Connect with us

Cinema News

ಈ ವಾರ ತೆರೆಗೆ `ಕೃಷ್ಣ ಗಾರ್ಮೆಂಟ್ಸ್`

Published

on

ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಹಾಸನ, ದೊಡ್ದಬಳ್ಳಾಪುರ, ಬೆಂಗಳೂರು, ಶ್ರವಣ ಬೆಳಗೊಳ, ಚನ್ನಪಟ್ಟಣದಲ್ಲಿ 35ದಿನಗಳ ಕಾಲ ಚಿತ್ರೀಕರಣ ನಡೆದಿದೆ.

`ಶ್ರೀಮಾನ್ ಶ್ರೀಮತಿ` ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸಿದ್ದು, `ಬ್ರಹ್ಮಾಸ್ತ್ರ` ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಂದನ್ ಗೌಡ(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ರಜನಿಕಾಂತ್, ವರ್ಧನ್ ತೀರ್ಥಹಳ್ಳಿ, ಹೆಚ್.ಎಂ.ಟಿ.ವಿಜಯ್, ಕುಲ್‍ದೀಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿದಾನಂದ್ ಹಾಗೂ ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ರಘು ಧನ್ವಂತ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಪ್ರಶಾಂತ್ ರಾವ್ ವರ್ಕು ಅವರು ನಿರ್ಮಾಣದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *