“ಬ್ರಹ್ಮಚಾರಿ” ಟ್ರೇಲರ್ ಇಷ್ಟ ಪಟ್ಟ ಸ್ಯಾಂಡಲ್‌ವುಡ್ ಅಭಿಮಾನಿಗಳು – PopcornKannada
Connect with us

Reviews

“ಬ್ರಹ್ಮಚಾರಿ” ಟ್ರೇಲರ್ ಇಷ್ಟ ಪಟ್ಟ ಸ್ಯಾಂಡಲ್‌ವುಡ್ ಅಭಿಮಾನಿಗಳು

Published

on

ಸತೀಶ್‌ ನೀನಾಸಂ ಮತ್ತು ಅದಿತಿ ಪ್ರಭುದೇವ ನಟನೆಯ ಬ್ರಹ್ಮಚಾರಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸಿನಿಮಾದಲ್ಲಿರುವ ಅವನ ಕೈನಲ್ಲಿ ಏನು ಆಗಲ್ಲ ಎನ್ನುವ ಡೈಲಾಗ್‌ನ್ನು ಜನ ಎಂಜಾಯ್‌ ಮಾಡುತ್ತಿದ್ದಾರೆ.

 

ಉದಯ್‌ ಮೆಹ್ತಾ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಚಂದ್ರಮೋಹನ್‌ ನಿರ್ದೇಶನ ಮಾಡಿದ್ದಾರೆ. ಸತೀಶ್‌ ನೀನಾಸಂ ಜತೆ ಅಚ್ಯುತ್‌ಕುಮಾರ್‌, ದತ್ತಣ್ಣ, ಶಿವರಾಜ್‌ ಕೆ ಆರ್‌ ಪೇಟೆ, ಅಶೋಕ್‌, ಪದ್ಮಜಾ ರಾವ್‌ ನಟಿಸಿದ್ದಾರೆ.

 

 

ಟ್ರೇಲರ್‌ ನೋಡಿದ ಮೇಲೆ ಲೈಂಗಿಕ ಸಮಸ್ಯೆ ಇರುವ ಯುವಕನೊಬ್ಬನ ನೋವು,ನಲಿವಿನ ಕಥೆ ಈ ಚಿತ್ರದಲ್ಲಿದೆ ಎಂಬುದು ಗೊತ್ತಾಗುತ್ತದೆ. ಅದಕ್ಕೆ ತಕ್ಕಂತೆ ಸಿಕ್ಕಾಪಟ್ಟೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಚಿತ್ರದಲ್ಲಿವೆ ಎಂಬುದು ಟ್ರೇಲರ್‌ನಲ್ಲಿ ರಿವೀಲ್‌ ಆಗಿದೆ. ಡಬಲ್ ಮೀನಿಂಗ್ ಸಂಭಾಷಣೆ ಎಲ್ಲೂ ಮುಜುಗರ ಪಡಿಸುವಂತಿಲ್ಲ ಎಂಬುದೇ ಅದರ ಪ್ಲಸ್ ಪಾಯಿಂಟ್.

 

ಈ ಸಿನಿಮಾದ ತಡ್ಕ ತಡ್ಕ ಹಾಡು ಬಿಡುಗಡೆಯಾಗಿ ವೈರಲ್‌ ಆಗಿತ್ತು. ಈಗ ಟ್ರೇಲರ್‌ ಕೂಡಾ ಶರವೇಗದಲ್ಲಿ ಸಾಗುತ್ತಿದ್ದು, ಜನ ಈ ಚಿತ್ರವನ್ನು ಖಂಡಿತಾ ಇಷ್ಟಪಡುತ್ತಾರೆ ಎನ್ನುತ್ತಿದೆ ಚಿತ್ರತಂಡ.

 

Spread the love

ಸತೀಶ್‌ ನೀನಾಸಂ ಮತ್ತು ಅದಿತಿ ಪ್ರಭುದೇವ ನಟನೆಯ ಬ್ರಹ್ಮಚಾರಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಸಿನಿಮಾದಲ್ಲಿರುವ ಅವನ ಕೈನಲ್ಲಿ ಏನು ಆಗಲ್ಲ ಎನ್ನುವ ಡೈಲಾಗ್‌ನ್ನು ಜನ ಎಂಜಾಯ್‌ ಮಾಡುತ್ತಿದ್ದಾರೆ.

 

ಉದಯ್‌ ಮೆಹ್ತಾ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಚಂದ್ರಮೋಹನ್‌ ನಿರ್ದೇಶನ ಮಾಡಿದ್ದಾರೆ. ಸತೀಶ್‌ ನೀನಾಸಂ ಜತೆ ಅಚ್ಯುತ್‌ಕುಮಾರ್‌, ದತ್ತಣ್ಣ, ಶಿವರಾಜ್‌ ಕೆ ಆರ್‌ ಪೇಟೆ, ಅಶೋಕ್‌, ಪದ್ಮಜಾ ರಾವ್‌ ನಟಿಸಿದ್ದಾರೆ.

 

 

ಟ್ರೇಲರ್‌ ನೋಡಿದ ಮೇಲೆ ಲೈಂಗಿಕ ಸಮಸ್ಯೆ ಇರುವ ಯುವಕನೊಬ್ಬನ ನೋವು,ನಲಿವಿನ ಕಥೆ ಈ ಚಿತ್ರದಲ್ಲಿದೆ ಎಂಬುದು ಗೊತ್ತಾಗುತ್ತದೆ. ಅದಕ್ಕೆ ತಕ್ಕಂತೆ ಸಿಕ್ಕಾಪಟ್ಟೆ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಚಿತ್ರದಲ್ಲಿವೆ ಎಂಬುದು ಟ್ರೇಲರ್‌ನಲ್ಲಿ ರಿವೀಲ್‌ ಆಗಿದೆ. ಡಬಲ್ ಮೀನಿಂಗ್ ಸಂಭಾಷಣೆ ಎಲ್ಲೂ ಮುಜುಗರ ಪಡಿಸುವಂತಿಲ್ಲ ಎಂಬುದೇ ಅದರ ಪ್ಲಸ್ ಪಾಯಿಂಟ್.

 

ಈ ಸಿನಿಮಾದ ತಡ್ಕ ತಡ್ಕ ಹಾಡು ಬಿಡುಗಡೆಯಾಗಿ ವೈರಲ್‌ ಆಗಿತ್ತು. ಈಗ ಟ್ರೇಲರ್‌ ಕೂಡಾ ಶರವೇಗದಲ್ಲಿ ಸಾಗುತ್ತಿದ್ದು, ಜನ ಈ ಚಿತ್ರವನ್ನು ಖಂಡಿತಾ ಇಷ್ಟಪಡುತ್ತಾರೆ ಎನ್ನುತ್ತಿದೆ ಚಿತ್ರತಂಡ.

 

Spread the love

Movie Reviews

ದೆವ್ವದ ಜತೆ ‘ಗಿಮಿಕ್‌’ ಮಾಡ್ತಾರೆ ಗಣೇಶ್‌ – ಸಿನಿಮಾ ವಿಮರ್ಶೆ – ರೇಟಿಂಗ್ – 2.5/5 !

Published

on

By

ಚಿತ್ರ: ಗಿಮಿಕ್‌

ನಿರ್ಮಾಣ: ದೀಪಕ್‌

ನಿರ್ದೇಶನ: ನಾಗಣ್ಣ

ಸಂಗೀತ: ಅರ್ಜುನ್‌ ಜನ್ಯ

ತಾರಾಗಣ : ಗಣೇಶ್‌, ರೋನಿಕಾ ಸಿಂಗ್‌, ಸುಂದರರಾಜ್‌, ಶೋಭರಾಜ್‌, ಮಂಡ್ಯರಮೇಶ್‌, ಚಿ. ಗುರುದತ್‌, ರವಿಶಂಕರ್‌ಗೌಡ, ಸಂಗೀತಾ

ರೇಟಿಂಗ್‌: 2.5/5.

 

 

ಕೆಲ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾರರ್‌ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬರೀ ಹೊಸಬರೇ ಹಾರರ್‌ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ಹೆದರಿಸುತ್ತಿದ್ದರು ಆ ಸಾಲಿಗೆ ಹೊಸ ಸೇರ್ಪಡೆ ಗೋಲ್ಡನ್‌ ಸ್ಟಾರ್‌ ಗಣೇಶ್‌. ಆದರೆ ಗಣೇಶ್‌ ಬರಿ ಹೆದರಿಸುವುದಿಲ್ಲ, ಕೊಂಚ ನಗಿಸಲು ಪ್ರಯತ್ನ ಪಟ್ಟಿದ್ದಾರೆ. ಹೊಸಬರ ಸಿನಿಮಾಗಳಿಗಿಂತಲೂ ಈ ಚಿತ್ರದ ಕಥೆ ಕೊಂಚ ಜಾಸ್ತಿ ಭಯ ಹುಟ್ಟಿಸುತ್ತದೆ.

 

ಗಣೇಶ್‌ ಇಲ್ಲಿ ಗಣೇಶ್‌ ಎಂಬ ಪಾತ್ರದ ಮೂಲಕ ತನ್ನ ಪ್ರೇಯಸಿಗಾಗಿ ಮನುಷ್ಯರು ಮತ್ತು ದೆವ್ವಗಳ ಜತೆ ಹೋರಾಟ ಮಾಡುತ್ತಾರೆ. ಹೋರಾಟ ಮಾಡುತ್ತಲೇ ಕೊಂಚ ಗಿಮಿಕ್‌ ಮಾಡಿ ತನ್ನ ಪ್ರೇಯಸಿಯನ್ನು ಪಡೆಯುವ ಪ್ರಯತ್ನ ಮಾಡುತ್ತಾರೆ. ಈ ಪ್ರಯತ್ನವನ್ನು ನೋಡಲು ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಹೋಗಬೇಕು.

 

ಯಾವುದೋ ಘಟನೆಯಲ್ಲಿ ಭೇಟಿ ಮಾಡುವ ಹುಡುಗಿಗಾಗಿ ಗಣೇಶ್‌ ಮಾಡುವ ಗಿಮಿಕ್‌ಗಳಲ್ಲಿ ಯಾವುದೇ ಲಾಜಿಕ್‌ ಇಲ್ಲ ಆದರೆ,ಎಂಟರ್‌ಟೇನ್‌ಮೆಂಟ್‌ ಇದೆ. ಸಿನಿಮಾದ ಫಸ್ಟ್‌ ಹಾಫ್‌ ಫುಲ್‌ ಕಾಮಿಡಿ, ಸೆಕೆಂಡ್‌ ಹಾಫ್‌ ಫುಲ್‌ ಹಾರರ್‌ ಎರಡು ಮಿಕ್ಸ್‌ ಆಗಿ ಗಿಮಿಕ್‌ ನೋಡುಗರಿಗೆ ಒಂದು ಕಂಪ್ಲೀಟ್‌ ಎಂಟರ್‌ಟೇನರ್‌ ಆಗಿದೆ.

 

 

ಈ ಸಿನಿಮಾವನ್ನು ಯಾರು ಬೇಕಾದರೂ ಮಾಡಬಹುದಿತ್ತು, ಆದರೆ ಗಣೇಶ್‌ ಮಾಡಿರುವುದರಿಂದ ಚಿತ್ರಕ್ಕೊಂದು ಸ್ಟಾರ್‌ ವ್ಯಾಲ್ಯೂ ಬಂದಿದೆ. ಗಣೇಶ್‌ ಸಹ ಎಂದಿಗಿಂತಲೂ ಕೊಂಚ ಲವಲವಿಕೆಯಿಂದ ಮತ್ತು ವಿಶೇಷವಾಗಿ ನಟಿಸಿ ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ನಾಯಕಿ ಪಾತ್ರ ಎಂದಿನಂತೆ ಕಲರ್‌ಫುಲ್‌ ಆಗಿದೆ.

 

ಗಣೇಶ್‌ ಮತ್ತು ದೆವ್ವಗಳ ಜತೆ ಸುಂದರ್‌ರಾಜ್‌, ರವಿಶಂಕರ್‌ಗೌಡ, ಮಂಡ್ಯ ರಮೇಶ್‌ ನಗಿಸುತ್ತಾರೆ. ಸಂಭಾಷಣೆ ಗಮನ ಸೆಳೆಯುತ್ತದೆ. ಇನ್ನು ಸಂಗೀತ ಹಾರರ್‌ ಸಬ್ಜೆಕ್ಟ್‌ಗೆ ಸಪೋರ್ಟ್‌ ಮಾಡಿಲ್ಲ ಎನ್ನಿಸುತ್ತದೆ. ಒಟ್ಟಿನಲ್ಲಿ ಇದು ಸಹ ಒಂದು ಮಾಮೂಲಿ ಹಾರರ್‌ ಸಿನಿಮಾನೇ ಆದರೆ ಇದರಲ್ಲಿ ಗಣೇಶ್‌ ನಟಿಸಿದ್ದಾರೆ ಅಷ್ಟೇ.  ಈ ಚಿತ್ರವು ತಮಿಳಿನ “ದಿಲ್ಲಿಕು ದುಡ್ಧು” ಚಿತ್ರದ ಅಧಿಕೃತ ರೀಮೇಕ್. 

Spread the love
Continue Reading

Movie Reviews

ಅಮ್ಮನ ಮಾಸ್‌ ಮಗ ಈ ಸಿಂಗ – ಸಿನಿಮಾ ವಿಮರ್ಶೆ – ರೇಟಿಂಗ್ – 3/5 – PocpornKannada.com

Published

on

By

ಚಿತ್ರ : ಸಿಂಗ

ನಿರ್ದೇಶನ : ವಿಜಯ್‌ ಕಿರಣ್‌

ನಿರ್ಮಾಣ : ಉದಯ್‌ ಕೆ ಮೆಹ್ತಾ

ಸಂಗೀತ : ಧರ್ಮ ವಿಶ್‌

ಕ್ಯಾಮೆರಾ : ಕಿರಣ್‌ ಹಂಪಾಪುರ

ತಾರಾಗಣ : ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್‌, ತಾರಾ, ಶಿವರಾಜ್‌ ಕೆ.ಆರ್‌ ಪೇಟೆ, ಅರುಣಾ ಬಾಲರಾಜ್‌

ರೇಟಿಂಗ್‌ :  3/5

 

 

ಶ್ಯಾನೆ ಟಾಪಾಗವ್ಳೆ ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಶನ್‌ ಕ್ರಿಯೇಟ್‌ ಮಾಡಿದ್ದ ಸಿಂಗ  ಒಂದು ಅಪ್ಪಟ ಮಾಸ್‌ ಮಸಾಲೆ ಇರುವ ಕಮರ್ಷಿಯಲ್‌ ಚಿತ್ರ.

 

ಊರಲ್ಲಿ ಯಾರೇ ಅವನಿಗೆ ಎದುರಾದರೂ ಚೆಂಡಾಡುವ ಸಿಂಗ [ ಚಿರಂಜಿವಿ ಸರ್ಜಾ] ಮನೆಯಲ್ಲಿ ಅಮ್ಮನ ಮಾತನ್ನು ಮೀರದ ಮಗ. ಇಂತಹ ಮಗನಿಗೊಂದು ಮದುವೆ ಮಾಡಬೇಕು ಎಂಬುದು ಸಿಂಗನ ತಾಯಿ [ ತಾರಾ] ಯ ಆಸೆ ಆದರೆ ಮದುವೆ ಅಂದರೆ ಮಾರು ದೂರು ಓಡ್ತಾನೆ ಈ ಸಿಂಗ. ಇಂತಹ ಸಿಂಗನ ಬಾಳಲ್ಲಿ ಟಾಪಾಗಿರುವ ಹುಡುಗಿ ಬಂದು ಇಬ್ಬರಿಗೂ ಲವ್ ಆಗುತ್ತದೆ. ಆದರೆ ಈ ಲವ್‌ನಿಂದ ಸಿಂಗನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ ಅದೇನು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.

 

 

ಮೊದಲೇ ಹೇಳಿದಂತೆ ಇದೊಂದು ಮಾಸ್‌ ಮಸಾಲೆ ಇರುವ ಅಪ್ಪಟ ಕಮರ್ಷಿಯಲ್‌ ಸಿನಿಮಾ. ಡೈಲಾಗ್‌, ಫೈಟ್ಸ್‌, ಹಾಡುಗಳು ಎಲ್ಲವೂ ಅಭಿಮಾನಿಗಳಿಗೆ ಮಾಡಿದ ಪರಿಣಾಮ ಪ್ರತಿಯೊಂದರಲ್ಲಿಯೂ ರಂಜನೆ ಇದೆ, ಎಂಟರ್‌ಟೇನ್‌ಮೆಂಟ್‌ ಇದೆ. ಅದರಲ್ಲಿ ಡೈಲಾಗ್‌ ಮತ್ತು ಫೈಟ್‌ಗಳಿಗಂತೂ ಅಭಿಮಾನಿಗಳು ಶಿಳ್ಳೆ ಹಾಕುತ್ತಾರೆ. ಇನ್ನು ಸಿದ್ಧ ಸೂತ್ರವನ್ನು ನಿರ್ದೇಶಕ ವಿಜಯ್‌ ಕಿರಣ್‌ ಅಳವಡಿಸಿಕೊಂಡ ಪರಿಣಾಮ ಚಿತ್ರಕಥೆ ರಚಿಸಲು ಅಂತಹ ಕಷ್ಟವೇನು ಆಗಿಲ್ಲ. ಆದರೂ ಪ್ರತಿಯೊಂದನ್ನು ಸಮರ್ಥವಾಗಿ ತೆರೆ ಮೇಲೆ ತಂದಿದ್ದಾರವರು.

 

ಇನ್ನು ಚಿರಂಜೀವಿ ಸರ್ಜಾ ಫೈಟಿಂಗ್‌ ಮತ್ತು ನಟನೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಡಾನ್ಸ್‌ನಲ್ಲಿ ಒಂಚೂರು ವೀಕ್ ಆದಂತೆ ಕಾಣಿಸುತ್ತಾರೆ. 

 

 

ಇನ್ನು ತಾಯಿಯಾಗಿ ನಟಿಸಿರುವ ತಾರಾ ಅವರದ್ದು, ಮನ ಮುಟ್ಟು ನಟನೆ. ಸಾಕಷ್ಟು ಸಿನಿಮಾಗಳಲ್ಲಿ ತಾಯಿಯಾಗಿ ನಟಿಸಿರುವ ಅವರು, ಈ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಅರುಣಾ ಬಾಲರಾಜ್‌ ಕೂಡ ತಮ್ಮಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದಿತಿ ಪ್ರಭುದೇವ ನೋಡಲು ಎಷ್ಟು ಚೆಂದವಾಗಿ ಕಾಣಿಸುತ್ತಾರೋ, ಅಷ್ಟೇ ಸುಂದರವಾಗಿ ನಟಿಸಿದ್ದಾರೆ ಮತ್ತು ಡಾನ್ಸ್‌ನಲ್ಲಿಯೂ ಮಿಂಚಿದ್ದಾರೆ. ಶಿವರಾಜ್‌ ಕೆ ಆರ್‌ ಪೇಟೆ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.  

 

 ಸಿನಿಮಾದಲ್ಲಿ ಮೈನೆಸ್‌ ಪಾಯಿಂಟ್‌ಗಳಿದ್ದರೂ ಮಾಸ್  ಪ್ರೇಕ್ಷಕರು ಇಷ್ಟಪಡುವ ಸಾಕಷ್ಟು ಅಂಶಗಳು ಜತೆಗೆ, ತಾಯಿ ಸೆಂಟಿಮೆಂಟ್‌ ಇಷ್ಟಪಡುವವರು ಈ ಚಿತ್ರವನ್ನು ನೋಡಬಹುದು. ಉಳಿದಂತೆ ಸಿಂಗನನ್ನು ಕಂಪ್ಲೀಟ್‌ ಎಂಟರ್‌ಟೇನ್‌ಮೆಂಟ್‌ ಎನ್ನಬಹುದು.   

 

 

Spread the love
Continue Reading

Movie Reviews

ಇದು ಆದಿ ಲಕ್ಷ್ಮಿಯರ ಲವ್‌ ಪುರಾಣ – ಸಿನಿಮಾ ವಿಮರ್ಶೆ – ರೇಟಿಂಗ್ – 3.5/5.

Published

on

By

ಚಿತ್ರ: ಆದಿಲಕ್ಷ್ಮೀ ಪುರಾಣ

ನಿರ್ದೇಶನ: ಪ್ರಿಯಾ ವಿ.

ಸಿನಿಮಾಟೋಗ್ರಫರ್‌: ಪ್ರೀತಾ.

ನಿರ್ಮಾಪಕ: ರಾಕ್‌ಲೈನ್‌ ವೆಂಕಟೇಶ್‌.

ಸಂಗೀತ: ಅನೂಪ್‌ ಭಂಡಾರಿ.

ಪಾತ್ರವರ್ಗ: ನಿರೂಪ್‌ ಭಂಡಾರಿ, ರಾದಿಕಾ ಪಂಡಿತ್‌, ಯಶ್‌ ಶೆಟ್ಟಿ, ತಾರಾ, ಸುಚೇಂದ್ರ ಪ್ರಸಾದ್‌, ಭರತ್‌, ಸೌಮ್ಯ ಜಗನ್‌ಮೂರ್ತಿ ಮತ್ತಿತರರು.

ರೇಟಿಂಗ್‌ : 3.5/5

 

ಮನುಷ್ಯನ ಬದುಕಲ್ಲಿ ಒಂದು ಸುಳ್ಳು ಏನೇನೆಲ್ಲ ಮಾಡುತ್ತದೆ, ಮತ್ತು ಅದೇ ಸುಳ್ಳು ಒಂದಿಡಿ ಸಿನಿಮಾವನ್ನು ಲವಲವಿಕೆಯಿಂದ ಕಟ್ಟುವುದಕ್ಕೆ ಸಹಾಯ ಮಾಡುತ್ತದೆ ಎಂಬುದೇ ಆದಿ ಲಕ್ಷ್ಮೀ ಪುರಾಣ.

 

 

ಇದು ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ಮತ್ತು ಸುಳ್ಳು ಹೇಳುವವರನ್ನು ಕಂಡರೆ ಉರಿದು ಬೀಳುವ ಆದಿ ಮತ್ತು ಟ್ರಾವೆಲ್‌ ಏಜೆಂಟ್‌ ಆಗಿ ಬರೀ ಸುಳ್ಳು ಹೇಳಿ ಕಂಪನಿಗೆ ಬಿಸ್ನೆಸ್‌ ತಂದುಕೊಡುವ ಲಕ್ಷ್ಮಿಯ ನಡುವೆ ನಡೆಯುವ ಪ್ರೇಮ ಪುರಾಣ. ಮೊದಲೇ ಹೇಳಿದಂತೆ ಇಡೀ ಸಿನಿಮಾಗೆ ಕಥೆಯಲ್ಲಿ ಬರುವ ಒಂದು ಸುಳ್ಳು ಮುಖ್ಯ. ಹಾಗಾಗಿ ಆ ಸುಳ್ಳು ಸಿನಿಮಾದಲ್ಲಿ ಉಂಟು ಮಾಡುವ ಸನ್ನಿವೇಶಗಳನ್ನು ನಿರ್ದೇಶಕಿ ಪ್ರಿಯಾ ಗಮನ ಸೆಳೆಯುವಂತೆ ಕಟ್ಟಿದ್ದಾರೆ.

 

ಸಿನಿಮಾವನ್ನು ಕೂರಿಸಿರುವ ಆ ಸುಳ್ಳಿನ ಕಥೆಯೇನು, ಅದರಲ್ಲಿ ರಾಧಿಕಾ ಪಂಡಿತ್‌ ಏನು ಮಾಡ್ತಾರೆ, ನಿರೂಪ್‌ ಭಂಡಾರಿಯವರ ಪಾತ್ರದ ಹಿನ್ನೆಲೆ ಏನು. ಅವರಿಬ್ಬರೂ ಲವರ್ಸ್‌ ಆಗಿರ್ತಾರಾ, ಇಲ್ಲ ಟ್ರೇಲರ್‌ನಲ್ಲಿರುವಂತೆ ರಾಧಿಕಾ ಒಂದು ಮಗುವಿನ ತಾಯಿ ಪಾತ್ರದಲ್ಲಿದ್ದಾರಾ ಇವೆಲ್ಲವನ್ನು ತಿಳಿದುಕೊಳ್ಳಲು ಮಿಸ್‌ ಮಾಡದೇ ಚಿತ್ರಮಂದಿರಕ್ಕೆ ಹೋಗಲೇಬೇಕು.

 

 

ರಂಗಿತರಂಗ ಮೂಲಕ ಗಮನ ಸೆಳೆದಿದ್ದ ನಿರೂಪ್‌ ಭಂಡಾರಿ, ಇಲ್ಲಿ ಪೊಲೀಸ್‌ ಆಫೀಸರ್‌, ಲವರ್‌ ತಾಯಿಯ ಮುದ್ದಿನ ಮಗ ಹೀಗೆ ಎಲ್ಲ ಪಾತ್ರಗಳಲ್ಲಿಯೂ ಮಿಂದೆದ್ದಿದ್ದಾರೆ. ಬಹಳ ದಿನಗಳ ನಂತರ ನಟಿಸಿರುವ ರಾಧಿಕಾ ಅವರ ಚಾರ್ಮ್‌ ಎಲ್ಲಿಯೂ ಕಮ್ಮಿ ಆಗಿಲ್ಲ. ಅವರು ಇನ್ನೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಬಹುದು ಎನ್ನುವಷ್ಟರ ಮಟ್ಟಿಗೆ ನಟಿಸಿದ್ದಾರೆ.

 

ಉಳಿದಂತೆ ತಾರಾ ಇತ್ತೀಚಿನ ಪರ್ಫೆಕ್ಟ್‌ ಮದರ್‌ ಆಗಿದ್ದಾರೆ. ಸುಚೇಂದ್ರ ಪ್ರಸಾದ್‌, ಯಶ್‌ ಶೆಟ್ಟಿ ಹೀಗೆ ಎಲ್ಲರೂ ತಮ್ಮ ತಮ್ಮೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಸಿನಿಮಾಟೋಗ್ರಫರ್‌ ಪ್ರೀತಾ ಮತ್ತು ಸಂಗೀತ ನಿರ್ದೇಶಕ ಅನೂಪ್‌ ಭಂಡಾರಿಯವರ ಕೆಲಸ ಕೂಡಾ ನಿರ್ದೇಶಕಿ ಪ್ರಿಯಾ ಅವರ ಕನಸಿಗೆ ಇಂಬು ನೀಡುವಂತಿದೆ.

 

ಆದಿ ಲಕ್ಷ್ಮಿ ಪುರಾಣ ಒಂದು ಕಂಪ್ಲೀಟ್‌ ಎಂಟರ್‌ಟೇನರ್‌ ಮತ್ತು ನೀಟ್‌ ಸಿನಿಮಾ ಹಾಗಾಗಿ ಈ ವಿಕೇಂಡ್‌ಗೆ ಒಂದೊಳ್ಳೆ ಎಕ್ಸ್‌ಪಿರಿಯನ್ಸ್‌ ಎನ್ನಬಹದು. 

 

Spread the love
Continue Reading

Movie Reviews

ಕೋಲ್ಕತ್ತಾದ  ರಸ್ತೆಗಳಲ್ಲೊಂದು ಭಾವನಾತ್ಮಕ ಕಥೆ – ದೇವಕಿ ವಿಮರ್ಶೆ – ರೇಟಿಂಗ್ – 4/5 : PopcornKannada.com

Published

on

By

ಚಿತ್ರ: ದೇವಕಿ

ನಿರ್ದೇಶಕ: ಲೋಹಿತ್‌

ಸಂಗೀತ: ನೋಬಿನ್‌ ಪೌಲ್‌

ಸಿನಿಮಾಟೋಗ್ರಫಿ: ವೇಣು

ತಾರಾಗಣ: ಪ್ರಿಯಾಂಕ ಉಪೇಂದ್ರ, ಐಶ್ವರ್ಯಾ, ಕಿಶೋರ್‌

 

ರೇಟಿಂಗ್‌: 4/5.

 

 

ಮಮ್ಮಿಮೂಲಕ ತೆರೆ ಮೇಲೆ ಹಾರರ್‌ ಮ್ಯಾಜಿಕ್‌ ಮಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ ಲೋಹಿತ್‌ ತಮ್ಮ ಎರಡನೇ ಸಿನಿಮಾಗೆ ಭಾವನಾತ್ಮಕ ಕಥೆಯನ್ನು ಆಯ್ದುಕೊಂಡಿದ್ದಾರೆ. ಆಯ್ದುಕೊಂಡ ಕಥೆಗೆ ಅವರು ನ್ಯಾಯ ಸಲ್ಲಿಸಿದ್ದಾರೆ.

 

ದೇವಕಿ ಕೋಲ್ಕತ್ತದ ಮಧ್ಯಮ ವರ್ಗದ ಮಹಿಳೆ. ತನ್ನ ಮಗಳೊಂದಿಗೆ ಸಂತೋಷದ ಬದುಕು ನಡೆಸುತ್ತಿರುತ್ತಾಳೆ. ಹೀಗಿದ್ದ ಸಮಯದಲ್ಲಿ ಒಂದು ದಿನ ಸಂಜೆ ಆಕೆಯ ಮಗಳು ಕಾಣದೇ ಹೋಗುತ್ತಾಳೆ. ತನ್ನ ಮಗಳನ್ನು ಹುಡುಕುತ್ತಾ ಸಾಗುವ ದೇವಕಿಯ ಕರುಣಾಜನಕ ಕಥೆಯನ್ನು ಥ್ರಿಲ್ಲರ್‌ ಫಾರ್ಮ್ಯಾಟ್‌ನಲ್ಲಿ ಹೇಳಿದ್ದಾರೆ ಲೋಹಿತ್‌. ಕಡೆಗೆ ಆ ಮಗು ಸಿಗುತ್ತದಾ, ಇಲ್ಲ ದುರಂತ ಅಂತ್ಯ ಕಾಣುತ್ತಾದ ಎಂಬುದನ್ನು ಅರಿಯಲು ಸಿನಿಮಾಗೆ ಹೋಗಬೇಕು.

 

ಸಸ್ಪನ್ಸ್‌ ಥ್ರಿಲ್ಲರ್‌ ಸಿನಿಮಾಗಳಿಗೆ ಮುಖ್ಯವಾಗಿ ಬೇಕಾಗಿರುವುದು ರೋಚಕತೆ. ಅದು ಈ ಸಿನಿಮಾದಲ್ಲಿ ಹೇರಳವಾಗಿದೆ. ನಿರ್ದೇಶಕ ಲೋಹಿತ್‌ ಪ್ರತಿ ದೃಶ್ಯವನ್ನು ಸೀಟಿನ ತುದಿಗ ಕೂರುವಂತೆ ಬರೆದುಕೊಂಡು, ಅದನ್ನು ತೆರೆ ಮೇಲೆ ತಂದಿದ್ದಾರೆ. ಅವರ ಈ ಮಾದರಿಯ ಚಿತ್ರಕಥೆಗೆ ಸಿನಿಮಾಟೋಗ್ರಫರ್‌ ವೇಣು, ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌, ಅಟ್ಮಾಸ್‌ ಸೌಂಡ್‌ ಎಂಜಿನಿಯರ್‌ ಉದಯ್‌ಕುಮಾರ್‌ ಹೀಗೆ ಎಲ್ಲ ವಿಭಾಗದ ತಂತ್ರಜ್ಞರು ಸಾಥ್‌ ನೀಡಿದ್ದಾರೆ.

 

 

ಇಡೀ ಕೋಲ್ಕತ್ತಾವನ್ನು ವೇಣು ಅದ್ಭುತವಾಗಿ ಕಟ್ಟಿಕೊಟ್ಟಿದ್ದು, ರಾತ್ರಿ ಹೊತ್ತಿನ ಕೋಲ್ಕತ್ತ ಇಷ್ಟೊಂದು ಸುಂದರವಾಗಿರುತ್ತದೆ ಎಂಬುದು ಬಹುಶಃ ಅಲ್ಲಿನ ಜನಕ್ಕೆ ತಿಳಿದಿಲ್ಲವೇನೋ. ಇನ್ನು ನಟನೆ ವಿಚಾರಕ್ಕೆ ಬಂದರೆ ಪ್ರಿಯಾಂಕ ಉಪೇಂದ್ರ ಅವರ ಸಿನಿಮಾ ಕರಿಯರ್‌ಗೆ ಇದು ದೊಡ್ಡ ಗರಿ. ಕಿಶೋರ್‌ ಎಂದಿನಂತೆ ಕ್ಲಾಸಿಕ್‌ ಆಗಿ ನಟಿಸಿದ್ದಾರೆ. ಉಪ್ಪಿ ಪುತ್ರಿ ಐಶ್ವರ್ಯಾ ಸಹ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆಯುತ್ತಾರೆ.

 

ಇನ್ನುಳಿದಂತೆ ಎಲ್ಲ ಕಲಾವಿದರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.  ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ದೇವಕಿಯೊಂದಿ ಭಾವನಾತ್ಮಕವಾಗಿ ಬೆಸೆದುಕೊಂಡು ಹೋಗುತ್ತಾರೆ. ಹಾಗಾಗಿ ಮಿಸ್‌ ಮಾಡದೇ ಈ ಸಿನಿಮಾವನ್ನು ನೋಡಬಹುದು. ಸಣ್ಣ ಪುಟ್ಟ ತಪ್ಪುಗಳಿದ್ದರೂ, ಇದೊಂದು ಕ್ಲಾಸಿಕ್‌ ಸಿನಿಮಾ ಎನ್ನಬಹುದು. 

Spread the love
Continue Reading

Reviews

ಪರಭಾಷಿಕರಿಗೆ ಗಣೇಶ್‌ ಕೊಡ್ತಾರೆ ಗುನ್ನಾ

Published

on

By

ಗಣೇಶ್‌ ನಟನೆಯ ‘ಗೀತಾ’ ಸಿನಿಮಾದ ಟೀಸರ್‌ ಸೋಮವಾರ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಿನಿಮಾದಲ್ಲಿ ಗಣೇಶ್‌ ಅಪ್ಪಟ ಕನ್ನಡ ಹೋರಾಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಗೋಕಾಕ್‌ ವರದಿಗಾಗಿ ನಡೆದ ಚಳುವಳಿಯನ್ನು ಬಳಸಿಕೊಳ್ಳಲಾಗಿದೆಯಂತೆ.

 

ಕನ್ನಡ ಹೋರಾಟಗಾರರಾಗಿ ಗಣೇಶ್‌ ಕನ್ನಡವನ್ನು ನಿರ್ಲಕ್ಷ್ಯ ಮಾಡುವ ಪರಭಾಷೆಯವರಿಗೆ ಗುನ್ನಾ ಕೊಡಲಿದ್ದಾರೆ. ಸಂತೋಷ್‌ ಆನಂದ್‌ರಾಮ್‌ ಬಳಿ ಕೆಲಸ ಮಾಡಿದ್ದ ವಿಜಯ್‌ ನಾಗೇಂದ್ರ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. 1980ರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಗಣೇಶ್‌ಗೆ ಇಲ್ಲಿ ಮೂವರು ನಾಯಕಿಯರಿದ್ದಾರೆ. ಸಯ್ಯದ್‌ ಸಲಾಂ ಮತ್ತು ಶಿಲ್ಪಾ ಗಣೇಶ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

 

 

ಗೋಕಾಕ್‌ ಚಳುವಳಿಗೆ ಡಾ. ರಾಜ್‌ಕುಮಾರ್‌ ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದರು. ಇದರ ಫಲವಾಗಿ ಆ ವರದಿ ಜಾರಿಯಾಗಿತ್ತು. ಈಗ ಗೀತಾ ಸಿನಿಮಾದಲ್ಲಿಯೂ ಈ ಚಳುವಳಿಯ ಕಂಟೆಂಟ್‌ನ್ನು ನಿರ್ದೇಶಕರು ಇಟ್ಟಿದ್ದಾರಂತೆ. ಇನ್ನು ಸಿನಿಮಾದ ಟೀಸರ್‌ನಲ್ಲಿ ಗಣೇಶ್‌ ಅವರ ಲುಕ್‌ , ಅವರ ಬೈಕ್‌, ಎಲ್ಲವೂ ಗಮನ ಸೆಳೆದಿದ್ದು, ಈಗಾಗಲೇ ಲಕ್ಷಾಂತರ ಮಂದಿ ಟೀಸರ್‌ನ್ನು ನೋಡಿದ್ದಾರೆ. ಇದು ಗಣೇಶ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಟೀಸರ್‌ ಆಗಿದೆ. ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.

Spread the love
Continue Reading

Trending News