Connect with us

Cinema News

ದೇವಕಿಗೆ ಯು/ಎ ಸರ್ಟಿಫಿಕೇಟ್‌

Published

on

ಪ್ರಿಯಾಂಕ ಉಪೇಂದ್ರ ನಟನೆಯ ದೇವಕಿ ಸಿನಿಮಾದ ಸೆನ್ಸಾರ್‌  ಮುಗಿದಿದ್ದು, ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಲೋಹಿತ್‌, ಯಾವುದೇ ಕಟ್ಸ್‌ ಇಲ್ಲದೆ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್‌ ನೀಡಿದೆ ಎಂದಿದ್ದಾರೆ. ದೇವಕಿ ಚಿತ್ರ ಕೋಲ್ಕತ್ತಾದಲ್ಲಿ ಚಿತ್ರೀಕರಣವಾಗಿದ್ದು, ಇದರಲ್ಲಿ ಉಪ್ಪಿ ದಂಪತಿಯ ಪುತ್ರಿ ಐಶ್ವರ್ಯಾ ಉಪೇಂದ್ರ ಸಹ ನಟಿಸಿದ್ದಾರೆ.

ಕಿಶೋರ್‌, ಪ್ರಿಯಾಂಕ ಸೇರಿದಂತೆ ಬಹು ತಾರಾಗಣವಿರುವ ಈ ಚಿತ್ರ ಸಸ್ಪೆನ್ಸ್‌ ಮಾದರಿಯ ಸಿನಿಮಾವಾಗಿದೆ. ಈ ಹಿಂದೆ ಲೋಹಿತ್‌ ಮತ್ತು ಪ್ರಿಯಾಂಕ ಉಪೇಂದ್ರ ಕಾಂಬಿನೇಶನ್‌ನಲ್ಲಿ ಬಂದಿದ್ದ ಮಮ್ಮಿ ಚಿತ್ರ ಯಶಸ್ವಿಯಾಗಿತ್ತು. ಈಗ ಈ ಚಿತ್ರ ಕೂಡಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ನಿರ್ದೇಶಕ ಲೋಹಿತ್‌. 

ಚಿತ್ರವು ಇದೇ ತಿಂಗಳು ತೆರೆಮೇಲೆ ಬರಲಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *