ಖಾಕಿಗೆ ಜತೆಯಾದ ಬಸಣ್ಣಿ ತಾನ್ಯ – PopcornKannada
Connect with us

News

ಖಾಕಿಗೆ ಜತೆಯಾದ ಬಸಣ್ಣಿ ತಾನ್ಯ

Published

on

ಯಜಮಾನ ಸಿನಿಮಾದ ಬಸಣ್ಣಿ ಹಾಡಿನಿಂದ  ಜನಪ್ರಿಯತೆ ಪಡೆದುಕೊಂಡ ತಾನ್ಯ ಹೋಪ್‌ ಈಗ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ. ಹೌದು ತರುಣ್‌ ಶಿವಪ್ಪ ನಿರ್ಮಾಣದ ಖಾಕಿ ಸಿನಿಮಾಗೆ ತಾನ್ಯ ಹೋಪ್‌ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಟಗರು ಸಿನಿಮಾ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ಧಾರೆ.ಚಿರಂಜೀವಿ ಸರ್ಜಾ ಈಗಾಗಲೇ ಸಿಂಗ ಸಿನಿಮಾದ ಶೂಟಿಂಗ್‌ ಮುಗಿಸಿದ್ದು, ಖಾಕಿಯನ್ನು ಸದ್ಯದಲ್ಲೇ ತೊಡಲಿದ್ದಾರೆ. ಇದರ ಜತೆಯಲ್ಲಿ ನಾಗಾಭರಣ ಅವರ ಜುಗಾರಿ ಕ್ರಾಸ್‌ನಲ್ಲಿ ಅವರು ನಟಿಸಲಿದ್ದಾರೆ. ಒಟ್ಟಿನಲ್ಲಿ ಯಜಮಾನ ನಂತರ ತಾನ್ಯಗೆ ಸಾಕಷ್ಟು ಸಿನಿಮಾಗಳು ಬರುತ್ತಿದ್ದು, ಅದರಲ್ಲಿ ಮೊದಲ ಚಿತ್ರ ಖಾಕಿಯಾಗಿದೆ.

Spread the love

ಯಜಮಾನ ಸಿನಿಮಾದ ಬಸಣ್ಣಿ ಹಾಡಿನಿಂದ  ಜನಪ್ರಿಯತೆ ಪಡೆದುಕೊಂಡ ತಾನ್ಯ ಹೋಪ್‌ ಈಗ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ. ಹೌದು ತರುಣ್‌ ಶಿವಪ್ಪ ನಿರ್ಮಾಣದ ಖಾಕಿ ಸಿನಿಮಾಗೆ ತಾನ್ಯ ಹೋಪ್‌ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಟಗರು ಸಿನಿಮಾ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ಧಾರೆ.ಚಿರಂಜೀವಿ ಸರ್ಜಾ ಈಗಾಗಲೇ ಸಿಂಗ ಸಿನಿಮಾದ ಶೂಟಿಂಗ್‌ ಮುಗಿಸಿದ್ದು, ಖಾಕಿಯನ್ನು ಸದ್ಯದಲ್ಲೇ ತೊಡಲಿದ್ದಾರೆ. ಇದರ ಜತೆಯಲ್ಲಿ ನಾಗಾಭರಣ ಅವರ ಜುಗಾರಿ ಕ್ರಾಸ್‌ನಲ್ಲಿ ಅವರು ನಟಿಸಲಿದ್ದಾರೆ. ಒಟ್ಟಿನಲ್ಲಿ ಯಜಮಾನ ನಂತರ ತಾನ್ಯಗೆ ಸಾಕಷ್ಟು ಸಿನಿಮಾಗಳು ಬರುತ್ತಿದ್ದು, ಅದರಲ್ಲಿ ಮೊದಲ ಚಿತ್ರ ಖಾಕಿಯಾಗಿದೆ.

Spread the love
Continue Reading
Click to comment

Leave a Reply

Your email address will not be published. Required fields are marked *

News

ಫೆ.7ಕ್ಕೆ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ರಿಲೀಸ್

Published

on

By

ಡಾಲಿ ಧನಂಜಯ ಮತ್ತು ಸೂರಿ ಕಾಂಬಿನೇಶನ್‌ನ ಎರಡನೇ ಚಿತ್ರ ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಇದೇ ಫೆ 7ಕ್ಕೆ ರಿಲೀಸ್‌ ಆಗಲಿದೆ.

 

ಈಗಾಗಲೇ ಬಿಡುಗಡೆಯಾಗಿರುವ ಮಾದೇವ ಹಾಡು ಮತ್ತು ಟೀಸರ್‌ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಟಗರು ಚಿತ್ರದ ಡಾಲಿ ಪಾತ್ರವನ್ನು ಅದ್ಭುತವಾಗಿ ಸೃಷ್ಟಿ ಮಾಡಿದ್ದ ಸೂರಿ ಈ ಬಾರಿ ಧನಂಜಯ ಅವರನ್ನು ಮಂಕಿ ಸೀನನಾಗಿಸಿದ್ದಾರೆ. ಈ ಮಂಕಿ ಸೀನ ಮತ್ತು ಸೂರಿಯ ಅಬ್ಬರವನ್ನು ತೆರೆ ಮೇಲೆ ನೋಡಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಎಸಿಪಿ ಉಮೇಶ್‌ ಅವರ ಪುತ್ರ ಸಪ್ತಮಿ ಉಮೇಶ್‌ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿವೇದಿತಾ, ಅಮೃತಾ ಅಯ್ಯಾಂಗರ್‌ ಈ ಸಿನಿಮಾದ ನಾಯಕಿಯರು. ಒಬ್ಬ ವ್ಯಕ್ತಿಯ ಆರು ವರ್ಷದ ಜರ್ನಿಯನ್ನು ಸೂರಿ ಇಲ್ಲಿ ಹೇಳಲು ಹೊರಟಿದ್ದು, ಅದಕ್ಕೆ ಆಯ್ಕೆ ಮಾಡಿಕೊಂಡಿರುವುದು ಒಬ್ಬ ರೌಡಿಯ ಜೀವನವನ್ನು. ಸುಧೀರ್‌ ಕೆ ಎಂ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡಿದ್ದಾರೆ. 

Spread the love
Continue Reading

Cinema News

‘ಲವ್ ಮಾಕ್‌ ಟೇಲ್’‌ಗೆ ಬೆನ್ನೆಲುಬಾಗಿ ನಿಂತ ಸುದೀಪ್

Published

on

By

ಡಾರ್ಲಿಂಗ್‌ ಕೃಷ್ಣ ನಾಯಕ ನಟನನಾಗಿ, ನಿರ್ದೇಶನ ಮಾಡಿರುವ ಲವ್‌ ಮಾಕ್‌ಟೇಲ್‌ ರಿಲೀಸ್‌ ಡೇಟ್‌ ಹತ್ತಿರ ಬಂದ ಹಾಗೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸುತ್ತಿದೆ.

 

ಈ ಚಿತ್ರಕ್ಕೆ ಸುದೀಪ್‌ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಇತ್ತೀಚೆಗೆ ನಡೆದ ಆಡಿಯೋ ರಿಲೀಸ್‌ ನ್ನು ಸುದೀಪ್‌ ಅವರೇ ಮಾಡಿಕೊಟ್ಟಿದ್ದಲ್ಲದೆ, ಸಿನಿಮಾವನ್ನು ಸಹ ತಮ್ಮ ಮನೆಯಲ್ಲಿ ತರಿಸಿಕೊಂಡು ನೋಡಿದ್ದಾರೆ. ಈ ಮೂಲಕ ಹೊಸ ನಿರ್ದೇಶಕರನ್ನು ಬೆನ್ನುತಟ್ಟುವ ಕೆಲಸ ಅವರ ಮಾಡುತ್ತಿದ್ದಾರೆ.

 

‘ನಾನು ಸುದೀಪ್‌ ಅವರನ್ನು ಆಡಿಯೊ ರಿಲೀಸ್‌ ಮಾಡಿಕೊಡಬೇಕು ಎಂದು ಹೇಳಿದ ಅಷ್ಟೇ, ಅವರು ನೀನು ನನ್ನ ತಮ್ಮನ ರೀತಿ ನಾನು ಬಂದೇ ಬರುತ್ತೇನೆ ಎಂದು 10 ನಿಮಿಷ ಮುಂಚೆ ಬಂದು ಕಾಯುತ್ತಿದ್ದರು. ಇದಾದ ಮೇಲೆ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ನೋಡಿದ ಅವರು ಸಿನಿಮಾವನ್ನು ನೋಡುತ್ತೇನೆ ಎಂದು ತರಿಸಿಕೊಂಡು ನೋಡಿದ್ದಾರೆ. ಚಿತ್ರದ ಬಗ್ಗೆ ಉತ್ತಮ ಮಾತುಗಳನ್ನು ಸಹ ಆಡಿದ್ದಾರೆ. ಇದು ನನ್ನಂತಹ ಡೆಬ್ಯು ಡೈರೆಕ್ಟರ್‌ಗೆ ಒಂದು ದೊಡ್ಡ ಬಲ ಎಂದು ಹೇಳುತ್ತಾರೆ ಕೃಷ್ಣ.

ಈ ಚಿತ್ರದಲ್ಲಿ ಕೃಷ್ಣ ಅವರಿಗೆ ಜೋಡಿಯಾಗಿ ಮಿಲನಾ ನಾಗರಾಜ್‌, ಅಮೃತಾ ಅಯ್ಯಾಂಗರ್‌ ನಟಿಸಿದ್ದಾರೆ. ಈಗಾಗಲೇ ಟ್ರೇಲರ್‌, ಹಾಡುಗಳು ಸೂಪರ್‌ ಹಿಟ್‌ ಆಗಿದ್ದು ಇದೇ 31ಕ್ಕೆ ಚಿತ್ರ ರಿಲೀಸ್‌ ಆಗಲಿದೆ.

Spread the love
Continue Reading

Cinema News

ಉಪ್ಪಿ ಕಬ್ಜಗೆ ಎಂಟಿಬಿ ನಾಗರಾಜ್‌ ನಿರ್ಮಾಪಕ

Published

on

By

ಆರ್‌ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನ ಕಬ್ಜ ಸಿನಿಮಾಗೆ ಹೊಸಕೋಟೆಯ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್‌ ನಿರ್ಮಾಪಕರಾಗಿದ್ದಾರೆ.

 

ಜೆಡಿಎಸ್‌ ಮತ್ತು ಕಾಂಗ್ರೇಸ್‌ ಸರ್ಕಾರದಲ್ಲಿ ರೆಬಲ್‌ ಶಾಸಕರೇಂದೆ ಗುರುತಿಸಿಕೊಂಡು ಕುಮಾರಸ್ವಾಮಿ ಸರ್ಕಾರ ಬೀಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಎಂಟಿಬಿ ನಾಗರಾಜ್‌ ಉಪಚುನಾವಣೆಯಲ್ಲಿ ಸೋತಿದ್ದರು. ಆದರೆ ಈಗ ಚಂದ್ರ ಮೂಲಕ  ಚಿತ್ರ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಆದರೆ ಇವರು ಈ ಸಿನಿಮಾಗೆ ಪೂರ್ಣ ಪ್ರಮಾಣದ ಬಂಡವಾಳವನ್ನು ಹೂಡುತ್ತಿಲ್ಲ ಚಂದ್ರು ಜತೆ ಸಹ ನಿರ್ಮಾಪಕರಾಗಿ ಇರಲಿದ್ದಾರೆ.

 

ಉಪೇಂದ್ರ ನಟನೆಯ ಈ ಸಿನಿಮಾ ಒಂಭತ್ತು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದಕ್ಕಾಗಿ ಭರ್ಜರಿ ಸೆಟ್‌ ಹಾಕಲಾಗುತ್ತಿದೆ. ತೆರೆಯ ಮೇಲೆ ಒಂದಷ್ಟು ಪ್ರಯೋಗಗಳನ್ನು ಮಾಡುವ ಚಂದ್ರು ಈಗ ಎಂಟಿಬಿಯಂತಹ ಕಲರ್‌ಫುಲ್‌ ರಾಜಕಾರಣಿಯನ್ನು ಸಿನಿಮಾ ರಂಗಕ್ಕೆ ತರುತ್ತಿರುವುದು ಗಾಂಧಿನಗರದಲ್ಲಿ ಟಾಕ್‌ ಆಫ್‌ ದಿ ಟೌನ್‌ ಆಗಿದೆ. 

 

Spread the love
Continue Reading

Cinema News

‘ಜಂಟಲ್‌ಮನ್‌’ ಟ್ರೇಲರ್‌ ಸೂಪರ್‌ ಹಿಟ್‌

Published

on

By

ಪ್ರಜ್ವಲ್‌ ದೇವರಾಜ್  ನಟನೆಯ ಜಂಟಲ್‌ಮನ್‌ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಅದನ್ನು ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಟ್ರೇಲರ್ ಅನ್ನು ಚಿತ್ರರಂಗದ ಗಣ್ಯರು ಮೆಚ್ಚಿ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಶೇರ್ ಮಾಡಿಕೊಂಡಿದ್ದರು.

 

ಈ ಬಗ್ಗೆ ಮಾತನಾಡಿರುವ ನಟ ಪ್ರಜ್ವಲ್‌ ಜಂಟಲ್‌ಮನ್‌ ನನ್ನ ಸಿನಿಮಾ ಕರಿಯರ್‌ನಲ್ಲಿ ಒಂದು ಅದ್ಭುತ ಸ್ಕ್ರಿಪ್ಟ್‌ ಆಗಿದೆ. ಟ್ರೇಲರ್‌ಗೆ ಜನ ನೀಡುತ್ತಿರುವ ರೆಸ್ಪಾನ್ಸ್‌ ಕಂಡು ನನಗೆ ಖುಷಿಯಾಗಿದೆ. ನಿರ್ದೇಶಕ ಜಡೇಶ್‌ಕುಮಾರ್‌ ಉತ್ತಮ ಸ್ಕ್ರಿಪ್ಟ್‌ ಮಾಡಿದ್ದಾರೆ. ಇಡೀ ಸಿನಿಮಾ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

 

ಇದೇ ಮೊದಲ ಬಾರಿಗೆ ಗುರುದೇಶಪಾಂಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯಮನುಷ್ಯ ನಿದ್ರೆ ಮಾಡುವ ಸಮಯಕ್ಕಿಂತ ಹೆಚ್ಚಿನ ಸಮಯ ಈ ಚಿತ್ರದ ನಾಯಕ ನಿದ್ದೆ ಮಾಡುತ್ತಾನೆ. ಅದೇ ಈ ಚಿತ್ರದ ತಿರುಳು ಟಗರು ಮತ್ತು ಸಲಗ ಖ್ಯಾತಿಯ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯದಲ್ಲೆ ಚಿತ್ರ ರಿಲೀಸ್‌ ಆಗಲಿದೆ. 

 

ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಧ್ರುವ ಸರ್ಜಾ ಬಿಡುಗಡೆಗೊಳಿಸಿದ್ದರು.

 

Spread the love
Continue Reading

Cinema News

ಆನಂದ್‌ಗೆ ಮುಹೂರ್ತ ಆಗಿದ್ದ ದಿನವೇ ‘RDX’ಗೂ ಮುಹೂರ್ತ

Published

on

By

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ನಟನೆಯ ಹೊಚ್ಚ ಹೊಸ ಚಲನಚಿತ್ರ “ಆರ್‌ಡಿಎಕ್ಸ್‌” ಮುಹೂರ್ತ ಫೆ.19ಕ್ಕೆ ನಡೆಯಲಿದೆ. ವಿಶೇಷ ಎಂದರೆ ಅದೇ ದಿನ ಶಿವರಾಜ್‌ಕುಮಾರ್‌ ನಟನೆಯ ಮೊಟ್ಟ ಮೊದಲ ಚಿತ್ರ ‘ಆನಂದ್‌’ಗೂ ಮುಹೂರ್ತವಾಗಿತ್ತು.

 

ಆರ್‌ಡಿಎಕ್ಸ್‌ ಸಿನಿಮಾವನ್ನು ರವಿ ಅರಸು ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದಾರೆ. ತಮಿಳುನಾಡಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ಸತ್ಯಜ್ಯೋತಿ ಫಿಲಂಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇವರು ಈ ಹಿಂದೆ ತಮಿಳಿನಲ್ಲಿ ವಿವೇಗಂ, ವಿಶ್ವಾಸಂ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ತುಂಬಾ ವರ್ಷಗಳ ನಂತರ ಸತ್ಯಜ್ಯೋತಿ ಫಿಲಂಸ್ ಅವರು ಕನ್ನಡಕ್ಕೆ ಮತ್ತೆ ಮರಳಿದ್ದಾರೆ.

 

‘ಆರ್‌ಡಿಎಕ್ಸ್‌’ನಲ್ಲಿ ಶಿವರಾಜ್‌ಕುಮಾರ್‌ ಸೂಪರ್‌ ಕಾಪ್‌ ಅವತಾರವನ್ನು ತಾಳಲಿದ್ದಾರೆ. ಟಗರು ಖ್ಯಾತಿಯ ಚರಣ್‌ ರಾಜ್‌ ಮ್ಯೂಸಿಕ್‌ ಮಾಡಲಿದ್ದಾರೆ. 

 

Spread the love
Continue Reading

Trending News