ಈ ವಾರ ತೆರೆಗೆ ಪಡ್ಡೆ ಹುಲಿ – PopcornKannada
Connect with us

News

ಈ ವಾರ ತೆರೆಗೆ ಪಡ್ಡೆ ಹುಲಿ

Published

on

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ಮಾಪಕ ಎಂದೇ ಹೆಸರು ವಾಸಿಯಾಗಿರುವ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯ ಚೊಚ್ಚಲ ಚಿತ್ರ ಪಡ್ಡೆ ಹುಲಿ ಈ ವಾರ ಬಿಡುಗಡೆಯಾಗಲಿದೆ. ಗುರು ದೇಶಪಾಂಡೆ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರದ ಎರಡು ಟ್ರೇಲರ್‌ಗಳು ಬಿಡುಗಡೆಯಾಗಿ ಈ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಿನಿಮಾದ ಹಾಡುಗಳು ಸಹ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಶ್ರೇಯಸ್‌ಗೆ ಇದು ಭರ್ಜರಿ ಓಪನಿಂಗ್‌ ಕೊಡುತ್ತದೆ ಎನ್ನುತ್ತಿದೆ ಗಾಂಧಿನಗರ.ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಾಯಕನ ತಂದೆಯ ರೋಲ್‌ನಲ್ಲಿ ನಟಿಸಿದ್ದಾರೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ, ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಸಹ ಅತಿಥಿ ರೋಲ್‌ನಲ್ಲಿ ಮಿಂಚಿದ್ದಾರೆ. ಈ ಎಲ್ಲ ಕಾರಣಗಳಿಂದ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದು, ಈ ವಾರ ತೆರೆ ಮೇಲೆ ಶ್ರೇಯಸ್‌ ಅದೇನು ಮೋಡಿ ಮಾಡಲಿದ್ದಾರೆ ಕಾದು ನೋಡಬೇಕಿದೆ. 

Spread the love

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ಮಾಪಕ ಎಂದೇ ಹೆಸರು ವಾಸಿಯಾಗಿರುವ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯ ಚೊಚ್ಚಲ ಚಿತ್ರ ಪಡ್ಡೆ ಹುಲಿ ಈ ವಾರ ಬಿಡುಗಡೆಯಾಗಲಿದೆ. ಗುರು ದೇಶಪಾಂಡೆ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರದ ಎರಡು ಟ್ರೇಲರ್‌ಗಳು ಬಿಡುಗಡೆಯಾಗಿ ಈ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಿನಿಮಾದ ಹಾಡುಗಳು ಸಹ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಶ್ರೇಯಸ್‌ಗೆ ಇದು ಭರ್ಜರಿ ಓಪನಿಂಗ್‌ ಕೊಡುತ್ತದೆ ಎನ್ನುತ್ತಿದೆ ಗಾಂಧಿನಗರ.ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಾಯಕನ ತಂದೆಯ ರೋಲ್‌ನಲ್ಲಿ ನಟಿಸಿದ್ದಾರೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ, ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಸಹ ಅತಿಥಿ ರೋಲ್‌ನಲ್ಲಿ ಮಿಂಚಿದ್ದಾರೆ. ಈ ಎಲ್ಲ ಕಾರಣಗಳಿಂದ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದ್ದು, ಈ ವಾರ ತೆರೆ ಮೇಲೆ ಶ್ರೇಯಸ್‌ ಅದೇನು ಮೋಡಿ ಮಾಡಲಿದ್ದಾರೆ ಕಾದು ನೋಡಬೇಕಿದೆ. 

Spread the love
Continue Reading
Click to comment

Leave a Reply

Your email address will not be published. Required fields are marked *

News

“ಆಕೃತಿಯಲ್ಲಿ ಭೈರವಿ”

Published

on

By

ಈಗಾಗಲೇ ಜನರ ಮನಗೆದ್ದ ಆಕೃತಿಗೆ ಭೈರವಿ ಎಂಬ ಹೊಸ ಪಾತ್ರ ಪರಿಚಯವಾಗುತ್ತಿದೆ. ಭೈರವಿ ಬಲವಾದ ಸಕಾರಾತ್ಮಕ ಶಕ್ತಿಯಾಗಿದ್ದು, ಆಕೃತಿಯ ಮುಂದಿನ ಕಂತುಗಳು ಹೇಗೆ ತಿರುವು ತೆರೆದುಕೊಳ್ಳುತ್ತದೆ ಎಂಬುದನ್ನು ಈ ಭೈರವಿ ಪಾತ್ರ ಬದಲಾಯಿಸುತ್ತದೆ. ಪ್ರಕೃತಿ ಮತ್ತು ಅದರ ಶಕ್ತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಭೈರವಿ ನಿಪುಣೆ. ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಅವುಗಳ ಶಕ್ತಿಗಳ ಬಗ್ಗೆ ಆಕೆಗೆ ಉತ್ತಮ ತಿಳುವಳಿಕೆ ಇದೆ. ಭೈರವಿ ಒಬ್ಬ ಅಪರೂಪವಾದ ದೈವೀಕ ಶಕ್ತಿಯುಳ್ಳ ಸ್ತ್ರೀ. ಅವಳು ಜನರ ಜೀವನವನ್ನು ಸಂತೋಷದಿಂದ ಮತ್ತು ಶಾಂತಿಯುತವಾಗಿ ಮಾಡುವ ದೊಡ್ಡ ಶಕ್ತಿಯನ್ನು ಹೊಂದಿರುವ ವೈದ್ಯೆಯಾಗಿದ್ದಾಳೆ.

 

ಈ ಎಲ್ಲಾ ಸಮಯದಲ್ಲಿ ಆಕೃತಿ ಕಡೆಮನೆ ಮನೆಯಲ್ಲಿ ಸಾಕಷ್ಟು ಅಪಾಯವನ್ನು ಸೃಷ್ಟಿಸಿದ್ದಾಳೆ. ಭೈರವಿ ಎಂಬುದು ಆಕೃತಿಗೆ ಸಮಾನವಾದ ಶಕ್ತಿ, ದಿವ್ಯಾ, ಆಕೃತಿಯ ಅಧಿಕಾರವನ್ನು ಸೋಲಿಸಲು ಮತ್ತು ದಿವ್ಯಾಳ ಕುಟುಂಬವನ್ನು ಉಳಿಸಲು ಸಹಾಯ ಮಾಡಲು ಅವಳು ಮನೆಗೆ ಬರುತ್ತಾಳೆ. ಅವಳು ಇದನ್ನು ಹೇಗೆ ಮಾಡಲು ಸಾಧ್ಯವಾಗುತ್ತದೆ? ಮತ್ತು ಅವಳ ಅಧಿಕಾರಗಳು ಯಾವುವು? ಎಂಬುದು ಮುಂಬರುವ ಸಂಚಿಕೆಗಳಲ್ಲಿ ಬಹಿರಂಗಗೊಳ್ಳುತ್ತದೆ.

 

 

 

ಭೈರವಿ ಒಂದು ಪ್ರಮುಖ ಪಾತ್ರ ಮತ್ತು ಅವರ ಪ್ರವೇಶವು ಕಥೆಗೆ ಸಾಕಷ್ಟು ಆಸಕ್ತಿದಾಯಕ ತಿರುವುಗಳನ್ನು ತರುತ್ತದೆ. ಕಡೆಮನೆ ಸರೋಜಾ ಅವರ ಮೊಮ್ಮಗ ಸತ್ತಾಗ ಅವಳ ಪ್ರವೇಶವು ಸಂಭವಿಸುತ್ತದೆ. ನಾಯಕಿ ದಿವ್ಯಾ ಜೀವನದಲ್ಲಿ ಸಮತೋಲನ ಮತ್ತು ಶಾಂತಿಯನ್ನು ಪುನಃಸ್ಥಾಪಿಸಬಲ್ಲ ಸಾಕಷ್ಟು ಸಕಾರಾತ್ಮಕ ಶಕ್ತಿಗಳೊಂದಿಗೆ ಭೈರವಿ ಬರುತ್ತಾಳೆ. ಭೈರವಿಯ ಪಾತ್ರವನ್ನು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಚಿತ್ರಶ್ರೀ ನಿರ್ವಹಿಸಿದ್ದಾರೆ.

“ಆಕೃತಿ” ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Spread the love
Continue Reading

Cinema News

ಚಿತ್ರೀಕರಣ ಮುಗಿಸಿದ “ಚಡ್ಡಿ ದೋಸ್ತ್”

Published

on

By

ಕೊರೋನಾ ಲಾಕ್‍ಡೌನ್ ನಂತರ ಆರಂಭವಾದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ “ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಕೋರೋನಾ ಸಮಯದಲ್ಲೇ ತನ್ನ ಮುಹೂರ್ತ ಆಚರಿಸಿಕೊಂಡು ಈಗ ಶೂಟಿಂಗ್ ಕೂಡ ಮುಗಿಸಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಅವರೇ ನಿರ್ದೇಶನ ಮಾಡಿದ್ದಾರೆ. ಆಸ್ಕರ್ ಕೃಷ್ಣ ಅವರೇ ಚಿತ್ರದ ನಾಯಕನಟರಾಗಿ ಸಹ ಅಭಿನಯಿಸಿದ್ದಾರೆ. ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಈಗಾಗಲೇ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿಕೊಂಡಿದೆ.

 

ಆ ಮೂಲಕ ಲಾಕ್ ಡೌನ್ ನಂತರ ಚಿತ್ರೀಕರಣ ಮುಗಿಸಿದ ಮೊದಲ ಕನ್ನಡ ಚಿತ್ರವೂ ಇದಾಗಿದೆ. ಬೆಂಗಳೂರು, ತುಮಕೂರು ಗಾಗೂ ಕುಣಿಗಲ್ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ ಈ ಚಿತ್ರತಂಡವು ಇತ್ತೀಚೆಗೆ ಕೊನೆಯ ದಿನದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ. ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗೆಟ್ಟಿದ್ದ ಸಿನಿ ಕಾರ್ಮಿಕರಿಗೆ ಹಾಗೂ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ಈ ಚಿತ್ರದ ಮೂಲಕ ಕೆಲಸ ದೊರೆತು ಜೀವನಕ್ಕೆ ಆಸರೆಯಾಗಿತ್ತು. ಅಲ್ಲದೆ ಇತರೆ ಚಿತ್ರಗಳು ಚಿತ್ರೀಕರಣ ಪ್ರಾರಂಭಿಸಲು ಪ್ರೇರೇಪಣೆಯಾಯಿತು. ಸದ್ಯದಲ್ಲೇ ಚಿತ್ರಮಂದಿರಗಳು ಓಪನ್ ಆಗಲಿದ್ದು, ಥೇಟರ್ ತೆರೆದ ಕೂಡಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.

 

 

 

ಇದೊಂದು ಕಾಮಿಡಿ, ಕ್ರೈಂ ಕಥಾಹಂದರವುಳ್ಳ ಚಿತ್ರವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ರಾಜಕೀಯ, ಸಾಮಾಜಿಕ ಜೀವನ, ಕಾನೂನು ವ್ಯವಸ್ಥೆ ಇದೆಲ್ಲವನ್ನೂ ಚಿತ್ರದ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಐದಾರು ತಿಂಗಳುಗಳಿಂದ ಥಿಯೇಟರುಗಳಲ್ಲಿ ಸಿನಿಮಾ ನೋಡದಂತಾಗಿರುವ ಚಿತ್ರಪ್ರೇಮಿಗಳಿಗೆ ಇದೊಂದು ಫುಲ್‍ಮೀಲ್ಸï ಆಗಲಿದೆ ಎನ್ನುವುದು ನಿರ್ದೇಶಕರ ಮಾತು. ಸೆವೆನ್‍ರಾಜ್ ಈ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ವಿಶೇಷ ಪಾತ್ರವನ್ನೂ ನಿರ್ವಹಿಸಿದ್ದಾರೆ.

 

ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಅವರೂ ಸಹ ಪಾತ್ರವೊಂದನ್ನೂ ನಿಭಾಯಿಸಿದ್ದಾರೆ. ಮಲಯಾಳಿ ಚೆಲುವೆ ಗೌರಿನಾಯರ್ ನಾಯಕಿಯಾಗಿದ್ದು, ಉಳಿದಂತೆ ಅನಂತ್ ಆರ್ಯನ್‍ರ ಸಂಗೀತ, ಗಗನ್ ಕುಮಾರ್‍ರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ಅಕುಲ್ ನೃತ್ಯ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹನಿರ್ದೇಶನ ಈ ಚಿತ್ರಕ್ಕಿದೆ.

Spread the love
Continue Reading

Cinema News

ಟಾಕಿ ಪೋರ್ಷನ್ ಮುಗಿಸಿದ “ಬೇತಾಳ”

Published

on

By

ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ಬೇತಾಳ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಬೇತಾಳ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಮೂರನೇ ಚಿತ್ರ. ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕ ಶಿವು ಒಬ್ಬ ಸಾಪ್ಟ್‍ವೇರ್ ಎಂಜಿನಿಯರ್, ತನ್ನ ಮನೆಯಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ಕೊನೆಗೂ ಒಂದು ಮನೆ ಸಿಗುತ್ತದೆ. ಆ ಮನೆಗ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿದನೇ ಇಲ್ಲವೇ ಎನ್ನುವುದೇ ಬೇತಾಳ ಚಿತ್ರದ ಕಥಾನಕ.

 

ನಾಯಕ ದೆವ್ವದ ಆಸೆ ಪೂರೈಸಲು ಏನೆಲ್ಲಾ ಕಸರತ್ತು ಮಾಡಿದ ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಯುವನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಮತ್ತೊಬ್ಬ ನಟ ಅನಿಕ್ ಸೆಕೆಂಡ್ ಹೀರೋ ಆಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ಹಾಗೂ ಕಾವ್ಯಗೌಡ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಮಾತಿನಭಾಗದ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳ ಶೂಟಿಂಗ್‍ಗೆ ಸಿದ್ದವಾಗಿರುವ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಟಿ ಇತ್ತೀಚೆಗೆ ಎಸ್.ಆರ್.ವಿ. ಥಿಯೇಟರಿನಲ್ಲಿ ನೆರವೇರಿತು.

ಚಿತ್ರದ ಕುರಿತಂತೆ ನಾಯಕ ಹಾಗೂ ನಿರ್ಮಾಪಕ ಸ್ಮೈಲ್ ಶಿವು ಮಾತನಾಡಿ ಸ್ನೇಹಿತರೆಲ್ಲ ಸೇರಿ ಭೂಮಿಕ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಈ ಮೊದಲು ನಾನು ಒಂದಷ್ಟು ಚಿತ್ರಗಳಿಗೆ ಪೈನಾನ್ಸ್ ಕೂಡ ಮಾಡಿದ್ದೆ. ಹಾರರ್ ಸಬ್ಜೆಕ್ಟ್ ಆದರೂ ಅದನ್ನು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ ನಾಲ್ಕು ಸಾಹಸ ದೃಷ್ಯಗಳಿದ್ದು, ಪ್ರತಿ ಸೀನ್ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಟಾಕಿ ಫೋರ್ಷನ್ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.

 

 

ನಿರ್ದೇಶಕ ಕಸ್ತೂರಿ ಜಗನ್ನಾಥ ಮಾತನಾಡಿ ಬೇತಾಳ ಒಂದು ಕಾಮಿಡಿ ಹಾರರ್ ಕಂಟೆಟ್ ಹೊಂದಿರೋ ಚಿತ್ರ. ಇದರಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಜ್‍ಕಿಶೋರ್ ಸಂಗೀತ ನೀಡಿದ್ದಾರೆ. ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ಚಿಕ್ಕಮಗಳೂರು, ಸಕಲೇಶಪುರದಲ್ಲಿ ಹಾಡುಗಳನ್ನು ಶೂಟ್ ಮಾಡುವ ಪ್ಲಾನ್ ಇದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ ಎಂದು ಹೇಳಿದರು.

 

ಮತ್ತೊಬ್ಬ ನಟ ಅನಿಕ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ 2 ಶೆಡ್ಸ್ ಇದೆ. ಒದರಲ್ಲಿ ಲವರ್ ಬಾಯ್ ಆಗಿ ಕಾಣಿಸಿದರೆ, ಮತ್ತೊಂದರಲ್ಲಿ ಕ್ವಾಟ್ಲೆ ಕೊಡುವ ದೆವ್ವವಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಟಿ ಕಾವ್ಯಗೌಡ ಅನಿಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟಿ ಸೋನು ಪಾಟೀಲ್ ಬಬ್ಲಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ 3 ಹಾಡುಗಳಿಗೆ ರಾಜ್‍ಕಿಶೋರ್ ಸಂಗೀತ ಸಂಯೋಜನೆ ಹಾಗೂ ಶಿವು ಬೆರ್ಗಿ ಅವರ ಸಾಹಿತ್ಯವಿದೆ. ಚಿತ್ರದ ಸಹ ನಿರ್ಮಾಪಕ ಸ್ಟೀಬರ್ಡ್ ಕುಮಾರ್ ಮಾತನಾಡಿ ಈ ಹಿಂದೆ ಮಲಯಾಳಂ ಚಿತ್ರಗಳನ್ನು ಮಾಡಿದ್ದೇನೆಕನ್ನಡದಲ್ಲಿ ಮೊದಲ ಚಿತ್ರವಿದು ಎಂದು ಹೇಳಿದರು.

Spread the love
Continue Reading

News

ಉದಯ ಟೀವಿಲಿ ಮತ್ತೆ ಬರುತ್ತಿದೆ “ಕಾವ್ಯಂಜಲಿ”

Published

on

By

ಉದಯ ಟಿವಿ ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲು ತಯಾರಾಗಿದೆ. ನಂದಿನಿ, ಕಸ್ತೂರಿ ನಿವಾಸ, ಸೇವಂತಿ, ಮನಸಾರೆಯಂತಹ ಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ, ಈಗ ಒಂದು ನವಿರಾದ ಪ್ರೇಮ ಕಥಾಹಂದರವಿರುವ ಹೊಸಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ. ಅದೇ ಕಾವ್ಯಾಂಜಲಿ. ಕಾವ್ಯಾಂಜಲಿ ಹೆಸರು ಕೇಳಿದಾಕ್ಷಣ ವೀಕ್ಷಕರಿಗೆ ಕುತೂಹಲ ಹುಟ್ಟುವುದಂತೂ ಗ್ಯಾರಂಟಿ, ಅದರಲ್ಲೂ ಅತಿಹೆಚ್ಚು ಜನಪ್ರಿಯತೆ ಮತ್ತು ಮೆಚ್ಚುಗೆಗೆ ಪಾತ್ರವಾದ ಧಾರಾವಾಹಿ ಅಂದ್ರೆ ಸುಳ್ಳಲ್ಲ.

ಈ ಕಾವ್ಯಾಂಜಲಿ ಧಾರಾವಾಹಿಯು ಒಂದು ಪರಿಪೂರ್ಣ ಮನರಂಜನೆಯೆ ಜೊತೆಗೆ ಪರಿಶುದ್ದ ಪ್ರೀತಿಯ ಸವಿಯನ್ನು ನಿಮ್ಮ ಮುಂದಿಡಲಿದೆ. ಹೊಸ ಕಲ್ಪನೆಯ ತ್ರಿಕೋನ ಪ್ರೇಮಕಥೆಗೆ ಮ್ಯೂಸಿಕ್‍ನ ಮ್ಯಾಜಿಕ್ ಟಚ್ ನೀಡಿ ಮೋಡಿ ಮಾಡಲು ಬರ್ತಿದೆ ಅಕ್ಕ ತಂಗಿ ಬಾಂಧವ್ಯದ ಕಥೆ ಕಾವ್ಯಾಂಜಲಿ. ಜಗತ್ತಿನಲ್ಲಿ ಪ್ರೀತಿಗೆ ಅತಿಹೆಚ್ಚು ಮಹತ್ವವಿದೆ, ಆದ್ರೆ ಪ್ರಾಣ ಉಳಿಸೊ ಅಮೃತದಂತಹ ಪ್ರೀತಿ ಕೆಲವೊಮ್ಮೆ ಉಸಿರು ಕಟ್ಟಿಸುತ್ತೆ. ಇಂತಹದೇ ಪ್ರೀತಿಯಲ್ಲಿ ಉಸಿರು ಕಟ್ಟಿರೊ ನಾಯಕನಿಗೆ ನಿಷ್ಕಲ್ಮಶ ಪ್ರೀತಿಯ ತಂಪೆರೆಯೋ ನಾಯಕಿ ಹೇಗೆ ಜೊತೆಯಾಗ್ತಾಳೆ ಅನ್ನೋದನ್ನ ಕಾದು ನೋಡಬೇಕಾಗಿದೆ.

 

ಲಾಕ್ ಡೌನ್ ನಂತರ ಹೊಸ ಹುರುಪಿನಿಂದ ಶ್ಯಾಕ್ ಸ್ಟುಡಿಯೊ ಸಂಸ್ಥೆಯಡಿ ಶಂಕರ್ ವೆಂಕಟರಾಮನ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಅನುಭವಿ ನಿರ್ದೇಶಕ ಆದರ್ಶ್ ಹೆಗಡೆ ಹೊತ್ತುಕೊಂಡಿದ್ದಾರೆ. ಈ ಹಿಂದೆ ಹಿಟ್ ಧಾರಾವಾಹಿಗಳಲ್ಲಿ ತಮ್ಮ ಕ್ಯಾಮರಾ ಕೈ ಚಳಕ ತೋರಿದ ನಿಪುಣ ಛಾಯಾಗ್ರಾಹಕ ರುದ್ರಮುನಿ ಬೆಳೆಗೆರೆ ಈ ತಂಡದ ಮತ್ತೊಬ್ಬ ಸದಸ್ಯ. ಇನ್ನಷ್ಟು ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಕಾವ್ಯಾಂಜಲಿ ತಂಡವು ಜಬರ್ದಸ್ತ್ ಮನರಂಜನೆ ನೀಡುವ ಭರವಸೆಯಲ್ಲಿದೆ.
ಕಾವ್ಯಾಂಜಲಿಯ ಮತ್ತೊಂದು ವಿಶೇಷತೆ ಏನಂದರೆ ಅಂಜಲಿ ಪಾತ್ರದ ಮೂಲಕ ಸುಷ್ಮಿತ ಅನ್ನೋ ಹೊಸ ಪ್ರತಿಭೆ ಕನ್ನಡ ಕಿರುತೆರೆಗೆ ಪರಿಚಯವಾಗ್ತಿದೆ. ವಿದ್ಯಾಶ್ರಿ ಜಯರಾಂ ಕಾವ್ಯ ಪಾತ್ರ ನಿರ್ವಹಿಸುತ್ತಿದ್ದು, ಪವನ್ ರವೀಂದ್ರ ಇವರಿಬ್ಬರ ನಡುವಿನ ಕೇಂದ್ರಬಿಂದು. ಕಣ್ಮಣಿ ಖ್ಯಾತಿಯ ದರ್ಶಕ್ ಗೌಡ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಿಥುನ್ ತೇಜಸ್ವಿ, ರವಿ ಭಟ್, ಮಹಾಲಕ್ಷ್ಮಿ, ಮರಿನಾ ತಾರ, ರಾಮಸ್ವಾಮಿ, ನಿಸರ್ಗ, ಸಿಂಚನಾ ಕಾವ್ಯಾಂಜಲಿ ಧಾರಾವಾಹಿಯ ತಾರಬಳಗದಲ್ಲಿದ್ದಾರೆ.

ಮತ್ತೊಂದು ಪ್ರಮುಖ ಅಂಶ ಎಂದರೆ ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕೋವಿಡ್ 19ಗೆ ಸಂಬಂಧಿಸಿದ ಹಾಗೆ ಶೂಟಿಂಗ ಸಮಯದಲ್ಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
“ಬದಲಾಗಿದೆ ಸಮಯ, ಬದಲಾಗ್ತಿದೆ ಉದಯ” ಅನ್ನೊ ಅಡಿಬರಹದೊಂದಿಗೆ ಪ್ರಸಾರವಾಗ್ತಿರೋ ಮೊದಲ ಹೊಸ ಧಾರಾವಾಹಿ ಅನ್ನೊ ಹೆಗ್ಗಳಿಕೆಗೆ ಕಾವ್ಯಾಂಜಲಿ ಪಾತ್ರವಾಗ್ತಿದೆ.
ಇದೇ ಆಗಸ್ಟ್ 3ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಕಾವ್ಯಾಂಜಲಿ ತನ್ನ ಓಟ ಶುರು ಮಾಡಲಿದ್ದು ಪ್ರೇಕ್ಷಕರ ಮನಗೆಲ್ಲುವ ಭರವಸೆಯಲ್ಲಿದೆ.

Spread the love
Continue Reading

News

ಜೂನ್ 28ರಂದು “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

Published

on

By

ವೀಕ್ಷಕರಿಗೆ ಇಷ್ಟವಾಗುವ ಧಾರಾವಾಹಿ, ರಿಯಾಲಿಟಿ ಶೋಗಳನ್ನು ರೂಪಿಸುವ ಜೀ಼ ಕನ್ನಡ ಇದೀಗ ಕನ್ನಡದ ಸೂಪರ್ ಹಿಟ್ ಚಲನಚಿತ್ರ “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಕಾಣಲಿದೆ. ಜೂನ್ 28,2020ರಂದು ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡ ವಾಹಿನಿಯ ವೀಕ್ಷಕರಿಗೆ ವಿಶ್ವದಾದ್ಯಂತ ಈ ಚಲನಚಿತ್ರ ಲಭ್ಯವಿದ್ದು ಕನ್ನಡದ ಜನಪ್ರಿಯ ಚಿತ್ರಗಳ ಪ್ರಸಾರ ಸರಣಿಯಲ್ಲಿ ಇದೂ ಒಂದಾಗಿದೆ.

 

ಕೆ.ಎಸ್.ಅಶೋಕ ನಿರ್ದೇಶನದ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿತ್ತು.

 

 

ದಿಯಾ ಒಬ್ಬ ಯುವತಿಯ ಕಥೆಯಾಗಿದ್ದು ಆಕೆ ಸ್ವಭಾತಃ ಅಂತರ್ಮುಖಿಯಾಗಿದ್ದರೂ ಒಬ್ಬ ಯುವಕನ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾಳೆ. ಆತ ದಿಢೀರ್ ಎಂದು ಕಣ್ಮರೆಯಾಗುತ್ತಾನೆ. ಸಂಕಷ್ಟದಲ್ಲಿರುವ ಯುವತಿಗೆ ಮತ್ತೊಬ್ಬ ಬದುಕಲ್ಲಿ ವಿಶ್ವಾಸ ತುಂಬಿ ಆಕೆಯಲ್ಲಿ ಬದುಕುವ ಉತ್ಸಾಹ ಹೆಚ್ಚಿಸುತ್ತಾನೆ.

 

ಈ ಮಧ್ಯದಲ್ಲಿ ಆಕೆಗೆ ಮತ್ತೊಂದು ಆಘಾತ ಕಾದಿರುತ್ತದೆ. ಪ್ರೀತಿ ನಷ್ಟವಾದ ನಂತರವೂ ಬದುಕನ್ನು ಹೇಗೆ ನೋಡಬೇಕೆನ್ನುವ ಬದುಕಿನ ಪಾಠಗಳನ್ನು ದಿಯಾ ಚಿತ್ರ ಹೇಳುತ್ತದೆ.

 

ಕನ್ನಡದ ಸೂಪರ್ ಹಿಟ್ ಚಲನಚಿತ್ರಗಳ ಸಂಗ್ರಹ ಹೊಂದಿರುವ ಜೀ಼ ಕನ್ನಡ ಇದೀಗ ದಿಯಾ ಚಿತ್ರದ ಮೂಲಕ ಎಲ್ಲರನ್ನೂ ರಂಜಿಸಲು ಸಜ್ಜಾಗಿದೆ. ಪವಿತ್ರಾ ಲೋಕೇಶ್, ಅರವಿಂದ ರಾವ್, ರಾಜೇಶ್ ರಾವ್, ಜ್ಯೋತಿ ರೈ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಡಿ.ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.

Spread the love
Continue Reading

Trending News