ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಯ್ತು ಒಡೆಯ ಟೀಸರ್‌ – PopcornKannada
Connect with us

Cinema News

ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಯ್ತು ಒಡೆಯ ಟೀಸರ್‌

Published

on

ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ಒಡೆಯ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಈ ಟೀಸರ್‌ನ್ನು ನೋಡಿದ್ದಾರೆ.

 

 

ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ

ಅಧಿಕಾರದ ಆಸೆಯಿಂದ ನಾನು ಇಲ್ಲಿಗೆ ಬಂದಿಲ್ಲ ಎಂಬ ಖಡಕ್‌ ಡೈಲಾಗ್‌ ಮೂಲಕ ದರ್ಶನ್‌ ಒಡೆಯನಾಗಿ ಎಂಟ್ರಿ ಕೊಟ್ಟಿದ್ದು, ಅವರ ಲುಕ್‌ ಮತ್ತು ಡೈಲಾಗ್‌ ಡೆಲವರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 

ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಟೀಸರ್‌ನಿಂದಲೆ ಚಿತ್ರದ ಮೇಲೆ ಅತಿ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದ್ದಾರೆ ನಿರ್ದೇಶಕ ಎಂ ಡಿ ಶ್ರೀಧರ್‌. 

 

Spread the love

ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ‘ಒಡೆಯ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಈ ಟೀಸರ್‌ನ್ನು ನೋಡಿದ್ದಾರೆ.

 

 

ರೋಹಿತ್ ಪದಕಿ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ

ಅಧಿಕಾರದ ಆಸೆಯಿಂದ ನಾನು ಇಲ್ಲಿಗೆ ಬಂದಿಲ್ಲ ಎಂಬ ಖಡಕ್‌ ಡೈಲಾಗ್‌ ಮೂಲಕ ದರ್ಶನ್‌ ಒಡೆಯನಾಗಿ ಎಂಟ್ರಿ ಕೊಟ್ಟಿದ್ದು, ಅವರ ಲುಕ್‌ ಮತ್ತು ಡೈಲಾಗ್‌ ಡೆಲವರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 

ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಟೀಸರ್‌ನಿಂದಲೆ ಚಿತ್ರದ ಮೇಲೆ ಅತಿ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದ್ದಾರೆ ನಿರ್ದೇಶಕ ಎಂ ಡಿ ಶ್ರೀಧರ್‌. 

 

Spread the love
Continue Reading
Click to comment

Leave a Reply

Your email address will not be published. Required fields are marked *

Cinema News

ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಶಿವರಾಜ್‌ಕುಮಾರ್‌ ಮತ್ತು ದರ್ಶನ್

Published

on

By

  1. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಅಭಿಮಾನಿಗಳ ಮಿಲಿಯನ್‌ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಉತ್ತಮ ಕಥೆ ಬಂದರೆ ನಾವಿಬ್ಬರೂ ನಟಿಸಲು ರೆಡಿ ಎಂದು ಸ್ವತಃ ಶಿವಣ್ಣ ಮತ್ತು ದರ್ಶನ್‌ ತಿಳಿಸಿದ್ದಾರೆ.

 

 

ರಾಜ್‌ ಕುಟುಂಬದ ಧ್ರುವನ್‌ ನಟನೆಯ ಮೊದಲ ಚಿತ್ರದ ಮುಹೂರ್ತದಲ್ಲಿ ಭೇಟಿಯಾದ ಇಬ್ಬರೂ ಮಾಧ್ಯಮದವರಿಗೆ ಈ ಮಾತುಗಳನ್ನು ಹೇಳಿದ್ದಾರೆ. ‘ನಾನು ದರ್ಶನ್‌ ಎಲ್ಲೇ ಸಿಕ್ಕರೂ ಸಿನಿಮಾಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಹಾಗಾಗಿ ನಾವಿಬ್ಬರು ಒಟ್ಟಿಗೆ ನಟಿಸಲು ಸಮಸ್ಯೆ ಇಲ್ಲ. ಅಲ್ಲದೇ ಅಂತಹ ಕಥೆ ಸೃಷ್ಟಿಯಾಗಬೇಕು. ಸುಮ್ಮನೆ ಮಾಡಬೇಕು ಎಂದು ಮಾಡಬಾರದು.’ಎಂದು ಶಿವಣ್ಣ ಹೇಳಿದರು.

 

 

ಇದಕ್ಕೆ ದರ್ಶನ್‌ ಕೂಡಾ ಮಾತು ಸೇರಿಸಿ ‘ನಮ್ಮಿಬ್ಬರನ್ನು ಹ್ಯಾಂಡಲ್‌ ಮಾಡುವಂತಹ ನಿರ್ದೇಶಕರು ಇದ್ದರೆ ಬರಲಿ ನಾವು ನಟಿಸುತ್ತೇವೆ. ಜತೆಗೆ ಕಥೆ ಕೂಡಾ ವಿಭಿನ್ನವಾಗಿ ಮತ್ತು ನಮ್ಮ ಇಬ್ಬರ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಇರಬೇಕು. ಜತೆಗೆ ಶಿವಣ್ಣ ಲಾಂಗ್‌ ಹಿಡಿದು ನಿಂತರೆ ನಾನು ಹಿಂದೆ ಲಾಂಗ್‌ ಹಿಡಿದು ನಿಲ್ಲುತ್ತೇನೆ. ಅವರೇ ಸಿನೀಯರ್‌ ಎಂದು ಹೇಳಿದರು.’ಅಲ್ಲಿಗೆ ಶಿವಣ್ಣ ಮತ್ತು ದಚ್ಚು ಒಟ್ಟಿಗೆ ನಟಿಸಲು ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ನಿರ್ದೇಶಕರು ಮತ್ತು ಕಥೆಗಾರರು ಅಂತಹ ಅದ್ಭುತ ಕಥೆಯನ್ನು ಸೃಷ್ಟಿ ಮಾಡಬೇಕಿದೆ.

 

 

ಇನ್ನು ಧ್ರುವನ್‌ ಜತೆ ಈ ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಟಿಸುತ್ತಿದ್ದಾರೆ. ರಘು ಕೋವಿ ನಿರ್ದೇಶನ ಮಾಡುತ್ತಿದ್ದಾರೆ.

Spread the love
Continue Reading

Cinema News

ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಆಗಲಿದೆ “ಒಡೆಯ”ನ ದರ್ಶನ

Published

on

By

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿಬಂದಿರುವ ಆಕ್ಷ್ಯನ್ ಫ್ಯಾಮಿಲಿ ಎಂಟರ್ಟೇನರ್ “ಒಡೆಯ“ ಬಿಡುಗಡೆಗೆ ಸಜ್ಜಾಗುತ್ತಿದೆ.

 

 

ಬಹು ನಿರೀಕ್ಷಿತ ಚಿತ್ರ ಒಡೆಯ ಇದೇ ಡಿಸೆಂಬರ್‌ 2ಕ್ಕೆ ರಿಲೀಸ್‌ ಆಗಲಿದೆ. ಅದಕ್ಕಿಂತ ಮುನ್ನ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಈ ಸಿನಿಮಾವನ್ನು ಎಂ ಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ.

 

 

ತಮಿಳಿನ ವೀರಂ ಚಿತ್ರದ ರಿಮೇಕ್‌ ಆಗಿರುವ ಒಡೆಯದಲ್ಲಿ ದರ್ಶನ್‌ ನಾಲ್ವರು ತಮ್ಮಂದಿರ ಪ್ರೀತಿಯ ಅಣ್ಣನಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್‌ ಮತ್ತು ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

 

  •  

ಈ ಸಿನಿಮಾವನ್ನು ದರ್ಶನ್‌ ಅವರ ನೆಚ್ಚಿನ ನಿರ್ಮಾಪಕ ಸಂದೇಶ್‌ ನಾಗರಾಜ್‌ ನಿರ್ಮಾಣ ಮಾಡಿದ್ದಾರೆ. ದರ್ಶನ್‌ಗೆ ರಾಘವಿ ತಿಮ್ಮಯ್ಯ ಎಂಬ ಹೊಸ ಹುಡುಗಿ ಜತೆಯಾಗಿದ್ದಾರೆ. ಪಂಕಜ್‌, ಸಾಧುಕೋಕಿಲಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಶೇಷ ಎಂದರೆ ಸುದೀಪ್‌ ಮತ್ತು ಸಲ್ಮಾನ್‌ ಖಾನ್‌ ನಟನೆಯ ದಬಾಂಗ್‌-3 ಸಹ ಡಿಸೆಂಬರ್‌ ತಿಂಗಳಿನಲ್ಲೇ ರಿಲೀಸ್‌ ಆಗುವುದರಿಂದ ಸ್ಟಾರ್‌ ವಾರ್‌ ನಡೆಯಬಹುದು.

Spread the love
Continue Reading

Cinema News

ಕರ್ನಾಟಕದ ನಂಬರ್ 1 ಶ್ರೀಮಂತ ಶರತ್ ಕುಮಾರ್

Published

on

By

ತಮಿಳು ಚಿತ್ರರಂಗದ ಖ್ಯಾತ ನಟ ಶರತ್‌ಕುಮಾರ್ ರಾಜಕುಮಾರ ಸಿನಿಮಾದ ನಂತರ ಕನ್ನಡದ ರೆಮೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

ಪವನ್‌ ಒಡೆಯರ್‌ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರೋಗ್‌ ಖ್ಯಾತಿಯ ನಟ ಇಶಾನ್‌ ನಟಿಸುತ್ತಿದ್ದಾರೆ. ರೆಮೋದಲ್ಲಿ ಇಶಾನ್‌ ಅವರ ತಂದೆಯ ಪಾತ್ರದಲ್ಲಿ ಶರತ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

 

 

 

ಶರತ್‌ಕುಮಾರ್‌ ಕರ್ನಾಟಕದ ನಂ.1 ಶ್ರೀಮಂತ ಮತ್ತು ಹೆಸರಾಂತ ಉದ್ಯಮಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಐಶಾರಾಮಿ ಸೆಟ್‌ ಹಾಕಿದ್ದು, ಅದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆಶಿಕಾ ರಂಗನಾಥ್‌ ಇಶಾನ್‌ಗೆ ಜೋಡಿಯಾಗಿ ಈ ಚಿತ್ರದಲ್ಲಿದ್ದಾರೆ.

Spread the love
Continue Reading

Cinema News

ಲಂಡನ್ ನಲ್ಲಿ ಸತೀಶ್ ನೀನಾಸಂ – ಶರ್ಮಿಳಾ ಮಾಂಡ್ರೆ

Published

on

By

ಬ್ರಹ್ಮಚಾರಿ ಸಿನಿಮಾದ ಹಾಡುಗಳು ಎಲ್ಲ ಕಡೆಯೂ ಹಿಟ್‌ ಆಗಿದ್ದು, ಈಗ ಸತೀಶ್‌ ಲಂಡನ್‌ನಲ್ಲಿ ‘ವೈತರಣಿ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ.

 

ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿರುವ ಈ ವೈತರಣಿಯಲ್ಲಿ ಸತೀಶ್‌ ನಾಯಕರಾಗಿದ್ದು, ಅರವಿಂದ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್‌ ಲಂಡನ್‌ನಲ್ಲಿ ಹೆಚ್ಚಿನ ಭಾಗ ನಡೆಯುತ್ತದೆ. ಇದೊಂದು ಥ್ರಿಲ್ಲರ್‌ ಸಬ್ಜೆಕ್ಟ್‌ ಆಗಿದ್ದು, ಈ ಬಗ್ಗೆ ಸತೀಶ್‌ ಎಕ್ಸೈಟ್‌ ಆಗಿದ್ದಾರಂತೆ.

 

 

ಲಂಡನ್‌ನಿಂದ ವಿಡಿಯೋ ಮಾಡಿರುವ ಸತೀಶ್‌ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ಇದೊಂದು ವಿಭಿನ್ನ ಸಿನಿಮಾವಾಗಿದ್ದು, ನನ್ನ ಪಾತ್ರ ಬಹಳ ವಿಶೇಷವಾಗಿದೆ ಎಂದಿದ್ದಾರೆ.

Spread the love
Continue Reading

Cinema News

‘ಕಬ್ಜ’ದಲ್ಲಿ ನಟಿಸುತ್ತಿಲ್ಲ ಎಂದ ಕಾಜಲ್‌ ಅಗರವಾಲ್

Published

on

By

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್‌ವಾಲ್‌ ಕಬ್ಜ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಾರೆ ಎಂದು ಸುದ್ದಿಯಾಗಿತ್ತು ಆದರೆ ನಾನು ಕಬ್ಜದಲ್ಲಿ ನಟಿಸುತ್ತಿಲ್ಲ ಎಂದು ಸ್ವತಃ ಕಾಜಲ್‌ ಅಗರ್‌ವಾಲ್‌ ಅವರೇ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

 

 

ಆರ್‌ ಚಂದ್ರು ನಿರ್ದೇಶನದ ಬಿಗ್‌ ಬಜೆಟ್‌ನ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಗಾಗಿ ಈ ಚಿತ್ರಕ್ಕೆ ಕಾಜಲ್‌ ಅವರೇ ಸೂಕ್ತ ಎನ್ನಲಾಗಿತ್ತು. ಚಂದ್ರು ಕೂಡಾ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಆದರೆ ಅದ್ಯಾಕೋ ಸಫಲವಾದಂತೆ ಕಂಡಿಲ್ಲ.

 

 

ಈ ಮೊದಲು ನಟಿ ಕಾಜಲ್ ಅಗರವಾಲ್ ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್-ರಚಿತಾ ರಾಮ್ ಜೋಡಿಯ ‘ಚಕ್ರವ್ಯೂಹ’ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದರು. ಆದರೆ ನಟನೆ ಮಾತ್ರ ಇದುವರೆಗೂ ಮಾಡಿಲ್ಲ.

Spread the love
Continue Reading

Trending News