Connect with us

Cinema News

ಈ ವಾರ ‘ಅಸುರ ಸಂಹಾರ’ ಬಿಡುಗಡೆ

Published

on

ಪ್ರದೀಪ್ ಎಸ್. ನಿರ್ದೇಶನ ಅಸುರ ಸಂಹಾರ ಚಿತ್ರ ಈವಾರ ರಿಲೀಸ್ ಆಗುತ್ತಿದೆ. ಹೆಣ್ಣಿನ ಮೇಲೆ ನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಇಂತಹ ವಿಷಯಗಳನ್ನಿಟ್ಟುಕೊಂಡು ನಿರ್ದೇಶಕ ಪ್ರದೀಪ್ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿದ್ದಾರೆ. ಹರಿಪ್ರಸಾದ್, ಹರ್ಷ ಅರಸು ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಕೂಡ ಮಾಡಿದ್ದಾರೆ.

ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಾಜರಿದ್ದು ಮಾಹಿತಿಗಳನ್ನು ಹಂಚಿಕೊಂಡಿತು. ನಿರ್ದೇಶಕ ಪ್ರದೀಪ್ ಮಾತನಾಡಿ ಅತ್ಯಾಚಾರಕ್ಕೆ ಸಂಬಂಧಪಟ್ಟ ಕಥೆ ಈ ಚಿತ್ರದಲ್ಲಿರುವುದರಿಂದ ಸೆನ್ಸಾರ್‍ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪದ್ಧತಿ ಜಾರಿಯಾಗಬೇಕು. ಸಡಿಲ ನೀತಿಯನ್ನು ಕೈಬಿಡಬೇಕು ಎಂದು ಹೇಳಿದರು. 10ಕ್ಕೂ ಹೆಚ್ಚು ಸೀರಿಯಲ್‍ಗಳಿಗೆ ಅಸೋಸಿಯೇಟ್ ನಿರ್ದೇಶಕರಾಗಿದ್ದ ಪ್ರದೀಪ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

ನಿರ್ಮಾಪಕ ಹಾಗೂ ನಾಯಕ ಹರ್ಷ ಅರಸ್ ಮಾತನಾಡುತ್ತಾ ಮೂಲತಃ ನಾನು ಬಿಸಿನೆಸ್ ಮ್ಯಾನ್. ಒಳ್ಳೆಯ ಸಿನಿಮಾ ಮಾಡುವ ಪ್ಲ್ಯಾನ್ ಇತ್ತು. ಪ್ರದೀಪ್ ನನ್ನ ಸ್ನೇಹಿತ. ಅವರು ಬಂದು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ನಟ ಧರ್ಮಣ್ಣ ಈ ಚಿತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿದರು. ಒಂದು ಸ್ಟಿಲ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಚಿತ್ರದ ನಾಯಕಿಯಾಗಿ ಹರ್ಷಲ ಹನಿ ಅಭಿನಯಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಮಾಜಕ್ಕೆ ಅಗತ್ಯವಾಗಿರುವ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.

Spread the love

Continue Reading
Click to comment

Leave a Reply

Your email address will not be published. Required fields are marked *