ಸಾಹಸ ಕಲಾವಿದರ ಕಟ್ಟಡಕ್ಕೆ ಕಿಚ್ಚ ಸುದೀಪ್‌ ನೆರವು – PopcornKannada
Connect with us

Cinema News

ಸಾಹಸ ಕಲಾವಿದರ ಕಟ್ಟಡಕ್ಕೆ ಕಿಚ್ಚ ಸುದೀಪ್‌ ನೆರವು

Published

on

ಕಿಚ್ಚ ಸುದೀಪ್‌ ಸಾಹಸ ಕಲಾವಿದರ ಕಟ್ಟಡಕ್ಕೆ 10 ಲಕ್ಷ ನೆರವು ನೀಡಿದ್ದು, ಈ ಬಗ್ಗೆ ಸಾಹಸ ನಿರ್ದೇಶಕರು ಧನ್ಯವಾದ ಹೇಳಿದ್ದಾರೆ.

 

 

ಈ ಬಗ್ಗೆ ಟ್ವೀಟ್‌ ಮಾಡಿರುವ ಫೈಟರ್ಸ್‌ ಆಸೋಸಿಯೇಶನ್‌ ಅಧ್ಯಕ್ಷ ಥ್ರಿಲ್ಲರ್‌ ಮಂಜು ಸುದೀಪ್‌ ಅವರ ಸಾಹಸ ಕಲಾವಿದರ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

 

 

ನಾಯಂಡಳ್ಳಿ ಬಳಿ ಸಾಹಸ ಕಲಾವಿದರ ಸಂಘದ ಕಟ್ಟಡ ಸಿದ್ಧವಾಗುತ್ತಿದೆ. ಇದಕ್ಕೆ ಸಾಕಷ್ಟು ಸಾಹಸ ಕಲಾವಿದರು ಧನಸಹಾಯ ನೀಡಿದ್ದಾರೆ. ಸುದೀಪ್‌ ಅವರ ಸಹಾಯಕ್ಕೆ ನಿರ್ದೇಶಕ ರವಿವರ್ಮಾ ಸೇರಿದಂತೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

 

 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್‌ ನನ್ನಂತವನನ್ನು ಇಷ್ಟು ದೊಡ್ಡ ಹೀರೋ ಮಾಡುವಲ್ಲಿ ನಿಮ್ಮ ಶ್ರಮವೂಇದೆ. ಹಾಗಾಗಿ ನಿಮಗೂ ನನ್ನ ಕಡೆಯಿಂದ ಧನ್ಯವಾಗಳು ಎಂದು ಟ್ವೀಟ್‌ ಮಾಡಿದ್ದಾರೆ.

 

 

ಈ ಹಿಂದೆ ಸಿಸಿಎಲ್‌ನಲ್ಲಿ ಕಪ್‌ ಗೆದ್ದಾಗ ಬಂದ ಅಷ್ಟೂ ಹಣವನ್ನು ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ಸುದೀಪ್‌ ನೀಡಿದ್ದರು. ಆಗ ಸುದೀಪ್‌ ಕ್ರಿಕೆಟ್‌ ತಂಡದ ನಾಯಕರಾಗಿದ್ದರು.

Spread the love

ಕಿಚ್ಚ ಸುದೀಪ್‌ ಸಾಹಸ ಕಲಾವಿದರ ಕಟ್ಟಡಕ್ಕೆ 10 ಲಕ್ಷ ನೆರವು ನೀಡಿದ್ದು, ಈ ಬಗ್ಗೆ ಸಾಹಸ ನಿರ್ದೇಶಕರು ಧನ್ಯವಾದ ಹೇಳಿದ್ದಾರೆ.

 

 

ಈ ಬಗ್ಗೆ ಟ್ವೀಟ್‌ ಮಾಡಿರುವ ಫೈಟರ್ಸ್‌ ಆಸೋಸಿಯೇಶನ್‌ ಅಧ್ಯಕ್ಷ ಥ್ರಿಲ್ಲರ್‌ ಮಂಜು ಸುದೀಪ್‌ ಅವರ ಸಾಹಸ ಕಲಾವಿದರ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

 

 

ನಾಯಂಡಳ್ಳಿ ಬಳಿ ಸಾಹಸ ಕಲಾವಿದರ ಸಂಘದ ಕಟ್ಟಡ ಸಿದ್ಧವಾಗುತ್ತಿದೆ. ಇದಕ್ಕೆ ಸಾಕಷ್ಟು ಸಾಹಸ ಕಲಾವಿದರು ಧನಸಹಾಯ ನೀಡಿದ್ದಾರೆ. ಸುದೀಪ್‌ ಅವರ ಸಹಾಯಕ್ಕೆ ನಿರ್ದೇಶಕ ರವಿವರ್ಮಾ ಸೇರಿದಂತೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

 

 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್‌ ನನ್ನಂತವನನ್ನು ಇಷ್ಟು ದೊಡ್ಡ ಹೀರೋ ಮಾಡುವಲ್ಲಿ ನಿಮ್ಮ ಶ್ರಮವೂಇದೆ. ಹಾಗಾಗಿ ನಿಮಗೂ ನನ್ನ ಕಡೆಯಿಂದ ಧನ್ಯವಾಗಳು ಎಂದು ಟ್ವೀಟ್‌ ಮಾಡಿದ್ದಾರೆ.

 

 

ಈ ಹಿಂದೆ ಸಿಸಿಎಲ್‌ನಲ್ಲಿ ಕಪ್‌ ಗೆದ್ದಾಗ ಬಂದ ಅಷ್ಟೂ ಹಣವನ್ನು ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ಸುದೀಪ್‌ ನೀಡಿದ್ದರು. ಆಗ ಸುದೀಪ್‌ ಕ್ರಿಕೆಟ್‌ ತಂಡದ ನಾಯಕರಾಗಿದ್ದರು.

Spread the love

Cinema News

ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಆಗಲಿದೆ “ಒಡೆಯ”ನ ದರ್ಶನ

Published

on

By

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿಬಂದಿರುವ ಆಕ್ಷ್ಯನ್ ಫ್ಯಾಮಿಲಿ ಎಂಟರ್ಟೇನರ್ “ಒಡೆಯ“ ಬಿಡುಗಡೆಗೆ ಸಜ್ಜಾಗುತ್ತಿದೆ.

 

 

ಬಹು ನಿರೀಕ್ಷಿತ ಚಿತ್ರ ಒಡೆಯ ಇದೇ ಡಿಸೆಂಬರ್‌ 2ಕ್ಕೆ ರಿಲೀಸ್‌ ಆಗಲಿದೆ. ಅದಕ್ಕಿಂತ ಮುನ್ನ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಈ ಸಿನಿಮಾವನ್ನು ಎಂ ಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ.

 

 

ತಮಿಳಿನ ವೀರಂ ಚಿತ್ರದ ರಿಮೇಕ್‌ ಆಗಿರುವ ಒಡೆಯದಲ್ಲಿ ದರ್ಶನ್‌ ನಾಲ್ವರು ತಮ್ಮಂದಿರ ಪ್ರೀತಿಯ ಅಣ್ಣನಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್‌ ಮತ್ತು ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

 

  •  

ಈ ಸಿನಿಮಾವನ್ನು ದರ್ಶನ್‌ ಅವರ ನೆಚ್ಚಿನ ನಿರ್ಮಾಪಕ ಸಂದೇಶ್‌ ನಾಗರಾಜ್‌ ನಿರ್ಮಾಣ ಮಾಡಿದ್ದಾರೆ. ದರ್ಶನ್‌ಗೆ ರಾಘವಿ ತಿಮ್ಮಯ್ಯ ಎಂಬ ಹೊಸ ಹುಡುಗಿ ಜತೆಯಾಗಿದ್ದಾರೆ. ಪಂಕಜ್‌, ಸಾಧುಕೋಕಿಲಾ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಶೇಷ ಎಂದರೆ ಸುದೀಪ್‌ ಮತ್ತು ಸಲ್ಮಾನ್‌ ಖಾನ್‌ ನಟನೆಯ ದಬಾಂಗ್‌-3 ಸಹ ಡಿಸೆಂಬರ್‌ ತಿಂಗಳಿನಲ್ಲೇ ರಿಲೀಸ್‌ ಆಗುವುದರಿಂದ ಸ್ಟಾರ್‌ ವಾರ್‌ ನಡೆಯಬಹುದು.

Spread the love
Continue Reading

Cinema News

ಕರ್ನಾಟಕದ ನಂಬರ್ 1 ಶ್ರೀಮಂತ ಶರತ್ ಕುಮಾರ್

Published

on

By

ತಮಿಳು ಚಿತ್ರರಂಗದ ಖ್ಯಾತ ನಟ ಶರತ್‌ಕುಮಾರ್ ರಾಜಕುಮಾರ ಸಿನಿಮಾದ ನಂತರ ಕನ್ನಡದ ರೆಮೋ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

ಪವನ್‌ ಒಡೆಯರ್‌ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರೋಗ್‌ ಖ್ಯಾತಿಯ ನಟ ಇಶಾನ್‌ ನಟಿಸುತ್ತಿದ್ದಾರೆ. ರೆಮೋದಲ್ಲಿ ಇಶಾನ್‌ ಅವರ ತಂದೆಯ ಪಾತ್ರದಲ್ಲಿ ಶರತ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

 

 

 

ಶರತ್‌ಕುಮಾರ್‌ ಕರ್ನಾಟಕದ ನಂ.1 ಶ್ರೀಮಂತ ಮತ್ತು ಹೆಸರಾಂತ ಉದ್ಯಮಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಐಶಾರಾಮಿ ಸೆಟ್‌ ಹಾಕಿದ್ದು, ಅದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಆಶಿಕಾ ರಂಗನಾಥ್‌ ಇಶಾನ್‌ಗೆ ಜೋಡಿಯಾಗಿ ಈ ಚಿತ್ರದಲ್ಲಿದ್ದಾರೆ.

Spread the love
Continue Reading

Cinema News

ಲಂಡನ್ ನಲ್ಲಿ ಸತೀಶ್ ನೀನಾಸಂ – ಶರ್ಮಿಳಾ ಮಾಂಡ್ರೆ

Published

on

By

ಬ್ರಹ್ಮಚಾರಿ ಸಿನಿಮಾದ ಹಾಡುಗಳು ಎಲ್ಲ ಕಡೆಯೂ ಹಿಟ್‌ ಆಗಿದ್ದು, ಈಗ ಸತೀಶ್‌ ಲಂಡನ್‌ನಲ್ಲಿ ‘ವೈತರಣಿ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ.

 

ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿರುವ ಈ ವೈತರಣಿಯಲ್ಲಿ ಸತೀಶ್‌ ನಾಯಕರಾಗಿದ್ದು, ಅರವಿಂದ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್‌ ಲಂಡನ್‌ನಲ್ಲಿ ಹೆಚ್ಚಿನ ಭಾಗ ನಡೆಯುತ್ತದೆ. ಇದೊಂದು ಥ್ರಿಲ್ಲರ್‌ ಸಬ್ಜೆಕ್ಟ್‌ ಆಗಿದ್ದು, ಈ ಬಗ್ಗೆ ಸತೀಶ್‌ ಎಕ್ಸೈಟ್‌ ಆಗಿದ್ದಾರಂತೆ.

 

 

ಲಂಡನ್‌ನಿಂದ ವಿಡಿಯೋ ಮಾಡಿರುವ ಸತೀಶ್‌ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ಇದೊಂದು ವಿಭಿನ್ನ ಸಿನಿಮಾವಾಗಿದ್ದು, ನನ್ನ ಪಾತ್ರ ಬಹಳ ವಿಶೇಷವಾಗಿದೆ ಎಂದಿದ್ದಾರೆ.

Spread the love
Continue Reading

Cinema News

‘ಕಬ್ಜ’ದಲ್ಲಿ ನಟಿಸುತ್ತಿಲ್ಲ ಎಂದ ಕಾಜಲ್‌ ಅಗರವಾಲ್

Published

on

By

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್‌ ಅಗರ್‌ವಾಲ್‌ ಕಬ್ಜ ಸಿನಿಮಾದ ಮೂಲಕ ಕನ್ನಡಕ್ಕೆ ಬರುತ್ತಾರೆ ಎಂದು ಸುದ್ದಿಯಾಗಿತ್ತು ಆದರೆ ನಾನು ಕಬ್ಜದಲ್ಲಿ ನಟಿಸುತ್ತಿಲ್ಲ ಎಂದು ಸ್ವತಃ ಕಾಜಲ್‌ ಅಗರ್‌ವಾಲ್‌ ಅವರೇ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

 

 

ಆರ್‌ ಚಂದ್ರು ನಿರ್ದೇಶನದ ಬಿಗ್‌ ಬಜೆಟ್‌ನ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಗಾಗಿ ಈ ಚಿತ್ರಕ್ಕೆ ಕಾಜಲ್‌ ಅವರೇ ಸೂಕ್ತ ಎನ್ನಲಾಗಿತ್ತು. ಚಂದ್ರು ಕೂಡಾ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಆದರೆ ಅದ್ಯಾಕೋ ಸಫಲವಾದಂತೆ ಕಂಡಿಲ್ಲ.

 

 

ಈ ಮೊದಲು ನಟಿ ಕಾಜಲ್ ಅಗರವಾಲ್ ಅವರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್-ರಚಿತಾ ರಾಮ್ ಜೋಡಿಯ ‘ಚಕ್ರವ್ಯೂಹ’ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದರು. ಆದರೆ ನಟನೆ ಮಾತ್ರ ಇದುವರೆಗೂ ಮಾಡಿಲ್ಲ.

Spread the love
Continue Reading

Cinema News

ಟಗರು -2ಗೆ ಸೂರಿ ಡೈರೆಕ್ಟರ್ ಎಂದ ಶಿವರಾಜ್‌ಕುಮಾರ್

Published

on

By

Prev1 of 2
Use your ← → (arrow) keys to browse

ಕಳೆದ ವರ್ಷ ಬಿಡುಗಡೆಯಾಗಿ ಸೂಪರ್‌ ಹಿಟ್‌ ಆಗಿದ್ದ ಟಗರು ಸಿನಿಮಾದ ಮುಂದಿನ ಭಾಗಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದ್ದು, ಅದನ್ನು ಸೂರಿಯೇ ನಿರ್ದೇಶನ ಮಾಡಲಿದ್ದಾರೆ.

 

 

ಟಗರು ಚಿತ್ರ ಬಿಡುಗಡೆಗೂ ಮುನ್ನವೇ ಟಗರು-2 ಮಾಡುವುದಾಗಿ ಶ್ರೀಕಾಂತ್‌ ಹೇಳಿದ್ದರು. ಆಮೇಲೆ ಅದು ಶಿವರಾಜ್‌ಕುಮಾರ್‌ ಪ್ರೊಡಕ್ಷನ್‌ಹೌಸ್‌ನಲ್ಲಿ ನಿರ್ಮಾಣವಾಗುತ್ತದೆ ಎನ್ನಲಾಗಿತ್ತು. ಈಗ ಸ್ವತಃ ಶಿವಣ್ಣ ಹೇಳಿದ್ದು, ‘ಟಗರು-2 ಮಾಡುವ ಐಡಿಯಾ ಇತ್ತು. ಅದರ ಬಗ್ಗೆ ಬಹಳ ಹಿಂದೆಯೇ ಸೂರಿ ಮತ್ತು ನಾನು ಚರ್ಚೆ ಮಾಡಿದ್ದೆವು. ಮುಂದಿನ ದಿನಗಳಲ್ಲಿ ಅದನ್ನು ಮಾಡುತ್ತೇನೆ. ಜತೆಗೆ ಅದನ್ನು ಸೂರಿಯೇ ನಿರ್ದೇಶನ ಮಾಡಲಿದ್ದಾರೆ’ಎಂದಿದ್ದಾರೆ.

 

 

ಇನ್ನೂ ಸೂರಿ ಸಹ ಟಗರು-2 ಬಗ್ಗೆ ಯೋಚನೆ ಮಾಡಿದ್ದೆ ಆದರೆ ನಾನು ಪಾಪ್‌ ಕಾರ್ನ್‌ನಲ್ಲಿ ಬಿಝಿಯಾದ ಕಾರಣ ಅದು ಆಗಲಿಲ್ಲ, ಅದನ್ನು ನಾನೇ ಮಾಡಬೇಕು ಎನ್ನುವುದು ಶಿವಣ್ಣ ಅವರ ಆಸೆ . ಟಗರು ಚಿತ್ರಕ್ಕಿರುವಷ್ಟೇ ಜವಬ್ದಾರಿ ಅದರ ಎರಡನೇ ಭಾಗಕ್ಕೆ ಇರುತ್ತದೆ ನೋಡಣೋ ಎನ್ನುತ್ತಾರೆ.

 

ಒಟ್ಟಿನಲ್ಲಿಟಗರಿನ ಖದರ್‌ ಇನ್ನೂ ನಿಂತಿಲ್ಲ, ಸದ್ಯದಲ್ಲೇ ಅದರ ಎರಡನೇ ಭಾಗಕ್ಕೆ ಚಾಲನೆ ಸಿಗುತ್ತದೆ.

Prev1 of 2
Use your ← → (arrow) keys to browse

Spread the love
Continue Reading

Trending News