ಡಾರ್ಕ್ ಫ್ಯಾಂಟಸಿ – ಫಸ್ಟ್ ಲುಕ್ ಮತ್ತು ಟೀಸರ್ ಬಂತು – PopcornKannada
Connect with us

Cinema News

ಡಾರ್ಕ್ ಫ್ಯಾಂಟಸಿ – ಫಸ್ಟ್ ಲುಕ್ ಮತ್ತು ಟೀಸರ್ ಬಂತು

Published

on

ರಾಘವೇಂದ್ರ ರಾಜ್ ಕುಮಾರ್ ನಟನೆಯ ʻಆಡಿಸಿದಾತʼ ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ ಮತ್ತೊಂದು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಈ ಚಿತ್ರಕ್ಕೆ ʻಡಾರ್ಕ್ ಫ್ಯಾಂಟಸಿʼ ಎಂದು ಹೆಸರಿಡಲಾಗಿದೆ.

ಕೊರೋನಾ ಎನ್ನುವ ಹೆಸರು ಜನರ ಕಿವಿಗೆ ಬೀಳುವ ಮುನ್ನವೇ ಆರಂಭಗೊಂಡಿದ್ದ ಚಿತ್ರವಿದು. ಲಾಕ್ಡೌನ್ ಅನೌನ್ಸ್ ಆಗುವ ಹೊತ್ತಿಗೆ ಶೇ. 60ರಷ್ಟು ಚಿತ್ರೀಕರಣ ಕೂಡಾ ಪೂರ್ಣಗೊಂಡಿತ್ತು. ಒಂದು ವೇಳೆ ಕೋವಿಡ್ ಸಮಸ್ಯೆ ಎದುರಾಗದೇ ಇದ್ದಿದ್ದರೆ ಈ ಹೊತ್ತಿಗೆ ಚಿತ್ರ ತೆರೆಗೆ ಬಂದಿರುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರಲಿಲ್ಲವಾದ್ದರಿಂದ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚಿತ್ರತಂಡ ಪೂರೈಸಿಕೊಂಡಿದೆ. ಡಾರ್ಕ್ ಫ್ಯಾಂಟಸಿಗಾಗಿ ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.

ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಬಂತು!

ಆರೋಗ್ಯ ಇಲಾಖೆಯ ಕೆಲವಾರು ಪ್ರಾಜೆಕ್ಟ್ ಗಳನ್ನು ರೂಪಿಸುತ್ತಿದ್ದವರು ನಾಗರಾಜ್ .ವಿ ಮತ್ತು ಆರ್.ವಿ. ನಿತಿನ್. ಅದೊಂದು ದಿನ ಎಸ್.ಎ. ಗೋವಿಂದರಾಜ್ ಮತ್ತು ಲಕ್ಷ್ಮಿ ಅವರು ʻಫಣೀಶ್ ಹೇಳುವ ಕತೆಯನ್ನು ಒಮ್ಮೆ ಕೇಳಿ. ಇಷ್ಟವಾದರೆ ನಿರ್ಮಾಣ ಮಾಡಿʼ ಎಂದು ಹೇಳಿದ್ದರಂತೆ. ಅದರಂತೆ, ಫಣೀಶ್ ಬಂದು ಕಥೆಯ ಒಂದು ಎಳೆಯನ್ನು ವಿವರಿಸಿದರಂತೆ. ತಕ್ಷಣ ಈ ಸಿನಿಮಾ ನಿರ್ಮಿಸಲೇಬೇಕು ಅಂತಾ ನಿತಿನ್ ಮತ್ತು ನಾಗರಾಜ್ ಅವರು ತೀರ್ಮಾನಿಸಿದ್ದ ಕಾರಣಕ್ಕೆ ಶುರುವಾದ ಚಿತ್ರ ಡಾರ್ಕ್ ಫ್ಯಾಂಟಸಿ. ಸದ್ಯ ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಹಣದ ಸುತ್ತ ನಡೆಯುವ ಕತೆ ಇದಾಗಿದೆ. ನಾಯಕಿ ಸಂದರ್ಭದ ಹಿಡಿತದಿಂದ ಒಂದು ಕತ್ತಲ ಬಂಗಲೆಯಲ್ಲಿ ಸಿಲುಕಿರುತ್ತಾಳೆ. ಹೊರಗೆ ಆಕೆಯ ಪ್ರಿಯಕರ ಪರಿತಪಿಸುತ್ತಿರುತ್ತಾನೆ. ಬದುಕಲ್ಲಿ ನೆಲೆನಿಲ್ಲಬೇಕು ಎಂದು ಬಯಸುವ ನಾಯಕನಟ, ಜೂಜು, ಬೆಟ್ಟಿಂಗುಗಳಿಂದ ಹಣ ಮಾಡಲು ನಿಂತ ಮತ್ತೊಬ್ಬ ವ್ಯಕ್ತಿ… ಹೀಗೆ ಹಲವಾರು ಪಾತ್ರಗಳು ಒಂದು ಕಡೆ ಸೇರುತ್ತವೆ. ಕತ್ತಲಿನಲ್ಲಿ ಸಿಕ್ಕಿಕೊಂಡ ನಾಯಕಿಗೆ ಬೆಳಕು ಗೋಚರಿಸುತ್ತದಾ? ದುಡ್ಡು ಮನುಷ್ಯರ ಚಿಂತನೆಯನ್ನು ಹೇಗೆ ಬದಲಿಸುತ್ತದೆ? ಹಣಕ್ಕಾಗಿ ಹೇಗೆ ಮಾರ್ಪಾಟಾಗುತ್ತಾರೆ? ಒಬ್ಬೊಬ್ಬರ ಬದುಕಲ್ಲೂ ನೋಟು ಹೇಗೆ ಆಟವಾಡುತ್ತದೆ ಅನ್ನೋದು ಚಿತ್ರದ ಎಳೆ.

ಡಾರ್ಕ್ ಫ್ಯಾಂಟಸಿಯಲ್ಲಿ ಸುನೀತಾ ಮತ್ತು ಸುಶ್ಮಿತಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮುಂತಾದವರ ತಾರಾಗಣವಿದೆ. ನಾಗರಾಜ್ .ವಿ ಮತ್ತು ನಿತಿನ್ ಆರ್.ವಿ. ಸೇರಿ ನಿರ್ಮಿಸುತ್ತಿರುವ ಚಿತ್ರಕ್ಕೆ ಫಣೀಶ್ ಭಾರಧ್ವಾಜ್ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಆನಂದ್ ಇಲ್ಲರಾಜ ಛಾಯಾಗ್ರಹಣ, ಕ್ಲಾರೆನ್ಸ್ ಅಲೆನ್ ಕ್ರಾಸ್ಟಾ ಸಂಗೀತ, ತುಳಸೀರಾಮರಾಜು ಸಂಕಲನ, ಪದ್ಮನಾಭ್ ಭಾರದ್ವಾಜ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಡಾರ್ಕ್ ಫ್ಯಾಂಟಸಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜ್ ಅವರ ಮೊಮ್ಮಕ್ಕಳಾದ ಧೀರೇನ್ ರಾಮ್ ಕುಮಾರ್, ಷಣ್ಮುಖ ಮತ್ತು ಎಸ್.ಎ. ಗೋವಿಂದರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ʻಈ ಚಿತ್ರದ ನಾಯಕನಟ ಶ್ರೀ ನಮ್ಮ ಊರಿನ ಕಡೆಯವರು. ಇವರನ್ನು ನೋಡಿದಾಗಲೆಲ್ಲಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವ ಭರವಸೆ ಮೂಡುತ್ತದೆ. ನಿರ್ಮಾಪಕರು ಸಹಾ ನನ್ನ ಆತ್ಮೀಯರು ಡಾರ್ಕ್ ಫ್ಯಾಂಟಸಿ ಚಿತ್ರತಂಡಕ್ಕೆ ಒಳಿತಾಗಲಿʼ ಎಂದು ಎಸ್.ಎ. ಗೋವಿಂದರಾಜ್ ಹರಸಿದರು.

ಫಣೀಶ್ ಅವರು ಸಿದ್ಧಸೂತ್ರಗಳ ಆಚೆಗೆ ಯೋಚಿಸುವ ನಿರ್ದೇಶಕ. ಅವರ ಹೊಸ ಪ್ರಯೋಗಗಳು, ಚೌಕಟ್ಟು ಮೀರಿ ಯೋಚಿಸುವ ಅವರ ಕ್ರಿಯಾಶೀಲತೆ ನನಗೆ ಬಹಳವಾಗಿ ಇಷ್ಟವಾಗುತ್ತದೆ. ಡಾರ್ಕ್ ಫ್ಯಾಂಟಸಿ ಸಿನಿಮಾ ಕೂಡಾ ಅಷ್ಟೇ ಅದ್ಭುತವಾಗಿ ಮೂಡಿಬರುತ್ತಿದೆ. ಉಳಿದ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ ತೆರೆ ಮೇಲೆ ನೋಡುವ ಕಾತುರ ನನ್ನದು. ಗೋವಿಂದರಾಜ್ ಮತ್ತು ಲಕ್ಷ್ಮಿ ಅಮ್ಮ ಅವರಿಂದಲೇ ಈ ಚಿತ್ರದಲ್ಲಿ ನಾನು ನಟಿಸುವಂತಾಯಿತು. ಈ ಕಾರಣಕ್ಕೆ ನಾನವರಿಗೆ ಅಭಾರಿಯಾಗಿದ್ದೇನೆ ಎನ್ನುವುದು ಡಾರ್ಕ್ ಫ್ಯಾಂಟಸಿಯ ಹೀರೋ ಶ್ರೀ ಅವರ ನುಡಿಗಳು.

Spread the love

Continue Reading
Click to comment

Leave a Reply

Your email address will not be published. Required fields are marked *

Cinema News

ಅಣ್ಣಾವ್ರ ಕುಟುಂಬದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಸೌಭಾಗ್ಯ – ದೇವರಾಜ್

Published

on

By

2020 ದುರದೃಷ್ಟದ ವರ್ಷ ಎಂದು ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರದಿಂದ ಮಾತನಾಡಿದರು. ನಂತರ ಡಾ.ರಾಜ್‌ಕುಮಾರ್ ಕುಟುಂಬದ 2021ನೇ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದ್ದು ಮೊದಲ ಪುಣ್ಯದ ಕೆಲಸ. ಅಣ್ಣಾವ್ರ ನಟಿಸಿರುವ ’ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ.

ಕೃಷ್ಣನ ಅವತಾರದಲ್ಲಿರುವ ಭಾವಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವು ಕ್ಯಾಲೆಂಡರ್ ಬಿಡುಗಡೆ ಮಾಡಿರೆಂದು ಹೇಳಿದರು.

ಒಟ್ಟು ಹನ್ನೆರಡು ತಿಂಗಳ ಪುಟಗಳಲ್ಲಿ ಡಾ.ಶಿವರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಪಾರ್ವತಮ್ಮರಾಜ್‌ಕುಮಾರ್ ಅವರನ್ನು ಡಾ.ರಾಜ್ ಕ್ಯಾಮರಾದಲ್ಲಿ ಕ್ಲಿಕ್ ಮಾಡುತ್ತಿರುವುದು, ಚಿ.ಉದಯಶಂಕರ್ ಅವರೊಂದಿಗೆ ಮಾತನಾಡುತ್ತಿವುದು, ಹ್ಯಾಟ್ರಿಕ್ ಹೀರೋ ಅಮ್ಮನಿಗೆ ಸಿಹಿ ತಿನ್ನಿಸುವಾಗ ಡಾ.ರಾಜ್ ನೋಡುತ್ತಿರುವುದು. ’ದಾರಿ ತಪ್ಪಿದ ಮಗ’ ಚಿತ್ರದ ಸ್ಟಿಲ್ ಇನ್ನು ಮುಂತಾದ ಆಕರ್ಷಕ ಭಾವಚಿತ್ರಗಳು ಇರಲಿದೆ. ’ಅಖಿಲ ಕರ್ನಾಟಕ ಡಾ.ಶಿವರಾಜ್‌ಕುಮಾರ್ ಸೇನಾ ಸಮಿತಿ’ ನೂತನ ವರ್ಷದ ಕ್ಯಾಲೆಂಡರ್‌ನ್ನು ಸಿದ್ದಪಡಿಸಿದೆ.

Spread the love
Continue Reading

Cinema News

ಕಿಚ್ಚ ಸುದೀಪ್ ಅಭಿಮಾನಿ ಜಗ್ಗಿ ಈಗ ನಿರ್ಮಾಪಕ.

Published

on

By

ಕಿಚ್ಚ ಸುದೀಪ್ ಅವರ ಆಶೀರ್ವಾದದೊಂದಿಗೆ ಅವರ ಅಭಿಮಾನಿ ಜಗ್ಗಿ ನಿರ್ಮಿಸುತ್ತಿರುವ “ಮರ್ಧನಿ” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಹಿಂದೆ ದೇವರಂಥ ಮನುಷ್ಯ (ಹೊಸದು) ನಿರ್ದೇಶಿಸಿದ್ದ, ಕಿರಣ್‌ ಕುಮಾರ್ ವಿ‌ ಈ ಚಿತ್ರದ ನಿರ್ದೇಶಕರು.

ಹೋಟೆಲ್ ಮ್ಯಾನೆಜ್‌ಮೆಂಟ್‌ ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿರುವ ಅಕ್ಷಯ್ ಈ ಚಿತ್ರದ ನಾಯಕ.‌ ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅಕ್ಷಯ್ ಈ ಚಿತ್ರದ ಮೂಲಕ ‌ನಾಯಕನಟನಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಕ್ಷಯ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಹಿತನ್ ಗೌಡ, ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ಶಿವಸಾಗರ್ ಛಾಯಾಗ್ರಹಣ, ಎಂ.ಎನ್.ವಿಶ್ವ ಸಂಕಲನ, ಪ್ರೇಂ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗಜೇಂದ್ರ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

Spread the love
Continue Reading

Cinema News

ಫೆ. 5ರಂದು ತೆರೆಗೆ ಬರಲಿದೆ ವಿನೋದ್ ಪ್ರಭಾಕರ್ “ಶ್ಯಾಡೊ”

Published

on

By

ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ.

ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾವಂತೆ. ಅದನ್ನು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.

‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ಕಥೆಯೊಂದಿಗೆ ಈ ಬಾರಿ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ. ಇಲ್ಲಿಯವರೆಗೂ ನನ್ನ ಸಿನಿಮಾಗಳಲ್ಲಿ ಮಾಸ್ ಅಂಶಗಳೇ ಹೆಚ್ಚಿರುತ್ತಿತ್ತು. ಆದ್ರೆ, ಶ್ಯಾಡೋ ಸಿನಿಮಾ ಮಾತ್ರ ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗಲಿದೆ.

ಅಂದುಕೊಂಡಿದ್ದಕ್ಕಿಂತ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಇಲ್ಲಿಯೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು. ಇಡೀ ಸಿನಿಮಾದಲ್ಲಿ ಎರಡೇ ಹಾಡಿದ್ದರೂ, ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಇಷ್ಟು ದಿನ ಸಿಂಗಲ್ ಸ್ಟ್ರೀನ್ ಮೇಲೆ ಹೆಚ್ಚು ನೋಡಿದ್ದ ನನ್ನನ್ನು, ಮಾಲ್‌ನಲ್ಲಿಯೂ ಈ ಸಿನಿಮಾಕ್ಕೆ ಒಳ್ಳೇಯ ಪ್ರತಿಕ್ರಿಯೆ ಸಿಗಲಿದೆ ಎಂಬ ಭರವಸೆ ಇದೆ. ನಮ್ಮ ಚಿತ್ರವನ್ನು ಧೀರಜ್ ಎಂಟರ್‌ಪ್ರೈಸಿಸ್ ನವರು ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದರು ವಿನೋದ್.

ಇನ್ನು ಚಿತ್ರದ ವಿತರಕ ಧೀರಜ್ ಎಂಟರ್‌ಪ್ರೈಸಿಸ್‌ನ ಮೋಹನ್ ದಾಸ್ ಪೈ ಸಹ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಅಷ್ಟೇ ಉತ್ಸಾಹದಲ್ಲಿಯೇ ಮಾತನಾಡಿದರು. ಕೊರೊನಾ ಬಳಿಕ ನಾಲ್ಕು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದೇನೆ. ಎಲ್ಲ ಕಡೆಗಳಿಂದಲೂ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಅದೇ ರೀತಿ ಇದೀಗ ಶ್ಯಾಡೋ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಪ್ರೇಕ್ಷಕರು ಆಗಮಿಸಿ ಈ ಚಿತ್ರಕ್ಕೂ ಆಶೀರ್ವದಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಈ ಸಿನಿಮಾದಲ್ಲಿ ಹಾಸ್ಯನಟನ ಪಾತ್ರ ನಿಭಾಯಿಸಿದ್ದಾರೆ. ಅವರೂ ಸಹ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಇಡೀ ಕುಟುಂಬ ನೋಡುವ ಸಿನಿಮಾ ಇದು. ವಿನೋದಣ್ಣ ಮಾಸ್ ಗೂ ಸೈ, ಕ್ಲಾಸ್‌ಗೂ ಸೈ ಎನಿಸುವಂತೆ ನಟಿಸಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಸೇರಿ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ ಎಂದರು.

ಇನ್ನು ಈ ಚಿತ್ರದಲ್ಲಿ ವಿನೋದ್‌ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಬರೆದಿದ್ದಾರೆ. ಅಚ್ಚು ಅವರ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ಚೋಟಾ ಪ್ರಸಾದ್ ಸಂಕಲನ, ವಿನೋದ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

Spread the love
Continue Reading

Cinema News

ಫ್ಯಾಮಿಲಿ ಪ್ಯಾಕ್ ಸೆಟ್ನಲ್ಲಿ ಪವರ್

Published

on

By

ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿ ಆರ್ ಕೆ ಪ್ರೊಡಕ್ಷನ್ಸ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ.

ಜನವರಿ 21 ರಂದು ಮಾತಿನ‌ ಭಾಗದ ಚಿತ್ರೀಕರಣ ಮುಕ್ತಾಯವಾಯಿತು. ಅಂದು ಪತ್ನಿ ಅಶ್ವಿನಿ‌ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಲಾವಿದ‌ರಿಗೆ ಹಾಗೂ ತಂತ್ರಜ್ಞರಿಗೆ ಶುಭ ಕೋರಿದರು.

ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ ಬರೆದಿರುವ ಮಾಸ್ತಿ ಹಾಗೂ ಕಲಾವಿದರಾದ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯತ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾ ಗೌಡ ಉಪಸ್ಥಿತರಿದ್ದರು.
ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ . ಈ ಚಿತ್ರದ ನಿರ್ಮಾಪಕರು.

ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ‌ ಅರ್ಜುನ್ ಕುಮಾರ್ ಎಸ್ ಈ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ಈ ಚಿತ್ರದ ನಾಯಕ ಕೂಡ. ಅಮೃತ ಅಯ್ಯಂಗಾರ್ ಫ್ಯಾಮಿಲಿ ಪ್ಯಾಕ್ ನ ನಾಯಕಿ. ರಂಗಾಯಣ ರಘು, ಅಚ್ಯುತಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾಗೌಡ, ನಾಗಭೂಷಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ.

ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಮಾತು ಬರೆದಿದ್ದಾರೆ.

Spread the love
Continue Reading

Cinema News

ಸ್ಯಾಂಡಲ್ವುಡ್ ಗೆ ಹೊಸ ರಾಮಾಚಾರಿ ಎಂಟ್ರಿ

Published

on

By

ಸ್ಯಾಂಡಲ್​ವುಡ್​ಗೂ ರಾಮಾಚಾರಿಗೂ ಬಿಡದ ನಂಟು. ಆ ರಾಮಾಚಾರಿ ನಂಟು ಇದೀಗ ಮತ್ತೆ ಮುಂದುವರಿಯುತ್ತಿದೆ. ಅವೆಲ್ಲವುಗಳ ಅಪ್​ಡೇಟ್​ ವರ್ಷನ್​ ಅವತಾರದಲ್ಲಿ ಹೊಸ ರಾಮಾಚಾರಿ ಎಂಟ್ರಿಯಾಗುತ್ತಿದ್ದಾನೆ. ಅದೇ ರಾಮಾಚಾರಿ 2.0! ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸರಳ ಮುಹೂರ್ತವನ್ನು ನೆರವೇರಿಸಿಕೊಂಡ ಈ ಸಿನಿಮಾ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಶೂಟಿಂಗ್​ ಪ್ರಾರಂಭಿಸಿಲಿದೆ. ನಿರ್ದೇಶಕರಾದ ಶಶಾಂಕ್, ಮಹೇಶ್​, ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

ಅಂದಹಾಗೆ ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ನಿರ್ದೇಶನ, ನಾಯಕ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ತೇಜ್. ಈಗಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವಿನ ರಾಮಾಚಾರಯಿಂದ ಹಿಡಿದು, ರವಿಚಂದ್ರನ್ ಅವರ ರಾಮಾಚಾರಿ, ಇತ್ತೀಚಿಗಿನ ಯಶ್ ಅವರ ಮಿ. ಮಿ ರಾಮಾಚಾರಿ ಎಲ್ಲವೂ ಹೊಸ ದಾಖಲೆ ಬರೆದ ಸಿನಿಮಾಗಳೇ. ಇದೀಗ ಅದೇ ರಾಮಾಚಾರಿ ಶೀರ್ಷಿಕೆಯನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಈ ರಾಮಾಚಾರಿ ತುಂಬ ಬುದ್ಧಿವಂತ ಹಾಗೂ ಇದು ಬಟರ್​ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್​. ಅದನ್ನು ನಾಯಕ ಹೇಗೆ ಹ್ಯಾಂಡಲ್ ಮಾಡುತ್ತಾನೆ ಎಂಬುದೇ ಕಥೆ ಎಂದು ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿದರು ತೇಜ್.

ಇನ್ನು ರಾಮಾಚಾರಿ ಅಂದಮೇಲೆ ಮಾರ್ಗರೇಟ್​ ಇರಲೇಬೇಕಲ್ಲವೇ. ಆ ಪಾತ್ರವನ್ನು ನಿಭಾಯಿಸಿದ್ದಾರೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ. ನಿಜಕ್ಕೂ ಇಂಥ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ. ಒಂದು ಕಡೆ ಭಯ ಮತ್ತೊಂದು ಕಡೆ ಅಷ್ಟೇ ಎಗ್ಸೈಟ್​ಮೆಂಟ್​ ಸಹ ಇದೆ ಎಂದರು. ಬಹುತೇಕ ಹಳ್ಳಿಗಾಡಿನಲ್ಲಿಯೇ ಈ ಸಿನಿಮಾ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಸಿದ್ಧವಾಗಿದೆ. ಜಲೀಲನಾಗಿ ವಿಜಯ್​ ಚೆಂಡೂರ್​ ಪಾತ್ರ ನಿಭಾಯಿಸಲಿದ್ದು, ಕೊಂಚ ಭಯದಲ್ಲಿಯೇ ಇದ್ದಾರೆ. ಆ ಹೆಸರಿನಲ್ಲಿಯೇ ಒಂದು ತೂಕವಿದೆ. ಹೈ ವೋಲ್ಟೇಜ್​ ಹೆಸರದು. ಹಾಗಾಗಿ ಹೆಸರಿಗೆ ತಕ್ಕದಾದ ಪಾತ್ರವೇ ನನಗೆ ಸಿಕ್ಕಿದೆ ಎಂದರು.

ಇನ್ನುಳಿದಂತೆ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಮುಖ್ಯ ಪಾತ್ರದಲ್ಲಿದ್ದಾರೆ. ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸುತ್ತಿದ್ದಾರೆ. ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಾಯಕನಾಗಿ ನಟನೆ, ನಿರ್ದೇಶನ ಮತ್ತು ನಿರ್ಮಾಣವನ್ನು ತೇಜ್​ ಮಾಡುತ್ತಿದ್ದಾರೆ. ಪ್ರೇಮ್​ ಛಾಯಾಗ್ರಹಣ, ಸುಂದರ್​ ಮೂರ್ತಿ ಸಂಗೀತ ನೀಡಲಿದ್ದು, ರಾಜೇಶ್​ ಕೃಷ್ಣನ್, ಸಂತೋಷ್, ಐಶ್ವರ್ಯಾ ರಂಗರಾಜನ್​ ಹಾಡುಗಳಿಗೆ ಧ್ವನಿ ನೀಡುತ್ತಿದ್ದಾರೆ.

Spread the love
Continue Reading

Trending News