ಇಂದಿನಿಂದ “ಭಜರಂಗಿ 2” ಶೂಟಿಂಗ್ ಶುರು – PopcornKannada
Connect with us

Cinema News

ಇಂದಿನಿಂದ “ಭಜರಂಗಿ 2” ಶೂಟಿಂಗ್ ಶುರು

Published

on

ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ, ಎ.ಹರ್ಷ ನಿರ್ದೇಶನದ “ಭಜರಂಗಿ 2” ಚಿತ್ರದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿತು. ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

 

 

ಜಯಣ್ಣ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇಂದಿನಿಂದ ನಡೆಯಲಿದೆ. ಚಿತ್ರಕ್ಕೆ ಭಾವನಾ ಮೆನನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಟಗರು ನಂತರ ಭಾವನಾ ಅವರು ಶಿವಣ್ಣ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

 


ಹರ್ಷ- ಶಿವಣ್ಣ ಕಾಂಬಿನೇಷನ್ನಲ್ಲಿ ಬಂದಿದ್ದ “ಭಜರಂಗಿ” ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಆ ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ 6 ಪ್ಯಾಕ್ಸ್ ಅಬ್ಸ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತ್ತು.

 

Spread the love

ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ, ಎ.ಹರ್ಷ ನಿರ್ದೇಶನದ “ಭಜರಂಗಿ 2” ಚಿತ್ರದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿತು. ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

 

 

ಜಯಣ್ಣ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇಂದಿನಿಂದ ನಡೆಯಲಿದೆ. ಚಿತ್ರಕ್ಕೆ ಭಾವನಾ ಮೆನನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಟಗರು ನಂತರ ಭಾವನಾ ಅವರು ಶಿವಣ್ಣ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

 


ಹರ್ಷ- ಶಿವಣ್ಣ ಕಾಂಬಿನೇಷನ್ನಲ್ಲಿ ಬಂದಿದ್ದ “ಭಜರಂಗಿ” ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಆ ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ 6 ಪ್ಯಾಕ್ಸ್ ಅಬ್ಸ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತ್ತು.

 

Spread the love
Continue Reading
Click to comment

Leave a Reply

Your email address will not be published. Required fields are marked *

Cinema News

ಚಿರು ಸರ್ಜಾ ಹುಟ್ಟುಹಬ್ಬಕ್ಕೆ ‘ಕ್ಷತ್ರಿಯ’ ಟೀಸರ್ ಬಿಡುಗಡೆ

Published

on

By

ಶ್ರೀಮೂಕಾಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಎ. ವೆಂಕಟೇಶ್ ಅವರ ನಿರ್ಮಾಣದ, ಅನಿಲ್ ಮಂಡ್ಯ ಅವರ ನಿರ್ದೇಶನದ ಕ್ಷತ್ರಿಯ ಚಿತ್ರದ ಟೀಸರ್ ಇದೇ ತಿಂಗಳ 17ರಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.

 

ಚಿರು ಸರ್ಜಾ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಾಗಲೇ ಶೇ.90ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ಕೊನೆಯ ಹಂತದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ನಟ ಚಿರು ಸರ್ಜಾ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸೆಂಟಿಮೆಂಟ್ ಕಥಾವಸ್ತುವಿದ್ದರೆ, ದ್ವಿತೀಯಾರ್ಧ ಪಕ್ಕಾ ಕಮರ್ಷಿಯಲ್ ಅಂಶಗಳನ್ನೊಳಗೊಂಡಿದೆ.

 

ಕನ್ನಡ ಚಿತ್ರರಂಗದ ಸಾಕಷ್ಟು ನಿರ್ದೇಶಕರ ಜೊತೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ವಾಸು, ದಿನಕರ ತೂಗುದೀಪ, ತರುಣ್ ಸುಧೀರ್, ಮುಂಗಾರು ಮಳೆ ಕೃಷ್ಣ ಮತ್ತು ಸಂತೋμï ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವರು.

 

 

 

 

ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಸಂಜನಾ ಆನಂದ್, ಸುಧಾರಾಣಿ, ದೇವರಾಜ್, ಅಬ್ರಾರ್ ಜಾಹೂರ್‍ಧಾರ್, ಶ್ರೀನಾಥ್, ಸಾಧು ಕೋಕಿಲ, ಅಚ್ಯುತ್‍ಕುಮಾರ್, ವಿಶಾಲ್ ಹೆಗ್ಡೆ, ಮೋಹನ್, ಅಶ್ವಿನಿಗೌಡ, ಭಜರಂಗಿ ಚೇತನ್, ಹೊನ್ನವಳ್ಳಿ ಕೃಷ್ಣ, ಗಿರೀಶ್, ಶಾಲಿನಿ, ಸ್ವಪ್ನರಾಜಾ, ಆರತಿ ಕುಲಕರ್ಣಿ, ವಾಣಿಶ್ರೀ, ಸುಂದರ್, ನದಾಫ್, ಶ್ರೀಕಾಂತ್, ಆನಂದ್, ಮೈಸೂರು ಬಾಲ, ಮುಂತಾದವರು ನಟಿಸಿದ್ದಾರೆ.

 

ಈ ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಅವರು ಸಂಭಾಷಣೆ ರಚಿಸುತ್ತಿದ್ದಾರೆ. ರವಿ ವಿ. ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಧರ್ಮವಿಶ್ ಅವರ ಸಂಗೀತ ಸಂಯೋಜನೆಯ 5 ಹಾಡುಗಳಿ ಚಿತ್ರದಲ್ಲಿವೆ. ಕೆ.ರವಿವರ್ಮ ಅವರ ಸಾಹಸ ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ರಾಜನ್ ಅವರ ಎಫೆಕ್ಟ್ ಈ ಚಿತ್ರಕ್ಕಿದೆ.

 

Spread the love
Continue Reading

Cinema News

ಚಿತ್ರೀಕರಣ ಮುಗಿಸಿದ ಹಾರರ್ ಥ್ರಿಲ್ಲರ್ “ತಾಳಟ್ಟಿ”

Published

on

By

ಸೆವೆನ್‍ಸ್ಟಾರ್ ಪ್ರೊಡಕ್ಷನ್ಸ್ ಮತ್ತು ಸೃಜನ ಮೀಡಿಯಾಹೌಸ್ ಸಹಕಾರದಲ್ಲಿ, ಕಲ್ಪತರು ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾರರ್, ಸಸ್ಪೆನ್ಸ್ ಕಥೆ ಹೊಂದಿದ ಚಿತ್ರ ‘ತಾಳಟ್ಟಿ’. ಹರ್ಷವರ್ಧನ್, ಹಯಾತ್‍ಖಾನ್, ರಾಕೇಶ್.ಡಿ, ದಿಲೀಪ್‍ಕುಮಾರ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೊಡಿರುವ ಈ ಚಿತ್ರಕ್ಕೆ ಗಿಲ್ಲಿ ವೆಂಕಟೇಶ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

 

ಪ್ರೀತಿ, ಪ್ರೇಮ ಎಂದು ಯುವತಿಯರ ಹಿಂದೆ ಅಲೆದಾಡುವ ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ ಸ್ವರ್ಗ, ಸಿಗದಿದ್ದರೆ ನರಕ. ಈ ಸ್ವರ್ಗ ಮತ್ತು ನರಕದ ಹಾದಿಗಳು ಜೋಡಿರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವವನ್ನ ಎಳೆ, ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಈ ಚಿತ್ರದಲ್ಲಿದೆ. ನಾಯಕನ ಸ್ನೇಹಿತನಿಂದಾದ ಒಂದು ಘಟನೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಒಳಿತಾದರೂ, ಮುಂದೆ ಅದೇ ಘಟನೆಯಿಂದ ನಾಯಕನ ಕುಟುಂಬಕ್ಕೆ ತೊಂದರೆಯುಂಟಾಗಿ, ನಾಯಕನ ಜೀವಕ್ಕೂ ತೂಗುಕತ್ತಿಯಾಗುತ್ತದೆ. ಕೊನೆಗೆ ನಾಯಕ ತನ್ನ ಜೀವವನ್ನ ಉಳಿಸಿಕೊಳ್ಳಲು ಪಡುವ ಪ್ರಯತ್ನವೇ ತಾಳಟ್ಟಿ ಚಿತ್ರದ ಕಥಾನಕ.

 

 

ಈ ಚಿತ್ರಕ್ಕೆ ಇಮ್ತಿಯಾಜ್‍ಖಾನ್ ಹಾಗೂ ಅಶೋಕ್ ಹಣಗಿ ಅವರ ಕ್ಯಾಮರಾ ಕೈಚಳಕವಿದ್ದು, ರಕ್ಷಿತ್ ಜಿ. ಮಲ್ಲಪ್ಪ ಸಂಕಲನಕಾರ್ಯ ನಿರ್ವಹಿಸಿದ್ದಾರೆ. ಅಭಿನಂದನ್ ಕಶ್ಯಪ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಈ ಚಿತ್ರದ ನಾಯಕ ನಟನಾಗಿ ಯತೀಶ್, ನಾಯಕಿಯಾಗಿ ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿ ನಟರಾಜ, ದಿಲೀಪ್‍ಕುಮಾರ್, ಸಿದ್ದು ಮಂಡ್ಯ, ಮೋನಿಷಾ, ಕಲಾ ಮಂಜುನಾಥ್, ಮಾದಪ್ಪ ಮಂಡ್ಯ, ಶ್ರೀನಿವಾಸ್ ಸೇರಿದಂತೆ ಹಲವಾರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

 

ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸೆಂಟಿಮೆಂಟ, ಎಮೋಷನ್ಸ್, ಫ್ಯಾಮಿಲಿ ರಿಲೇಶನ್ ಜೊತೆಗೆ ಪ್ರೇಕ್ಷಕರನ್ನು ಕಾಮಿಡಿ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಕಂಟೆಂಟ್ ಇದೆ ಎನ್ನುವುದು ನಿರ್ದೇಶಕರ ಮಾತು.

 

Spread the love
Continue Reading

Cinema News

‘ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಗೆ ಭರ್ಜರಿ ಪ್ರಶಂಸೆ

Published

on

By

ವಸಿಷ್ಠ ಎನ್ ಸಿಂಹ ನಾಯಕರಾಗಿ ನಾಲ್ಕು ಪಾತ್ರಗಳಲ್ಲಿ ನಟಿಸಿರುವ ‘ಕಾಲಚಕ್ರ’ ಚಿತ್ರದ ಟೀಸರ್ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.

 

ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕಾಲಚಕ್ರ’ ಚಿತ್ರದ ವಿಭಿನ್ನ ಟೀಸರ್ ಅಪಾರ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ , ವಸಿಷ್ಠ ಸಿಂಹ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.

 

 

ಈ ಹಿಂದೆ ಕಿಚ್ಚ ಸುದೀಪ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಪ್ರಶಂಸೆ ಮಾತುಗಳಾಡಿದ್ದರು.ಸುಮಂತ್ ಕ್ರಾಂತಿ ನಿರ್ಮಾಣ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

 

ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ.

 

ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.
ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Spread the love
Continue Reading

Cinema News

ಚಿತ್ರೀಕರಣ ಮುಗಿಸಿದ “ಚಡ್ಡಿ ದೋಸ್ತ್”

Published

on

By

ಕೊರೋನಾ ಲಾಕ್‍ಡೌನ್ ನಂತರ ಆರಂಭವಾದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ “ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಕೋರೋನಾ ಸಮಯದಲ್ಲೇ ತನ್ನ ಮುಹೂರ್ತ ಆಚರಿಸಿಕೊಂಡು ಈಗ ಶೂಟಿಂಗ್ ಕೂಡ ಮುಗಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಅವರೇ ನಿರ್ದೇಶನ ಮಾಡಿದ್ದಾರೆ. ಆಸ್ಕರ್ ಕೃಷ್ಣ ಅವರೇ ಚಿತ್ರದ ನಾಯಕನಟರಾಗಿ ಸಹ ಅಭಿನಯಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಈಗಾಗಲೇ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.

 

ಆ ಮೂಲಕ ಲಾಕ್ ಡೌನ್ ನಂತರ ಚಿತ್ರೀಕರಣ ಮುಗಿಸಿದ ಮೊದಲ ಕನ್ನಡ ಚಿತ್ರವೂ ಇದಾಗಿದೆ. ಬೆಂಗಳೂರು, ತುಮಕೂರು ಗಾಗೂ ಕುಣಿಗಲ್ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ ಈ ಚಿತ್ರತಂಡವು ಇತ್ತೀಚೆಗೆ ಕೊನೆಯ ದಿನದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ. ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಸಿನಿ ಕಾರ್ಮಿಕರಿಗೆ ಹಾಗೂ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಈ ಚಿತ್ರದ ಮೂಲಕ ಕೆಲಸ ದೊರೆತು ಜೀವನಕ್ಕೆ ಆಸರೆಯಾಗಿತ್ತು. ಅಲ್ಲದೆ ಇತರೆ ಚಿತ್ರಗಳು ಚಿತ್ರೀಕರಣ ಪ್ರಾರಂಭಿಸಲು ಪ್ರೇರೇಪಣೆಯಾಯಿತು. ಸದ್ಯದಲ್ಲೇ ಚಿತ್ರಮಂದಿರಗಳು ಓಪನ್ ಆಗಲಿದ್ದು, ಥೇಟರ್ ತೆರೆದ ಕೂಡಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ…

 

 

 

ಇದೊಂದು ಕಾಮಿಡಿ, ಕ್ರೈಂ ಕಥಾಹಂದರವುಳ್ಳ ಚಿತ್ರವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ರಾಜಕೀಯ, ಸಾಮಾಜಿಕ ಜೀವನ, ಕಾನೂನು ವ್ಯವಸ್ಥೆ ಇದೆಲ್ಲವನ್ನೂ ಚಿತ್ರದ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಐದಾರು ತಿಂಗಳುಗಳಿಂದ ಥಿಯೇಟರುಗಳಲ್ಲಿ ಸಿನಿಮಾ ನೋಡದಂತಾಗಿರುವ ಚಿತ್ರಪ್ರೇಮಿಗಳಿಗೆ ಇದೊಂದು ಫುಲ್‍ಮೀಲ್ಸï ಆಗಲಿದೆ ಎನ್ನುವುದು ನಿರ್ದೇಶಕರ ಮಾತು. ಸೆವೆನ್‍ರಾಜ್ ಈ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ವಿಶೇಷ ಪಾತ್ರವನ್ನೂ ನಿರ್ವಹಿಸಿದ್ದಾರೆ.

 

ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಅವರೂ ಸಹ ಪಾತ್ರವೊಂದನ್ನೂ ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ ಗೌರಿನಾಯರ್ ನಾಯಕಿಯಾಗಿದ್ದು, ಉಳಿದಂತೆ ಅನಂತ್ ಆರ್ಯನ್‍ರ ಸಂಗೀತ, ಗಗನ್ ಕುಮಾರ್‍ರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ಅಕುಲ್ ನೃತ್ಯ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹನಿರ್ದೇಶನ ಈ ಚಿತ್ರಕ್ಕಿದೆ.

Spread the love
Continue Reading

Cinema News

ಟಾಕಿ ಪೋರ್ಷನ್ ಮುಗಿಸಿದ “ಬೇತಾಳ”

Published

on

By

ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ಬೇತಾಳ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಬೇತಾಳ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಮೂರನೇ ಚಿತ್ರ. ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕ ಶಿವು ಒಬ್ಬ ಸಾಪ್ಟ್‍ವೇರ್ ಎಂಜಿನಿಯರ್, ತನ್ನ ಮನೆಯಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ಕೊನೆಗೂ ಒಂದು ಮನೆ ಸಿಗುತ್ತದೆ. ಆ ಮನೆಗ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿದನೇ ಇಲ್ಲವೇ ಎನ್ನುವುದೇ ಬೇತಾಳ ಚಿತ್ರದ ಕಥಾನಕ.

 

ನಾಯಕ ದೆವ್ವದ ಆಸೆ ಪೂರೈಸಲು ಏನೆಲ್ಲಾ ಕಸರತ್ತು ಮಾಡಿದ ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಯುವನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಮತ್ತೊಬ್ಬ ನಟ ಅನಿಕ್ ಸೆಕೆಂಡ್ ಹೀರೋ ಆಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ಹಾಗೂ ಕಾವ್ಯಗೌಡ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಮಾತಿನಭಾಗದ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳ ಶೂಟಿಂಗ್‍ಗೆ ಸಿದ್ದವಾಗಿರುವ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಟಿ ಇತ್ತೀಚೆಗೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು.

ಚಿತ್ರದ ಕುರಿತಂತೆ ನಾಯಕ ಹಾಗೂ ನಿರ್ಮಾಪಕ ಸ್ಮೈಲ್ ಶಿವು ಮಾತನಾಡಿ ಸ್ನೇಹಿತರೆಲ್ಲ ಸೇರಿ ಭೂಮಿಕ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಈ ಮೊದಲು ನಾನು ಒಂದಷ್ಟು ಚಿತ್ರಗಳಿಗೆ ಪೈನಾನ್ಸ್ ಕೂಡ ಮಾಡಿದ್ದೆ. ಹಾರರ್ ಸಬ್ಜೆಕ್ಟ್ ಆದರೂ ಅದನ್ನು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಷ್ಯಗಳಿದ್ದು, ಪ್ರತಿ ಸೀನ್ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಟಾಕಿ ಫೋರ್ಷನ್ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

 

 

ನಿರ್ದೇಶಕ ಕಸ್ತೂರಿ ಜಗನ್ನಾಥ ಮಾತನಾಡಿ ಬೇತಾಳ ಒಂದು ಕಾಮಿಡಿ ಹಾರರ್ ಕಂಟೆಟ್ ಹೊಂದಿರೋ ಚಿತ್ರ. ಇದರಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಜ್‍ಕಿಶೋರ್ ಸಂಗೀತ ನೀಡಿದ್ದಾರೆ. ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಚಿಕ್ಕಮಗಳೂರು, ಸಕಲೇಶಪುರದಲ್ಲಿ ಹಾಡುಗಳನ್ನು ಶೂಟ್ ಮಾಡುವ ಪ್ಲಾನ್ ಇದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ ಎಂದು ಹೇಳಿದರು.

 

ಮತ್ತೊಬ್ಬ ನಟ ಅನಿಕ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ 2 ಶೆಡ್ಸ್ ಇದೆ. ಒದರಲ್ಲಿ ಲವರ್ ಬಾಯ್ ಆಗಿ ಕಾಣಿಸಿದರೆ, ಮತ್ತೊಂದರಲ್ಲಿ ಕ್ವಾಟ್ಲೆ ಕೊಡುವ ದೆವ್ವವಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಟಿ ಕಾವ್ಯಗೌಡ ಅನಿಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟಿ ಸೋನು ಪಾಟೀಲ್ ಬಬ್ಲಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ 3 ಹಾಡುಗಳಿಗೆ ರಾಜ್‍ಕಿಶೋರ್ ಸಂಗೀತ ಸಂಯೋಜನೆ ಹಾಗೂ ಶಿವು ಬೆರ್ಗಿ ಅವರ ಸಾಹಿತ್ಯವಿದೆ. ಚಿತ್ರದ ಸಹ ನಿರ್ಮಾಪಕ ಸ್ಟೀಬರ್ಡ್ ಕುಮಾರ್ ಮಾತನಾಡಿ ಈ ಹಿಂದೆ ಮಲಯಾಳಂ ಚಿತ್ರಗಳನ್ನು ಮಾಡಿದ್ದೇನೆಕನ್ನಡದಲ್ಲಿ ಮೊದಲ ಚಿತ್ರವಿದು ಎಂದು ಹೇಳಿದರು.

Spread the love
Continue Reading

Trending News