Cinema News
ಸ್ಯಾಂಡಲ್ವುಡ್ ಗೆ ಹೊಸ ರಾಮಾಚಾರಿ ಎಂಟ್ರಿ

ಸ್ಯಾಂಡಲ್ವುಡ್ಗೂ ರಾಮಾಚಾರಿಗೂ ಬಿಡದ ನಂಟು. ಆ ರಾಮಾಚಾರಿ ನಂಟು ಇದೀಗ ಮತ್ತೆ ಮುಂದುವರಿಯುತ್ತಿದೆ. ಅವೆಲ್ಲವುಗಳ ಅಪ್ಡೇಟ್ ವರ್ಷನ್ ಅವತಾರದಲ್ಲಿ ಹೊಸ ರಾಮಾಚಾರಿ ಎಂಟ್ರಿಯಾಗುತ್ತಿದ್ದಾನೆ. ಅದೇ ರಾಮಾಚಾರಿ 2.0! ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತವನ್ನು ನೆರವೇರಿಸಿಕೊಂಡ ಈ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್ ಪ್ರಾರಂಭಿಸಿಲಿದೆ. ನಿರ್ದೇಶಕರಾದ ಶಶಾಂಕ್, ಮಹೇಶ್, ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಅಂದಹಾಗೆ ಪನಾರೋಮಿಕ್ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ನಿರ್ದೇಶನ, ನಾಯಕ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ತೇಜ್. ಈಗಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವಿನ ರಾಮಾಚಾರಯಿಂದ ಹಿಡಿದು, ರವಿಚಂದ್ರನ್ ಅವರ ರಾಮಾಚಾರಿ, ಇತ್ತೀಚಿಗಿನ ಯಶ್ ಅವರ ಮಿ. ಮಿ ರಾಮಾಚಾರಿ ಎಲ್ಲವೂ ಹೊಸ ದಾಖಲೆ ಬರೆದ ಸಿನಿಮಾಗಳೇ. ಇದೀಗ ಅದೇ ರಾಮಾಚಾರಿ ಶೀರ್ಷಿಕೆಯನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಈ ರಾಮಾಚಾರಿ ತುಂಬ ಬುದ್ಧಿವಂತ ಹಾಗೂ ಇದು ಬಟರ್ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್. ಅದನ್ನು ನಾಯಕ ಹೇಗೆ ಹ್ಯಾಂಡಲ್ ಮಾಡುತ್ತಾನೆ ಎಂಬುದೇ ಕಥೆ ಎಂದು ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿದರು ತೇಜ್.
ಇನ್ನು ರಾಮಾಚಾರಿ ಅಂದಮೇಲೆ ಮಾರ್ಗರೇಟ್ ಇರಲೇಬೇಕಲ್ಲವೇ. ಆ ಪಾತ್ರವನ್ನು ನಿಭಾಯಿಸಿದ್ದಾರೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ. ನಿಜಕ್ಕೂ ಇಂಥ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ. ಒಂದು ಕಡೆ ಭಯ ಮತ್ತೊಂದು ಕಡೆ ಅಷ್ಟೇ ಎಗ್ಸೈಟ್ಮೆಂಟ್ ಸಹ ಇದೆ ಎಂದರು. ಬಹುತೇಕ ಹಳ್ಳಿಗಾಡಿನಲ್ಲಿಯೇ ಈ ಸಿನಿಮಾ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಸಿದ್ಧವಾಗಿದೆ. ಜಲೀಲನಾಗಿ ವಿಜಯ್ ಚೆಂಡೂರ್ ಪಾತ್ರ ನಿಭಾಯಿಸಲಿದ್ದು, ಕೊಂಚ ಭಯದಲ್ಲಿಯೇ ಇದ್ದಾರೆ. ಆ ಹೆಸರಿನಲ್ಲಿಯೇ ಒಂದು ತೂಕವಿದೆ. ಹೈ ವೋಲ್ಟೇಜ್ ಹೆಸರದು. ಹಾಗಾಗಿ ಹೆಸರಿಗೆ ತಕ್ಕದಾದ ಪಾತ್ರವೇ ನನಗೆ ಸಿಕ್ಕಿದೆ ಎಂದರು.
ಇನ್ನುಳಿದಂತೆ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಮುಖ್ಯ ಪಾತ್ರದಲ್ಲಿದ್ದಾರೆ. ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಪನಾರೋಮಿಕ್ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಾಯಕನಾಗಿ ನಟನೆ, ನಿರ್ದೇಶನ ಮತ್ತು ನಿರ್ಮಾಣವನ್ನು ತೇಜ್ ಮಾಡುತ್ತಿದ್ದಾರೆ. ಪ್ರೇಮ್ ಛಾಯಾಗ್ರಹಣ, ಸುಂದರ್ ಮೂರ್ತಿ ಸಂಗೀತ ನೀಡಲಿದ್ದು, ರಾಜೇಶ್ ಕೃಷ್ಣನ್, ಸಂತೋಷ್, ಐಶ್ವರ್ಯಾ ರಂಗರಾಜನ್ ಹಾಡುಗಳಿಗೆ ಧ್ವನಿ ನೀಡುತ್ತಿದ್ದಾರೆ.
Cinema News
ಅಣ್ಣಾವ್ರ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಸೌಭಾಗ್ಯ – ದೇವರಾಜ್

Cinema News
ಕಿಚ್ಚ ಸುದೀಪ್ ಅಭಿಮಾನಿ ಜಗ್ಗಿ ಈಗ ನಿರ್ಮಾಪಕ.

Cinema News
ಫೆ. 5ರಂದು ತೆರೆಗೆ ಬರಲಿದೆ ವಿನೋದ್ ಪ್ರಭಾಕರ್ “ಶ್ಯಾಡೊ”

Cinema News
ಫ್ಯಾಮಿಲಿ ಪ್ಯಾಕ್ ಸೆಟ್ನಲ್ಲಿ ಪವರ್

Cinema News
ಮುಹೂರ್ತ ಆಚರಿಸಿಕೊಂಡ “ಅಗ್ನಿ ಪ್ರವ”; ತಂಡಕ್ಕೆ ರಾಜಮೌಳಿ ತಂದೆಯ ಸಾಥ್

-
Box Office1 year ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews2 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Movie Reviews2 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Box Office2 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News1 year ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Cinema News2 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
News2 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
Reviews2 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News2 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ
-
Cinema News2 years ago
‘ಸಲಗ’ಕ್ಕೆ ದುನಿಯಾ ವಿಜಯ್ ನಿರ್ದೇಶಕ – Exclusive