ರಾಜಮೌಳಿಗಾಗಿ ತೆಲುಗು ಕಲಿಯುತ್ತಿದ್ದಾರೆ ಆಲಿಯಾಭಟ್‌ – PopcornKannada
Connect with us

News

ರಾಜಮೌಳಿಗಾಗಿ ತೆಲುಗು ಕಲಿಯುತ್ತಿದ್ದಾರೆ ಆಲಿಯಾಭಟ್‌

Published

on

ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ತೇಜಾ ನಟನೆಯ ಬಹು ನಿರೀಕ್ಷೆಯ ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾಭಟ್‌ ರಾಮ್‌ ಚರಣ್‌ ಅವರ ಜೋಡಿಯಾಗಿ ನಟಿಸುತ್ತಿರುವು ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾಗಾಗಿ ಆಲಿಯಾ ಭಟ್‌ ತೆಲುಗು ಕಲಿಯುತ್ತಿದ್ಧಾರಂತೆ.ಈ ಬಗ್ಗೆ ಅವರೇ ಮೀಡಿಯಾಗಳಿಗೆ ಹೇಳಿಕೆ ನೀಡಿದ್ದು,ಇದು ನನ್ನ ಕನಸಿನ ಪ್ರಾಜೆಕ್ಟ್‌ ಆಗಿದ್ದು, ಪ್ರೇಕ್ಷಕರಿಗಿಂತಲೂ ನಾನೇ ಅತಿ ಹೆಚ್ಚು ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದೇನೆ. ಈ ಸಿನಿಮಾಗಾಗಿ ನಾನು ಸದ್ಯ ತೆಲುಗು ಕಲಿಯುತ್ತಿದ್ದೇನೆ. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ದೊಡ್ಡ ಅದೃಷ್ಟ, ನಾನು ಅವರ ಮೊದಲ ಚಿತ್ರದಿಂದಲೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರ ಇಮ್ಯಾಜಿನೇಶನ್‌ ನನಗೆ ಬಹಳ ಇಷ್ಟ ಹಾಗಾಗಿ ಅವರ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ. 

Spread the love

ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ತೇಜಾ ನಟನೆಯ ಬಹು ನಿರೀಕ್ಷೆಯ ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾಭಟ್‌ ರಾಮ್‌ ಚರಣ್‌ ಅವರ ಜೋಡಿಯಾಗಿ ನಟಿಸುತ್ತಿರುವು ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾಗಾಗಿ ಆಲಿಯಾ ಭಟ್‌ ತೆಲುಗು ಕಲಿಯುತ್ತಿದ್ಧಾರಂತೆ.ಈ ಬಗ್ಗೆ ಅವರೇ ಮೀಡಿಯಾಗಳಿಗೆ ಹೇಳಿಕೆ ನೀಡಿದ್ದು,ಇದು ನನ್ನ ಕನಸಿನ ಪ್ರಾಜೆಕ್ಟ್‌ ಆಗಿದ್ದು, ಪ್ರೇಕ್ಷಕರಿಗಿಂತಲೂ ನಾನೇ ಅತಿ ಹೆಚ್ಚು ಕುತೂಹಲದಿಂದ ಸಿನಿಮಾಗಾಗಿ ಕಾಯುತ್ತಿದ್ದೇನೆ. ಈ ಸಿನಿಮಾಗಾಗಿ ನಾನು ಸದ್ಯ ತೆಲುಗು ಕಲಿಯುತ್ತಿದ್ದೇನೆ. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ದೊಡ್ಡ ಅದೃಷ್ಟ, ನಾನು ಅವರ ಮೊದಲ ಚಿತ್ರದಿಂದಲೂ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅವರ ಇಮ್ಯಾಜಿನೇಶನ್‌ ನನಗೆ ಬಹಳ ಇಷ್ಟ ಹಾಗಾಗಿ ಅವರ ಸಿನಿಮಾವನ್ನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ. 

Spread the love
Continue Reading
Click to comment

Leave a Reply

Your email address will not be published. Required fields are marked *

Cinema News

ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್‌’

Published

on

By

ರಮೇಶ್‌ ಅರವಿಂದ್‌ ನಟನೆಯ ಶಿವಾಜಿ ಸುರತ್ಕಲ್‌ ಸಿನಿಮಾ ಇದೇ ಶಿವರಾತ್ರಿ ಅಂದರೆ ಫೆ 21ಕ್ಕೆ ರಿಲೀಸ್‌ ಆಗಲಿದೆ. ಮರ್ಡರ್ ಮಿಸ್ಟರಿ ಕಥೆ ಇರುವ ಈ ಸಿನಿಮಾದಲ್ಲಿ ರಮೇಶ್‌ ಅರವಿಂದ್‌ ಎರಡು ಡಿಫ್ರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 

ಬದ್ಮಾಶ್‌ ಸಿನಿಮಾ ನಿರ್ದೇಶನ ಮಾಡಿದ್ದ ಆಕಾಶ್‌ ಶ್ರೀವತ್ಸ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಕಥೆ ಎರಡು ಕಾಲಘಟ್ಟದಲ್ಲಿ ಸಾಗುವುದರಿಂದ ರಮೇಶ್‌ ಅರವಿಂದ್‌ ಅವರನ್ನು ಎರಡು ಲುಕ್ನಲ್ಲಿ ತೋರಿಸಲಾಗಿದೆ ಎನ್ನುವುದು ಆಕಾಶ್‌ ಶ್ರೀವತ್ಸ ಅವರ ಮಾತಾಗಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿಯೂ ರಿಲೀಸ್‌ ಆಗುತ್ತಿದೆ.

 

ಚಿತ್ರದಲ್ಲಿ ರಮೇಶ್ ಜತೆಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.  

 

 

Spread the love
Continue Reading

News

ಫೆ.7ಕ್ಕೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ರಿಲೀಸ್

Published

on

By

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್‌ ಆಗಲಿದೆ.

 

ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್‌ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಎಸಿಪಿ ಉಮೇಶ್‌ ಅವರ ಪುತ್ರ ಸಪ್ತಮಿ ಉಮೇಶ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್‌ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್‌ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ. 

Spread the love
Continue Reading

Cinema News

‘ಲವ್ ಮಾಕ್‌ ಟೇಲ್’‌ಗೆ ಬೆನ್ನೆಲುಬಾಗಿ ನಿಂತ ಸುದೀಪ್

Published

on

By

ಡಾರ್ಲಿಂಗ್‌ ಕೃಷ್ಣ ನಾಯಕ ನಟನನಾಗಿ, ನಿರ್ದೇಶನ ಮಾಡಿರುವ ಲವ್‌ ಮಾಕ್‌ಟೇಲ್‌ ರಿಲೀಸ್‌ ಡೇಟ್‌ ಹತ್ತಿರ ಬಂದ ಹಾಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸುತ್ತಿದೆ.

 

ಈ ಚಿತ್ರಕ್ಕೆ ಸುದೀಪ್‌ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಇತ್ತೀಚೆಗೆ ನಡೆದ ಆಡಿಯೋ ರಿಲೀಸ್‌ ನ್ನು ಸುದೀಪ್‌ ಅವರೇ ಮಾಡಿಕೊಟ್ಟಿದ್ದಲ್ಲದೆ, ಸಿನಿಮಾವನ್ನು ಸಹ ತಮ್ಮ ಮನೆಯಲ್ಲಿ ತರಿಸಿಕೊಂಡು ನೋಡಿದ್ದಾರೆ. ಈ ಮೂಲಕ ಹೊಸ ನಿರ್ದೇಶಕರನ್ನು ಬೆನ್ನುತಟ್ಟುವ ಕೆಲಸ ಅವರ ಮಾಡುತ್ತಿದ್ದಾರೆ.

 

‘ನಾನು ಸುದೀಪ್‌ ಅವರನ್ನು ಆಡಿಯೊ ರಿಲೀಸ್‌ ಮಾಡಿಕೊಡಬೇಕು ಎಂದು ಹೇಳಿದ ಅಷ್ಟೇ, ಅವರು ನೀನು ನನ್ನ ತಮ್ಮನ ರೀತಿ ನಾನು ಬಂದೇ ಬರುತ್ತೇನೆ ಎಂದು 10 ನಿಮಿಷ ಮುಂಚೆ ಬಂದು ಕಾಯುತ್ತಿದ್ದರು. ಇದಾದ ಮೇಲೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ನೋಡಿದ ಅವರು ಸಿನಿಮಾವನ್ನು ನೋಡುತ್ತೇನೆ ಎಂದು ತರಿಸಿಕೊಂಡು ನೋಡಿದ್ದಾರೆ. ಚಿತ್ರದ ಬಗ್ಗೆ ಉತ್ತಮ ಮಾತುಗಳನ್ನು ಸಹ ಆಡಿದ್ದಾರೆ. ಇದು ನನ್ನಂತಹ ಡೆಬ್ಯು ಡೈರೆಕ್ಟರ್‌ಗೆ ಒಂದು ದೊಡ್ಡ ಬಲ ಎಂದು ಹೇಳುತ್ತಾರೆ ಕೃಷ್ಣ.

ಈ ಚಿತ್ರದಲ್ಲಿ ಕೃಷ್ಣ ಅವರಿಗೆ ಜೋಡಿಯಾಗಿ ಮಿಲನಾ ನಾಗರಾಜ್‌, ಅಮೃತಾ ಅಯ್ಯಾಂಗರ್‌ ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌, ಹಾಡುಗಳು ಸೂಪರ್‌ ಹಿಟ್‌ ಆಗಿದ್ದು ಇದೇ 31ಕ್ಕೆ ಚಿತ್ರ ರಿಲೀಸ್‌ ಆಗಲಿದೆ.

Spread the love
Continue Reading

Cinema News

ಉಪ್ಪಿ ಕಬ್ಜಗೆ ಎಂಟಿಬಿ ನಾಗರಾಜ್‌ ನಿರ್ಮಾಪಕ

Published

on

By

ಆರ್‌ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನ ಕಬ್ಜ ಸಿನಿಮಾಗೆ ಹೊಸಕೋಟೆಯ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.

 

ಜೆಡಿಎಸ್‌ ಮತ್ತು ಕಾಂಗ್ರೇಸ್‌ ಸರ್ಕಾರದಲ್ಲಿ ರೆಬಲ್‌ ಶಾಸಕರೇಂದೆ ಗುರುತಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಬೀಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂಟಿಬಿ ನಾಗರಾಜ್‌ ಉಪಚುನಾವಣೆಯಲ್ಲಿ ಸೋತಿದ್ದರು. ಆದರೆ ಈಗ ಚಂದ್ರ ಮೂಲಕ  ಚಿತ್ರ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆದರೆ ಇವರು ಈ ಸಿನಿಮಾಗೆ ಪೂರ್ಣ ಪ್ರಮಾಣದ ಬಂಡವಾಳವನ್ನು ಹೂಡುತ್ತಿಲ್ಲ ಚಂದ್ರು ಜತೆ ಸಹ ನಿರ್ಮಾಪಕರಾಗಿ ಇರಲಿದ್ದಾರೆ.

 

ಉಪೇಂದ್ರ ನಟನೆಯ ಈ ಸಿನಿಮಾ ಒಂಭತ್ತು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದಕ್ಕಾಗಿ ಭರ್ಜರಿ ಸೆಟ್‌ ಹಾಕಲಾಗುತ್ತಿದೆ. ತೆರೆಯ ಮೇಲೆ ಒಂದಷ್ಟು ಪ್ರಯೋಗಗಳನ್ನು ಮಾಡುವ ಚಂದ್ರು ಈಗ ಎಂಟಿಬಿಯಂತಹ ಕಲರ್‌ಫುಲ್‌ ರಾಜಕಾರಣಿಯನ್ನು ಸಿನಿಮಾ ರಂಗಕ್ಕೆ ತರುತ್ತಿರುವುದು ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ. 

 

Spread the love
Continue Reading

Cinema News

‘ಜಂಟಲ್‌ಮನ್‌’ ಟ್ರೇಲರ್‌ ಸೂಪರ್‌ ಹಿಟ್‌

Published

on

By

ಪ್ರಜ್ವಲ್‌ ದೇವರಾಜ್  ನಟನೆಯ ಜಂಟಲ್‌ಮನ್‌ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಅದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಟ್ರೇಲರ್ ಅನ್ನು ಚಿತ್ರರಂಗದ ಗಣ್ಯರು ಮೆಚ್ಚಿ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದರು.

 

ಈ ಬಗ್ಗೆ ಮಾತನಾಡಿರುವ ನಟ ಪ್ರಜ್ವಲ್‌ ಜಂಟಲ್‌ಮನ್‌ ನನ್ನ ಸಿನಿಮಾ ಕರಿಯರ್‌ನಲ್ಲಿ ಒಂದು ಅದ್ಭುತ ಸ್ಕ್ರಿಪ್ಟ್‌ ಆಗಿದೆ. ಟ್ರೇಲರ್‌ಗೆ ಜನ ನೀಡುತ್ತಿರುವ ರೆಸ್ಪಾನ್ಸ್‌ ಕಂಡು ನನಗೆ ಖುಷಿಯಾಗಿದೆ. ನಿರ್ದೇಶಕ ಜಡೇಶ್‌ಕುಮಾರ್‌ ಉತ್ತಮ ಸ್ಕ್ರಿಪ್ಟ್‌ ಮಾಡಿದ್ದಾರೆ. ಇಡೀ ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

 

ಇದೇ ಮೊದಲ ಬಾರಿಗೆ ಗುರುದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯಮನುಷ್ಯ ನಿದ್ರೆ ಮಾಡುವ ಸಮಯಕ್ಕಿಂತ ಹೆಚ್ಚಿನ ಸಮಯ ಈ ಚಿತ್ರದ ನಾಯಕ ನಿದ್ದೆ ಮಾಡುತ್ತಾನೆ. ಅದೇ ಈ ಚಿತ್ರದ ತಿರುಳು ಟಗರು ಮತ್ತು ಸಲಗ ಖ್ಯಾತಿಯ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯದಲ್ಲೆ ಚಿತ್ರ ರಿಲೀಸ್‌ ಆಗಲಿದೆ. 

 

ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದರು.

 

Spread the love
Continue Reading

Trending News