಶ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್‌ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್‌ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ. 

Spread the love

News

ಝೀ ಕನ್ನಡದ ‘ಗಟ್ಟಿಮೇಳ’ದಲ್ಲಿ ನಾಯಕನಟ ವಿಜಯರಾಘವೇಂದ್ರ

Published

on

By

ಜಗತ್ತಿನಾದ್ಯಂತ ಕನ್ನಡದ ವೀಕ್ಷಕರ ಹೃದಯಗಳನ್ನು ಬೆಸೆಯುವ ದೃಢನಿಶ್ಚಯದೊಂದಿಗೆ ತಾಜಾತನ ಮತ್ತು ಹೊಸದಾದ ವಿಚಾರಗಳನ್ನು ತರುತ್ತಿರುವ ಕನ್ನಡದ ಸಾಮಾನ್ಯ ಮನೋರಂಜನಾ ವಾಹಿನಿಯಾದ ಝೀ ಕನ್ನಡವು ಸ್ಯಾಂಡಲ್‌ವುಡ್‌ನ ತಾರೆ ವಿಜಯರಾಘವೇಂದ್ರ ಅವರನ್ನು ಗಟ್ಟಿಮೇಳ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. “ಚಿನ್ನಾರಿ ಮುತ್ತ” ಎಂದು ಜನಪ್ರಿಯವಾಗಿರುವ ವಿಜಯರಾಘವೇಂದ್ರ ಅವರು ಗಟ್ಟಿಮೇಳದ 10 ಮತ್ತು 11 ನೇ ಸಂಚಿಕೆಯಲ್ಲಿ ಫೆಬ್ರವರಿ 2020 ರಂದು ಝೀ ಕನ್ನಡ ಹಾಗೂ ಝೀ ಕನ್ನಡ ಎಚ್‌ಡಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಗಟ್ಟಿಮೇಳಕ್ಕೆ ವಿಜಯರಾಘವೇಂದ್ರ ಅವರು ಹೊಂದಿರುವ ಮೆಚ್ಚುಗೆಯನ್ನು ಬಳಸಿಕೊಂಡು ಝೀವಾಹಿನಿಯು ಸ್ಯಾಂಡಲ್‌ವುಡ್‌ನ ಒಂದು ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ ಮಾಲ್‌ ಗಾಡಿಯ ಪ್ರಚಾರದ ಉದ್ದೇಶಕ್ಕಾಗಿ ಗಟ್ಟಿಮೇಳದ ಸೆಟ್‌ಗೆ ಆಹ್ವಾನಿಸುವ ಅವಕಾಶವನ್ನು ಪಡೆಯಿತು. ವಿಜಯರಾಘವೇಂದ್ರ ಅವರ ಬಗ್ಗೆ ಅಮೂಲ್ಯ ಅವರಿಗಿರುವ ಪ್ರೀತಿಯನ್ನು ಅರ್ಥಮಾಡಿಕೊಂಡು, ವೇದಾಂತ್ ತನ್ನ ಮನೆಗೆ ವಿಜಯರಾಘವೇಂದ್ರ ಅವರನ್ನು ಕರೆತರುತ್ತಾನೆ. ಇದರಿಂದ ಅಮೂಲ್ಯಳಿಗೆ ಬಹಳ ಸಂತೋಷವಾಗುತ್ತದೆ, ವಿಜಯ್ ವೇದಾಂತ್‌ಗೆ ಅಮೂಲ್ಯ ಬಗೆಗೆ ಆತನಿಗಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.

 

ಧಾರವಾಹಿಯ ಆರಂಭದಿಂದಲೂ ಅದರ ಅಭಿಮಾನಿಯಾಗಿರುವ ವಿಜಯರಾಘವೇಂದ್ರ ಅವರು ಇದರಲ್ಲಿ ಪಾತ್ರವಹಿಸುತ್ತಿರುವುದು ಝೀ ಕನ್ನಡ ಹಾಗೂ ಗಟ್ಟಿಮೇಳ ತಂಡಕ್ಕೆ ಬಹಳ ಸಂತೋಷವನ್ನು ನೀಡಿದೆ.

Spread the love
Continue Reading

Cinema News

ಜಂಟಲ್‌ಮನ್‌ ಕನ್ನಡದ ವಿಶೇಷ ಸಿನಿಮಾ

Published

on

By

ಪ್ರಜ್ವಲ್‌ ದೇವರಾಜ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಜಂಟಲ್‌ಮನ್‌ ಸಿನಿಮಾ ಕನ್ನಡದ ವಿಶೇಷ ಚಿತ್ರ ಎಂದಿದ್ದಾರೆ ನಿರ್ಮಾಪಕ ಗುರುದೇಶಪಾಂಡೆ.

 

ಈ ಚಿತ್ರದಲ್ಲಿ ಮಾನವ ಕಳ್ಳ ಸಾಗಣೆ ಜತೆಗೆ ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಬಗ್ಗೆಯೂ ಹೇಳುತ್ತಿದೆ. ಈ ರೀತಿಯ ವಿಶೇಷ ಸಬ್ಜೆಕ್ಟ್‌ನ್ನು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದು ಹಾಗಾಗಿ ಈ ಚಿತ್ರ ಬಹಳ ವಿಶೇಷ ಎನ್ನುತ್ತೇನೆ . ಇನ್ನು ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದ ನಾನು ಮೊದಲ ಬಾರಿಗೆ ನಿರ್ಮಾಪಕನಾಗುತ್ತಿದ್ದೇನೆ.

 

ಇದೇ ಶುಕ್ರವಾರ ರಿಲೀಸ್‌ ಆಗುತ್ತಿರುವ ಈ ಸಿನಿಮಾದ ಟ್ರೇಲರ್‌, ಹಾಡುಗಳು ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.  ಜಡೇಶ್‌ಕುಮಾರ್‌ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

Spread the love
Continue Reading

Cinema News

ಫೆ. 14ಕ್ಕೆ ಬಿಚ್ಚುಗತ್ತಿ ಟ್ರೇಲರ್‌ ರಿಲೀಸ್‌

Published

on

By

ಹರಿ ಸಂತೋಷ್‌ ನಿರ್ದೇಶನ ಮಾಡಿರುವ ಬಿಚ್ಚುಗತ್ತಿ ಸಿನಿಮಾದ ಟ್ರೇಲರ್‌ ಇದೇ ಫೆ 14ಕ್ಕೆ ರಿಲೀಸ್‌ ಆಗಲಿದೆ. ಈ ಟ್ರೇಲರ್‌ನ್ನು ಕನ್ನಡದ ದೊಡ್ಡ ಸ್ಟಾರ್‌ ಒಬ್ಬರು ರಿಲೀಸ್‌ ಮಾಡಲಿದ್ದಾರಂತೆ.

 

ಚಿತ್ರದುರ್ಗ ನಾಯಕರಲ್ಲಿ ಒಬ್ಬರಾದ ಭರಮಣ್ಣ ನಾಯಕನ ಕಥೆಯಿರುವ ಈ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜ್‌ ವರ್ಧನ್‌ ನಾಯಕನಾಗಿ ನಟಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್‌ ವಿಲನ್‌ ಆಗಿದ್ದು ಟೀಸರ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ.

 

ಇನ್ನು ಸಿನಿಮಾದ ಹಾಡುಗಳು ಕೂಡಾ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಬಿ ಎಲ್‌ ವೇಣು ಅವರ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಸದ್ಯಕ್ಕೆ ಚಾಪ್ಟರ್‌ -1 ಮಾತ್ರ ರಿಲೀಸ್‌ ಆಗಲಿದ್ದು, ಇನ್ನೊಂದು ಭಾಗ ಕೆಲ ದಿನಗಳ ನಂತರ ಬಿಡುಗಡೆಯಾಗಲಿದೆ.

 

Spread the love
Continue Reading

Cinema News

ಯುವರತ್ನಗೆ ಜಾನಿ ಮಾಸ್ಟರ್‌ ಕೋರಿಯೋಗ್ರಫಿ

Published

on

By

ರಾಜಕುಮಾರ ಸಿನಿಮಾದಲ್ಲಿ ಅಪ್ಪು ಡಾನ್ಸ್‌ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಫೇಮಸ್‌ ಆಗಿದ್ದ ದಕ್ಷಿಣ ಭಾರತದ ಖ್ಯಾತ ಕೋರಿಯೋಗ್ರಫರ್‌ ಜಾನಿ ಮಾಸ್ಟರ್‌ ಯುವರತ್ನ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಲು ಮತ್ತೆ ಸ್ಯಾಂಡಲ್‌ವುಡ್‌ನತ್ತ ಬಂದಿದ್ದಾರೆ.

 

 

ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ ಅವರ ಕಾಂಬಿನೇಶನ್‌ನ ಎರಡನೇ ಚಿತ್ರ ಯುವರತ್ನದಲ್ಲಿಯೂ ಜಾನಿ ಮಾಸ್ಟರ್‌ ತಮ್ಮ ವಿಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಹಾಗಾಗಿ ಯುವರತ್ನದಲ್ಲಿ ಅಭಿಮಾನಿಗಳು ದಿ ಬೆಸ್ಟ್‌ ಡಾನ್ಸ್‌ ಪರ್ಫಾಮೆನ್ಸ್‌ನ್ನುನೋಡಬಹುದು. 

Spread the love
Continue Reading

Cinema News

ಆ ಉದ್ಭವಕ್ಕೂ ಈ ಉದ್ಭವಕ್ಕೂ ಕನೆಕ್ಷನ್‌

Published

on

By

ಅನಂತ್‌ನಾಗ್‌ ಅಭಿನಯದ ಉದ್ಭವ ಸಿನಿಮಾ 1990ರಲ್ಲಿ ರಿಲೀಸ್‌ ಆಗಿತ್ತು. ಆ ಕಾಲಕ್ಕೆ ಆ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿ, ಯಶಸ್ವಿಯಾಗಿತ್ತು. ಈಗ ಅದೇ ನಿರ್ದೇಶಕ ಕೂಡ್ಲು ರಾಮಕೃಷ್ಣ ಮತ್ತೆ ಉದ್ಭವ ಎಂಬ ಟೈಟಲ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದು ಅದು ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

ಹಳೆಯ ಉದ್ಭವ ಸಿನಿಮಾ ಕೊನೆಯಾಗಿತ್ತಲ್ಲ ಅಲ್ಲಿಂದ ಈ ಸಿನಿಮಾ ಆರಂಭವಾಗಲಿದೆ. ಇನ್ನು ಪ್ರಮೋದ್‌ ನಾಯಕನಾಗಿ ಕಾಣಿಸಿಕೊಂಡಿದ್ದು, ಹಳೇ ಉದ್ಭವದ ಅನಂತ್‌ನಾಗ್‌ ಪುತ್ರನಾಗಿ ಹೊಸ ಉದ್ಭವದಲ್ಲಿ ಮುಂದುವರೆದಿದ್ದಾರೆ.

ಅನಂತ್‌ನಾಗ್‌ ಅವರ ಪಾತ್ರವನ್ನು ಈ ಚಿತ್ರದಲ್ಲಿ ಡೇಟ್ಸ್‌ ಸಮಸ್ಯೆಯಿಂದಾಗಿ ರಂಗಾಯಣ ರಘು ಮಾಡಿದ್ದಾರೆ. ಮಿಲನಾ ನಾಗರಾಜ್‌ ಪ್ರಮೋದ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇದು ಆ ಉದ್ಭವದಂತೆ ಒಂದಷ್ಟು ಸದ್ದು ಮಾಡಲಿದೆ ಎಂಬ ನಿರೀಕ್ಷೆ ನಿರ್ದೇಶಕರದ್ದು. 

Spread the love
Continue Reading

Trending News