Cinema News
ಚಿರು ಸರ್ಜಾ ಹುಟ್ಟುಹಬ್ಬಕ್ಕೆ ‘ಕ್ಷತ್ರಿಯ’ ಟೀಸರ್ ಬಿಡುಗಡೆ

ಶ್ರೀಮೂಕಾಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಎ. ವೆಂಕಟೇಶ್ ಅವರ ನಿರ್ಮಾಣದ, ಅನಿಲ್ ಮಂಡ್ಯ ಅವರ ನಿರ್ದೇಶನದ ಕ್ಷತ್ರಿಯ ಚಿತ್ರದ ಟೀಸರ್ ಇದೇ ತಿಂಗಳ 17ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.
ಚಿರು ಸರ್ಜಾ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಾಗಲೇ ಶೇ.90ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ಕೊನೆಯ ಹಂತದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ನಟ ಚಿರು ಸರ್ಜಾ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸೆಂಟಿಮೆಂಟ್ ಕಥಾವಸ್ತುವಿದ್ದರೆ, ದ್ವಿತೀಯಾರ್ಧ ಪಕ್ಕಾ ಕಮರ್ಷಿಯಲ್ ಅಂಶಗಳನ್ನೊಳಗೊಂಡಿದೆ.
ಕನ್ನಡ ಚಿತ್ರರಂಗದ ಸಾಕಷ್ಟು ನಿರ್ದೇಶಕರ ಜೊತೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ವಾಸು, ದಿನಕರ ತೂಗುದೀಪ, ತರುಣ್ ಸುಧೀರ್, ಮುಂಗಾರು ಮಳೆ ಕೃಷ್ಣ ಮತ್ತು ಸಂತೋμï ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವರು.
ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಸಂಜನಾ ಆನಂದ್, ಸುಧಾರಾಣಿ, ದೇವರಾಜ್, ಅಬ್ರಾರ್ ಜಾಹೂರ್ಧಾರ್, ಶ್ರೀನಾಥ್, ಸಾಧು ಕೋಕಿಲ, ಅಚ್ಯುತ್ಕುಮಾರ್, ವಿಶಾಲ್ ಹೆಗ್ಡೆ, ಮೋಹನ್, ಅಶ್ವಿನಿಗೌಡ, ಭಜರಂಗಿ ಚೇತನ್, ಹೊನ್ನವಳ್ಳಿ ಕೃಷ್ಣ, ಗಿರೀಶ್, ಶಾಲಿನಿ, ಸ್ವಪ್ನರಾಜಾ, ಆರತಿ ಕುಲಕರ್ಣಿ, ವಾಣಿಶ್ರೀ, ಸುಂದರ್, ನದಾಫ್, ಶ್ರೀಕಾಂತ್, ಆನಂದ್, ಮೈಸೂರು ಬಾಲ, ಮುಂತಾದವರು ನಟಿಸಿದ್ದಾರೆ.
ಈ ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಅವರು ಸಂಭಾಷಣೆ ರಚಿಸುತ್ತಿದ್ದಾರೆ. ರವಿ ವಿ. ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಧರ್ಮವಿಶ್ ಅವರ ಸಂಗೀತ ಸಂಯೋಜನೆಯ 5 ಹಾಡುಗಳಿ ಚಿತ್ರದಲ್ಲಿವೆ. ಕೆ.ರವಿವರ್ಮ ಅವರ ಸಾಹಸ ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ರಾಜನ್ ಅವರ ಎಫೆಕ್ಟ್ ಈ ಚಿತ್ರಕ್ಕಿದೆ.
Cinema News
ಫೆ. 26ಕ್ಕೆ ಹಾರರ್ ಥ್ರಿಲ್ಲರ್ “ಸ್ಕೇರಿ ಫಾರೆಸ್ಟ್” ಬಿಡುಗಡೆ*

Cinema News
ಟೀನೇಜರ್ಸ್ ಒಡನಾಟ , ತೊಳಲಾಟ, ನರಳಾಟವೇ “MBA”

Cinema News
ಸಿಂಬು ನಟನೆಯ ‘ರಿವೈಂಡ್’ ಶೀರ್ಷಿಕೆ ಬದಲಾವಣೆ

Cinema News
ನಿಮ್ಮೂರಲ್ಲಿ ಹಾಡುಗಳ ಸಂಭ್ರಮ ಸಡಗರ

Cinema News
ಅಂಜು ಚಿತ್ರಕ್ಕೆ ಮೊದಲ ಹಂತ ಚಿತ್ರೀಕರಣ ಮುಕ್ತಾಯ

-
Box Office1 year ago
ಮೂರು ದಿನಕ್ಕೆ “ಅವನೇ ಶ್ರೀಮನ್ನಾರಾಯಣ” ಗಳಿಸಿದ್ದು ಎಷ್ಟು ಕೋಟಿ?
-
Movie Reviews2 years ago
ರಾಮ್ ಜಾನುವಿನ ಮಧುರವಾದ ನೆನಪಿನ ಲವ್ಸ್ಟೋರಿ
-
Movie Reviews2 years ago
ಪಾರ್ವತಮ್ಮನ ಮಗಳಿಗೆ ಎಲ್ಲವೂ ಸಲೀಸು – ವಿಮರ್ಶೆ – ರೇಟಿಂಗ್ 3.5/5
-
Cinema News2 years ago
ಫಿಕ್ಸ್ ಆಯ್ತು ‘ಪೈಲ್ವಾನ್’ ಟ್ರೇಲರ್ ಬಿಡುಗಡೆ ದಿನಾಂಕ!
-
Box Office2 years ago
ಸ್ಯಾಂಡಲ್ ವುಡ್ ನಲ್ಲಿ ಸೋತ ಅಮ್ಮ – ಮಗ
-
Cinema News2 years ago
ಬಜಾರ್ ಧನ್ವೀರ್ಗೆ ಕಥೆ ಬರೆದ ಬಹದ್ದೂರ್ ಚೇತನ್
-
News2 years ago
‘ಗಟ್ಟಿಮೇಳ’ದ ಕ್ರಾಂತಿಯನ್ನು ನೇರವಾಗಿ ತರಲಿದೆ ”ಜೀ ಕನ್ನಡ”
-
Reviews2 years ago
ದೆವ್ವಕ್ಕೂ ‘ಗಿಮಿಕ್’ ಮಾಡಿದ ಗಣೇಶ್ – ‘ಗಿಮಿಕ್’ ಟ್ರೇಲರ್ ವಿಮರ್ಶೆ
-
News2 years ago
‘ನಾಯಕಿ’ಗೆ ಪ್ರಚಾರಕಿಯಾದ ನಟಿ ಹರಿಪ್ರಿಯಾ
-
Cinema News2 years ago
‘ಸಲಗ’ಕ್ಕೆ ದುನಿಯಾ ವಿಜಯ್ ನಿರ್ದೇಶಕ – Exclusive